ಮಂಜೇಶ್ವರದಲ್ಲಿ ಮರಳು ಮಾಫಿಯಾ ವಿರುದ್ಧ ಪೊಲೀಸ್ ಕ್ರಮ: ಅನಧಿಕೃತ ಮರಳು ಸಾಗಾಟದ ವಾಹನ ವಶ, ಆರೋಪಿಗಳು ಪರಾರಿ
ಮಂಜೇಶ್ವರ: ಮರಳು ಮಾಫಿಯಾಗಳ ವಿರುದ್ಧ ಪೊಲೀಸರು ಕಠಿಣ ಕ್ರಮಕ್ಕೆ ಮುಂದಾಗಿದ್ದಾರೆ.ಹೊಳೆಯಿಂದ ಅನಧಿಕೃತವಾಗಿ ಸಂಗ್ರಹಿಸಿದ ಮರಳನ್ನು ಗೋಣಿ ಚೀಲಗಳಲ್ಲಿ ತುಂಬಿಸಿ ಸಾಗಿಸುತ್ತಿದ್ದ ವಾಹನವನ್ನು ಪೊಲೀಸರು ಬೆನ್ನಟ್ಟಿ ವಶಪಡಿಸಿಕೊಂಡಿದ್ದಾರೆ. ವಾಹನದಲ್ಲಿದ್ದವರು ಓಡಿ ಪರಾರಿಯಾಗಿದ್ದಾರೆ. ಘಟನೆಗೆ ಸಂಬಂಧಿಸಿ ಕೊಯಿಪ್ಪಾಡಿ ಬದ್ರಿಯಾ ನಗರದ ಕೆ.ಬೆಡ್ ತಹ್ವನೂನ್ ಹಾಗೂ ಜೊತೆಗಿದ್ದ ಜುನೈದ್ ಎಂಬಿ ವರ ವಿರುದ್ಧ ಕುಂಬಳೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ಕುಂಬಳೆ ಎಸ್‌ಐ ಕೆ. ಶ್ರೀಜೇಶ್, ಎಎಸ್‌ಐ ಸುರೇಶ್, ಸಿಪಿಒ ಸಂದೀಪ್ ಎಂಬಿವರು ನಿನ್ನೆ ರಾತ್ರಿ ಪಟ್ರೋಲಿಂಗ್ ನಡೆಸುತ್ತಿರುವ ಮಧ್ಯೆ ಮೊಗ್ರಾಲ್ ಹೊಳೆಯಿಂದ…