ಹಿಂದೂ ಸಮಾಜ ಸಂಘಟಿತನಾದಾಗಲೇ ಶಾಂತಿ–ಸಾಮರಸ್ಯ ಸಾಧ್ಯ: ಆರ್‌ಎಸ್‌ಎಸ್ ಪ್ರಾಂತ ಪ್ರಚಾರಕ ಅರುಣ್ ಕುಮಾರ್
ಬಂಟ್ವಾಳ: ಹಿಂದೂ ಚೆನ್ನಾಗಿರುವಲ್ಲಿ ಯಾವುದೇ ಸಮಸ್ಯೆ ಇಲ್ಲವಾಗಿದ್ದು, ಹಿಂದೂ ದುರ್ಬಲನಾದಾಗ ಸಾಕಷ್ಟು ಸಮಸ್ಯೆಗಳು ಎದುರಾಗುತ್ತದೆ. ಹೀಗಾಗಿ ಹಿಂದೂ ಸಮಾಜ ಸಂಘಟಿತನಾದಾಗ ಜಗತ್ತಿನಲ್ಲಿ ಶಾಂತಿ- ಸಾಮರಸ್ಯ ನೆಲೆಸುವುದಕ್ಕೆ ಸಾಧ್ಯವಾಗುತ್ತದೆ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಕರ್ನಾಟಕ ಪ್ರಾಂತ ಪ್ರಚಾರಕ ಅರುಣ್ ಕುಮಾರ್ ಹೇಳಿದರು. ಅವರು ರವಿವಾರ ಸಂಜೆ ಫರಂಗಿಪೇಟೆ ಶ್ರೀ ಆಂಜನೇಯ ದೇವಸ್ಥಾನ ವಠಾರದಲ್ಲಿ ಬಂಟ್ವಾಳ ತಾಲೂಕು ಹಿಂದೂ ಸಂಗಮ ಆಯೋಜನಾ ಸಮಿತಿ ಫರಂಗಿಪೇಟೆ ಮಂಡಲದ ವತಿಯಿಂದ ನಡೆದ ಹಿಂದೂ ಸಂಗಮ ಸಮಾರಂಭದಲ್ಲಿ ಪ್ರಧಾನ ಭಾಷಣ ಮಾಡಿದರು.ಪ್ರಸ್ತುತ ಜಾಗತಿಕ…