ಕುಂಬಳೆ ಜಾತ್ರೆಯ ಬೆಡಿ ಉತ್ಸವಕ್ಕೆ ಸಂಬಂಧಿಸಿ ಬೆಡಿ ಸಮಿತಿ ಪದಾಧಿಕಾರಿಗಳ ವಿರುದ್ಧ ಕೇಸು ದಾಖಲಾಗಿದೆ.

ಕಣಿಪುರ ಶ್ರೀಗೋಪಾಲಕೃಷ್ಣ ದೇವಸ್ಥಾನದ ವಾರ್ಷಿಕ ಜಾತ್ರೋತ್ಸವದ ಅಂಗವಾಗಿ ಶನಿವಾರ ರಾತ್ರಿ ನಡೆದ ಬೆಡಿ ಮಹೋತ್ಸವದ ಹಿನ್ನೆಲೆಯಲ್ಲಿ ಬೆಡಿ ಉತ್ಸವ ಸಮಿತಿ ವಿರುದ್ಧ ಕುಂಬಳೆ ಪೊಲೀಸರು ಕೇಸು ದಾಖಲಿಸಿದ್ದಾರೆ.ಸಮಿತಿ ಅಧ್ಯಕ್ಷ ಸದಾನಂದ ಕಾಮತ್ ಕೆ., ಸದಸ್ಯರುಗಳಾದ ಲಕ್ಷ್ಮಣ ಪ್ರಭು ಕುಂಬ್ಳೆ, ಸುಧಾಕರ ಕಾಮತ್, ದಯಾರಾಜ್ ಎಂಬವರ ವಿರುದ್ಧ ಕೇಸು ದಾಖಲಾಗಿದೆ. ಜಾತ್ರೋತ್ಸವಕ್ಕೆ ಬಂದ ಜನರಿಗೆ ಅಪಾಯಗಳುಂಟಾಗುವಂತೆ ನಿರ್ಲಕ್ಷ್ಯ ವಹಿಸಿದುದಕ್ಕೆ ಹಾಗು ಅಜಾಗರೂಕತನದಿಂದ ಸಿಡಿಮದ್ದು ಸಿಡಿಸಲಾಗಿದೆ ಎಂದು ಉಲ್ಲೇಖಿಸಿ ಪೊಲೀಸರು ಸ್ವಯಂ ಪ್ರೇರಿತರಾಗಿ ಕೇಸು ದಾಖಲಿಸಿದ್ದಾರೆ. ಪ್ರಸಿದ್ಧವಾದ ಕುಂಬಳೆ ಬೆಡಿ…

Read More

ಕಲೋತ್ಸವದ 60 ವರ್ಷಗಳ ಇತಿಹಾಸದಲ್ಲಿ ಮೊದಲ ಬಾರಿಗೆ, ಅನಾರೋಗ್ಯ ಕಾರಣದಿಂದ ವಿದ್ಯಾರ್ಥಿನಿಗೆ ಆನ್‌ಲೈನ್ ಮೂಲಕ ಸ್ಪರ್ಧಿಸಲು ಅವಕಾಶ

ಕೇರಳದ ಕಾಸರಗೋಡು ಜಿಲ್ಲೆಯ ಪದ್ನಾ ಗ್ರಾಮದ ಸಿಯಾ ಫಾತಿಮಾ ಎಂಬ 10ನೇ ತರಗತಿ ವಿದ್ಯಾರ್ಥಿನಿ, ಅಪರೂಪದ ರೋಗದಿಂದ ಬಳಲುತ್ತಿದ್ದರೂ ಸಹ 64ನೇ ಕೇರಳ ಶಾಲಾ ಕಲೋತ್ಸವದಲ್ಲಿ ಆನ್‌ಲೈನ್ ಮೂಲಕ ಭಾಗವಹಿಸಿ ‘ಎ’ ಗ್ರೇಡ್ ಪಡೆದು ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.ಸಿಯಾ ಫಾತಿಮಾ ಅವರು ಅರಬಿಕ್ ಪೋಸ್ಟರ್ ವಿನ್ಯಾಸ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಆರೋಗ್ಯ ಸಮಸ್ಯೆಗಳ ಕಾರಣದಿಂದಾಗಿ ಅವರು ತ್ರಿಶೂರಿನಲ್ಲಿ ನಡೆದ ಕಲೋತ್ಸವ ಸ್ಥಳಕ್ಕೆ ಹಾಜರಾಗಲು ಸಾಧ್ಯವಾಗಲಿಲ್ಲ. ಆದರೂ ವಿಶೇಷ ಅನುಮತಿಯೊಂದಿಗೆ ತಮ್ಮ ಮನೆಯಲ್ಲಿಯೇ ಲೈವ್ ವಿಡಿಯೋ ಸಂಪರ್ಕದ ಮೂಲಕ ಸ್ಪರ್ಧಿಸಿದರು.ಕಲೋತ್ಸವದ…

Read More

ಚಟ್ಟಂಚಾಲ್ ಬಳಿ ಬಿಎಂಡಬ್ಲ್ಯು–ಲಾರಿ ಡಿಕ್ಕಿ: ಮಂಗಳೂರು ಮೂಲದ ಇಬ್ಬರು ಮೃತ್ಯು

ಮಂಜೇಶ್ವರ: ರಾ. ಹೆದ್ದಾರಿಯ ಕಾಸರಗೋಡು ಚಟ್ಟಂಚಾಲ್ ನಲ್ಲಿ ಸೋಮವಾರ ರಾತ್ರಿ ಬಿಎಂಡಬ್ಲ್ಯು ಕಾರು ಮತ್ತು ಲಾರಿ ಡಿಕ್ಕಿಯಾಗಿ ಸಂಭವಿಸಿದ ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ಇಬ್ಬರು ಸಾವನ್ನಪ್ಪಿದ್ದಾರೆ.ಮಂಗಳೂರು ಸಜಿಪ ಪರಿಸರವಾಸಿಗಳಾದ ಆಸಿಫ್ ಹಾಗೂ ಲತೀಫ್ ಮೃತ ವ್ಯಕ್ತಿಗಳೆಂದು ಗುರುತಿಸಲಾಗಿದೆ. ಚಟ್ಟಂಚಾಲ್ ಬಳಿಯ 55ನೇ ಮೃಲ್ ಎಂಬಲ್ಲಿ ಸೋಮವಾರ ರಾತ್ರಿ ಅಪಘಾತ ನಡೆದಿದ್ದು, ಮಂಜೇಶ್ವರ ಗೇರು ಕಟ್ಟೆ ನಿವಾಸಿಗಳಾದ ರಿಯಾಝ್ ಹಾಗೂ ಹಾಶಿಂ ಗಾಯಗೊಂಡಿದ್ದಾರೆ. ವಯನಾಡಿಗೆ ಪ್ರವಾಸ ಹೋಗಿದ್ದ ಗೆಳೆಯರು ಮರಳಿ ಊರಿಗೆ ಬರುವಾಗ ಈ ದುರ್ಘಟನೆ ನಡೆದಿದೆ. ಮೃತರು…

Read More

”ಬೇಕಲ ರಾಮನಾಯಕ ಸಾಹಿತ್ಯ ಪ್ರಶಸ್ತಿ 2026 ಮುಡೇರಿಸಿಕೊಂಡ ಗಿರೀಶ್ ಪಿಎಂ

ಕಾಸರಗೋಡು:ಕನ್ನಡ ಭವನ ಮತ್ತು ಗ್ರಂಥಾಲಯಕನ್ನಡ ಭವನ ಪ್ರಕಾಶನ ಕಾಸರಗೋಡು. ಕನ್ನಡ ಭವನದ ರಜತ ಸಂಭ್ರಮ ನಾಡು ನುಡಿ ಹಬ್ಬ 2026 ಪ್ರಯುಕ್ತ ನೀಡಲಾಗುವ ಮಹಾನ್ ಇತಿಹಾಸಗಾರ ಮತ್ತು ಕರಾವಳಿ ಭಾಗದ ಸಂಸ್ಕೃತಿ, ಸಾಹಿತ್ಯ ಬೆಳವಣಿಗೆಗೆ ತನ್ನದೇ ಆದ ಕೊಡುಗೆ ನೀಡಿದ ಮಹನೀಯರಾದ ಬೇಕಲ ರಾಮನಾಯಕರ ಹೆಸರಿನಲ್ಲಿ ಕೊಡಮಾಡುವ ಪ್ರತಿಷ್ಠಿತ ”ಬೇಕಲ ರಾಮನಾಯಕ ಸಾಹಿತ್ಯ ಪ್ರಶಸ್ತಿ 2026 ” ನ್ನು ಯುವ ಪತ್ರಕರ್ತ, ಸಾಹಿತಿ ಗಿರೀಶ್ ಪಿಎಂ ಇವರಿಗೆ ಜ.18ರಂದು ಕಾಸರಗೋಡು ಕನ್ನಡ ಭವನ ಶ್ರೀ ಕೃಷ್ಣ ದೇವರಾಯ…

Read More

ದುರ್ಗಿಪಳ್ಳ ತಿರುವಿನಲ್ಲಿ ತ್ಯಾಜ್ಯ ಮಾಲಿನ್ಯ ವಿರುದ್ಧ ಟೀಮ್ ಕಲ್ಕಿ ಮಂಜೇಶ್ವರ ಶ್ರಮದಾನ; ಶುಚಿತ್ವ ಅಭಿಯಾನ ಹಾಗೂ ಸೂಚನಾ ಫಲಕ ಅಳವಡಿಕೆ

ಮಂಜೇಶ್ವರ – ಸುಬ್ರಹ್ಮಣ್ಯ ಅಂತರ್ ರಾಜ್ಯ ರಸ್ತೆ ಪೈಕಿ ಹೊಸಂಗಡಿ ಬಳಿಯ ದುರ್ಗಿಪಳ್ಳ ತಿರುವಿನಲ್ಲಿ ವ್ಯಾಪಕವಾಗಿ ತ್ಯಾಜ್ಯ ಮಾಲಿನ್ಯಗಳನ್ನು ರಸ್ತೆ ಬಳಿ ನಿಕ್ಷೇಪಿಸಿದ್ದು, ಈ ಬಗ್ಗೆ ಪಂಚಾಯತ್ ಅಧಿಕಾರಿಗಳು ಯಾವುದೇ ಕ್ರಮವನ್ನು ಕೈಗೊಳ್ಳದ ಕಾರಣ ಟೀಮ್ ಕಲ್ಕಿ ಮಂಜೇಶ್ವರ ವತಿಯಿಂದ ಇಂದು ಶ್ರಮದಾನ ನಡೆಸುವ ಮೂಲಕ ಸಂಪೂರ್ಣ ಶುಚಿತ್ವ ಅಭಿಯಾನ ನಡೆಸಿದರು. ಈ ಒಂದು ಸಮಸ್ಯೆಯನ್ನು ಆದಷ್ಟು ಬೇಗನೆ 2 ಪಂಚಾಯತಿನ ಸಂಬಂಧ ಪಟ್ಟ ಅಧಿಕಾರಿಗಳು ಪರಿಹರಿಸಬೇಕು.. ಹಾಗೂ ಮುಂದಿನ ದಿನಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಸಿ ತ್ಯಾಜ್ಯ…

Read More

ಮಂಜೇಶ್ವರ ಎಕ್ಸೈಸ್ ಚೆಕ್‌ಪೋಸ್ಟ್‌ನಲ್ಲಿ ಟ್ರಾಮಡೋಲ್ ಸಾಗಣೆ: ಯುವಕ ಬಂಧನ, 55 ಮಾತ್ರೆಗಳು ವಶ

ಮಂಜೇಶ್ವರ ಎಕ್ಸೈಸ್ ಚೆಕ್‌ಪೋಸ್ಟ್‌ನಲ್ಲಿ ನಡೆಸಿದ ವಾಹನ ತಪಾಸಣೆಯ ವೇಳೆ ಟ್ರಾಮಡೋಲ್ ಹೈಡ್ರೋಕ್ಲೋರೈಡ್ ಅನ್ನು ಅಕ್ರಮವಾಗಿ ಸಾಗಿಸುತ್ತಿದ್ದ ಯುವಕನನ್ನು ಎಕ್ಸೈಸ್ ತಂಡವು ಬಂಧಿಸಿದೆ. ಮಂಗಳೂರು ಭಾಗದಿಂದ ಕಾಸರಗೋಡ್ ಕಡೆಗೆ ತೆರಳುತ್ತಿದ್ದ KL 58 Q 5171 ಸಂಖ್ಯೆಯ ಬಸ್ಸಿನಲ್ಲಿ ನಡೆಸಿದ ತಪಾಸಣೆಯಲ್ಲಿ ಉತ್ತರ ಪ್ರದೇಶದ ನಿವಾಸಿ ರಾಹತ್ ಜಾನ್ ಎಂಬಾತನಿಂದ 23.351 ಗ್ರಾಂ ಟ್ರಾಮಡೋಲ್ ಹೈಡ್ರೋಕ್ಲೋರೈಡ್ (55 ಮಾತ್ರೆಗಳು) ವಶಪಡಿಸಿಕೊಳ್ಳಲಾಗಿದೆ. ಎಕ್ಸೈಸ್ ಸರ್ಕಲ್ ಇನ್ಸ್‌ಪೆಕ್ಟರ್ ಕೆ.ಕೆ. ಶಿಜಿಲ್ ಕುಮಾರ್ ಅವರ ನೇತೃತ್ವದ ತಂಡವು ಆರೋಪಿಯನ್ನು ಪತ್ತೆಹಚ್ಚಿ ಬಂಧಿಸಿದೆ. ಆರೋಪಿಯ…

Read More

ಮಹಿಳಾ ಕಾರ್ಯಕರ್ತರು ಕೇಂದ್ರ ಯೋಜನೆಗಳ ಪ್ರಚಾರಕರಾಗಬೇಕು: ನವ್ಯ ಹರಿದಾಸ್

ಕಾಸರಗೋಡು: ದೇಶದ ಎಲ್ಲಾ ಸಾಮಾನ್ಯ ಜನರನ್ನು ಕೇಂದ್ರ ಸರ್ಕಾರದ ಯೋಜನೆಗಳ ಲಾಭಾಂಶದಾರರನ್ನಾಗಿಸುವ ಉದ್ದೇಶದಿಂದ ಬಿಜೆಪಿ ಮಹಿಳಾ ಮೋರ್ಚಾ ಕಾರ್ಯಕರ್ತರು ಮುನ್ನಡೆದುಕೊಳ್ಳಬೇಕು ಹಾಗೂ ಕೇಂದ್ರ ಯೋಜನೆಗಳ ಪ್ರಚಾರಕರಾಗಬೇಕು ಎಂದು ಮಹಿಳಾ ಮೋರ್ಚಾ ರಾಜ್ಯಾಧ್ಯಕ್ಷೆ ನವ್ಯ ಹರಿದಾಸ್ ಹೇಳಿದರು. ಮಹಿಳಾ ಮೋರ್ಚಾ ಕಾಸರಗೋಡು ಜಿಲ್ಲಾ ಸಮಿತಿ ಆಯೋಜಿಸಿದ್ದ ಮಹಿಳಾ ಸಂಗಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಚುನಾವಣೆಗಳಲ್ಲಿ ಮಹಿಳೆಯರಿಗೆ ಅತಿ ಹೆಚ್ಚು ಸ್ಥಾನಗಳನ್ನು ನೀಡುವ ಪಕ್ಷ ಬಿಜೆಪಿ ಎಂದು ಅವರು ಹೇಳಿದರು. ಮಹಿಳಾ ಸಬಲೀಕರಣವನ್ನು ಕೇವಲ ಮಾತಿನಲ್ಲಿ ಮಾತ್ರವಲ್ಲ, ಕಾರ್ಯರೂಪದಲ್ಲೂ ಜಾರಿಗೆ…

Read More

ಹೊಸಂಗಡಿ: ರಿಯಲ್ ಲ್ಯಾಬ್ ಕ್ಲಿನಿಕಲ್ ಲ್ಯಾಬೊರೇಟರಿಯ 5ನೇ ವಾರ್ಷಿಕೋತ್ಸವ—ಉಚಿತ ವೈದ್ಯಕೀಯ ಸಲಹಾ ಶಿಬಿರ

ಕಾಸರಗೋಡು: ಹೊಸಂಗಡಿಯ ರಿಯಲ್ ಲ್ಯಾಬ್ ಕ್ಲಿನಿಕಲ್ ಲ್ಯಾಬೊರೇಟರಿಯ 5ನೇ ವಾರ್ಷಿಕೋತ್ಸವದ ಅಂಗವಾಗಿ ಉಚಿತ ವೈದ್ಯಕೀಯ ಸಲಹಾ ಶಿಬಿರವನ್ನು ಆಯೋಜಿಸಲಾಗಿದೆ. ಈ ಕಾರ್ಯಕ್ರಮವು ಶ್ರೀ ಅಯ್ಯಪ್ಪ ಕೃಪಾ ವೀರಮಾರುತಿ ವ್ಯಾಯಾಮ ಶಾಲೆ (R), ವೀರ ಕೇಸರಿ ಫ್ರೆಂಡ್ಸ್ (R) ಹಾಗೂ ಚಕ್ರವರ್ತಿ (R), ಹೊಸಂಗಡಿ ಇವರ ಸಹಯೋಗದಲ್ಲಿ ನಡೆಯಲಿದೆ. ಕಾರ್ಯಕ್ರಮವನ್ನು ಮಂಗಳೂರು ಮೂಲದ ಶ್ರೀಮತಿ ಮತ್ತು ಶ್ರೀ ಉಷಾ ನಾರಾಯಣ ಅವರು ಉದ್ಘಾಟಿಸಲಿದ್ದಾರೆ. ಶಿಬಿರವು ಜನವರಿ 21 ರಿಂದ ಫೆಬ್ರವರಿ 4, 2026ರವರೆಗೆ ಪ್ರತಿದಿನ ಸಂಜೆ 4ರಿಂದ ರಾತ್ರಿ…

Read More

ಕುಂಬಳೆ ಟೋಲ್ ಗೇಟ್ ಅನಧಿಕೃತ ಟೋಲ್ ಸಂಗ್ರಹ ವಿರೋಧಿಸಿ ಕಾಸರಗೋಡು ಜಿಲ್ಲಾಧಿಕಾರಿ ಕಚೇರಿ ಎದುರು ಜನಪ್ರತಿನಿಧಿಗಳ ಪ್ರತಿಭಟನೆ

ಮಂಜೇಶ್ವರ : ರಾಷ್ಟ್ರೀಯ ಹೆದ್ದಾರಿ ಕುಂಬಳೆ ಟೋಲ್ ಗೇಟ್ ಅನಧಿಕೃತ ಟೋಲ್ ಸಂಗ್ರಹದ ವಿರುದ್ಧ ಕ್ರಿಯಾ ಸಮಿತಿಯ ನೇತೃತ್ವದಲ್ಲಿ ಕಾಸರಗೋಡು ಜಿಲ್ಲಾಧಿಕಾರಿ ಕಚೇರಿ ಮುಂಬಾಗದಲ್ಲಿ ಜನಪ್ರತಿನಿಧಿಗಳ ಪ್ರತಿಭಟನಾ ಧರಣಿ ನಡೆಯಿತು.ಸೋಮವಾರದಂದು ಮಂಜೇಶ್ವರ ಶಾಸಕ ಎ ಕೆ ಎಂ ಅಶ್ರಫ್ ರವರ ಅಧ್ಯಕ್ಷತೆಯಲ್ಲಿ ನಡೆದ ಪ್ರತಿಭಟನಾ ಧರಣಿಗೆ ಕಾಸರಗೋಡು ಶಾಸಕ ಎನ್ ಎ ನೆಲ್ಲಿಕುನ್ನು ಚಾಲನೆ ನೀಡಿದರು. ಕೇಂದ್ರ ಸರಕಾರದ ನಿಬಂಧನೆಗಳನ್ನು ಉಲ್ಲಂಘಿಸಿ ನ್ಯಾಯಾಲಯದ ತೀರ್ಪು ಬರುವ ಮುನ್ನವೇ ಸಾರ್ವಜನಿಕರಿಂದ ಅನ್ಯಾಯವಾಗಿ ಟೋಲ್ ಸಂಗ್ರಹ ನಡೆಸುತ್ತಿರುವುದು ಟೋಲ್ ಅಧಿಕಾರಸ್ಥರ…

Read More

ಮನೆ ಬೀಗ ಒಡೆದು ನುಗ್ಗಿದ ಕಳ್ಳರು: ಕಾಸರಗೋಡಿನಲ್ಲಿ ವಕೀಲೆಯ ಮನೆಯಲ್ಲಿ ಲಕ್ಷಾಂತರ ನಷ್ಟ

ಕಾಸರಗೋಡು: ಕುಂಬಳ ನೈಕಾಪ್ಪಿ ನಲ್ಲಿ ಪ್ರದೇಶದಲ್ಲಿ ವಕೀಲೆಯೊಬ್ಬರ ಮನೆಗೆ ಕಳ್ಳರು ನುಗ್ಗಿ ಭಾರೀ ದೋಚಾಟ ನಡೆಸಿದ್ದಾರೆ. ಮನೆಯ ಹಿಂಭಾಗದ ಬಾಗಿಲನ್ನು ಒಡೆದು ಒಳನುಗ್ಗಿದ ಕಳ್ಳರು, ಕಪಾಟಿನಲ್ಲಿ ಇಡಲಾಗಿದ್ದ 29 ಪವನ್ ಚಿನ್ನಾಭರಣಗಳು, ಸುಮಾರು ₹2.5 ಲಕ್ಷ ಮೌಲ್ಯದ ಬೆಳ್ಳಿ ಆಭರಣಗಳು ಹಾಗೂ ₹5,000 ನಗದು ದೋಚಿ ಪರಾರಿಯಾಗಿದ್ದಾರೆ. ನೆಕ್ಲೆಸ್, ಬಳೆಗಳು, ಉಂಗುರಗಳು, ಬ್ರೇಸ್ಲೆಟ್, ದೊಡ್ಡ ಹಾರ, ಕಿವಿಯೋಲೆಗಳು, ಮಕ್ಕಳ ಹಾರ, ಮಕ್ಕಳ ಚಿನ್ನದ ಬಳೆ, ಕಲ್ಲು ಅಳವಡಿಸಿದ ಹಾರ ಸೇರಿದಂತೆ ವಿವಿಧ ಚಿನ್ನಾಭರಣಗಳು ಕಳವಾಗಿವೆ. ಒಟ್ಟು ಸುಮಾರು…

Read More
error: Content is protected !!