ವಿಶ್ವದಾಖಲೆ ವಯಲಿನ್ ವಾದಕರಿಂದ ಕುಂಬಳೆಯಲ್ಲಿ ಸಂಗೀತ ವೈಭವ

ಕುಂಬಳೆ : ಕಣಿಪುರ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಬೆಡಿ ಮಹೋತ್ಸವದ ಅಂಗವಾಗಿ ಚಿರಂಜೀವಿ ಕುಂಬಳೆ ವತಿಯಿಂದ ಆಯೋಜಿಸಿರುವ ವಯಲಿನ್ ಫ್ಯೂಷನ್, ಮೆಗಾ ಮ್ಯೂಸಿಕಲ್ ನೈಟ್ ಹಾಗೂ ಸನ್ಮಾನ ಸಮಾರಂಭಗಳು 16 ಮತ್ತು 17 ರಂದು ನಡೆಯಲಿವೆ. ವಯಲಿನ್ ವಾದನದ ಮೂಲಕ ವಿಶ್ವ ದಾಖಲೆ ಸಾಧಿಸಿರುವ ಕುಮಾರಿ ಗಾಯತ್ರಿ ಆಚಾರ್ಯ ಹಾಗೂ ಕುಮಾರಿ ಶ್ರಾವಣ್ಯ ಆಚಾರ್ಯ ಅವರ ವಯಲಿನ್ ಕಾರ್ಯಕ್ರಮವು 16ರಂದು ಸಂಜೆ 6 ಗಂಟೆಗೆ ಆರಂಭಗೊಳ್ಳಲಿದೆ.ಕಾರ್ಯಕ್ರಮವನ್ನು ಅಡ್ವೊಕೇಟ್ ಸುಬ್ಬಯ್ಯರೈ ಇಚ್ಚಿಲಂಪಾಡಿ ಉದ್ಘಾಟಿಸಲಿದ್ದಾರೆ.ಎಡನೀರು ಮಠದ ಸಚ್ಚಿದಾನಂದ ಭಾರತೀ ಸ್ವಾಮೀಜಿ,…

Read More

ರಜತ ಸಂಭ್ರಮದಲ್ಲಿ ಕಾಸರಗೋಡಿನ ಕನ್ನಡ ಭವನನಾಡು – ನುಡಿ ಹಬ್ಬ, ವಿವಿಧ ಪ್ರಶಸ್ತಿ ಪ್ರದಾನ ಜ.18ರಂದು

ಕಾಸರಗೋಡು : ಇಲ್ಲಿನ ನುಳ್ಳಿಪ್ಪಾಡಿಯ ಸೀತಮ್ಮ ಪುರುಷ ನಾಯಕ ಕನ್ನಡ ಭವನ ಗ್ರಂಥಾಲಯದ ಬಯಲು ರಂಗ ಮಂದಿರದಲ್ಲಿ ಕಾಸರಗೋಡಿನ ಕನ್ನಡ ಭವನದ ರಜತ ಸಂಭ್ರಮ, ನಾಡು-ನುಡಿ ಹಬ್ಬ, ಸಾಧಕರಿಗೆ ವಿವಿಧ ಪ್ರಶಸ್ತಿ ಪ್ರದಾನ, ಕೃತಿ ಬಿಡುಗಡೆ ಕಾರ್ಯಕ್ರಮವು ಇದೇ ಜ.18ರಂದು ನಡೆಯಲಿದೆ. ಬೆಳಗ್ಗೆ 7.30ರಿಂದ ಕಾಸರಗೋಡಿನ ವಿಶ್ವಕರ್ಮ ಭಜನಾ ಸಂಘದ ಸದಸ್ಯರಿಂದ ಭಜನಾ ಸಂಕೀರ್ತನೆ ನಡೆಯಲಿದೆ. ಧಾರ್ಮಿಕ ಮುಖಂಡರಾದ ಡಾ. ಕೆ ಎನ್ ವೆಂಕಟ್ರಮಣ ಹೊಳ್ಳ ದೀಪ ಬೆಳಗಿಸುವರು. ಕನ್ನಡ ಭವನದ ಸ್ಥಾಪಕಾಧ್ಯಕ್ಷ ಡಾ. ಕೆ ವಾಮನ್…

Read More

ಮಂಜೇಶ್ವರ: ವಿದ್ಯುತ್ ಕಂಬಕ್ಕೆ ತಾಗಿದ್ದ ಮರ ತೆರವು ವೇಳೆ ದುರ್ಘಟನೆ – ಕೂಲಿ ಕಾರ್ಮಿಕ ಸಾವು

ಮಂಜೇಶ್ವರ: ಕುಂಜತ್ತೂರು ತೂಮಿನಾಡು ಲಕ್ಷಂವೀಡು ಕಾಲನಿಯಲ್ಲಿ ವಿದ್ಯುತ್ ಕಂಬಕ್ಕೆ ತಾಗಿಕೊಂಡಿದ್ದ ಮರವೊಂದನ್ನು ಮುರಿದು ತೆರವುಗೊಳಿಸುವ ಕಾರ್ಯ ನಡೆಯುತ್ತಿದ್ದ ವೇಳೆ ಭೀಕರ ದುರ್ಘಟನೆ ಸಂಭವಿಸಿದೆ. ಮರವನ್ನು ಕಡಿದು ತೆಗೆಯುತ್ತಿರುವ ಮಧ್ಯೆ ಅದರ ಪಕ್ಕದಲ್ಲೇ ಕೆಲಸ ನಿರ್ವಹಿಸುತ್ತಿದ್ದ ಕಾರ್ಮಿಕನ ಮೇಲೆ ಮರ ಬಿದ್ದು ಗಂಭೀರವಾಗಿ ಗಾಯಗೊಂಡ ಘಟನೆ ನಡೆದಿದೆ. ಗಂಭೀರ ಗಾಯಗೊಂಡ ಕೂಲಿ ಕಾರ್ಮಿಕನನ್ನು ತಕ್ಷಣ ಚಿಕಿತ್ಸೆಗೆ ದಾಖಲಿಸಲಾದರೂ, ಚಿಕಿತ್ಸೆ ಫಲಕಾರಿಯಾಗದೆ ಆತ ಸಾವನ್ನಪ್ಪಿದ್ದಾನೆ. ಮೃತ ಕಾರ್ಮಿಕನು ಉತ್ತರ ಪ್ರದೇಶ ಮೂಲದ ವಿರೇಂದ್ರ ಎಂದು ಗುರುತಿಸಲಾಗಿದೆ.ಘಟನೆಯ ಬಳಿಕ ವಾರ್ಡ್ ಸದಸ್ಯರಾದ…

Read More

ಉದ್ಯಾವರ ಮಂಜೇಶ್ವರ ಶ್ರೀ ಧೂಮವತಿ ಬಂಟ ದೈವಸ್ಥಾನದ ವಾರ್ಷಿಕೋತ್ಸವ ಜಾತ್ರೆ: ಆಮಂತ್ರಣ ಪತ್ರಿಕೆ ಬಿಡುಗಡೆ

ಮಂಜೇಶ್ವರ: ಶ್ರೀ ಧೂಮವತಿ ಬಂಟ ದೈವಸ್ಥಾನ ಉದ್ಯಾವರ ಮಂಜೇಶ್ವರ ಇದರ ಫೆಬ್ರವರಿ 21-2026ರಂದು ನಡೆಯುವ ವಾರ್ಷಿಕೋತ್ಸವದ ಜಾತ್ರೆ ಅಂಗವಾಗಿ ಆಮಂತ್ರಣ ಪತ್ರಿಕೆ ಬಿಡುಗಡೆ ಮಾಡಲಾಯಿತು. ಕಾರ್ಯಕ್ರಮ ಅಧ್ಯಕ್ಷತೆಯನ್ನು ದೈವಸ್ಥಾನ ಅಧ್ಯಕ್ಷ ವಿಜಯ ಕುಮಾರ್ ಉಳ್ಳಾಲ್ ವಹಿಸಿದ್ದರು. ಗೌರವ ಅಧ್ಯಕ್ಷ ವಿಶ್ವನಾಥ್ ಉಚ್ಚಿಲ್ ಆಮಂತ್ರಣ ಪತ್ರಿಕೆ ಬಿಡುಗಡೆ ಮಾಡಿದರು ಕಾರ್ಯಕ್ರಮದಲ್ಲಿ ದೈವಸ್ಥಾನ ಗುರಿಕಾರರಾದ ನಾರಾಯಣ ಗುರಿಕಾರ.ಉಪಾಧ್ಯಕ್ಷಪದ್ಮನಾಭ ಪೊಯ್ಯೇ. ಮಾದವ ಉದ್ಯಾವರ. ಖಜಾಂಚಿ ವಸಂತ ಉಚ್ಚಿಲ್. ಕನಿಲ ಶ್ರೀ ಭಗವತಿ ಕ್ಷೇತ್ರದ ಪುನರ್ನಿರ್ಮಾಣ ಸಮಿತಿಯ ಉಪಾಧ್ಯಕ್ಷ ಗಣೇಶ್ ಪಾವೂರು. ರಾಘವ….

Read More

ಒಂಟಿ ವಾಸದ ವೃದ್ಧ ಮಹಿಳೆ ನಿಗೂಢ ಸಾವು: ಕಳ್ಳತನ ಯತ್ನದ ವೇಳೆ ಕೊಲೆ ಶಂಕೆ

ಮಂಜೇಶ್ವರ : ಬದಿಯಡ್ಕ ಠಾಣಾ ವ್ಯಾಪ್ತಿಯ ಕುಂದ್ಲಾಜೆಯ ಅಜಿಲ ಪ್ರದೇಶದಲ್ಲಿ ಒಂಟಿಯಾಗಿ ವಾಸಿಸುತ್ತಿದ್ದ ವೃದ್ಧ ಮಹಿಳೆಯೊಬ್ಬರು ನಿಗೂಢವಾಗಿ ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.ಪುಷ್ಪಾವತಿ (67) ಸಾವನ್ನಪ್ಪಿದ ದುರ್ದೈವಿ. ಮನೆಯ ಮಲಗುವ ಕೋಣೆಯಲ್ಲಿ ಅವರ ಶವ ಪತ್ತೆಯಾಗಿದ್ದು, ಕೋಣೆಯೊಳಗೆ ಎಳೆದಾಟ ಹಾಗೂ ಹೊಡೆದಾಟ ನಡೆದಿರುವ ಸ್ಪಷ್ಟ ಕುರುಹುಗಳು ಕಂಡುಬಂದಿವೆ. ವೃದ್ಧೆಯ ಕೊರಳಲ್ಲಿದ್ದ ಕರಿಮಣಿ ಸರ ಕಾಣೆಯಾಗಿದ್ದು, ಮುಖದ ಮೇಲೆ ಉಗುರಿನಿಂದ ಪರಚಿದ ಗಾಯಗಳಿರುವುದು ಅನುಮಾನವನ್ನು ಮತ್ತಷ್ಟು ಗಟ್ಟಿಗೊಳಿಸಿದೆ. ಈ ಹಿನ್ನೆಲೆಯಲ್ಲಿ ಇದು ಸಹಜ ಸಾವು ಅಲ್ಲ, ಕೊಲೆ ಪ್ರಕರಣವಾಗಿರಬಹುದೆಂಬ ಶಂಕೆ…

Read More

ಟೋಲ್ ಆಕ್ರಮಣ ಪ್ರಕರಣದ ಬಳಿಕ ಪೊಲೀಸ್ ಕ್ರಮ, ಪ್ರತಿಭಟನೆ ಸ್ಥಗಿತ

ಮಂಜೇಶ್ವರ: ಅರಿಕ್ಕಾಡಿ ಟೋಲ್ ಸಂಗ್ರಹ ಕೇಂದ್ರದ ಮುಂಬಾಗದಲ್ಲಿ ಅನಿರ್ಧಿಷ್ಟಾವಧಿ ಕಾಲ ಸತ್ಯಾಗ್ರಹದಲ್ಲಿ ನಿರತರಾಗಿದ್ದ ಶಾಸಕ ಎಕೆಎಂ ಅಶ್ರಫ್ ಸಹಿತ ಟೋಲ್ ವಿರೋಧಿ ನಾಗರಿಕ ಹೋರಾಟ ಕ್ರಿಯಾ ಸಮಿತಿ ನಾಯಕರನ್ನು ಪೊಲೀಸರು ಗುರುವಾರ ಬೆಳಿಗ್ಗೆ ಬಂಧಿಸಿ ಎ ಆರ್ ಕ್ಯಾಂಪ್ ಗೆ ಕೊಂಡೊಯ್ದರು. ಶಾಸಕರನ್ನು ಹೊರತು ಪಡಿಸಿ ಉಳಿದ ನೇತಾರರನ್ನು ಕುಂಬಳೆ ಠಾಣೆಗೆ ಕೊಂಡೊಯ್ಯಲಾಗಿದೆ. ಬುಧವಾರ ರಾತ್ರಿ ಟೋಲ್ ಸಂಗ್ರಹ ಕೇಂದ್ರಕ್ಕೆ ನಾಗರಿಕರಿಂದ ಆಕ್ರಮಣ ನಡೆದ ಹಿನ್ನೆಲೆಯಲ್ಲಿ ಸತ್ಯಾಗ್ರಹ ಸ್ಥಗಿತಗೊಂಡಿದ್ದು, ಗುರುವಾರ ಬೆಳಿಗ್ಗೆ ಪುನರಾರಂಭಗೊಂಡಿತ್ತು. ಇಲ್ಲಿ ಸತ್ಯಾಗ್ರಹ ನಿರತರಾಗಿದ್ದ…

Read More

ಲೈಂಗಿಕ ಕಿರುಕುಳ ಆರೋಪ: ಸಿಪಿಎಂ ನಾಯಕ ರಾಜೀನಾಮೆಗೆ ಒತ್ತಾಯಿಸಿ ಯುಡಿಎಫ್ ಪ್ರತಿಭಟನೆ

ಮಂಜೇಶ್ವರ: ಮಹಿಳೆಯೊಬ್ಬರನ್ನು ಬೆದರಿಸಿ ದೀರ್ಘಕಾಲ ಲೈಂಗಿಕ ಕಿರುಕುಳ ನೀಡಿದ್ದಾರೆಂಬ ಆರೋಪವನ್ನು ಎದುರಿಸುತ್ತಿರುವ ಸಿಪಿಎಂ ನಾಯಕ, ಎಣ್ಮಕಜೆ ಗ್ರಾ. ಪಂ ಸದಸ್ಯ ಸುಧಾಕರ ಮಾಸ್ತರ್ ತನ್ನ ಪಂಚಾಯತ್ ಸದಸ್ಯತ್ವ ಕ್ಕೆ ತಕ್ಷಣವೇ ರಾಜೀನಾಮೆ ಸಲ್ಲಿಸಬೇಕೆಂದು ಒತ್ತಾಯಿಸಿ ಯುಡಿಎಫ್ ಎಣ್ಮಕಜೆ ಪಂಚಾಯತ್ ಘಟಕದ ನೇತೃತ್ವದಲ್ಲಿ ಎಣ್ಮಕಜೆ ಪಂ. ಕಚೇರಿಗೆ ಪ್ರತಿಭಟನಾ ಮೆರವಣಿಗೆ ನಡೆಯಿತು. ಡಿ. ಸಿ. ಸಿ ಪ್ರಧಾನ ಕಾರ್ಯದರ್ಶಿ, ಜಿ ಪಂ. ಸದಸ್ಯ ಸೋಮಶೇಖ‌ರ್ ಜೆ ಎಸ್ ಪ್ರತಿಭಟನಾ ಧರಣಿಗೆ ಚಾಲನೆ ನೀಡಿ ಮಾತನಾಡಿ ಅಧ್ಯಾಪಕ ಹುದ್ದೆಗೆ ಹಾಗೂ…

Read More

ಗ್ರೈಂಡರ್‌ಗೆ ಶಾಲು ಸಿಲುಕಿ ಯುವತಿ ದಾರುಣ ಸಾವು

ಮಂಜೇಶ್ವರ: ಇಲ್ಲಿಗೆ ಸಮೀಪದ ವರ್ಕಾಡಿಯಲ್ಲಿ ಅಡುಗೆ ತಯಾರಿ ಮಧ್ಯೆ ಗ್ರೈಂಡರ್ ಗೆ ಶಾಲು ಸಿಲುಕಿ ಯುವತಿಯೊಬ್ಬಳು ದಾರುಣವಾಗಿ ಸಾವನ್ನಪ್ಪಿದ್ದಾಳೆ.ವರ್ಕಾಡಿ ತೌಡುಗೋಳಿ ಮದಕ್ಕೆ ಕಲ್ಕಿಂಜದ ಅಬ್ದುಲ್ ಖಾದರ್ ಎಂಬವರ ಪತ್ನಿ ಮೈಮೂನ (40) ಸಾವನ್ನಪ್ಪಿದ ದುರ್ದೈವಿ. ಮನೆಯಲ್ಲಿ ಅಡುಗೆ ತಯಾರಿಸಲು ಗ್ರೈಂಡರ್‌ನಲ್ಲಿ ಮಸಾಲೆ ಹುಡಿ ಮಾಡುತ್ತಿದ್ದಂತೆ ಶಾಲು ಅದರಲ್ಲಿ ಸಿಲುಕಿ ಈ ದುರ್ಘಟನೆ ಸಂಭವಿಸಿದೆ. ಗಂಭೀರ ಗಾಯಗೊಂಡ ಮೈಮೂನರನ್ನು ಸಂಬಂಧಿಕರು ಕೂಡಲೇ ಆಸ್ಪತ್ರೆಗೆ ತಲುಪಿಸಿದರೂ ಜೀವವನ್ನು ರಕ್ಷಿಸಲು ಸಾಧ್ಯವಾಗಲಿಲ್ಲ.

Read More

ಕುಂಬಳೆ ಟೋಲ್ ಪ್ಲಾಜಾ ಗಲಾಟೆ: 500ಕ್ಕೂ ಹೆಚ್ಚು ಪ್ರತಿಭಟನಾಕಾರರ ವಿರುದ್ಧ ಪೊಲೀಸ್ ಸ್ವಯಂಪ್ರೇರಿತ ಪ್ರಕರಣ

ಕಾಸರಗೋಡು: ಕಾಸರಗೋಡು–ಮಂಗಳೂರು ರಾಷ್ಟ್ರೀಯ ಹೆದ್ದಾರಿಯ ಕುಂಬ್ಳೆ ಟೋಲ್ ಪ್ಲಾಜಾದಲ್ಲಿ ಟೋಲ್ ವಸೂಲಿಗೆ ವಿರೋಧವಾಗಿ ಬುಧವಾರ ರಾತ್ರಿ ಸುಮಾರು 8.30ರ ಹೊತ್ತಿಗೆ ಸಂಭವಿಸಿದ ಸಂಘರ್ಷದ ಸಂಬಂಧ ಕುಂಬ್ಳೆ ಪೊಲೀಸರು ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಗುರುತಿಸಬಹುದಾದ ಸುಮಾರು 500 ಜನರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಟೋಲ್ ವಸೂಲಿಗೆ ವಿರೋಧವಾಗಿ ಟೋಲ್ ವಿರೋಧಿ ಸಂಯುಕ್ತ ಆಕ್ಷನ್ ಕಮಿಟಿಯ ನೇತೃತ್ವದಲ್ಲಿ ನಡೆಸಿದ ಪ್ರತಿಭಟನೆಯಲ್ಲಿ ಭಾಗವಹಿಸಿದವರ ವಿರುದ್ಧ ಕುಂಬ್ಳೆ ಪೊಲೀಸ್ ಇನ್ಸ್‌ಪೆಕ್ಟರ್ ಟಿ.ಕೆ. ಮುಕುಂದನ್ ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿದ್ದಾರೆ. ಇದೇ ವೇಳೆ, ಧರಣಿಯನ್ನು ಅಂತ್ಯಗೊಳಿಸುವಂತೆ…

Read More

ಕೃಷಿ ನಾಶ ಮತ್ತು ಉಪ್ಪುನೀರಿನ ಭೀತಿ: ಇಚ್ಚಿಲಂಕೋಟೆಯ ರೈತರು ಸಂಕಷ್ಟದಲ್ಲಿ

ಮಂಗಲ್ಪಾಡಿ: ಮಂಗಲ್ಪಾಡಿ ಪಂಚಾಯತ್‌ನ ಇಚ್ಚಿಲಂಕೋಟೆ ಪ್ರದೇಶವು ತೀವ್ರ ಕೃಷಿ ನಾಶದತ್ತ ಸಾಗುತ್ತಿದ್ದು, ರೈತರು ಭಾರಿ ಆರ್ಥಿಕ ಸಂಕಷ್ಟಕ್ಕೆ ಒಳಗಾಗುತ್ತಿದ್ದಾರೆ. ಪರಂಪರಾಗತವಾಗಿ ಅಕ್ಕಿ, ಅಡಕೆ, ಮೆಣಸು ಮೊದಲಾದ ಬೆಳೆಗಳನ್ನು ಬೆಳೆಸಿಕೊಂಡು ಬಂದ ನೂರಾರು ರೈತರು ಇಂದು ಏನು ಮಾಡಬೇಕೆಂದು ತಿಳಿಯದೆ ಸಂದಿಗ್ದತೆಯಲ್ಲಿದ್ದಾರೆ ಸಮೀಪದ ತೋಡು ಮತ್ತು ನದಿಗಳಿಂದ ಕೃಷಿ ಭೂಮಿಗೆ ಉಪ್ಪುನೀರು ನುಗ್ಗುತ್ತಿರುವುದರಿಂದ ತೆಂಗು, ಅಡಕೆ ಮುಂತಾದ ಬೆಳೆಗಳು ಸಂಪೂರ್ಣವಾಗಿ ನಾಶವಾಗುತ್ತಿವೆ. ಮಣ್ಣಿನ ಲವಣಾಂಶ ಹೆಚ್ಚಾಗುವುದರಿಂದ ಸಸ್ಯಗಳು ಒಣಗಿ ಸಾಯುವ ಸ್ಥಿತಿ ಉಂಟಾಗಿದೆ.ಬೇಸಿಗೆ ತೀವ್ರವಾಗುತ್ತಿರುವಂತೆ ಕೃಷಿಗೆ ಅಗತ್ಯವಾದ ಶುದ್ಧ…

Read More
error: Content is protected !!