ತುಳು-ಕೊಂಕಣಿ ರಂಗಭೂಮಿಯ ಕಲಾವಿದ ಎಂ. ಸುಬ್ರಹ್ಮಣ್ಯ ಪೈ ವಿಧಿವಶ

ಬಂಟ್ವಾಳ: ಜೋಡುಮಾರ್ಗ ನೇತ್ರಾವತಿ ಜೇಸಿಯ ಮಾಜಿ ಅಧ್ಯಕ್ಷ, ಬಿ.ಸಿ.ರೋಡಿನ ಜಿ.ಎಸ್.ಬಿ.ಸಮಾಜ ಸೇವಾ ಸಮಿತಿಯ ಮಾಜಿ ಕಾರ್ಯದರ್ಶಿ, ಕಲಾವಿದ ಮತ್ತು ಸಾಮಾಜಿಕ ಚಟುವಟಿಕೆಗಳಲ್ಲೂ ಸಕ್ರಿಯರಾಗಿದ್ದ ಎಂ.ಸುಬ್ರಹ್ಮಣ್ಯ ಪೈ (43) ಕೆಲಕಾಲದ ಅಸೌಖ್ಯದ ಬಳಿಕ ಬುಧವಾರ (ಸೆ.29) ರಾತ್ರಿ ನಿಧನ ಹೊಂದಿದ್ದಾರೆ. ಶಿಕ್ಷಕಿಯಾಗಿರುವ ಪತ್ನಿ ಮತ್ತು ಬಂಧುವರ್ಗ ಹಾಗೂ ಅಪಾರ ಸ್ನೇಹಿತ ಬಳಗವನ್ನು ಅವರು ಅಗಲಿದ್ದಾರೆ. ತುಳು, ಕೊಂಕಣಿ ಭಾಷಾ ನಾಟಕ, ಚಲನಚಿತ್ರಗಳಲ್ಲಿ ಅಭಿನಯಿಸಿದ್ದ ಅವರು ಉತ್ತಮ ನಿರೂಪಕರೂ ಆಗಿದ್ದರು. ಮೃತರ ಅಂತಿಮ ವಿಧಿ ವಿಧಾನಗಳು 30.07.2026 ಗುರುವಾರ ಸಂಜೆ…

Read More

ಕಾಸರಗೋಡಿನಲ್ಲಿ ಸಾಂಕ್ರಾಮಿಕ ಜ್ವರಗಳ ಅಬ್ಬರ; ಎಚ್‌1ಎನ್‌1, ಹಳದಿ ಕಾಮಾಲೆಗೆ ಇಬ್ಬರು ಬಲಿ

​ಕಾಸರಗೋಡು : ಜಿಲ್ಲೆಯಲ್ಲಿ ವಿವಿಧ ಸಾಂಕ್ರಾಮಿಕ ಜ್ವರಗಳು ತೀವ್ರವಾಗಿ ಹರಡುತ್ತಿದ್ದು, ಸಾರ್ವಜನಿಕರಲ್ಲಿ ಆತಂಕ ಮೂಡಿಸಿವೆ. ಎಚ್‌1ಎನ್‌1 ಸೋಂಕಿನಿಂದ ಅಜಾನೂರಿನ ಯಶೋಧ ಹಾಗೂ ಹಳದಿ ಕಾಮಾಲೆಯಿಂದ ನೀರ್ಚಾಲಿನ ಹೇಮಚಂದ್ರ (36) ಸಾವನ್ನಪ್ಪಿದ್ದಾರೆ. ​ಮೃತರ ಸಂಪರ್ಕದಲ್ಲಿದ್ದವರ ಆರೋಗ್ಯ ತಪಾಸಣೆ ಕೈಗೊಳ್ಳಲಾಗಿದೆ. ಇದರ ಜೊತೆಗೆ, ಅಂಬಲತ್ತರ ಪ್ರದೇಶದ 18 ವರ್ಷದ ಯುವಕನಿಗೆ ಅಮೀಬಿಕ್ ಮೆದುಳುಜ್ವರ ದೃಢಪಟ್ಟಿದ್ದು, ಆತನ ಸ್ಥಿತಿ ಅತಿ ಗಂಭೀರವಾಗಿದೆ.ಸ್ಥಳೀಯ ಕೆರೆಯಲ್ಲಿ ಸ್ನಾನ ಮಾಡಿದ್ದರಿಂದ ಸೋಂಕು ತಗುಲಿರುವ ಶಂಕೆ ವ್ಯಕ್ತವಾಗಿದ್ದು, ಆ ಕೆರೆಯಲ್ಲಿಯೂ ಸ್ನಾನ ಮಾಡದಂತೆ ಮತ್ತು ಅದರಲ್ಲಿ ಮಿಂದವರು…

Read More

ಗುರುಪೂರ್ಣಿಮೆಯಂದು ಹಿರಿಯ ವಕೀಲರಿಗೆ ಅಭಿಭಾಷಕ ಪರಿಷತ್‌ನಿಂದ ಗುರುವಂದನೆ

ಗುರುಪೂರ್ಣಿಮೆಯ ಪವಿತ್ರ ದಿನದ ಅಂಗವಾಗಿ ಭಾರತೀಯ ಅಭಿಭಾಷಕ ಪರಿಷತ್ ಕಾಸರಗೋಡು ಜಿಲ್ಲಾ ಸಮಿತಿಯ ನೇತೃತ್ವದಲ್ಲಿ ಗುರುವಂದನಾ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ಆಯೋಜಿಸಲಾಯಿತು. ಈ ಸಂದರ್ಭದಲ್ಲಿ ಕಾಸರಗೋಡಿನ ಹಿರಿಯ ಹಾಗೂ ಪ್ರಸಿದ್ಧ ವಕೀಲರಾದ ಶ್ರೀ ಐ.ವಿ. ಭಟ್ ಹಾಗೂ ಅಡೂರು ಉಮೇಶ್ ನಾಯಕ್ ಅವರ ನಿವಾಸಗಳಿಗೆ ತೆರಳಿ ಶಾಲು ಹೊದಿಸಿ, ಪುಷ್ಪಗುಚ್ಛ ನೀಡಿ ಸನ್ಮಾನಿಸುವ ಮೂಲಕ ಗೌರವ ಸಮರ್ಪಿಸಲಾಯಿತು. ಹಿರಿಯರ ಕಾನೂನು ಸೇವೆ, ಸಮಾಜಮುಖಿ ಕಾರ್ಯ ಹಾಗೂ ಯುವ ವಕೀಲರಿಗೆ ನೀಡಿದ ಮಾರ್ಗದರ್ಶನವನ್ನು ಸ್ಮರಿಸಿ ಅಭಿನಂದಿಸಲಾಯಿತು. ಕಾರ್ಯಕ್ರಮದಲ್ಲಿ ಮಾತನಾಡಿದ ಭಾರತೀಯ…

Read More

ತಳಮಟ್ಟದಲ್ಲಿ ಕಾಂಗ್ರೆಸ್ ಬಲವರ್ಧನೆಗೆ ‘ಸಂಘಟನ್ ಸೃಜನ್ ಅಭಿಯಾನ’ ಮಹತ್ವದ್ದು: ಎಐಸಿಸಿ ವೀಕ್ಷಕ ಜಯಂತ್

ಸುರತ್ಕಲ್: ತಳಮಟ್ಟದಲ್ಲಿ ಪಕ್ಷವನ್ನು ಸಂಘಟಿಸಿ ಬಲಪಡಿಸುವ ಉದ್ದೇಶದಿಂದ ಕಾಂಗ್ರೆಸ್ ಪಕ್ಷ ‘ಸಂಘಟನ್ ಸೃಜನ್ ಅಭಿಯಾನ’ದ ಮೂಲಕ ಪಾರದರ್ಶಕ ಹೆಜ್ಜೆ ಇಟ್ಟಿದೆ ಎಂದು ಎಐಸಿಸಿ ವೀಕ್ಷಕರೂ, ಕೇರಳದ ಶಾಸಕರೂ ಆದ ಜಯಂತ್ ಹೇಳಿದರು. ಸುರತ್ಕಲ್‌ನ ಚೊಕ್ಕಬೆಟ್ಟು ಕ್ರಾಸ್‌ನಲ್ಲಿ ‘ಸಂಘಟನ್ ಸೃಜನ್ ಅಭಿಯಾನ’ದ ಅಂಗವಾಗಿ ನಡೆದ ಸಭೆಯಲ್ಲಿ ಮಾತನಾಡಿದ ಅವರು, 2013ರಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾಂಗ್ರೆಸ್ ದಾಖಲಿಸಿದ್ದ ಯಶಸ್ಸನ್ನು ಪುನರಾವರ್ತಿಸುವ ಗುರಿ ಹೊಂದಲಾಗಿದೆ ಎಂದರು. ಜಿಲ್ಲೆಯ ಎಂಟು ವಿಧಾನಸಭಾ ಕ್ಷೇತ್ರಗಳು, ಮಹಾನಗರ ಪಾಲಿಕೆ, ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್…

Read More

ಅಪಘಾತ ರಹಿತ ಚಾಲಕರಿಗೆ ಗೌರವ; ಸಮಾಜಕ್ಕೆ ಮಾದರಿಯಾಗಲಿ: ಮುರಗೇಂದ್ರ ಬಸವರಾಜ ಶಿರೋಳಕರ

ಮಂಗಳೂರು: ಅಪಘಾತ ರಹಿತವಾಗಿ ವಾಹನ ಚಲಾಯಿಸಿ ಸೇವೆ ಸಲ್ಲಿಸುತ್ತಿರುವ ಚಾಲಕರನ್ನು ಗೌರವಿಸುವ ಮೂಲಕ ಅವರು ಸಮಾಜಕ್ಕೆ ಮಾದರಿಯಾಗಬೇಕು ಎಂಬ ಸಂದೇಶವನ್ನು ಸಾರಬಹುದು ಎಂದು ಉಪ ಸಾರಿಗೆ ಆಯುಕ್ತರು ಹಾಗೂ ಹಿರಿಯ ಪ್ರಾದೇಶಿಕ ಸಾರಿಗೆ ಅಧಿಕಾರಿ (ಪ್ರಭಾರ) ಮುರಗೇಂದ್ರ ಬಸವರಾಜ ಶಿರೋಳಕರ ಹೇಳಿದರು. ದಕ್ಷಿಣ ಕನ್ನಡ ಕಾರ್ಯನಿರತ ಪತ್ರಕರ್ತರ ಸಂಘ (ರಿ) ಹಾಗೂ ದಕ್ಷಿಣ ಕನ್ನಡ ಬಸ್ ಮಾಲಕರ ಸಂಘ (ರಿ) ಸಂಯುಕ್ತ ಆಶ್ರಯದಲ್ಲಿ ಬುಧವಾರ ಪತ್ರಿಕಾ ಭವನದಲ್ಲಿ ಆಯೋಜಿಸಿದ್ದ ಅಪಘಾತ ರಹಿತ ಚಾಲಕರಿಗೆ ಗೌರವಾರ್ಪಣೆ ಹಾಗೂ ಪತ್ರಕರ್ತರಿಗೆ…

Read More

ಕರ್ನಾಟಕದ ಮೇರು ಕಲಾವಿದರೀಗೆ ಗಡಿನಾಡು ಕಾಸರಗೋಡಿನ ಗೌರವಾರ್ಪಣೆ

ಕರ್ನಾಟಕ ಗಡಿನಾಡು ಕನ್ನಡ ಸಮ್ಮೇಳನ ದ ತ್ರಿತೀಯ ದಿನ 27.7.2026.ಡಾ. ಜಾನಪದ ಎಸ್. ಬಾಲಾಜಿ ಉದ್ಘಾಟಿಸಿ ಚಾಲನೆ ನೀಡಿದ ಗಡಿನಾಡು ಕಲಾ ಮೇಳ ದಲ್ಲಿ ಬೆಂಗಳೂರಿನ ಶ್ರೀ ನಾಗರಾಜ್ ಬೆಂಗಳೂರು ಇವರ ಕಲಾ ತಂಡ ಗಳಿಗೆ, ಉತ್ತಮ ಕಲಾ ಪ್ರದರ್ಶನ ನೀಡಿದ ಪ್ರತಿಬಾವಂತ ಕಲಾವಿದರಾದ, ಕುಮಾರ್, ಶಶಿಕಲಾ, ಶರತ್, ಸೌಂದರ್ಯ, ಚೌದಪ್ಪ, ವರುಣ್, ಶ್ವೇತ ವಿಜಯ್, ದೀಪಿಕಾ, ರಾಧಿಕಾ, ಸ್ನೇಹ, ಅರ್ಪಿತಾ, ಯುಕ್ತ, ಅಮುದ್ರ ಕೆ. ಎಸ್. ಪ್ರಿಯಾಂಕ, ಭಾರ್ಗವಿ, ಮೇಘ, ಅಮೃತ, ಶುಭ, ರೋಹನ, ಹರ್ಷಿಣಿ,…

Read More

ಚಿಲಿಂಬಿ ಡ್ರೈನೇಜ್ ಸಮಸ್ಯೆಗೆ ಪರಿಹಾರದ ಭರವಸೆ: ಶಾಸಕ ವೇದವ್ಯಾಸ ಕಾಮತ್ ನೇತೃತ್ವದಲ್ಲಿ ಮಹತ್ವದ ಸಭೆ

ನಗರದ ಚಿಲಿಂಬಿಯ ಮಹಾಲಕ್ಷ್ಮಿ ಕ್ಲಬ್ ಬಳಿಯ ಪರಿಸರದ ಡ್ರೈನೇಜ್ ಸಮಸ್ಯೆ ಕುರಿತು ಶಾಸಕ ವೇದವ್ಯಾಸ ಕಾಮತ್ ರವರ ನೇತೃತ್ವದಲ್ಲಿ ಅಧಿಕಾರಿಗಳ ಹಾಗೂ ಸ್ಥಳೀಯರ ಸಭೆ ನಡೆಯಿತು. ಈ ಪರಿಸರದಲ್ಲಿ ಅಗತ್ಯವಾಗಿ ಡ್ರೈನೇಜ್ ನಿರ್ಮಾಣವಾಗಬೇಕೆಂಬುದು ಸ್ಥಳೀಯರ ಹಲವು ವರ್ಷಗಳ ಬೇಡಿಕೆಯಾಗಿದೆ. ಆ ನಿಟ್ಟಿನಲ್ಲಿ ಈ ಹಿಂದೆ ಅಧಿಕಾರಿಗಳಿಂದ ಸರ್ವೇ ನಡೆಸಿ ವರದಿ ಪಡೆಯಲಾಗಿತ್ತು. ಆದರೆ ಇಲ್ಲಿನ ಸ್ಥಳಾವಕಾಶದ ಕೊರತೆಯಿಂದ ಮುಂದುವರಿಯಲು ಸಾಧ್ಯವಾಗಿರಲಿಲ್ಲ. ಈಗ ಕೆಲವು ಸ್ಥಳೀಯರು ಡ್ರೈನೇಜ್ ನಿರ್ಮಾಣಕ್ಕೆ ಜಾಗ ಬಿಟ್ಟು ಕೊಡುವ ಬಗ್ಗೆ ಸ್ವತಃ ಒಲವು ತೋರಿದ್ದು,…

Read More

ಒಮಾನ್‌ನಲ್ಲಿ ದುರಂತ: ಮೂಡುಬಿದಿರೆಯ ಯುವಕ ರಾಜವರ್ಮ ಜೈನ್ ವಾಹನದ ಚಕ್ರದಡಿ ಸಾವು

ಮಂಗಳೂರು/ಮೂಡುಬಿದಿರೆ: ಒಮಾನ್‌ನಲ್ಲಿ ಸಂಭವಿಸಿದ ವಾಹನ ಅಪಘಾತದಲ್ಲಿ ಮೂಡಬಿದಿರೆ ಸಮೀಪದ ಸಾಣೂರು ಗ್ರಾಮದ ಯುವಕನೋರ್ವ ಮೃತಪಟ್ಟಿರುವ ಘಟನೆ ನಡೆದಿದೆ. ಮೃತರನ್ನು ಸಾಣೂರು ಮೂಲಗುತ್ತು ನಿವಾಸಿ ರಾಜವರ್ಮ ಜೈನ್ (33) ಎಂದು ಗುರುತಿಸಲಾಗಿದೆ. ರಾಜವರ್ಮ ಜೈನ್ ಅವರು ಒಮಾನ್‌ನ ಖಾಸಗಿ ಸಂಸ್ಥೆಯೊಂದರಲ್ಲಿ ಉದ್ಯೋಗದಲ್ಲಿದ್ದರು. ಕಂಪನಿಯ ವಾಹನವನ್ನು ಸಹೋದ್ಯೋಗಿಯೊಬ್ಬರು ರಿವರ್ಸ್ ತೆಗೆದುಕೊಳ್ಳುತ್ತಿದ್ದರು. ಈ ವೇಳೆ ರಾಜವರ್ಮ ಅವರು ಆಕಸ್ಮಿಕವಾಗಿ ವಾಹನದ ಚಕ್ರದಡಿ ಸಿಲುಕಿದ್ದು, ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.ಮೃತರು ಪತ್ನಿ, ಪುತ್ರಿ ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.

Read More

ಮತದಾರರ ಪಟ್ಟಿ ಪರಿಷ್ಕರಣೆಗೆ ಬಂಟ್ವಾಳದಲ್ಲಿ ಜಾಗೃತಿ ಜಾಥಾ: ಅರ್ಹರು ಹೆಸರು ನೋಂದಾಯಿಸಿಕೊಳ್ಳಲು ಕರೆ

ಬಂಟ್ವಾಳ: ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ ಭಾರತ ಚುನಾವಣಾ ಆಯೋಗವು ಕೈಗೊಂಡಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ–2026 ಕಾರ್ಯಕ್ರಮದಡಿ ಮತದಾರರ ಪಟ್ಟಿಯನ್ನು ನಿಖರ ಹಾಗೂ ನವೀಕೃತಗೊಳಿಸುವ ಕಾರ್ಯಕ್ಕೆ ಒತ್ತು ನೀಡಲಾಗಿದೆ ಎಂದು ಉಪತಹಶೀಲ್ದಾರ್‌ ನವೀನ್‌ ಹೇಳಿದರು. ತಾಲೂಕು ಪಂಚಾಯತ್‌ ಸಭಾಂಗಣದಲ್ಲಿ ನಡೆದ ಬಂಟ್ವಾಳ ತಾಲೂಕು ಆಡಳಿತ ಮತ್ತು ತಾಲೂಕು ಸ್ವೀಪ್‌ (SVEEP) ಸಮಿತಿ, ಸರಕಾರಿ ಪದವಿ ಪೂರ್ವ ಕಾಲೇಜು, ಬಿ.ಮೂಡ ಇವುಗಳ ಸಂಯುಕ್ತ ಆಶ್ರಯದಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) 2026…

Read More

ಗುರುಪೂರ್ಣಿಮೆ ಸಂಭ್ರಮ: ಕದ್ರಿ ಶ್ರೀ ಮಂಜುನಾಥ ಸನ್ನಿಧಿಯಲ್ಲಿ ವಿಶೇಷ ಪೂಜೆ, ಸಹಸ್ರಾರು ಭಕ್ತರ ದರ್ಶನ

ಮಂಗಳೂರು: ಐತಿಹಾಸಿಕ ಪ್ರಸಿದ್ಧಿಯ ಕದ್ರಿ ಶ್ರೀ ಮಂಜುನಾಥ ದೇವಸ್ಥಾನದಲ್ಲಿ ಗುರುಪೂರ್ಣಿಮೆಯನ್ನು ಬುಧವಾರ ಭಕ್ತಿ-ಶ್ರದ್ಧೆಯಿಂದ ಆಚರಿಸಲಾಯಿತು. ಗುರುಪೂರ್ಣಿಮೆಯ ಅಂಗವಾಗಿ ಬೆಳಗ್ಗೆಯಿಂದಲೇ ವಿಶೇಷ ಪೂಜಾ ಕೈಂಕರ್ಯಗಳು, ರುದ್ರಪಾರಾಯಣ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನೆರವೇರಿದವು. ಮಧ್ಯಾಹ್ನ ಶ್ರೀ ಮತ್ಸೇಂದ್ರನಾಥ, ಶ್ರೀ ಗೋರಕ್ಷನಾಥ, ಶ್ರೀ ಚೌರಂಗಿನಾಥ, ತ್ರಿಲೋಕೇಶ್ವರ, ವಿಷ್ಣು ದೇವರು ಹಾಗೂ ವ್ಯಾಸಮುನಿಗಳಿಗೆ ವಿಶೇಷ ಗುರುಪೂಜೆ ಸಲ್ಲಿಸಲಾಯಿತು. ಇದೇ ಸಂದರ್ಭದಲ್ಲಿ ಶ್ರೀ ಮಂಜುನಾಥ ಸ್ವಾಮಿಗೆ ವೈದಿಕ ವಿಧಿವಿಧಾನಗಳೊಂದಿಗೆ ಏಕಾದಶ ರುದ್ರಾಭಿಷೇಕ ನೆರವೇರಿತು. ಗುರುಪೂರ್ಣಿಮೆಯ ಪವಿತ್ರ ಪರ್ವದ ಹಿನ್ನೆಲೆಯಲ್ಲಿ ಸಹಸ್ರಾರು ಭಕ್ತರು ದೇವಸ್ಥಾನಕ್ಕೆ…

Read More
error: Content is protected !!