ಪುನರ್ಜನಿ ಪ್ರಕರಣದಲ್ಲಿ ಮುಖ್ಯಮಂತ್ರಿ ವಿ.ಡಿ. ಸತೀಶನ್ ವಿರುದ್ಧದ ಪ್ರಕರಣಕ್ಕೆ ಅಂತ್ಯ: ಸಾಕ್ಷ್ಯ ಸಿಗದ ಹಿನ್ನೆಲೆಯಲ್ಲಿ ಸರ್ಕಾರದ ನಿರ್ಧಾರ

ಮುಖ್ಯಮಂತ್ರಿ ವಿ.ಡಿ. ಸತೀಶನ್ ವಿರುದ್ಧ ದಾಖಲಾಗಿದ್ದ ಪುನರ್ಜನಿ ಪ್ರಕರಣವನ್ನು ಸರ್ಕಾರ ಮುಕ್ತಾಯಗೊಳಿಸಿದೆ. ವಿ.ಡಿ. ಸತೀಶನ್ ಅವರ ಪಾತ್ರವನ್ನು ಸಾಬೀತುಪಡಿಸಲು ವಿಜಿಲೆನ್ಸ್‌ಗೆ ಯಾವುದೇ ಸಾಕ್ಷ್ಯ ದೊರಕಿಲ್ಲ ಎಂದು ಗೃಹ ಸಚಿವ ರಮೇಶ್ ಚೆನ್ನಿತ್ತಲ ತಿಳಿಸಿದ್ದಾರೆ. ಹಿಂದಿನ ಸರ್ಕಾರ ಈ ಪ್ರಕರಣವನ್ನು ಇತರೆ ತನಿಖಾ ಸಂಸ್ಥೆಗಳಿಗೆ ಒಪ್ಪಿಸಲು ತೆಗೆದುಕೊಂಡ ನಿರ್ಧಾರ ರಾಜಕೀಯ ಪ್ರೇರಿತವಾಗಿತ್ತು ಎಂದೂ ಅವರು ಆರೋಪಿಸಿದರು. 2018ರ ಕೇರಳ ಪ್ರವಾಹದಲ್ಲಿ ಮನೆ ಕಳೆದುಕೊಂಡವರಿಗೆ ಮನೆ ನಿರ್ಮಿಸಿ ನೀಡಲು ಅಗತ್ಯವಿದ್ದ ನಿಧಿ ಸಂಗ್ರಹಕ್ಕಾಗಿ ವಿದೇಶ ಪ್ರವಾಸ ಕೈಗೊಳ್ಳಲಾಗಿತ್ತು. ಈ ನಿಧಿ…

Read More

ಪುನರ್ಜನಿ ಪ್ರಕರಣದಲ್ಲಿ ವಿ.ಡಿ. ಸತೀಶನ್‌ಗೆ ಕ್ಲೀನ್ ಚಿಟ್: ವಿಜಿಲೆನ್ಸ್ ಕ್ರಮ ಅಸಾಮಾನ್ಯ ಎಂದು ಎಂ.ವಿ. ಗೋವಿಂದನ್ ಆರೋಪ

ಪುನರ್ಜನಿ ಪ್ರಕರಣದಲ್ಲಿ ಮುಖ್ಯಮಂತ್ರಿ ವಿ.ಡಿ. ಸತೀಶನ್ ಅವರನ್ನು ದೋಷಮುಕ್ತಗೊಳಿಸಿದ ವಿಜಿಲೆನ್ಸ್ ಕ್ರಮ ಅಸಾಮಾನ್ಯವಾಗಿದೆ ಎಂದು ಸಿಪಿಐ(ಎಂ) ರಾಜ್ಯ ಕಾರ್ಯದರ್ಶಿ ಎಂ.ವಿ. ಗೋವಿಂದನ್ ಆರೋಪಿಸಿದ್ದಾರೆ. ಎಲ್ಲ ಸಾಕ್ಷ್ಯಗಳಿದ್ದರೂ ಕ್ಲೀನ್ ಚಿಟ್ ನೀಡಲಾಗಿದೆ ಎಂದು ಅವರು ಹೇಳಿದರು. ವಿದೇಶಕ್ಕೆ ತೆರಳಿ ನಿಧಿ ಸಂಗ್ರಹಿಸಲು ಪ್ರಸ್ತುತ ಕಾನೂನು ಅವಕಾಶ ನೀಡುವುದಿಲ್ಲ. ಪ್ರವಾಹದ ಸಂದರ್ಭದಲ್ಲಿ ನೆರವು ಕೋರಲು ಆಗಿನ ಮುಖ್ಯಮಂತ್ರಿಗೂ ವಿದೇಶಕ್ಕೆ ತೆರಳಲು ಅನುಮತಿ ನೀಡಲಾಗಿರಲಿಲ್ಲ ಎಂದು ಅವರು ನೆನಪಿಸಿದರು. ವಿ.ಡಿ. ಸತೀಶನ್ ವಿದೇಶದಲ್ಲಿ ನಿಧಿ ಸಂಗ್ರಹಿಸುತ್ತಿರುವ ವಿಡಿಯೊವನ್ನೂ ಎಂ.ವಿ. ಗೋವಿಂದನ್ ಸುದ್ದಿಗೋಷ್ಠಿಯಲ್ಲಿ…

Read More

ಜ್ಯುವೆಲ್ಲರಿ ಅಂಗಡಿಯಿಂದ 10 ಲಕ್ಷದ ಆಭರಣ ಎಗರಿಸಿದ ‘ ಇಲಿ ‘

ತುಮಕೂರಿನ ಕಾಲ್‌ಟೆಕ್ಸ್ ಸರ್ಕಲ್ ಸಮೀಪದ ವಿಶ್ವಾಸ್ ಜ್ಯುವೆಲರಿಯಲ್ಲಿ ಸುಮಾರು 10 ಲಕ್ಷ ರೂಪಾಯಿ ಮೌಲ್ಯದ ವಜ್ರ ಮತ್ತು ಚಿನ್ನಾಭರಣಗಳು ನಾಪತ್ತೆಯಾಗಿದ್ದವು. ಅಂಗಡಿಯ ಶಟರ್ ಮುರಿದಿರಲಿಲ್ಲ. ಯಾರೂ ಒಳನುಗ್ಗಿದ ಗುರುತು ಕೂಡ ಇರಲಿಲ್ಲ. ಇದರಿಂದ ಅಂಗಡಿ ಮಾಲೀಕರು ಹಾಗೂ ಸಿಬ್ಬಂದಿ ತೀವ್ರ ಆತಂಕಕ್ಕೊಳಗಾಗಿದ್ದರು. ಕಳುವಿನ ರಹಸ್ಯ ಬಯಲಿಗೆಳೆಯಲು ಅಂಗಡಿಯ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಅಚ್ಚರಿಯ ಸಂಗತಿ ಬೆಳಕಿಗೆ ಬಂದಿದೆ. ಕಳ್ಳ ಮನುಷ್ಯನಲ್ಲ, ಒಂದು ಇಲಿ ಎಂಬುದು ಗೊತ್ತಾಗಿದೆ. ಸಿಸಿಟಿವಿಯಲ್ಲಿ ಇಲಿ ಅಂಗಡಿಗೆ ನುಗ್ಗಿ 10 ಉಂಗುರಗಳು ಹಾಗೂ 3…

Read More

ಬಿಜೈ ಸ್ಮಾರ್ಟ್ ಬಜಾರ್‌ನಲ್ಲಿ ತುಳುನಾಡಿನ ಸಂಭ್ರಮ; ಆಟಿ ತಿಂಗಳ ಆಚರಣೆ

ಮಂಗಳೂರು: ತುಳುನಾಡಿನ ಸಂಪ್ರದಾಯ ಮತ್ತು ಸಂಸ್ಕೃತಿಯನ್ನು ಉಳಿಸುವ ಉದ್ದೇಶದಿಂದ ಬಿಜೈ ಮಂಗಳೂರಿನ ಸ್ಮಾರ್ಟ್ ಬಜಾರ್ ವತಿಯಿಂದ ಆಟಿ ತಿಂಗಳ ಆಚರಣೆಯನ್ನು ಆಯೋಜಿಸಲಾಯಿತು. ಕಾರ್ಯಕ್ರಮದಲ್ಲಿ ತುಳುನಾಡಿನ ಸಂಪ್ರದಾಯಿಕ ಆಚರಣೆಗಳು, ಆಟಿ ತಿಂಗಳ ವಿಶೇಷತೆಗಳು ಹಾಗೂ ಗ್ರಾಮೀಣ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ವಿವಿಧ ಕಾರ್ಯಕ್ರಮಗಳು ನಡೆಯಿತು. ಈ ಸಂದರ್ಭದಲ್ಲಿ ತುಳುನಾಡಿನ ಸಾಂಪ್ರದಾಯಿಕ ಆಹಾರ ಪದಾರ್ಥಗಳು, ಆಟಿ ತಿಂಗಳ ವಿಶೇಷ ಖಾದ್ಯಗಳು ಹಾಗೂ ವಿವಿಧ ಸಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರದರ್ಶಿಸಲಾಯಿತು. ಮಹಿಳೆಯರಿಗಾಗಿ ಏರ್ಪಡಿಸಿದ ಈ ಕೂಟದಲ್ಲಿ ವಿವಿಧ ಮನೋರಂಜನೆ ಆಟ , ತುಳುನಾಡು ಸಂಸ್ಕೃತಿಯನ್ನು…

Read More

ಬಂಟ್ವಾಳದಲ್ಲಿ ಭಾರೀ ಮಳೆ ಅಬ್ಬರ; ಮನೆ ಚಾವಣಿ ಕುಸಿದು ಅಪಾರ ನಷ್ಟ

ಬಂಟ್ವಾಳ: ತಾಲೂಕಿನ ತೆಂಕಬೆಳ್ಳೂರು ಗ್ರಾಮದ ಕಾಗುಡ್ಡೆ ಎಂಬಲ್ಲಿ ಬುಧವಾರ ರಾತ್ರಿ ಸುರಿದ ಭಾರೀ ಮಳೆ ಹಾಗೂ ಬಿರುಗಾಳಿಯ ಅಬ್ಬರಕ್ಕೆ ಮನೆಯ ಚಾವಣಿ ಕುಸಿದು ಬಿದ್ದ ಘಟನೆ ನಡೆದಿದೆ.ಕಾಗುಡ್ಡೆ ನಿವಾಸಿ ಜಯ ಸಪಲ್ಯ ಅವರ ಮನೆಗೆ ಈ ಅನಾಹುತ ಸಂಭವಿಸಿದೆ. ಬಿರುಗಾಳಿಯ ತೀವ್ರತೆಗೆ ಮನೆಯ ಮೇಲ್ಛಾವಣಿಯ ಒಂದು ಭಾಗ ಏಕಾಏಕಿ ಕುಸಿದು ಬಿದ್ದಿದ್ದು, ಮನೆಯೊಳಗೆ ಮಳೆ ನೀರು ನುಗ್ಗಿ ಗೃಹೋಪಯೋಗಿ ವಸ್ತುಗಳಿಗೂ ಹಾನಿಯಾಗಿದೆ ಎಂದು ತಿಳಿದುಬಂದಿದೆ. ಘಟನೆಯ ವೇಳೆ ಮನೆಯ ಸದಸ್ಯರು ಒಳಗೇ ಇದ್ದರೂ, ಚಾವಣಿ ಕುಸಿಯುವ ಶಬ್ದ…

Read More

ರಾಹುಲ್ ಗಾಂಧಿ ವಿರುದ್ಧ ಬಿಜೆಪಿ ಶಾಸಕ ಯಶ್‌ಪಾಲ್ ಸುವರ್ಣ ನೀಡಿರುವ ಅವಹೇಳನಕಾರಿ ಹೇಳಿಕೆಗೆ ಖಂಡಿನೆ, ಕ್ರಮಕ್ಕೆ ಆಗ್ರಹ- ಮಂಜುಳಾ ನಾಯಕ್

ಉಡುಪಿ ಬಿಜೆಪಿ ಶಾಸಕ ಯಶ್‌ಪಾಲ್ ಸುವರ್ಣ ಅವರು ಸಿಜೆಪಿ ಹಾಗೂ ಕಾಂಗ್ರೆಸ್ ಪಕ್ಷದ ವಿರುದ್ಧ ಉಡುಪಿಯಲ್ಲಿ ನಡೆದ ಪ್ರತಿಭಟನೆಯಲ್ಲಿ ಕಾಂಗ್ರೇಸ್ ಪಕ್ಷದ ರಾಷ್ಟ್ರೀಯ ಮುಖಂಡ, ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರ ಕುರಿತು ಬಳಸಿರುವ ಅವಹೇಳನಕಾರಿ ಹಾಗೂ ಅಸಂವಿಧಾನಿಕ ಭಾಷೆ ಅತ್ಯಂತ ಖಂಡನೀಯ. ಇಂತಹ ಹೇಳಿಕೆಗಳು ಪ್ರಜಾಪ್ರಭುತ್ವದ ಮೌಲ್ಯಗಳಿಗೆ ವಿರುದ್ಧವಾಗಿದ್ದು, ಸಾರ್ವಜನಿಕ ಜೀವನದಲ್ಲಿರುವ ಜನಪ್ರತಿನಿಧಿಯೊಬ್ಬರಿಗೆ ಶೋಭೆ ತರುವುದಿಲ್ಲ. ಪ್ರಜಾಪ್ರಭುತ್ವದಲ್ಲಿ ರಾಜಕೀಯ ಭಿನ್ನಾಭಿಪ್ರಾಯಗಳು ಸಹಜ. ಯಾವುದೇ ನಾಯಕನ ನೀತಿಗಳು, ನಿರ್ಧಾರಗಳು ಅಥವಾ ಹೇಳಿಕೆಗಳನ್ನು ವಾಸ್ತವಾಧಾರಿತವಾಗಿ ಟೀಕಿಸುವ…

Read More

ಕಾಸರಗೋಡಿನ ಯಕ್ಷಗಾನ ಬೊಂಬೆಯಾಟಕ್ಕೆ ಶೃಂಗೇರಿ ಶ್ರೀಗಳ ಮೆಚ್ಚುಗೆ; ಪರಂಪರೆ ಉಳಿಸಲು ಕರೆ

ಕಾಸರಗೋಡು: ಸನಾತನ ಹಿಂದೂಧರ್ಮ ಉಳಿಯಬೇಕಾದರೆ ಪೌರಾಣಿಕ ಪ್ರಜ್ಞೆ ಜಾಗೃತಗೊಳ್ಳಬೇಕು. ಸಂಸ್ಕೃತಿ ಕಲೆಗಳು ಪ್ರವರ್ಧಮಾನಕ್ಕೆ ಬರಬೇಕು. ಸೂತ್ರದ ಯಕ್ಷಗಾನ ಬೊಂಬೆಯಾಟದ ಮೂಲಕ ಪರಂಪರಾಗತ ಕಲಾಮೌಲ್ಯಕ್ಕೆ ಕಾಯಕಲ್ಪ ನೀಡುತ್ತಿರುವ ಗಡಿನಾಡು ಕಾಸರಗೋಡಿನ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಬೊಂಬೆಯಾಟ ಸಂಘದ ಸತ್ಕಾರ್ಯ ಶ್ಲಾಘನೀಯ ಎಂಬುದಾಗಿ ಶೃಂಗೇರಿ ಶಾರದಾಪೀಠದ ಜಗದ್ಗುರು ಶ್ರೀ ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿ ಹೇಳಿದರು. ಶ್ರೀ ಗೋಪಾಲಕೃಷ್ಣ ಯಕ್ಷಗಾನ ಬೊಂಬೆಯಾಟ ಸಂಘದ ‘ಗಣ್ಯರೆಡೆಗೆ ಬೊಂಬೆ ನಡಿಗೆ’ ವಿನೂತನ ಪರಿಕಲ್ಪನೆಯ ಯೋಜನೆಯನ್ನು ಉದ್ಘಾಟಿಸಿ ಶ್ರೀಗಳು ಆಶೀರ್ವಚನ ನೀಡಿದರು. ಶೃಂಗೇರಿ ಶಾರದಾ…

Read More

ಮಂಜೇಶ್ವರ: ಕಳಪೆ ಕಾಮಗಾರಿ: ಬೇಜವಾಬ್ದಾರಿ ನೀರು ಸರಬರಾಜು ಇಲಾಖೆ: ತೋಡಿದ ಗುಂಡಿಗಳಿಂದ ಸರಣಿ ಅಪಘಾತ, ಸಾರ್ವಜನಿಕರ ಆಕ್ರೋಶ

​ಮಂಜೇಶ್ವರ: ಕೇರಳ ನೀರು ಸರಬರಾಜು ಇಲಾಖೆಯ ವತಿಯಿಂದ ಪೈಪ್ ಅಳವಡಿಸುವ ಹೆಸರಿನಲ್ಲಿ ರಸ್ತೆ ಬದಿಗಳಲ್ಲಿ ಗುಂಡಿಗಳನ್ನು ತೋಡಿ, ಕೆಲಸ ಮುಗಿದ ಬಳಿಕ ಅವುಗಳನ್ನು ಮುಚ್ಚದೆ ಹಾಗೇ ಬಿಟ್ಟುಹೋಗುತ್ತಿರುವ ಬೇಜವಾಬ್ದಾರಿ ಧೋರಣೆ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಈ ನಿರ್ಲಕ್ಷ್ಯ ಧೋರಣೆಯಿಂದಾಗಿ ಸ್ಥಳದಲ್ಲಿ ಹಲವು ಅಪಘಾತಗಳು ಸಂಭವಿಸುತ್ತಿದ್ದು, ಸಾರ್ವಜನಿಕರು ಪ್ರಾಣಭಯದಲ್ಲಿ ಓಡಾಡುವಂತಾಗಿದೆ. ​ಇತ್ತೀಚೆಗೆ ಮಂಜೇಶ್ವರ ಗ್ರಾಮ ಪಂಚಾಯತ್ ವ್ಯಾಪ್ತಿಯ 9ನೇ ವಾರ್ಡ್‌ನ ಚೌಕಿ ಉದ್ಯಾವರದಲ್ಲಿ ಬಸ್ ನಿಲ್ದಾಣದ ಪಕ್ಕದಲ್ಲೇ ಪೈಪ್ ಅಳವಡಿಸಲು ಭಾರಿ ಗುಂಡಿಗಳನ್ನು ತೋಡಲಾಗಿತ್ತು. ಆದರೆ, ಕಾಮಗಾರಿ ಮುಗಿದರೂ…

Read More

25 ವರ್ಷಗಳ ಬಳಿಕ ಕೊಲೆ ಆರೋಪಿ ಅಶ್ರಫ್ ಬಂಧನ

ಕಾಸರಗೋಡು: 2001ರ ವೇಟ್ಟುಮ್ಮಲ್ ರತೀಶ್ ಕೊಲೆ ಪ್ರಕರಣದಲ್ಲಿ ನ್ಯಾಯಾಲಯದಿಂದ ತಲೆಮರೆಸಿಕೊಂಡಿದ್ದ ಕದಿರೂರು ನಿವಾಸಿ ಸಿ.ಎಚ್. ಅಶ್ರಫ್ (58) ಎಂಬಾತನನ್ನು 25 ವರ್ಷಗಳ ಬಳಿಕ ಪ್ರತ್ಯೇಕ ತನಿಖಾ ತಂಡ ಬಂಧಿಸಿದೆ. ಕೃತ್ಯದ ಬಳಿಕ ಮುಂಬೈ, ಬೆಂಗಳೂರು ಮೊದಲಾದೆಡೆ ಹೋಟೆಲ್ ಕಾರ್ಮಿಕನಾಗಿದ್ದ ಈತ, ಕಳೆದ 15 ವರ್ಷಗಳಿಂದ ಪಯ್ಯನ್ನೂರು ಬಳಿ ಗೂಡಂಗಡಿ ನಡೆಸಿ ಜೀವನ ಸಾಗಿಸುತ್ತಿದ್ದನು. ಸಿಟಿ ಪೊಲೀಸ್ ಕಮೀಷನರ್ ವಿಜಯ್ ಭರತ್ ರೆಡ್ಡಿ ಅವರ ನಿರ್ದೇಶನದಂತೆ ರಚಿಸಲಾದ ವಿಶೇಷ ತಂಡವು ಖಚಿತ ಮಾಹಿತಿಯ ಮೇರೆಗೆ ಕಾರ್ಯಾಚರಣೆ ನಡೆಸಿ ದೀರ್ಘಕಾಲದಿಂದ…

Read More

ಕಾವೇರಿ ನೀರು ವಿವಾದ ತೀವ್ರ: ಕರ್ನಾಟಕ ಬಂದ್‌ಗೆ ಕನ್ನಡ ಸಂಘಟನೆಗಳ ಚಿಂತನೆ

ಬೆಂಗಳೂರು:ತಮಿಳುನಾಡಿಗೆ ಕಾವೇರಿ ನೀರು ಹರಿಸುವಂತೆ ಕಾವೇರಿ ನೀರು ನಿಯಂತ್ರಣ ಸಮಿತಿ (CWRC) ನೀಡಿರುವ ಆದೇಶದ ವಿರುದ್ಧ ರಾಜ್ಯದಲ್ಲಿ ಆಕ್ರೋಶ ವ್ಯಕ್ತವಾಗಿದ್ದು, ಕನ್ನಡಪರ ಸಂಘಟನೆಗಳು ರಾಜ್ಯವ್ಯಾಪಿ ಹೋರಾಟಕ್ಕೆ ಸಜ್ಜಾಗಿವೆ. ಈ ಬೆಳವಣಿಗೆಯ ನಡುವೆ ಕರ್ನಾಟಕ ಬಂದ್‌ಗೆ ಕರೆ ನೀಡುವ ಕುರಿತು ಚರ್ಚೆಗಳು ಆರಂಭಗೊಂಡಿವೆ. ಕಾವೇರಿ ನೀರು ಬಿಡುಗಡೆಗೆ ತೀವ್ರ ವಿರೋಧ ವ್ಯಕ್ತಪಡಿಸಿರುವ ವಿವಿಧ ಕನ್ನಡಪರ ಸಂಘಟನೆಗಳು ಬೆಂಗಳೂರಿನಲ್ಲಿ ಸಭೆ ನಡೆಸಲು ನಿರ್ಧರಿಸಿವೆ. ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ನಡೆಯಲಿರುವ ಸಭೆಯಲ್ಲಿ ಕರ್ನಾಟಕ ಬಂದ್ ದಿನಾಂಕ, ಹೋರಾಟದ ರೂಪುರೇಷೆ ಹಾಗೂ ಮುಂದಿನ…

Read More
error: Content is protected !!