ತಮಿಳುನಾಡಿಗೆ ಕಾವೇರಿ ನೀರು: CWRC ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಸಲು ರಾಜ್ಯ ಸರ್ಕಾರ ನಿರ್ಧಾರ

ಬೆಂಗಳೂರು, ಜು. 29: ರಾಜ್ಯದಲ್ಲಿ ಮುಂಗಾರು ಮಳೆ ತೀವ್ರವಾಗಿ ಕೈಕೊಟ್ಟಿರುವ ಹಿನ್ನೆಲೆ, ಕೆಆರ್‌ಎಸ್‌ ಜಲಾಶಯದಿಂದ ತಮಿಳುನಾಡಿಗೆ ಮುಂದಿನ 15 ದಿನಗಳ ಕಾಲ 3,500 ಕ್ಯೂಸೆಕ್ ನೀರು ಹರಿಸುವಂತೆ ಕಾವೇರಿ ಜಲ ನಿಯಂತ್ರಣ ಸಮಿತಿ (CWRC) ನೀಡಿರುವ ಆದೇಶವನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಲು ರಾಜ್ಯ ಸರ್ಕಾರ ತೀರ್ಮಾನಿಸಿದೆ. ಈ ಕುರಿತು ವಿಧಾನಸೌಧದಲ್ಲಿ ಜಲಸಂಪನ್ಮೂಲ ಸಚಿವ ರಾಮಲಿಂಗಾ ರೆಡ್ಡಿ ನೇತೃತ್ವದಲ್ಲಿ ನಡೆದ ತುರ್ತು ಸಭೆಯಲ್ಲಿ ನೀರಾವರಿ ಇಲಾಖೆ ಹಿರಿಯ ಅಧಿಕಾರಿಗಳು, ಕಾವೇರಿ ಜಲಾನಯನ ಪ್ರದೇಶದ ಅಧಿಕಾರಿಗಳು ಹಾಗೂ ಕಾನೂನು ತಜ್ಞರೊಂದಿಗೆ…

Read More

ರಾಹುಲ್ ಗಾಂಧಿ ವಿರುದ್ಧ ಅವಹೇಳನಕಾರಿ ಹೇಳಿಕೆ: ಯಶ್‌ಪಾಲ್ ಸುವರ್ಣ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲು ಐವನ್ ಡಿ’ಸೋಜಾ ಆಗ್ರಹ

ಮಂಗಳೂರು, ಜು. 29: ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರ ವಿರುದ್ಧ ಉಡುಪಿ ಶಾಸಕ ಯಶ್‌ಪಾಲ್ ಸುವರ್ಣ ನೀಡಿರುವುದಾಗಿ ಆರೋಪಿಸಲಾಗಿರುವ ಅವಹೇಳನಕಾರಿ ಹಾಗೂ ಬೆದರಿಕೆ ಸ್ವರೂಪದ ಹೇಳಿಕೆಯನ್ನು ವಿಧಾನ ಪರಿಷತ್ ಸದಸ್ಯ ಐವನ್ ಡಿ’ಸೋಜಾ ತೀವ್ರವಾಗಿ ಖಂಡಿಸಿದ್ದಾರೆ. ಯಶ್‌ಪಾಲ್ ಸುವರ್ಣ ವಿರುದ್ಧ ತಕ್ಷಣವೇ ಕ್ರಿಮಿನಲ್ ಪ್ರಕರಣ ದಾಖಲಿಸಿ, ಕಾನೂನಿನ ಪ್ರಕಾರ ಕಠಿಣ ಕ್ರಮ ಕೈಗೊಳ್ಳುವಂತೆ ಅವರು ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ. ಈ ಕುರಿತು ಬುಧವಾರ ಪ್ರಕಟಣೆ ನೀಡಿರುವ ಐವನ್ ಡಿ’ಸೋಜಾ, ನೀಟ್ ಪರೀಕ್ಷೆಯಲ್ಲಿನ ಅಕ್ರಮಗಳು…

Read More

ಸಮಗ್ರ ನಾಗರಿಕ ಸೇವೆಗಳು (ಸಿವಿಲ್ ಸರ್ವಿಸಸ್) ಮತ್ತು ಸರ್ಕಾರಿ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿಗಾಗಿ ‘ಮಂಗಳೂರು ಐಎಎಸ್’ ಸಂಸ್ಥೆಯಲ್ಲಿ ಪ್ರವೇಶಾತಿ ಆರಂಭ

ಮಂಗಳೂರು, ಜುಲೈ 24: ಭಾರತೀಯ ಯುವಕರಲ್ಲಿ ಸರ್ಕಾರಿ ಸೇವೆಯು ಅತ್ಯಂತ ಬೇಡಿಕೆಯ ವೃತ್ತಿ ಆಯ್ಕೆಗಳಲ್ಲಿ ಒಂದಾಗಿ ಮುಂದುವರಿಯುತ್ತಿದ್ದು, ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳನ್ನು ವ್ಯಾಪಕ ಶ್ರೇಣಿಯ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧಪಡಿಸಲು ವಿನ್ಯಾಸಗೊಳಿಸಲಾದ ತನ್ನ ಹೊಸ ಬ್ಯಾಚ್‌ಗಳ ತರಬೇತಿ ಕಾರ್ಯಕ್ರಮಗಳಿಗೆ ‘ಮಂಗಳೂರು ಐಎಎಸ್ – ಎ ಸ್ಕೂಲ್ ಫಾರ್ ಸಿವಿಲ್ ಸರ್ವಿಸಸ್’ (Mangalore IAS – A School for Civil Services) ಪ್ರವೇಶಾತಿಯನ್ನು ಪ್ರಕಟಿಸಿದೆ. ಮಂಗಳೂರಿನ ನಂತೂರು ಬಜ್ಜೋಡಿಯ ಪ್ರೇಮ್‌ನಗರದಲ್ಲಿರುವ ಸಂದೇಶ ಪ್ರತಿಷ್ಠಾನದ ಕ್ಯಾಂಪಸ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಈ ಸಂಸ್ಥೆಯು,…

Read More

ಮೂಸ ಹಾಜಿ ಆಳ್ವಾಯಿ ಸ್ಮರಣಾರ್ಥ ಮಣಿಮುಂಡ ಎಜುಕೇಶನಲ್ ಸೊಸೈಟಿಯ ಮೂರನೇ ಟಾಲೆಂಟ್ ಸರ್ಚ್ ಪರೀಕ್ಷೆ ಆಗಸ್ಟ್ 4ರಂದು

ಕುಂಬಳೆ: ಶಿಕ್ಷಣ, ಸಾಮಾಜಿಕ ಹಾಗೂ ಸೇವಾ ಕ್ಷೇತ್ರಗಳಲ್ಲಿ ಗಮನಾರ್ಹ ಕೊಡುಗೆ ನೀಡಿದ ದಿವಂಗತ ಮೂಸ ಹಾಜಿ ಆಳ್ವಾಯಿ ಅವರ ಸ್ಮರಣಾರ್ಥ, ಮಣಿಮುಂಡ ಎಜುಕೇಶನಲ್ ಸೊಸೈಟಿಯ ಆಶ್ರಯದಲ್ಲಿ ಮೂರನೇ ಟಾಲೆಂಟ್ ಸರ್ಚ್ ಪರೀಕ್ಷೆ ಆಗಸ್ಟ್ 4ರಂದು ಮಣಿಮುಂಡ ಶಾಲೆಯಲ್ಲಿ ನಡೆಯಲಿದೆ ಎಂದು ಸಂಘಟಕರು ಕುಂಬಳೆ ಪ್ರೆಸ್ ಫೋರಂನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. 1977ರಿಂದ ಶಿಕ್ಷಣ, ಸಾಮಾಜಿಕ ಹಾಗೂ ಸೇವಾ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಮಣಿಮುಂಡ ಎಜುಕೇಶನಲ್ ಸೊಸೈಟಿ, ಹಿಂದುಳಿದ ವರ್ಗದ ಬಾಲಕಿಯರಿಗೆ ವೃತ್ತಿಪರ ತರಬೇತಿ, ವಿವಿಧ ಸೇವಾ ಚಟುವಟಿಕೆಗಳು ಸೇರಿದಂತೆ…

Read More

ಕುಸಿದು ಬಿದ್ದ ದೇರಂಬಳ ಸೇತುವೆಗೆ ಯಂಗ್ ಡೆಮೋಕ್ರಾಟ್ಸ್ ಜಿಲ್ಲಾ ನಾಯಕರು ಭೇಟಿ

ಕಾಸರಗೋಡು: ಮೀಂಜ ಗ್ರಾಮ ಪಂಚಾಯತು ಮತ್ತು ಮಂಗಲ್ಪಾಡಿ ಗ್ರಾಮ ಪಂಚಾಯತನ್ನು ಸಂಪರ್ಕಿಸುವ ದೇರಂಬಳ ಸೇತುವೆ ಕುಸಿದು ನಾಲ್ಕು ವರ್ಷಗಳಾದರೂ ಅದರ ಮರುನಿರ್ಮಾಣಕ್ಕೆ ಸಂಬಂಧಿಸಿದ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳದಿರುವುದನ್ನು ಖಂಡಿಸಿ ಯಂಗ್ ಡೆಮೋಕ್ರಾಟ್ಸ್ ಕಾಸರಗೋಡು ಜಿಲ್ಲಾ ನಾಯಕರು ಪ್ರತಿಭಟನೆ ವ್ಯಕ್ತಪಡಿಸಿದರು. ಪ್ರಸ್ತುತ ಕುಸಿದಿರುವ ಸೇತುವೆಯ ಮೇಲ್ಭಾಗದಲ್ಲಿ ಕಂಗಿನ ದಿಮ್ಮಿಗಳನ್ನು ಬಳಸಿ ನಿರ್ಮಿಸಿರುವ ತಾತ್ಕಾಲಿಕ ಕಾಲುದಾರಿಯ ಮೂಲಕ ವಿದ್ಯಾರ್ಥಿಗಳು ಸೇರಿದಂತೆ ನೂರಾರು ಜನರು ಪ್ರತಿದಿನ ಜೀವವನ್ನು ಪಣಕ್ಕಿಟ್ಟು ಸಂಚರಿಸುತ್ತಿದ್ದಾರೆ. ಕಳೆದ ದಿವಸವು ಯುವತಿಯೋರ್ವಳು ನದಿಗೆ ಬಿದ್ದ ಸಂದರ್ಭದಲ್ಲಿ ಸಮೀಪದಲ್ಲಿದ್ದ…

Read More

ಆಗಸ್ಟ್ 1ರಂದು ಉಪ್ಪಳದಲ್ಲಿ ಆಳ್ವಾಸ್ ಪ್ರಗತಿ ಉದ್ಯೋಗ ಮೇಳ ಮಾಹಿತಿ ಕಾರ್ಯಾಗಾರ

ಕಾಸರಗೋಡು : ಆಗಸ್ಟ್ ತಿಂಗಳ 7ಮತ್ತು 8 ಶುಕ್ರವಾರ,ಶನಿವಾರ ಗಳoದು ಮೂಡಬಿದಿರೆಯ ಆಳ್ವಾಸ್ ಕಾಲೇಜು ಪರಿಸರದಲ್ಲಿ ನಡೆಯಲಿರುವ ಬ್ರಹತ್ ಉದ್ಯೋಗ ಮೇಳ ವಾದ ಆಳ್ವಾಸ್ ಪ್ರಗತಿ ಕಾರ್ಯಕ್ರಮದಲ್ಲಿ ಭಾಗವಹಿಸಲಿಚ್ಚಿಸುವ ಕಾಸರಗೋಡು ಜಿಲ್ಲೆಯ ಉದ್ಯೋಗಾರ್ಥಿ ಯುವಕ, ಯುವತಿಯರಿಗೆ ತಮ್ಮ ಹೆಸರು ನೋಂದಾಯಿಸುವ ಕುರಿತು ಸೂಕ್ತ ಮಾಹಿತಿಗಳನ್ನು ನೀಡಲಾಗುವುದು ಆಗಸ್ಟು ಒಂದನೇ ತಾರೀಕು ಶನಿವಾರದಂದು ಉಪ್ಪಳ ಶ್ರೀ ರಾಮಕೃಷ್ಣ ವಿದ್ಯಾಲಯದಲ್ಲಿ ಅಪರಾಹ್ನ 3 ಗಂಟೆಯಿಂದ 5 ಗಂಟೆ ತನಕ ಈ ಬಗ್ಗೆ ಒಂದು ಕಾರ್ಯಾಗಾರವನ್ನು ಏರ್ಪಡಿಸಲಾಗಿದೆ. ಕಾರ್ಯಾಗಾರದಲ್ಲಿ ಮೂಡಬಿದಿರೆಯ ಆಳ್ವಾಸ್…

Read More

ವೃಧ್ದೆಯೋರ್ವರ ಕೊಲೆ ಪ್ರಕರಣದಲ್ಲಿ ಆರೋಪಿಗಳಿಗೆ ಜೀವಾವಧಿ ಶಿಕ್ಷೆ ಪ್ರಕಟ

ಬಂಟ್ವಾಳ ಅಮ್ಮುಂಜೆ ನಿವಾಸಿಯಾದ ವೃದ್ದೆ ಬೆನಡಿಕ್ಟ್ ಕಾರ್ಲೋ (73) ಎಂಬವರ ಆರೈಕೆ ನೋಡಿಕೊಳ್ಳುತ್ತಿದ್ದ ಆರೋಪಿತೆ ಬಂಟ್ವಾಳ ಅಮ್ಟಾಡಿ ನಿವಾಸಿ ಕು.ಏಲ್ಮಾ ಪ್ರೆಶ್ಚಿತ್ ಬರೆಟ್ರೋ (23)ಎಂಬಾಕೆಯು, ವೃಧ್ದೆಯ ಬಳಿಯಿದ್ದ ಚಿನ್ನಾಭರಣಗಳನ್ನು ಸುಲಿಗೆ ಮಾಡುವ ಉದ್ದೇಶದಿಂದ, ತನ್ನ ಸ್ನೇಹಿತ ಬಂಟ್ವಾಳ ನರಿಕೊಂಬು ನಿವಾಸಿ ಸತೀಶ ನಾಯಕ್ (28) ಎಂಬಾತನ ಸಹಾಯದಿಂದ ವೃದ್ದೆ ಸೇವಿಸುವ ಆಹಾರದಲ್ಲಿ ವಿಷ ಬೆರೆಸಿ ಕೊಲ್ಲಲು ಯತ್ನಿಸಿ, ಅದರಲ್ಲಿ ಸಫಲರಾಗದಿದ್ದಾಗ ಮತ್ತೋರ್ವ ಆರೋಪಿ ಬಂಟ್ವಾಳ ನರಿಕೊಂಬು ನಿವಾಸಿ ಚರಣ್ ಕುಮಾರ್ (31) ಎಂಬಾತನ ಸಹಾಯದಿಂದ ದಿನಾಂಕ: 25-01-21…

Read More

ಉದ್ಯಾವರ ಮಾಡದಲ್ಲಿ ಜು.30ರಂದು ಉಚಿತ ಫೂಟ್ ಪಲ್ಸ್ ಥೆರಪಿ ಆರೋಗ್ಯ ಮಾಹಿತಿ ಶಿಬಿರ

ಫೂಟ್ ಪಲ್ಸ್ ಥೆರಪಿ ವತಿಯಿಂದ ಆರೋಗ್ಯ ಜಾಗೃತಿ ಮತ್ತು ಥೆರಪಿಯ ಮಹತ್ವದ ಕುರಿತು ಉಚಿತ ಮಾಹಿತಿ ಶಿಬಿರವನ್ನು ಜುಲೈ 30ರಂದು (ಗುರುವಾರ) ಬೆಳಗ್ಗೆ 10 ಗಂಟೆಗೆ ಉದ್ಯಾವರ ಮಾಡದ ತೀಯಾ ಸಮಾಜ ಸಭಾಭವನದಲ್ಲಿ ಆಯೋಜಿಸಲಾಗಿದೆ. ಶಿಬಿರದಲ್ಲಿ ಆರೋಗ್ಯದ ಕುರಿತು ಹಾಗೂ ಫೂಟ್ ಪಲ್ಸ್ ಥೆರಪಿಯ ಉಪಯೋಗ, ಅದರ ಪ್ರಯೋಜನಗಳು ಮತ್ತು ಚಿಕಿತ್ಸಾ ವಿಧಾನದ ಬಗ್ಗೆ ತಜ್ಞರು ಸವಿವರ ಮಾಹಿತಿ ನೀಡಲಿದ್ದಾರೆ. ಈ ಥೆರಪಿಯ ಸದುಪಯೋಗ ಪಡೆದಿರುವವರು ಹಾಗೂ ಆರೋಗ್ಯದ ಬಗ್ಗೆ ಆಸಕ್ತಿ ಹೊಂದಿರುವ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ…

Read More

ಎನ್‌ಎಸ್‌ಎಎಂ ಪಿಯು ಕಾಲೇಜಿನಲ್ಲಿ ಅದ್ಧೂರಿ ಅಲುಮ್ನಿ ಡೇ: ನೂತನ ಪದಾಧಿಕಾರಿಗಳ ಪದಗ್ರಹಣ

ಮಂಗಳೂರು: ನಗರದ ನಂತೂರಿನ ಡಾ. ನಿಟ್ಟೆ ಶಂಕರ ಅಡ್ಯಂತಾಯ ಪದವಿಪೂರ್ವನ ‘ಅಲುಮ್ನಿ ಡೇ’ ಹಾಗೂ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಕಾಲೇಜಿನ ಸಭಾಂಗಣದಲ್ಲಿ ನಡೆಯಿತು. ಅಲುಮ್ನಿ ಡೇ’ ಹಾಗೂ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭಕ್ಕೆ ಕಾಪು ಕ್ಷೇತ್ರದ ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಚಾಲನೆ ನೀಡಿದರು‌.ಬಳಿಕ ಮಾತನಾಡಿದ ಅವರು ಶಿಕ್ಷಣವೇ ಸಮಾಜದ ಬುನಾದಿ, ಮತ್ತು ನಿಟ್ಟೆ ಎಜ್ಯುಕೇಷನ್ ಟ್ರಸ್ಟ್‌ನಂತಹ ಸಂಸ್ಥೆಗಳು ಮಾದರಿ ನಾಯಕರನ್ನು ರೂಪಿಸುತ್ತಲೇ ಬಂದಿವೆ. ಹೊಸ ನಾಯಕತ್ವದ ಜವಾಬ್ದಾರಿ ಸ್ವೀಕರಿಸುತ್ತಿರುವ ವಿದ್ಯಾರ್ಥಿಗಳು ಸವಾಲುಗಳನ್ನು ಧೈರ್ಯದಿಂದ ಎದುರಿಸಿ,…

Read More

“ಉಡುಪಿ ಶಾಸಕ ಯಶ್ಪಾಲ್ ಸುವರ್ಣ ವಿರುದ್ಧ ಕಠಿಣ ಕಾನೂನು ಕ್ರಮ”-ಮಂಜುನಾಥ ಭಂಡಾರಿ

ಮಂಗಳೂರು: ಉಡುಪಿ ಶಾಸಕ ಯಶ್ಪಾಲ್ ಸುವರ್ಣ ಅವರು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರ ವಿರುದ್ಧ ನೀಡಿರುವ ದ್ವೇಷಪೂರಿತ, ಅವಹೇಳನಕಾರಿ ಹಾಗೂ ಪ್ರಚೋದನಕಾರಿ ಹೇಳಿಕೆಗಳನ್ನು ರಾಜ್ಯ ಸರ್ಕಾರ ಅತ್ಯಂತ ಗಂಭೀರವಾಗಿ ಪರಿಗಣಿಸಿದೆ. ಪ್ರಕರಣದ ಎಲ್ಲ ಅಂಶಗಳನ್ನು ಪರಿಶೀಲಿಸಿ ಕಾನೂನಿನ ಅನ್ವಯ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷರು ಹಾಗೂ ವಿಧಾನ ಪರಿಷತ್ ಶಾಸಕರಾದ ಮಂಜುನಾಥ ಭಂಡಾರಿ ತಿಳಿಸಿದ್ದಾರೆ. ಕೇಂದ್ರದ ಬಿಜೆಪಿ ನೇತೃತ್ವದ ಮೋದಿ ಸರ್ಕಾರದ ದುರಾಡಳಿತದಿಂದ ದೇಶಾದ್ಯಂತ ತೀವ್ರ ಆಕ್ರೋಶಕ್ಕೆ…

Read More
error: Content is protected !!