ಕಾಸರಗೋಡು, ತಲಕ್ಕೇರಿ ರೈಲು ನಿಲ್ದಾಣಗಳ ಪಾರ್ಸೆಲ್ ಸೇವೆಗೆ ಜುಲೈ 25ರಿಂದ ತೆರೆ

ಕಾಸರಗೋಡು: ಪರಿಷ್ಕೃತ ರೈಲ್ವೇ ನಿಯಮಾವಳಿಗಳ ಅನ್ವಯ ಕಾಸರಗೋಡು ಹಾಗೂ ತಲಕ್ಕೇರಿ ರೈಲು ನಿಲ್ದಾಣಗಳ ಪಾರ್ಸೆಲ್ ಸೇವೆ ಜುಲೈ 25ರಿಂದ ರದ್ದುಗೊಳ್ಳಲಿದೆ. ಮಂಗಳೂರು-ಶೋರ್ನೂರು ನಡುವಿನ 307 ಕಿ.ಮೀ ದೂರದಲ್ಲಿ ಇನ್ನುಮುಂದೆ ಮಂಗಳೂರು, ಕಣ್ಣೂರು, ಕೋಝಿಕ್ಕೋಡ್, ತಿರೂರ್ ಮತ್ತು ಶೋರ್ನೂರ್ ನಿಲ್ದಾಣಗಳಲ್ಲಿ ಮಾತ್ರ ಈ ಸೌಲಭ್ಯ ಲಭ್ಯವಿರಲಿದೆ. ​ಪಾರ್ಸೆಲ್ ಲೋಡಿಂಗ್ ಹಾಗೂ ಅನ್‌ಲೋಡಿಂಗ್‌ಗೆ ರೈಲುಗಳಿಗೆ ಕನಿಷ್ಠ ಐದು ನಿಮಿಷಗಳ ನಿಲುಗಡೆ ಕಡ್ಡಾಯವಾಗಿದ್ದು, ಹೆಚ್ಚಿನ ನಿಲ್ದಾಣಗಳಲ್ಲಿ ಈ ವ್ಯವಸ್ಥೆಯಿಲ್ಲದಿರುವುದೇ ಸೇವೆ ಸ್ಥಗಿತಗೊಳ್ಳಲು ಮುಖ್ಯ ಕಾರಣವಾಗಿದೆ. ಈ ಹಿಂದೆ ಕಾಞಂಗಾಡು ಮತ್ತು ಪಯ್ಯನ್ನೂರು…

Read More

ನೀಟ್ ಅಕ್ರಮ: ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯ ಪ್ರಧಾನಿ ಭರವಸೆ ಸ್ವಾಗತಾರ್ಹ – ವೇದವ್ಯಾಸ ಕಾಮತ್

ನೀಟ್‌ ಅಕ್ರಮದ ತನಿಖೆಗೆ ಫಾಸ್ಟ್‌ಟ್ರ್ಯಾಕ್‌ ಕೋರ್ಟ್‌ ರಚನೆ ಹಾಗೂ ತಪ್ಪಿತಸ್ಥರಿಗೆ ಅತ್ಯಂತ ಕಠಿಣ ಶಿಕ್ಷೆ ಕೊಡಿಸುವ ಭರವಸೆ ನೀಡಿರುವ ಪ್ರಧಾನಿ ನರೇಂದ್ರ ಮೋದಿಯವರು ಯುವ ಜನತೆಯ ಭವಿಷ್ಯದ ಜೊತೆ ಚೆಲ್ಲಾಟವಾಡುವ ಯಾರನ್ನೂ ಬಿಡುವುದಿಲ್ಲ ಎಂಬ ಸ್ಪಷ್ಟ ಸಂದೇಶವನ್ನು ರವಾನಿಸಿದ್ದಾರೆ ಎಂದು ಶಾಸಕ ವೇದವ್ಯಾಸ ಕಾಮತ್ ರವರು ಹೇಳಿದರು. ನೀಟ್ ಹಗರಣ ಹೊರಬಿದ್ದ ಕೂಡಲೇ ಸಿಬಿಐ ನಿಂದ ತನಿಖೆ ನಡೆಸಿ ತಪ್ಪಿತಸ್ಥರನ್ನು ಪತ್ತೆ ಹಚ್ಚಲಾಗಿದೆ. ಆ ನಂತರ ಪ್ರಧಾನಿಗಳ ಕಚೇರಿಯ ಮೇಲುಸ್ತುವಾರಿಯಲ್ಲೇ ಅತ್ಯಂತ ಕಟ್ಟುನಿಟ್ಟಾಗಿ ಮರು ಪರೀಕ್ಷೆ ನಡೆಸಿ…

Read More

ನೀಟ್ ಪ್ರತಿಭಟನೆಗೆ ಬೆಂಬಲಿಸಿ ಪುತ್ತೂರಿನಲ್ಲಿ ಕಾಂಗ್ರೆಸ್ ಪ್ರತಿಭಟನೆ*

ಪುತ್ತೂರು: ಕೇಂದ್ರದಲ್ಲಿ ನರೇಂದ್ರ ಮೋದಿ ಸರಕಾರ ಅಧಿಕಾರಕ್ಕೆ ಬಂದ ಮೇಲೆ ಸಮಾಜದ ನಾನಾ ವರ್ಗದ ಮೇಲೆ ನಿರಂತರ ದಬ್ಬಾಳಿಕೆ, ದೌರ್ಜನ್ಯ ನಡೆಯುತ್ತಲೇ ಬಂದಿದೆ. ಇದರ ಮುಂದುವರಿದ ಭಾಗವಾಗಿ ಈಗ, ನೀಟ್ ಅಕ್ರಮಗಳನ್ನು ವಿರೋಧಿಸಿ ಶಾಂತಿಯುತ ಪ್ರತಿಭಟನೆ ಮಾಡಿದ ವಿದ್ಯಾರ್ಥಿಗಳ ಮೇಲೆ ಮಾರಣಾಂತಿಕ ದೌರ್ಜನ್ಯ ಎಸಗಲಾಗಿದೆ ಎಂದು ದಕ್ಷಿöಣ ಕನ್ನಡ ಗ್ರಾಮಾಂತರ ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಉಷಾ ಅಂಚನ್ ಹೇಳಿದರು. ನೀಟ್ ಪರೀಕ್ಷೆ ಅಕ್ರಮ ವಿರೋಧಿಸಿ ದಿಲ್ಲಿಯ ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸುತ್ತಿರುವ ವಿದ್ಯಾರ್ಥಿ ಸಮೂಹದ ಮೇಲೆ…

Read More

ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಖಂಡಿಸಿ ಜು.25ರಂದು ಪುತ್ತೂರಿನಲ್ಲಿ ವಿದ್ಯಾರ್ಥಿಗಳ ಶಾಂತಿಯುತ ಜಾಥಾ

ಪುತ್ತೂರು: ನೀಟ್ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿರುವುದನ್ನು ಖಂಡಿಸಿ ವಿದ್ಯಾರ್ಥಿ ಹಿತರಕ್ಷಣಾ ವೇದಿಕೆಯಿಂದ ಜು.25ರಂದು ಬೆಳಿಗ್ಗೆ 11.30ಕ್ಕೆ ಬಸ್ ನಿಲ್ದಾಣದ ಬಳಿಯ ಗಾಂಧೀಕಟ್ಟೆಯಿಂದ ಅಮ‌ರ್ ಜವಾನ್ ಜ್ಯೋತಿ ತನಕ ಶಾಂತಿಯುತ ಜಾಥಾ ನಡೆಯಲಿದೆ ಎಂದು ವಿದ್ಯಾರ್ಥಿ ಹಿತ ರಕ್ಷಣಾ ವೇದಿಕೆ ಸಂಚಾಲಕ ಬಾತೀಷ ಅಳಕೆಮಜಲು ಪತ್ರಿಕಾಗೋಷ್ಠಿಯಲ್ಲಿ ಹೇಳಿದರು. ನೀಟ್ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿರುವುದನ್ನು ಖಂಡಿಸಿ, ದೆಹಲಿಯ ಜಂತರ್ ಮಂತರ್‌ನಲ್ಲಿ ಕಳೆದ 20 ದಿನಗಳಿಂದ ವಿದ್ಯಾರ್ಥಿಗಳು ತಮ್ಮ ಹಕ್ಕಿಗಾಗಿ ಹೋರಾಟ ನಡೆಸುತ್ತಿದ್ದಾರೆ. ಆದರೆ ಈ ತನಕ ಯಾವುದೇ…

Read More

ಬೀದಿ ಬದಿ ಆಹಾರ ಮಳಿಗೆಗಳ ಮೇಲೆ ದಾಳಿ; ಅಜಿನೊಮೊಟೊ ಜಪ್ತಿ, ₹6,000 ದಂಡ

ಮಂಗಳೂರು: ಆಹಾರ ಸುರಕ್ಷತೆ ಮತ್ತು ಸಾರ್ವಜನಿಕ ಆರೋಗ್ಯದ ಹಿತದೃಷ್ಟಿಯಿಂದ ಮಂಗಳೂರು ಮಹಾನಗರ ಪಾಲಿಕೆ (ಎಂಸಿಸಿ) ಆರೋಗ್ಯ ಅಧಿಕಾರಿಗಳು ಬಿಜೈ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ಹಾಗೂ ಸ್ಟೇಟ್ ಬ್ಯಾಂಕ್ ಪ್ರದೇಶದ ಬೀದಿ ಬದಿ ಆಹಾರ ಮಳಿಗೆಗಳ ಮೇಲೆ ತಪಾಸಣೆ ನಡೆಸಿ, ಆರೋಗ್ಯಕ್ಕೆ ಹಾನಿಕರವೆಂದು ಪರಿಗಣಿಸಲಾದ ಅಜಿನೊಮೊಟೊ ವಶಪಡಿಸಿಕೊಂಡಿದ್ದಾರೆ. ತಪಾಸಣೆ ವೇಳೆ ಕೆಲವು ಮಳಿಗೆಗಳಲ್ಲಿ ನಿಯಮಬಾಹಿರವಾಗಿ ಅಜಿನೊಮೊಟೊ ಬಳಕೆ ಪತ್ತೆಯಾಗಿದ್ದು, ಅದನ್ನು ಜಪ್ತಿ ಮಾಡಲಾಗಿದೆ. ಅಲ್ಲದೆ ಸ್ಟೇಟ್ ಬ್ಯಾಂಕ್ ಪ್ರದೇಶದಲ್ಲಿ ನಿಷೇಧಿತ ಕೃತಕ ಬಣ್ಣ ಬಳಸುತ್ತಿದ್ದ ಮೂರು ಆಹಾರ ಮಳಿಗೆಗಳಿಗೆ…

Read More

ಬೇಡಡ್ಕದಲ್ಲಿ ಹೆಚ್ಚುತ್ತಿರುವ ಆತ್ಮಹತ್ಯೆ ಯತ್ನಗಳು; ಸಂಕಷ್ಟದಲ್ಲಿರುವವರಿಗೆ ಪೊಲೀಸರ ಮನವಿ

ಕಾಸರಗೋಡು : ಬೇಡಡ್ಕ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಆತ್ಮಹತ್ಯೆ ಪ್ರಕರಣಗಳು ಮತ್ತು ಯತ್ನಗಳು ಆತಂಕಕಾರಿ ರೀತಿಯಲ್ಲಿ ಹೆಚ್ಚುತ್ತಿವೆ.ಉನ್ನತಿಯಲ್ಲಿ ವಾಸವಿದ್ದ 16 ವರ್ಷದ ಬಾಲಕನೊಬ್ಬ ಇಲಿ ವಿಷ ಸೇವಿಸಿದ್ದು, ಗಂಭೀರ ಸ್ಥಿತಿಯಲ್ಲಿ ಪರಿಯಾರಂ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದೆ. ಮೊದಲು ಬೇಡಡ್ಕ ತಾಲೂಕು ಆಸ್ಪತ್ರೆಯಲ್ಲಿ ಪರೀಕ್ಷಿಸಿ, ನಂತರ ಹೆಚ್ಚಿನ ಚಿಕಿತ್ಸೆಗೆ ರವಾನಿಸಲಾಗಿದೆ.ಇತ್ತೀಚೆಗೆ ತೋರೋತ್ ನಿವಾಸಿ ಟಿ. ಅನಶ್ವರ (19) ಎಂಬ ಪ್ಲಸ್ ಟು ಮುಗಿಸಿದ್ದ ಯುವತಿ ಇಲಿ ವಿಷ ಸೇವಿಸಿ ಜೀವ ಕಳೆದುಕೊಂಡಿದ್ದಳು. ಇದರ ಬೆನ್ನಲ್ಲೇ, ಅದೇ ಪ್ರದೇಶದ…

Read More

ಕಾಸರಗೋಡು: ಬೇಳ ಗ್ರಾಮ ಕಚೇರಿಯಿಂದ ಕಳುವಾಗಿದ್ದ ಮೂರು ಲ್ಯಾಪ್‌ಟಾಪ್‌ಗಳು ಪೊದೆಗಳಲ್ಲಿ ಪತ್ತೆ; ಆರೋಪಿಗಳಿಗಾಗಿ ಪೊಲೀಸರ ತೀವ್ರ ಶೋಧ

ಕಾಸರಗೋಡು : ​ಬದಿಯಡ್ಕದ ನೀರ್ಚಾಲಿನಲ್ಲಿರುವ ಬೇಳ ಗ್ರಾಮ ಕಚೇರಿಯಿಂದ ಕಳವು ಮಾಡಲಾಗಿದ್ದ ಮೂರು ಲ್ಯಾಪ್‌ಟಾಪ್‌ಗಳು ಕಚೇರಿಯ ಸಮೀಪದ ಪೊದೆಗಳಲ್ಲಿ ಅನಾಥವಾಗಿ ಪತ್ತೆಯಾಗಿವೆ. ಕಳೆದ ಸೋಮವಾರ ರಾತ್ರಿ ಕಚೇರಿಯ ಬಾಗಿಲು ಮುರಿದು ಒಳನುಗ್ಗಿದ್ದ ದುಷ್ಕರ್ಮಿಗಳು ಲ್ಯಾಪ್‌ಟಾಪ್‌ಗಳನ್ನು ದೋಚಿದ್ದರು.ಮಂಗಳವಾರ ಬೆಳಿಗ್ಗೆ ಸಿಬ್ಬಂದಿ ಕಚೇರಿಗೆ ಬಂದಾಗ ಕೃತ್ಯ ಬೆಳಕಿಗೆ ಬಂದಿದ್ದು, ಗ್ರಾಮ ಅಧಿಕಾರಿ ಶಶಿಕುಮಾರ್ ನೀಡಿದ ದೂರಿನ ಮೇರೆಗೆ ಬದಿಯಡ್ಕ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಬಳಿಕ ನಡೆಸಿದ ತೀವ್ರ ಶೋಧನೆಯಲ್ಲಿ ಕಳುವಾದ ಲ್ಯಾಪ್‌ಟಾಪ್‌ಗಳು ಸಮೀಪದ ಪೊದೆಗಳ ನಡುವೆ…

Read More

ಪಿ.ಎ. ಪ್ರಥಮ ದರ್ಜೆ ಕಾಲೇಜಿನಲ್ಲಿ ಓರಿಯಂಟೇಶನ್ ಕಾರ್ಯಕ್ರಮ

ಮಂಗಳೂರು: ಕೋಣಾಜೆಯ ಪಿ.ಎ. ಪ್ರಥಮ ದರ್ಜೆ ಕಾಲೇಜಿನ ವತಿಯಿಂದ ಪ್ರಥಮ ವರ್ಷದ ಪದವಿ ವಿದ್ಯಾರ್ಥಿಗಳಿಗಾಗಿ ಓರಿಯೆಂಟೇಶನ್ ಕಾರ್ಯಕ್ರಮ ಪೇಸ್ ನಾಲೆಡ್ಜ್ ಸಿಟಿಯ ಆಡಿಟೋರಿಯಂನಲ್ಲಿ ಬುಧವಾರ ನಡೆಯಿತು‌‌. ಪಿ.ಎ. ಇಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲರಾದ ಡಾ. ರಮೀಝ್ ಎಂ.ಕೆ. ಮುಖ್ಯ ಅತಿಥಿಯಾಗಿ ಭಾಗವಹಿಸಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು. ಕಾಲೇಜು ಜೀವನದಲ್ಲಿ ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳುವಂತೆ ಹಾಗೂ ಉತ್ತಮ ವ್ಯಕ್ತಿತ್ವವನ್ನು ಬೆಳೆಸಿಕೊಳ್ಳುವಂತೆ ಕರೆ ನೀಡಿದರು. ಪಿ.ಎ. ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಡಾ. ಸರ್ಫ್ರಾಝ್ ಜೆ. ಹಾಸಿಂ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಅಂತರರಾಷ್ಟ್ರೀಯ…

Read More

ಲಾರಿ ಹರಿದು ಚಿಕಿತ್ಸೆಯಲ್ಲಿದ್ದ ಎರಡು ವರ್ಷದ ಮಗು ಸಾವು

ಕಾಸರಗೋಡು : ​ಪಯ್ಯನ್ನೂರಿನ ವಿಲಾತರ ಚುಮುಡುತಾಂಗಿ -ಕೆ.ಎಸ್.ಡಿ.ಪಿ ರಸ್ತೆಯಲ್ಲಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದ ಎರಡು ವರ್ಷದ ಮಗು ಐಸಾಂ ಸಾವನ್ನಪ್ಪಿದೆ. ​ಕಳೆದ ದಿನ ತಾಯಿಯೊಂದಿಗೆ ರಸ್ತೆ ದಾಟುತ್ತಿದ್ದಾಗ ನಿಯಂತ್ರಣ ತಪ್ಪಿದ ಲಾರಿ ಇವರಿಗೆ ಡಿಕ್ಕಿ ಹೊಡೆದಿತ್ತು. ಪರಿಣಾಮ ತಾಯಿ ಹಾಗೂ ಮಗುವಿಗೆ ಗಂಭೀರ ಗಾಯಗಳಾಗಿದ್ದವು. ಕೂಡಲೇ ಇವರನ್ನು ಪರಿಯಾರಂ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದ್ದು, ನಂತರ ಹೆಚ್ಚಿನ ಚಿಕಿತ್ಸೆಗಾಗಿ ಕಣ್ಣೂರಿನ ಖಾಸಗಿ ಆಸ್ಪತ್ರೆಗೆ ಸಾಗಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಮಗು…

Read More

ಬರಿಮಾರು ಶಾಲಾ ಬಸ್ ದುರಂತದಲ್ಲಿ ಮೃತಪಟ್ಟ ಬಾಲಕಿಯ ಮನೆಗೆ ಭೇಟಿ ನೀಡಿದ ಮಾಜಿ ಸಚಿವ ಬಿ. ರಮಾನಾಥ ರೈ

ಪೆರ್ನೆ, ಜುಲೈ 24: ಬಂಟ್ವಾಳ ತಾಲೂಕಿನ ಬರಿಮಾರು ಸಮೀಪದ ಕಲೆಟ್ಟಿ ಪ್ರದೇಶದಲ್ಲಿ ಖಾಸಗಿ ಶಾಲಾ ಬಸ್ ಮೇಲೆ ಮರ ಬಿದ್ದು ಸಂಭವಿಸಿದ ದುರಂತದಲ್ಲಿ ಮೃತಪಟ್ಟ ಬಾಲಕಿಯ ಪೆರ್ನೆ ನೆಕ್ಕರೆ ಅಮೈ ನಿವಾಸಕ್ಕೆ ಮಾಜಿ ಸಚಿವರಾದ ಬಿ. ರಮಾನಾಥ ರೈ ಅವರು ಭೇಟಿ ನೀಡಿ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದರು. ದುರಂತದಲ್ಲಿ ಅಮೂಲ್ಯ ಜೀವ ಕಳೆದುಕೊಂಡ ಬಾಲಕಿಯ ನಿಧನಕ್ಕೆ ತೀವ್ರ ಸಂತಾಪ ವ್ಯಕ್ತಪಡಿಸಿದ ಅವರು, ಮೃತಳ ತಾಯಿ-ತಂದೆ ಹಾಗೂ ಕುಟುಂಬ ಸದಸ್ಯರನ್ನು ಭೇಟಿ ಮಾಡಿ ದುಃಖದಲ್ಲಿ ಭಾಗಿಯಾದರು. ಈ…

Read More
error: Content is protected !!