ಉಡುಪಿ: ರಿಕ್ಷಾ ಚಾಲಕ ನೇಣು ಬಿಗಿದು ಆತ್ಮಹತ್ಯೆ

ಉಡುಪಿ: ಆದಿ ಉಡುಪಿಯ ಮಧ್ವನಗರದಲ್ಲಿ ರಿಕ್ಷಾ ಚಾಲಕರೊಬ್ಬರು ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.ಮೃತರನ್ನು ಆದಿಉಡುಪಿ ರಿಕ್ಷಾ ನಿಲ್ದಾಣದ ಸದಸ್ಯ ಸುರೇಂದ್ರ ಮಧ್ವನಗರ (42) ಎಂದು ಗುರುತಿಸಲಾಗಿದೆ. ಸರಳ ಸ್ವಭಾವದವರಾಗಿದ್ದ ಸುರೇಂದ್ರ ಅವರು ಸುಮಾರು ಒಂದು ವಾರದ ಹಿಂದಷ್ಟೇ ಹೊಸ ರಿಕ್ಷಾವನ್ನು ಖರೀದಿಸಿದ್ದರು. ಬುಧವಾರ ತಡರಾತ್ರಿ ಕುಟುಂಬದವರು ಮಲಗಿದ್ದ ವೇಳೆ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಘಟನಾ ಸ್ಥಳಕ್ಕೆ ಮಲ್ಪೆ ಪೊಲೀಸ್ ಠಾಣೆಯ ಅಧಿಕಾರಿಗಳು…

Read More

ರಾಮಮಂದಿರ ಕಾಣಿಕೆ ದುರ್ಬಳಕೆ ಆರೋಪ: ನೈತಿಕ ಹೊಣೆ ಪ್ರಧಾನಿ ಹೊರಬೇಕು – ಮಂಜುನಾಥ್ ಭಂಡಾರಿ

ಉಡುಪಿ: ರಾಮನ ಹೆಸರಿನಲ್ಲಿ ಅಧಿಕಾರಕ್ಕೆ ಬಂದವರೇ ಇಂದು ಭಕ್ತರು ಸಮರ್ಪಿಸಿದ ಕಾಣಿಕೆಗಳ ಹುಂಡಿಗೆ ಕೈ ಹಾಕಿದ್ದಾರೆ. ಇದರ ನೈತಿಕ ಹೊಣೆಯನ್ನು ಪ್ರಧಾನಿ ನರೇಂದ್ರ ಮೋದಿ ಹೊರಬೇಕು ಎಂದು ವಿಧಾನ ಪರಿಷತ್ ಸದಸ್ಯ ಮಂಜುನಾಥ್ ಭಂಡಾರಿ ಆಗ್ರಹಿಸಿದರು. ನಗರದ ಬ್ರಹ್ಮಗಿರಿಯ ಕಾಂಗ್ರೆಸ್ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಅಯೋಧ್ಯೆಯ ಶ್ರೀರಾಮ ಮಂದಿರದಂತಹ ಧಾರ್ಮಿಕ ವಿಚಾರವನ್ನು ರಾಜಕೀಯ ಅಸ್ತ್ರವನ್ನಾಗಿ ಬಳಸಿಕೊಂಡು ದೇಶದ ರಾಜಕೀಯ ಚಿತ್ರಣವನ್ನು ಬದಲಾಯಿಸಿತು. ಸ್ವತಃ ಪ್ರಧಾನಿ ನರೇಂದ್ರ ಮೋದಿ ಅವರೇ ರಾಮಮಂದಿರದ ಪ್ರತಿಷ್ಠಾಪನಾ ಪೂಜೆಯನ್ನು…

Read More

ಕಾರ್ಗಿಲ್ ವಿಜಯ ದಿವಸ: ಜು.26ರಂದು ಮಂಗಳೂರಿನಲ್ಲಿ T-55 ಯುದ್ಧ ಟ್ಯಾಂಕ್ ಅನಾವರಣ …!

ಮಂಗಳೂರು:ಕಾರ್ಗಿಲ್ ವಿಜಯ ದಿವಸದ ಅಂಗವಾಗಿ ಜುಲೈ 26ರಂದು ನಗರದ ಕದ್ರಿ ಹಿಲ್ಸ್‌ನಲ್ಲಿರುವ ಯುದ್ಧ ಸ್ಮಾರಕದಲ್ಲಿ 1971ರ ಭಾರತ–ಪಾಕಿಸ್ತಾನ ಯುದ್ಧದಲ್ಲಿ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿದ್ದ T-55 ಬ್ಯಾಟಲ್ ಟ್ಯಾಂಕ್‌ನ ಅನಾವರಣ ಹಾಗೂ ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ಯೋಧರಿಗೆ ಪುಷ್ಪನಮನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಮಾಜಿ ಸೈನಿಕರ ಸಂಘದ ಅಧ್ಯಕ್ಷ, ಭಾರತೀಯ ವಾಯುಪಡೆಯ ನಿವೃತ್ತ ಅಧಿಕಾರಿ (ಐಎಎಫ್) ವೆಟರನ್ ಶ್ರೀಕಾಂತ್ ಶೆಟ್ಟಿ ತಿಳಿಸಿದ್ದಾರೆ. ನಗರದ ಪತ್ರಿಕಾಭವನದಲ್ಲಿ ಗುರುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು,…

Read More

ಮಾನವ ಹಕ್ಕುಗಳ ಹೋರಾಟಗಾರ್ತಿ, ಸಮಾಜ ಸೇವಕಿ, ಶಿಕ್ಷಣ ತಜ್ಞೆ ಡಾ. ವನಿತಾ ತೋರ್ವಿ, ವಿಜಯಪುರ ರೀಗೆ ಕನ್ನಡ ಭವನದ “ನಾಡೋಜ ಡಾ. ಕಯ್ಯಾರ ಸದ್ಭಾವನಾ ರಾಷ್ಟ್ರೀಯ ಪ್ರಶಸ್ತಿ “2026.

ಮಾನವ ಹಕ್ಕುಗಳ ಹೋರಾಟಗಾರ್ತಿ, ಸಮಾಜ ಸೇವಕಿ, ಶಿಕ್ಷಣ ತಜ್ಞೆ ಡಾ. ವನಿತಾ ತೋರ್ವಿ, ವಿಜಯಪುರ ರೀಗೆ ಕನ್ನಡ ಭವನದ “ನಾಡೋಜ ಡಾ. ಕಯ್ಯಾರ ಸದ್ಭಾವನಾ ರಾಷ್ಟ್ರೀಯ ಪ್ರಶಸ್ತಿ “2026. ಜುಲೈ 26ರ ಕನ್ನಡ ಭವನದ “ರಜತ ಸಂಭ್ರಮ ಸಮಾರೋಪ ಕಾರ್ಯಕ್ರಮ ಪ್ರಯುಕ್ತ ನಡೆಯಲಿರುವ “ಕರ್ನಾಟಕ ಗಡಿನಾಡು ಕನ್ನಡ ಸಮ್ಮೇಳನ ದಲ್ಲಿ ಈ ಮೇಲಿನ ಪ್ರಶಸ್ತಿ ನೀಡಲಿದ್ದೆವೆಂದು ಸಮ್ಮೇಳನ ಸಮಿತಿ ಅಧ್ಯಕ್ಷರಾದ ಡಾ. ಕೆ. ಏನ್ ವೆಂಕಟ್ರಮಣ ಹೊಳ್ಳ ಹಾಗೂ ಕನ್ನಡ ಭವನ ಸ್ಥಾಪಕ ಅಧ್ಯಕ್ಷರಾದ ಡಾ. ಕೆ…

Read More

ಮಂಜೇಶ್ವರ: ರೈತ ವಿರೋಧಿ ನೀತಿ ಖಂಡಿಸಿ ರೈತ ಸಂಘದಿಂದ ಪ್ರತಿಭಟನಾ ಮೆರವಣಿಗೆ

ಮಂಜೇಶ್ವರ, ಜು.23: ಕೇಂದ್ರ ಸರ್ಕಾರದ ರೈತ ವಿರೋಧಿ ನೀತಿಗಳು, ರಸಗೊಬ್ಬರದ ಬೆಲೆ ಏರಿಕೆ ಹಾಗೂ ಅಮೆರಿಕದೊಂದಿಗೆ ಮಾಡಿಕೊಂಡಿರುವ ಜನವಿರೋಧಿ ಒಪ್ಪಂದವನ್ನು ಖಂಡಿಸಿ ರೈತ ಸಂಘದ ಮಂಜೇಶ್ವರ ಏರಿಯಾ ಸಮಿತಿಯ ನೇತೃತ್ವದಲ್ಲಿ ಮೀಯಪದವಿನಲ್ಲಿ ಪ್ರತಿಭಟನಾ ಮೆರವಣಿಗೆ ನಡೆಯಿತು. ಪ್ರತಿಭಟನೆಯನ್ನು ರಾಜ್ಯ ಸಮಿತಿ ಸದಸ್ಯ ಕೆ.ಆರ್. ಜಯಾನಂದ ಉದ್ಘಾಟಿಸಿ ಮಾತನಾಡಿದರು. ಕೇಂದ್ರ ಸರ್ಕಾರದ ಕೃಷಿ ಹಾಗೂ ರೈತ ವಿರೋಧಿ ನೀತಿಗಳಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದು, ರಸಗೊಬ್ಬರಗಳ ಬೆಲೆ ಏರಿಕೆಯಿಂದ ಕೃಷಿ ವೆಚ್ಚ ಮತ್ತಷ್ಟು ಹೆಚ್ಚಾಗಿದೆ ಎಂದು ಅವರು ಆರೋಪಿಸಿದರು. ಅಮೆರಿಕದೊಂದಿಗೆ…

Read More

ಭಾರತೀಯ ಮಜ್ದೂರ್ ಸಂಘದ 72ನೇ ಸ್ಥಾಪನಾ ದಿನ: ಚೌಕಿ ಜಂಕ್ಷನ್‌ನಲ್ಲಿ ಧ್ವಜಾರೋಹಣ

ಭಾರತೀಯ ಮಜ್ದೂರ್ ಸಂಘದ(BMS) 72 ನೇ ವರ್ಷದ ಸ್ಥಾಪನಾ ದಿನದ ಅಂಗವಾಗಿ ಚೌಕಿ ಜಂಕ್ಷನಿನಲ್ಲಿ BMS ಚೌಕಿ ಯೂನಿಟ್ ಅಧ್ಯಕ್ಷ ಶ್ರೀ ದಯಾನಂದ ಚೌಕಿ ಕಡಪ್ಪರ ಧ್ವಜಾರೋಹಣಗೈದರು. BMS Chowki Unit ಪ್ರಧಾನ ಕಾರ್ಯದರ್ಶಿ ಶ್ರೀ ರಂಜಿತ್ ರಾಮ್ ನಗರ ಬೆದ್ರಡ್ಕ ಪ್ರಾಸ್ತಾವಿಕ ಭಾಷಣ ಮಾಡಿದರು. ಚೌಕಿ ಕೋ-ಓಪರೇಟಿವ್ ಬ್ಯಾಂಕ್ ಮೇನೇಜರ್ ಶ್ರೀ ದೀಪಕ್ ಕೂಡ್ಲು ಹಾಗೂ ಸರ್ವಸದಸ್ಯರು ಉಪಸ್ಥಿತರಿದ್ದರು. ಇದೇ ಸಮಯದಲ್ಲಿ BMS ಜಿಲ್ಲಾ ಸಮಿತಿ ಉಪಾಧ್ಯಕ, BMS ಮೊಗ್ರಾಲ್ ಪುತ್ತೂರು ಪಂಚಾಯತ್ ಘಟಕದ ಅಧ್ಯಕ್ಷ,…

Read More

ಬಿಸಿರೋಡು ಎನ್.ಜಿ. ಸರ್ಕಲ್ ಹೊಂಡಗಳಿಗೆ ತಾತ್ಕಾಲಿಕ ಮುಕ್ತಿ; ಶಾಶ್ವತ ಪರಿಹಾರಕ್ಕೆ ಸಾರ್ವಜನಿಕರ ಆಗ್ರಹ

ಬಂಟ್ವಾಳ: ಬಿಸಿರೋಡಿನ ಅತ್ಯಂತ ವಾಹನ ದಟ್ಟಣೆ ಇರುವ ಎನ್.ಜಿ. ಸರ್ಕಲ್ ಬಳಿ ಉಂಟಾಗಿದ್ದ ಹೊಂಡ-ಗುಂಡಿಗಳಿಂದ ಕಳೆದ ಹಲವು ದಿನಗಳಿಂದ ವಾಹನ ಸವಾರರು ಹಾಗೂ ಸಾರ್ವಜನಿಕರು ತೀವ್ರ ಸಂಕಷ್ಟ ಅನುಭವಿಸುತ್ತಿದ್ದರು. ಬೆಳಿಗ್ಗೆ ಕಚೇರಿ ಹಾಗೂ ಶಾಲಾ-ಕಾಲೇಜುಗಳ ಸಮಯದಲ್ಲಿ, ಸಂಜೆ ಕೆಲಸ ಮುಗಿಸಿ ಮನೆಗೆ ಮರಳುವ ವೇಳೆ ಇಲ್ಲಿ ವಾಹನಗಳ ಸಾಲು ಸಾಲಾಗಿ ನಿಂತು ಸಂಚಾರ ಸಂಪೂರ್ಣ ಅಸ್ತವ್ಯಸ್ತವಾಗುತ್ತಿತ್ತು. ಕೆಲವೊಮ್ಮೆ ನೂರಾರು ಮೀಟರ್‌ಗಳಷ್ಟು ವಾಹನಗಳು ಸಾಲುಗಟ್ಟಿ ನಿಲ್ಲುವ ಪರಿಸ್ಥಿತಿ ನಿರ್ಮಾಣವಾಗುತ್ತಿತ್ತು. ರಾಷ್ಟ್ರೀಯ ಚತುಷ್ಪಥ ರಸ್ತೆ ಕಾಮಗಾರಿ ಸಂದರ್ಭದಲ್ಲಿ ಕಾಂಕ್ರೀಟ್ ಹಾಕುವ…

Read More

ಬಂಟ್ವಾಳದಲ್ಲಿ ಪತ್ರಿಕಾ ದಿನಾಚರಣೆ: ಪ್ರಶಸ್ತಿ ಪುರಸ್ಕೃತ ಪತ್ರಕರ್ತರಿಗೆ ಸನ್ಮಾನ, ಗುರುತುಚೀಟಿ ವಿತರಣೆ

ಬಂಟ್ವಾಳ: ಬಂಟ್ವಾಳ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಪತ್ರಿಕಾ ದಿನಾಚರಣೆ ಕಾರ್ಯಕ್ರಮವು ಬುಧವಾರ ಬಿ.ಸಿ.ರೋಡಿನ ಬಂಟ್ವಾಳ ಪ್ರೆಸ್ ಕ್ಲಬ್‌ನಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಪ್ರಶಸ್ತಿ ಪುರಸ್ಕೃತ ಪತ್ರಕರ್ತರನ್ನು ಸನ್ಮಾನಿಸಿ, ಸಂಘದ ಸದಸ್ಯರಿಗೆ ಗುರುತುಚೀಟಿಗಳನ್ನು ವಿತರಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಪ್ರಶಾಂತ್ ಪುಂಜಾಲಕಟ್ಟೆ ವಹಿಸಿದ್ದರು. ಮುಖ್ಯ ಅತಿಥಿಯಾಗಿ ಭಾಗವಹಿಸಿದ ಬಂಟ್ವಾಳ ನಗರ ಪೊಲೀಸ್ ಠಾಣೆಯ ನಿರೀಕ್ಷಕ ಅನಂತಪದ್ಮನಾಭ ಮಾತನಾಡಿ, ಪತ್ರಕರ್ತರ ವರದಿಗಳು ಸಮಾಜಕ್ಕೆ ಮಾಹಿತಿ ನೀಡುವುದಷ್ಟೇ ಅಲ್ಲದೆ, ಜಾಗೃತಿ ಮೂಡಿಸಿ ಸಮಾಜದ…

Read More

ಅಡುಗೆ ಎಣ್ಣೆ ದರ ದಿಢೀರ್ ಏರಿಕೆ; ಗೃಹಿಣಿಯರ ಬಜೆಟ್‌ಗೆ ಭಾರೀ ಹೊಡೆತ

ಬೆಂಗಳೂರು, ಜು.23: ಈಗಾಗಲೇ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ತತ್ತರಿಸಿರುವ ಸಾಮಾನ್ಯ ಜನತೆಗೆ ಅಡುಗೆ ಎಣ್ಣೆ ದರ ಏರಿಕೆ ಮತ್ತೊಂದು ದೊಡ್ಡ ಹೊಡೆತ ನೀಡಿದೆ. ದೈನಂದಿನ ಬಳಕೆಯ ಪ್ರಮುಖ ಅಡುಗೆ ಎಣ್ಣೆಗಳಾದ ಸೂರ್ಯಕಾಂತಿ, ಪಾಮ್ ಆಯಿಲ್ ಹಾಗೂ ಸೋಯಾಬೀನ್ ಎಣ್ಣೆಗಳ ಬೆಲೆಯಲ್ಲಿ ದಿಢೀರ್ ಏರಿಕೆಯಾಗಿದ್ದು, ಗೃಹಿಣಿಯರ ಮಾಸಿಕ ಬಜೆಟ್ ಮೇಲೆ ಹೆಚ್ಚುವರಿ ಹೊರೆ ಬಿದ್ದಿದೆ. ಕೇಂದ್ರ ಸರ್ಕಾರವು ಕಚ್ಚಾ ಹಾಗೂ ಸಂಸ್ಕರಿಸಿದ ಅಡುಗೆ ಎಣ್ಣೆಗಳ ಮೇಲಿನ ಆಮದು ಸುಂಕವನ್ನು ಹೆಚ್ಚಿಸಿರುವುದು ದೇಶೀಯ ಮಾರುಕಟ್ಟೆಯಲ್ಲಿ ಬೆಲೆ ಏರಿಕೆಗೆ ಪ್ರಮುಖ…

Read More

ಆ. 7,8ರಂದು 16ನೇ ಆವೃತ್ತಿಯ ಉಚಿತ ಬೃಹತ್ ಉದ್ಯೋಗ ಮೇಳ ‘ಆಳ್ವಾಸ್ ಪ್ರಗತಿ–2026’

ಉಡುಪಿ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವತಿಯಿಂದ ಆಯೋಜಿಸಲಾಗುತ್ತಿರುವ 16ನೇ ಆವೃತ್ತಿಯ ಉಚಿತ ಬೃಹತ್ ಉದ್ಯೋಗ ಮೇಳ ‘ಆಳ್ವಾಸ್ ಪ್ರಗತಿ–2026’ ಆಗಸ್ಟ್‌ 7 ಮತ್ತು 8ರಂದು ಮೂಡುಬಿದಿರೆಯ ಆಳ್ವಾಸ್ ವಿದ್ಯಾಗಿರಿ ಕ್ಯಾಂಪಸ್‌ನಲ್ಲಿ ನಡೆಯಲಿದೆ ಎಂದು ಆಳ್ವಾಸ್ ಕಾಲೇಜಿನ ಪ್ರಾಂಶುಪಾಲ ಡಾ. ಕುರಿಯನ್ ತಿಳಿಸಿದರು. ಉಡುಪಿಯಲ್ಲಿ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಬಾರಿ ಈಗಾಗಲೇ 276 ಕಂಪನಿಗಳು ನೋಂದಾಯಿಸಿಕೊಂಡಿದ್ದು, 350ಕ್ಕೂ ಹೆಚ್ಚು ಸಂಸ್ಥೆಗಳು ಭಾಗವಹಿಸುವ ನಿರೀಕ್ಷೆಯಿದೆ. 15,860ಕ್ಕೂ ಅಧಿಕ ಉದ್ಯೋಗಾವಕಾಶಗಳು ಲಭ್ಯವಿದ್ದು, ಐಟಿ, ಐಟಿಇಎಸ್, ಉತ್ಪಾದನೆ, ಬ್ಯಾಂಕಿಂಗ್,…

Read More
error: Content is protected !!