ಉಪ್ಪಳದ ಸೋಂಕಾಲ್ ನಿವಾಸಿ ಅಲ್ತಾಫ್ ಕೊಲೆ ಪ್ರಕರಣ:6 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಬಂಧನ

ಮಂಜೇಶ್ವರ : ಉಪ್ಪಳದ ಸೋಂಕಾಲ್ ನಿವಾಸಿ ಅಲ್ತಾಫ್ ಕೊಲೆ ಪ್ರಕರಣದಲ್ಲಿ ಕಳೆದ 6 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಮಂಗಲ್ಪಾಡಿಯ ಅಬ್ದುಲ್ ರುಮೀದ್ (29) ಎಂಬಾತನನ್ನು ಕುಂಬಳೆ ಪೊಲೀಸರು ಬಂಧಿಸಿದ್ದಾರೆ.ಗಲ್ಫ್‌ನಿಂದ ಕಣ್ಣೂರು ವಿಮಾನ ನಿಲ್ದಾಣಕ್ಕೆ ಬಂದಿಳಿದಾಗ ಅಧಿಕಾರಿಗಳು ತಡೆದು ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ಆತನನ್ನು ವಶಕ್ಕೆ ಪಡೆದು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ​2019 ಜೂನ್ 23ರಂದು ಅಲ್ತಾಫ್‌ರನ್ನು ಮನೆಯಿಂದ ಅಪಹರಿಸಿ ಹಲ್ಲೆ ನಡೆಸಿ ಕೈಯ ನರ ಕತ್ತರಿಸಿ ಮಂಗಳೂರು ಆಸ್ಪತ್ರೆ ವರಾಂಡದಲ್ಲಿ ಬಿಡಲಾಗಿತ್ತು.ಚಿಕಿತ್ಸೆ ಫಲಕಾರಿಯಾಗದೆ ಜೂನ್ 25ರಂದು ಅವರು ಸಾವನ್ನಪ್ಪಿದ್ದರು….

Read More

ಯುವ ಕಾಂಗ್ರೆಸ್ ನ ಜಿಲ್ಲಾ ಕಾರ್ಯದರ್ಶಿಯಾಗಿ ಆಯಿಷಾ.ಪಿ ನೇಮಕ

ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ಸಮಿತಿಯ ಸಂಘಟನೆಯನ್ನು ಬಲಗೊಳಿಸುವ ಹಿನ್ನಲೆಯಲ್ಲಿ ಹಾಗೂ ಸಂಘಟನೆಯನ್ನು ರಾಜ್ಯಾದ್ಯಂತ ಸಕ್ರಿಯಗೊಳಿಸಲು ಅಖಿಲ ಭಾರತ ಯುವ ಕಾಂಗ್ರೆಸ್ ಅಧ್ಯಕ್ಷರಾದ ಉದಯ್ ಭಾನು ಚಿಬ್ ಇವರ ನಿರ್ದೇಶನದ ಮೇರೆಗೆ ಹಾಗೂ ಅಖಿಲ ಭಾರತ ಯುವ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿ ಮತ್ತು ಕರ್ನಾಟಕ ಉಸ್ತುವಾರಿಗಳಾದ ನಿಗಮ್ ಭಂಡಾರಿ ಇವರ ಅನುಮೋದನೆಯೊಂದಿಗೆ ಆಯಿಷಾ.ಪಿ, ಇವರನ್ನು ದಕ್ಷಿಣ-ಕನ್ನಡ ಜಿಲ್ಲಾ ಯುವ ಕಾಂಗ್ರೆಸ್ ಸಮಿತಿಯ ಜಿಲ್ಲಾ ಕಾರ್ಯದರ್ಶಿಯನ್ನಾಗಿ ತಕ್ಷಣದಿಂದ ಜಾರಿಗೆ ಬರುವಂತೆ ನೇಮಕ ಮಾಡಲಾಗಿದೆ ಎಂದು ಪ್ರಕಟಣೆಯಲ್ಲಿ ಕರ್ನಾಟಕ…

Read More

ಬರುತ್ತಿದ್ದಾಳೆ “ಶ್ರೀಮತಿ ಸತ್ಯಭಾಮ”ಕೊಡಿಯಾಲ್ ಬೈಲ್ ಅವರ ಕಲಾಸಂಗಮದ ಹೊಸ ನಾಟಕ

ಆ ಪೋಸ್ಟರೇ ಹೊಸತನವನ್ನು ತುಂಬಿಕೊಂಡಿದೆ, ತಬ್ಬಿಕೊಂಡಿದೆ. “ಶ್ರೀಮತಿ ಸತ್ಯಭಾಮ” ಟೈಟಲ್ ಅನ್ನೇ ಆಭರಣ, ಸೀರೆಯಿಂದ ಅಲಂಕರಿಸಲಾಗಿದೆ. Born to Rule ಎಂಬ ಅಡಿಬರಹ ಹಾಗೂ ಸತ್ಯಭಾಮ ನಿಂತ ಭಂಗಿಯು ಆಕೆಯ ಪಾತ್ರ ಎಂಥದ್ದು ಎಂಬುದನ್ನೂ ಸೂಚಿಸುತ್ತದೆ. ಅವೆಲ್ಲವುಗಳಿಂದ ಮುಖ್ಯವಾಗಿ – ಕೈಲಾಸ – ವೈಕುಂಠ ತಿರ್ಗ್ದ್ ಕಲಾಸಂಗಮ ಕುಡ ಭೂಲೋಕೊಗು ಎಂಬ ಒಂದು ವಾಕ್ಯದ ಮೂಲಕ ಈ ತಂಡವು ಪೌರಾಣಿಕ ಕಥೆಗಳ ಬಳಿಕ ಮತ್ತೆ ಸಾಮಾಜಿಕ ಕಥೆಗೆ ಹೊರಳಿದೆ ಎಂಬುದನ್ನು ವಿಭಿನ್ನವಾಗಿ ತಿಳಿಸುವ ಪ್ರಯತ್ನ ಮಾಡಿದೆ. ತುಳು…

Read More

ತುಮಕೂರಿನಲ್ಲಿ ಅಕ್ರಮ ಕಲ್ಲುಗಣಿಗಾರಿಕೆ ಮೇಲೆ ದಾಳಿ: 20 ವರ್ಷಗಳಿಂದ ಜೀತದಾಳುಗಳಾಗಿದ್ದ 12 ಕಾರ್ಮಿಕರ ರಕ್ಷಣೆ

ಜು. 22: ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನ ಹುಲಿಯೂರುದುರ್ಗ ಹೋಬಳಿಯ ಪಾವಸಂದ್ರ ಗ್ರಾಮದಲ್ಲಿ ನಡೆಯುತ್ತಿದ್ದ ಅಕ್ರಮ ಕಲ್ಲುಗಣಿಗಾರಿಕೆ ಮೇಲೆ ಅಧಿಕಾರಿಗಳು ದಾಳಿ ನಡೆಸಿ, ಜೀತದಾಳುಗಳಾಗಿ ದುಡಿಸಿಕೊಳ್ಳಲಾಗುತ್ತಿದೆ ಎನ್ನಲಾದ 12 ಕಾರ್ಮಿಕರನ್ನು ರಕ್ಷಿಸಿದ್ದಾರೆ. ಸರ್ಕಾರಿ ಜಮೀನಿನಲ್ಲಿ ಅಕ್ರಮವಾಗಿ ಕಲ್ಲುಗಣಿಗಾರಿಕೆ ನಡೆಸುತ್ತಿದ್ದ ವೇಳೆ ಮಂಡ್ಯ ಜಿಲ್ಲೆಯ ಕೆ.ಆರ್.ಎಸ್. ಭಾಗದ ಕಾರ್ಮಿಕರಿಗೆ ಮುಂಗಡ ಹಣ ನೀಡಿ, ಸುಮಾರು 20 ವರ್ಷಗಳಿಂದ ಜೀತದಾಳುಗಳಾಗಿ ಕೆಲಸ ಮಾಡಿಸಿಕೊಳ್ಳಲಾಗುತ್ತಿತ್ತು ಎಂಬ ಗಂಭೀರ ಆರೋಪ ಕೇಳಿಬಂದಿದೆ. ‘ಮುಕ್ತಿ’ ಸ್ವಯಂಸೇವಾ ಸಂಸ್ಥೆ ನೀಡಿದ ದೂರಿನ ಮೇರೆಗೆ ತುಮಕೂರು ಉಪವಿಭಾಗಾಧಿಕಾರಿ…

Read More

ಬ್ರಾಹ್ಮಣ ಅಭಿವೃದ್ಧಿ ಮಂಡಳಿಯಿಂದ ಸಾಲ ಯೋಜನೆಗೆ ಅರ್ಜಿ ಆಹ್ವಾನ: ಪಿಎಂ ಮಾಲತೇಶ್

ಕರ್ನಾಟಕ ರಾಜ್ಯ ಸರ್ಕಾರದ ವತಿಯಿಂದ ಮಾನ್ಯ ಮುಖ್ಯಮಂತ್ರಿಗಳು ಡಿಕೆ ಶಿವಕುಮಾರ್ ಅವರ ನಾಯಕತ್ವದಲ್ಲಿ ಮತ್ತು ಉಪಮುಖ್ಯಮಂತ್ರಿ ಹಾಗೂ ಕಂದಾಯ ಸಚಿವರಾದ ಡಾಕ್ಟರ್ ಜಿ ಪರಮೇಶ್ವರ್ ಅವರ ನೇತೃತ್ವದಲ್ಲಿ ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ವತಿಯಿಂದ 2025 26ನೇ ಸಾಲಿನಲ್ಲಿ ಪ್ರಾರಂಭವಾಗಿದ್ದು 31 /8 /2018 26ರಂದು ಕೊನೆ ದಿನಾಂಕ ಆಗಿರುತ್ತದೆ ಆರ್ಥಿಕವಾಗಿ ಹಿಂದುಳಿದ ಪ್ರಮಾಣ ಪತ್ರದೊಂದಿಗೆ ವೆಬ್ಸೈಟ್ www. Ksbdb.gov.in ಇಲ್ಲಿ ಅರ್ಜಿ ಸಲ್ಲಿಸಬಹುದದಾಗಿದೆ ಈ ಯೋಜನೆಯಲ್ಲಿ ಶೇಕಡಾ 33 ರಷ್ಟು ಮಹಿಳೆಯರಿಗೆ ಹಾಗೂ ದಿವ್ಯಂಗರಿಗೆ…

Read More

ಕೇಂದ್ರ ಯೋಜನೆಗಳನ್ನು ಜನರಿಗೆ ತಲುಪಿಸಲು ರಾಜ್ಯ ಸರ್ಕಾರ ಮುಂದಾಗಬೇಕು: ಎಂ.ಎಲ್. ಅಶ್ವಿನಿ

ಮುಳ್ಳೇರಿಯ: ನರೇಂದ್ರ ಮೋದಿ ಸರ್ಕಾರದ ಜನಕಲ್ಯಾಣ ಯೋಜನೆಗಳನ್ನು ಜನರಿಗೆ ತಲುಪಿಸಲು ರಾಜಕೀಯ ಭಿನ್ನಾಭಿಪ್ರಾಯಗಳನ್ನು ಮರೆತು ರಾಜ್ಯ ಸರ್ಕಾರ ಮುಂದಾಗಬೇಕು ಎಂದು ಬಿಜೆಪಿ ಜಿಲ್ಲಾ ಅಧ್ಯಕ್ಷರಾದ ಎಂ.ಎಲ್. ಅಶ್ವಿನಿ ಹೇಳಿದ್ದಾರೆ. ಪ್ರಧಾನಮಂತ್ರಿ ದಿವ್ಯಾಂಗ ಕೇಂದ್ರ, ಬಿಜೆಪಿ ಕಾಸರಗೋಡು ಜಿಲ್ಲಾ ಹೆಲ್ಪ್‌ಡೆಸ್ಕ್ ಹಾಗೂ ಬಿಜೆಪಿ ಬದಿಯಡ್ಕ ಮಂಡಲ ಸಮಿತಿ ಜಂಟಿಯಾಗಿ ಮುಳ್ಳೇರಿಯ ಗಣೇಶ ಕಲಾಮಂದಿರದಲ್ಲಿ ಆಯೋಜಿಸಿದ್ದ ‘ರಾಷ್ಟ್ರೀಯ ವಯೋಶ್ರೀ ಯೋಜನೆ’ಯ ನೋಂದಣಿ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಹಿರಿಯ ನಾಗರಿಕರಿಗೆ ಐದು ಲಕ್ಷ ರೂಪಾಯಿ ಆರೋಗ್ಯ ಭದ್ರತೆ ಒದಗಿಸುವ ಆಯುಷ್ಮಾನ್…

Read More

ಕಾಸರಗೋಡು ಗುಡುಗು ಮಿಂಚು ಸಹಿತ ಬಿರುಸಿನ ಮಳೆಗೆ ಸಾಧ್ಯತೆ

ಕಾಸರಗೋಡು/ತಿರುವನಂತಪುರ: ರಾಜ್ಯದಲ್ಲಿ ಮಳೆಯ ಮುನ್ಸೂಚನೆಯಲ್ಲಿ ಬದಲಾವಣೆ ಮಾಡಲಾಗಿದ್ದು, ನಾಲ್ಕು ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ​ಕೋಝಿಕ್ಕೋಡ್, ವಯನಾಡ್, ಕಣ್ಣೂರು ಮತ್ತು ಕಾಸರಗೋಡು ಜಿಲ್ಲೆಗಳಲ್ಲಿ ಇಂದು ಭಾರೀ ಮಳೆಯ ಮುನ್ಸೂಚನೆ ನೀಡಲಾಗಿದೆ. ನಾಳೆ ಕಣ್ಣೂರು ಹಾಗೂ ಕಾಸರಗೋಡು ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಮುಂದುವರಿಯಲಿದೆ. ಈ ಜಿಲ್ಲೆಗಳಲ್ಲಿ ಅಲ್ಲಲ್ಲಿ ಬಿರುಸಿನ ಮಳೆಯಾಗುವ ಸಾಧ್ಯತೆಯಿದೆ ಎಂದು ಕೇಂದ್ರ ಹವಾಮಾನ ಇಲಾಖೆ ತಿಳಿಸಿದೆ. ​ಮುಂದಿನ 3 ಗಂಟೆಗಳ ಹವಾಮಾನ ಮುನ್ಸೂಚನೆ​ರಾಜ್ಯದ ಎರ್ನಾಕುಲಂ, ತ್ರೆಶೂರ್, ಪಾಲ್ಘಾಟ್ (ಪಾಲಕ್ಕಾಡ್), ಮಲಪ್ಪುರಂ, ಕೋಝಿಕ್ಕೋಡ್, ವಯನಾಡ್, ಕಣ್ಣೂರು ಮತ್ತು…

Read More

ಕುಪ್ಪೆಪದವಿನಲ್ಲಿ ಭವಿಷ್ಯ ನಿಧಿ ಪಿಂಚಣಿದಾರರ ಸಮಾವೇಶ; ಪಿಂಚಣಿ ಹೆಚ್ಚಳಕ್ಕೆ ಆಗ್ರಹ

ಬೀಡಿ ಕಾರ್ಮಿಕರಾಗಿ ನಿವೃತ್ತರಾದ ಕುಪ್ಪೆಪದವು ವ್ಯಾಪ್ತಿಯ ಭವಿಷ್ಯ ನಿಧಿ ಪಿಂಚಣಿದಾರರ ಸಮಾವೇಶವು ಕುಪ್ಪೆಪದವು ಅನಂತರಾಜ ಸಭಾ ಭವನದಲ್ಲಿ ನಡೆಯಿತು. ಭವಿಷ್ಯ ನಿಧಿ ಪಿಂಚಣಿದಾರರ ಸಂಘದ ದ.ಕ. ಜಿಲ್ಲಾ ಕಾರ್ಯದರ್ಶಿ ಸುಕುಮಾರ್ ತೊಕ್ಕೊಟ್ಟು ಸಮಾವೇಶವನ್ನು ಉದ್ಘಾಟಿಸಿದರು. ಅವರು ಮಾತನಾಡುತ್ತಾ, ಬೀಡಿ ಮತ್ತಿತರ ಅಸಂಘಟಿತ ವಲಯದಲ್ಲಿ ಕಾರ್ಮಿಕರಾಗಿ ದುಡಿದು ನಿವೃತ್ತರಾದವರಿಗೆ ಭವಿಷ್ಯ ನಿಧಿ ಪಿಂಚಣಿ ವೃದ್ಧಾಪ್ಯದಲ್ಲಿ ಸಣ್ಣ ಆಸರೆಯಾಗಿದೆ. ಅವರ ಔಷಧಿ, ಚಕಿತ್ಸೆ ಮುಂತಾದ ಅಗತ್ಯಗಳಿಗೆ ಈ ಪಿಂಚಣಿಯ ಹಣವನ್ನೆ ಆಶ್ರಯಿಸಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಿವೃತ್ತರಾದ ಬೀಡಿ ಕಾರ್ಮಿಕರು…

Read More

ಮಂಜೇಶ್ವರ: ಭಾರೀ ಮಳೆ: ಕುಸಿದುಬಿದ್ದ ಜಿಮ್ ಕಟ್ಟಡದ ಆವರಣ ಗೋಡೆ: ಕೂದಲೆಳೆತದ ಅಂತರದಲ್ಲಿ ತಪ್ಪಿದ ಭಾರೀ ದುರಂತ

ಮಂಜೇಶ್ವರ: ಮಂಜೇಶ್ವರದ ಒಳಪೇಟೆಯಲ್ಲಿ ಕಾರ್ಯಾಚರಿಸುತ್ತಿರುವ ‘ಮೈ ಜಿಂ ಹೆಲ್ತ್ ಕ್ಲಬ್’ ಕಟ್ಟಡದ ಆವರಣ ಗೋಡೆಯು ಬುಧವಾರ ಸುರಿದ ಬಿರುಸಿನ ಮಳೆಗೆ ಕುಸಿದು ಬಿದ್ದಿದೆ. ಅದೃಷ್ಟವಶಾತ್ ಈ ವೇಳೆ ಯಾವುದೇ ಜೀವಹಾನಿ ಸಂಭವಿಸಿಲ್ಲದಿದ್ದರೂ, ಸ್ಥಳದಲ್ಲಿ ಭೀತಿಯ ವಾತಾವರಣ ನಿರ್ಮಾಣವಾಗಿದೆ. ​​ಪ್ರತಿದಿನ ನೂರಾರು ವಿದ್ಯಾರ್ಥಿಗಳು, ಸಾರ್ವಜನಿಕರು ಮತ್ತು ವಾಹನ ಸವಾರರು ಈ ಜಿಮ್ ಕಟ್ಟಡದ ಸಮೀಪವಿರುವ ರಸ್ತೆಯ ಮೂಲಕ ಸಂಚರಿಸುತ್ತಾರೆ. ಗೋಡೆ ಕುಸಿದುಬಿದ್ದ ಸಂದರ್ಭದಲ್ಲಿ ಅದೃಷ್ಟವಶಾತ್ ಯಾರೂ ಆ ಮಾರ್ಗದಲ್ಲಿ ಸಂಚರಿಸುತ್ತಿರಲಿಲ್ಲ. ಇದರಿಂದಾಗಿ ದೊಡ್ಡದೊಂದು ದುರಂತ ಕೂದಲೆಳೆತದ ಅಂತರದಲ್ಲಿ ತಪ್ಪಿದಂತಾಗಿದೆ….

Read More

ಗ್ರಾಹಕರ ಪರ ತೀರ್ಪು; ಸೌತ್ ಇಂಡಿಯನ್ ಬ್ಯಾಂಕ್‌ಗೆ ಪರಿಹಾರ ಪಾವತಿಸಲು ಆದೇಶ

ಕಾಸರಗೋಡು: ಗ್ರಾಹಕರ ಖಾತೆಯಿಂದ ಕಡಿತಗೊಳಿಸಿದ ಹಣವನ್ನು ಮರುಪಾವತಿಸುವುದರ ಜೊತೆಗೆ, ಉಂಟಾದ ಮಾನಸಿಕ ವೇದನೆ ಹಾಗೂ ಅನಾನುಕೂಲತೆಗೆ ಸೂಕ್ತ ಪರಿಹಾರವನ್ನು ನೀಡುವಂತೆ ಸೌತ್ ಇಂಡಿಯನ್ ಬ್ಯಾಂಕ್‌ನ ಸೀತಾಂಗೋಳಿ ಶಾಖೆಗೆ ಜಿಲ್ಲಾ ಗ್ರಾಹಕ ದೂರು ಪರಿಹಾರ ಆಯೋಗ ಆದೇಶ ನೀಡಿದೆ. ಈ ಆದೇಶವು ಸೌತ್ ಇಂಡಿಯನ್ ಬ್ಯಾಂಕ್, ಸೀತಾಂಗೋಳಿ ಶಾಖೆ ವಿರುದ್ಧ ಶ್ರೀ ರಾಜು ಸ್ಟೀಫನ್ ಡಿಸೋಜಾ ಅವರು ದಾಖಲಿಸಿದ್ದ ದೂರಿನ ವಿಚಾರಣೆಯ ಬಳಿಕ ಹೊರಬಿದ್ದಿದೆ. ದೂರಿನ ಪ್ರಕಾರ, ಶ್ರೀ ರಾಜು ಸ್ಟೀಫನ್ ಡಿಸೋಜಾ ಅವರು 2022ರಲ್ಲಿ ಸೌತ್ ಇಂಡಿಯನ್…

Read More
error: Content is protected !!