ಕಪ್ಪು ಕಲ್ಲಿನ ಕ್ವಾರೆ ಗೆ ಬಿದ್ದು ಮೂರು ಕಾಡು ಕೋಣಗಳು ಸಾವು

ವಿಟ್ಲ: ಉಕ್ಕುಡ ಸಮೀಪದ ಕಪ್ಪು ಕಲ್ಲಿನ ಕ್ವಾರೆ ಗೆ ಮೂರು ಕಾಡುಕೋಣಗಳು ಬಿದ್ದು ಗಾಯಮಾಡಿಕೊಂಡು ಮೃತ ಪಟ್ಟಿದ್ದು,ಈ ವಿಚಾರದಲ್ಲಿ ವನ್ಯ ಜೀವಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.


ಶುಕ್ರವಾರ ಬೆಳಗ್ಗೆ ಮೂರು ಕಾಡುಕೋಣಗಳು ಏಕಾಏಕಿ ಕಲ್ಲಿನ ಕ್ವಾರಿಗೆ ಇಳಿದಿದ್ದು, ಇದನ್ನು ಹೊರಗೆ ಕಳುಹಿಸಲು ಪ್ರಯತ್ನಿಸಿದಾಗ ಭಯಗೊಂಡು ಎಲ್ಲೆಂದರಲ್ಲಿ ಓಡಿ ಕಲ್ಲು ಕ್ವಾರಿಗುಂಡಿಗೆ ಬಿದ್ದು ಗಾಯ ಮಾಡಿಕೊಂಡಿದೆ ಎಂದು ಹೇಳಲಾಗಿದೆ. ಯುಕೆಟಿಸಿಎಲ್ ೪೦೦ಕೆವಿ ವಿದ್ಯುತ್ ಮಾರ್ಗ ರಚನೆಯ ಬಳಿಕ ಕಾಡು ಪ್ರಾಣಿಗಳು ನಾಡಿನತ್ತ ಮುಖ ಮಾಡುತ್ತಿದೆ. ಇವು ಹತ್ತಿರದ ಅರಣ್ಯ ಪ್ರದೇಶದಿಂದ ಆಗಮಿಸಿರಬಹುದೆಂದು ಹೇಳಲಾಗಿದೆ. ಕ್ವಾರಿಯ ಸುತ್ತ ಸುಭದ್ರ ರಕ್ಷಣಾ ವ್ಯವಸ್ಥೆಯಿಲ್ಲದೇ ದುರ್ಘಟನೆ ನಡೆದಿದೆ ಎಂದು ಹೇಳಲಾಗಿದೆ.


ಘಟನೆ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಅರಣ್ಯ ಅಧಿಕಾರಿಗಳು ಕಾಡುಕೋಣಗಳ ರಕ್ಷಣೆಗೆ ಪ್ರಯತ್ನಿಸಿದ್ದಾರೆ. ಆದರೆ ಗಾಯಗೊಂಡು ಮೃತ ಪಟ್ಟಿದೆ ಎನ್ನಲಾಗಿದೆ. ಹೆಣ್ಣು ಕಾಡು ಕೋಣಗಳಾಗಿದ್ದು, ಒಂದು ಮರಿ ಎಂದು ಹೇಳಲಾಗಿದೆ. ರಕ್ಷಿತಾರಣ್ಯ ಪ್ರದೇಶಕ್ಕೆ ಮೃತ ದೇಹವನ್ನು ತಂದಿದ್ದು, ಎಸಿಎಫ್ ಸಮ್ಮುಖದಲ್ಲಿ ಮರಣೋತ್ತರ ಪರೀಕ್ಷೆಯನ್ನು ನಡೆಸಿ ಮುಂದಿನ ಅಗತ್ಯ ಪ್ರಕ್ರಿಯೆ ಮಾಡಲಾಗಿದೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!