ಸಹಕಾರಿ ನಿರ್ವಹಣಾ ಡಿಪ್ಲೋಮಾದಲ್ಲಿ ‘ಎ’ ಶ್ರೇಣಿ ಪಡೆದ ನ್ಯಾಯವಾದಿ ಶ್ರೀಧರ ಪಿ. ಎಸ್.

ಕುಂದಾಪುರ: ವಿಶ್ವ ರಾಮಕ್ಷತ್ರಿಯ ಮಹಾಸಂಘದ ಪ್ರಧಾನ ಕಾರ್ಯದರ್ಶಿ, ಉದ್ಯಮಿ, ಸಹಕಾರಿ ಕ್ಷೇತ್ರದ ತಜ್ಞ ಹಾಗೂ ನ್ಯಾಯವಾದಿ ಶ್ರೀಧರ ಪಿ. ಎಸ್. ಅವರು ಮೈಸೂರು ಮುಕ್ತ ವಿಶ್ವವಿದ್ಯಾನಿಲಯದ ದೂರಶಿಕ್ಷಣ ಯೋಜನೆಯಡಿ ನಡೆದ ‘ಡಿಪ್ಲೋಮಾ ಇನ್ ಕೋ-ಆಪರೇಟಿವ್ ಮ್ಯಾನೇಜ್‌ಮೆಂಟ್’ ಕೋರ್ಸ್‌ನಲ್ಲಿ ‘ಎ’ ಶ್ರೇಣಿಯಲ್ಲಿ ತೇರ್ಗಡೆ ಹೊಂದಿ ಡಿಪ್ಲೋಮಾ ಪದವೀಧರರಾಗಿದ್ದಾರೆ. ಉಡುಪಿ ಜಿಲ್ಲೆಯ ಸಾಸ್ತಾನ ಮೂಲದ ಶ್ರೀಧರ ಪಿ. ಎಸ್. ಅವರು ಕಾನೂನು ಪದವೀಧರರಾಗಿದ್ದು, ನ್ಯಾಯವಾದಿಯಾಗಿ ವೃತ್ತಿ ನಿರ್ವಹಿಸುವುದರ ಜೊತೆಗೆ ಸಹಕಾರಿ ಕ್ಷೇತ್ರದಲ್ಲೂ ಹಲವು ವರ್ಷಗಳಿಂದ ಸಕ್ರಿಯವಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಕೃಷಿ…

Read More

ತುಳು ವಿಕಿಪೀಡಿಯಕ್ಕೆ ದಶ ಸಂಭ್ರಮ

ಮಂಗಳೂರು: ಡಿಜಿಟಲ್ ಲೋಕದಲ್ಲಿ ತುಳು ಭಾಷೆ, ಸಾಹಿತ್ಯ ಹಾಗೂ ಕರಾವಳಿಯ ಸಾಂಸ್ಕೃತಿಕ ಪರಂಪರೆಯನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ಯುವಲ್ಲಿ ತುಳು ವಿಕಿಪೀಡಿಯ ಮಹತ್ತರ ಪಾತ್ರ ವಹಿಸುತ್ತಿದೆ. ತುಳು ಭಾಷೆಗೆ ತುಳು ವಿಕಿಪೀಡಿಯ ದೊಡ್ಡ ಶಕ್ತಿ ನೀಡಿದೆ ಎಂದು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರಾನಾಥ ಗಟ್ಟಿ ಹೇಳಿದರು. ನಗರದ ಖಾಸಗಿ ಹೋಟೆಲ್‌ನ ಸಭಾಂಗಣದಲ್ಲಿ ಶನಿವಾರ ತುಳು ವಿಕಿಪೀಡಿಯ ಹಾಗೂ ಕರಾವಳಿ ವಿಕಿಮೀಡಿಯನ್ಸ್ ಯೂಸರ್ಸ್ ಗ್ರೂಪ್ ಆಶ್ರಯದಲ್ಲಿ ನಡೆದ ‘ತುಳು ವಿಕಿಪೀಡಿಯ ದಶ ಸಂಭ್ರಮ’ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ…

Read More

ಶಿಕ್ಷಣ, ಸಂಸ್ಕೃತಿ, ಸಮಾಜ ಸೇವೆಗೆ ಮೋಹನ್ ಆಳ್ವರ ಕೊಡುಗೆ ಅಪಾರ:ಡಾ. ವೀರೇಂದ್ರ ಹೆಗ್ಡೆ

ಮಂಗಳೂರು : ಕರ್ನಾಟಕ ರಾಜ್ಯ ಮಹಾವಿದ್ಯಾಲಯ ಶಿಕ್ಷಕರ ಸಂಘ ಮಂಗಳೂರು ವಿಭಾಗ ಆಯೋಜಿಸುತ್ತಿರುವ ಪ್ರೇರಣಾ ದಿವಸ್ – 2026 ಅಧ್ಯಾಪಕ ಭೂಷಣ ಪ್ರಶಸ್ತಿ ಪ್ರದಾನ ಕಾರ್ಯಕ್ರಮದ ಆಮಂತ್ರಣ ಧರ್ಮಸ್ಥಳದ ಧರ್ಮಾಧಿಕಾರಿ ಪೂಜ್ಯ ಡಾ. ಡಿ ವೀರೇಂದ್ರ ಹೆಗ್ಡೆಯವರು ಬಿಡುಗಡೆಗೊಳಿಸಿದರು. ನಂತರ ಅವರು ಮಾತನಾಡಿ, ಕರ್ನಾಟಕ ರಾಜ್ಯ ಮಹಾವಿದ್ಯಾಲಯ ಶಿಕ್ಷಕ ಸಂಘವು ಪ್ರತಿವರ್ಷವೂ ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಿರುವ ಅಧ್ಯಾಪಕರನ್ನು ಗುರುತಿಸಿ, ಗೌರವಿಸುವ ಮೂಲಕ ಅವರ ಸೇವೆಯನ್ನು ಪ್ರೋತ್ಸಾಹಿಸುತ್ತಿರುವುದು ಶ್ಲಾಘನೀಯ ಕಾರ್ಯವಾಗಿದೆ. ಅಧ್ಯಾಪಕರ ಸಾಧನೆಯನ್ನು ಗುರುತಿಸಿ…

Read More

ಮದುವೆ ಸಂಭ್ರಮದಲ್ಲೊಂದು ಅರ್ಥಪೂರ್ಣ ಕಾರ್ಯ: ‘ಗೋ ಸಮ್ಮಾನ್’ ಅಭಿಯಾನಕ್ಕೆ ಸಹಿ ಸಂಗ್ರಹ

​ಬಂಟ್ವಾಳ: ತಾಲೂಕಿನ ರೆಂಜನ್ ಪದವಿನ ಶುಭಲಕ್ಷ್ಮೀ ಸಭಾಭವನದಲ್ಲಿ ಇತ್ತೀಚೆಗೆ ನಡೆದ ಜೇತೇಶ್ ಹಾಗೂ ಶರಣ್ಯ ಅವರ ವಿವಾಹ ಸಮಾರಂಭದಲ್ಲಿ ಸಮಾಜಮುಖಿ ಉದ್ದೇಶದ ‘ಗೋ ಸಮ್ಮಾನ್’ ಅಭಿಯಾನಕ್ಕೆ ಸಹಿ ಸಂಗ್ರಹಿಸಲಾಯಿತು. ಮದುವೆ ಸಂಭ್ರಮದ ನಡುವೆಯೂ ಗೋ ರಕ್ಷಣೆ ಹಾಗೂ ಜಾಗೃತಿಯ ಈ ವಿನೂತನ ಪ್ರಯತ್ನಕ್ಕೆ ಸಮಾರಂಭಕ್ಕೆ ಆಗಮಿಸಿದ ಅತಿಥಿಗಳಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ಕಾರ್ಯಕ್ರಮದಲ್ಲಿ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು, ಗೋಸೇವಾ ವಿಭಾಗ ಪ್ರಮುಖ್ ಗಂಗಾಧರ್, ಗೊಸಮ್ಮನ್ ಜಿಲ್ಲಾ ಸಹ ಪ್ರಭಾರಿ ಅಶೋಕ ಇಳಂತಿಲ ಸೇರಿದಂತೆ ಹಲವು…

Read More

ಪುತ್ತೂರು ತಾಲೂಕು ಸಮಗ್ರ ಅಭಿವೃದ್ಧಿ ಹಾಗೂ ರೈತರ ಹಿತರಕ್ಷಣೆಗೆ ಆಗ್ರಹಿಸಿ ಡಿ.ಕೆ. ಶಿವಕುಮಾರ್ ಅವರಿಗೆ ಎಂಎಲ್ಸಿ ಕಿಶೋರ್ ಕುಮಾರ್ ಪುತ್ತೂರು ಮನವಿ

ಪುತ್ತೂರು: ಪುತ್ತೂರು ತಾಲೂಕು ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯ ಸಮಗ್ರ ಅಭಿವೃದ್ಧಿ, ಗ್ರಾಮೀಣ ಮೂಲಸೌಕರ್ಯ, ಸಾರ್ವಜನಿಕ ಆರೋಗ್ಯ ಮತ್ತು ಕೃಷಿಕರ ತುರ್ತು ಸಮಸ್ಯೆಗಳ ಪರಿಹಾರಕ್ಕೆ ಆಗ್ರಹಿಸಿ ಉಡುಪಿ-ದಕ್ಷಿಣ ಕನ್ನಡ ಸ್ಥಳೀಯ ಸಂಸ್ಥೆಗಳ ಕ್ಷೇತ್ರದ ವಿಧಾನ ಪರಿಷತ್ ಶಾಸಕರಾದ ಶ್ರೀ ಕಿಶೋರ್ ಕುಮಾರ್ ಪುತ್ತೂರು ಅವರು ಬೆಂಗಳೂರಿನಲ್ಲಿ ಮಾನ್ಯ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿಯಾಗಿ ಸುದೀರ್ಘ ಮನವಿ ಪತ್ರ ಸಲ್ಲಿಸಿದ್ದಾರೆ. ಕೃಷಿಕರ ಗನ್ ಲೈಸೆನ್ಸ್ ನವೀಕರಣದ ಕುರಿತು ವಿಶೇಷವಾಗಿ ಸಮಾಲೋಚನೆ ನಡೆಸಲಾಗಿದ್ದು, ಈ ಹಿಂದೆ ಇದ್ದ ನಿಯಮಗಳಂತೆಯೇ ಯಾವುದೇ ಎನ್‌ಒಸಿ…

Read More

ಜಪ್ಪಿನಮೊಗರು ಸಾರ್ವಜನಿಕ ಗಣೇಶೋತ್ಸವಕ್ಕೆ ಗಣಪನ ಆಗಮನ

ಮಂಗಳೂರು:ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ, ಜಪ್ಪಿನಮೊಗರು ಆಶ್ರಯದಲ್ಲಿ 18ನೇ ವರ್ಷದ ಸಾರ್ವಜನಿಕ ಗಣೇಶೋತ್ಸವವು ಇಂದಿನಿಂದ ಸೆಪ್ಟೆಂಬರ್ 15ರವರೆಗೆ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಜಪ್ಪಿನಮೊಗರಿನಲ್ಲಿ ನಡೆಯಲಿರುವ ಸಾರ್ವಜನಿಕ ಶ್ರೀ ಗಣೇಶೋತ್ಸವಕ್ಕಾಗಿ ನಗರದ ವಿ.ಟಿ. ರಸ್ತೆಯ ನಳಂದ ಶಾಲೆಯ ಸಮೀಪದ ಪ್ರದೇಶದಿಂದ ಗಣಪನ ಮೂರ್ತಿಯನ್ನು ಮೆರವಣಿಗೆಯ ಮೂಲಕ ಜಪ್ಪಿನಮೊಗರಿಗೆ ಕೊಂಡೊಯ್ಯಲಾಯಿತು. ಗಣಪನನ್ನು ಸ್ವಾಗತಿಸಲು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಅಧ್ಯಕ್ಷ ಜೆ. ನಾಗೇಂದ್ರ ಕುಮಾರ್ ಸೇರಿದಂತೆ ಸಮಿತಿಯ ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು….

Read More

ಮೈಸೂರಿನ ಕವಯಿತ್ರಿ ಪ್ರಭಾ ಶಾಸ್ತ್ರಿ ಜೋಶುಲ್ ಅವರಿಗೆ ‘ಕಾಸರಗೋಡು ದಸರಾ ಕವಿ ಶ್ರೇಷ್ಠ ಪ್ರಶಸ್ತಿ–2026’

ಕಾಸರಗೋಡು: ಮೈಸೂರಿನ ಖ್ಯಾತ ಕವಯಿತ್ರಿ, ಬರಹಗಾರ್ತಿ, ಅನುವಾದಕಿ, ಗಾಯಕಿ ಹಾಗೂ ಶಿಕ್ಷಕಿ ಶ್ರೀಮತಿ ಪ್ರಭಾ ಶಾಸ್ತ್ರಿ ಜೋಶುಲ್ ಅವರಿಗೆ ‘ಕಾಸರಗೋಡು ದಸರಾ ಕವಿ ಶ್ರೇಷ್ಠ ಪ್ರಶಸ್ತಿ–2026’ ನೀಡಿ ಗೌರವಿಸಲು ನಿರ್ಧರಿಸಲಾಗಿದೆ. ಕಾಸರಗೋಡಿನ ಪಾಂಗೋಡು ಶ್ರೀ ದುರ್ಗಾಪರಮೇಶ್ವರಿ ಶ್ರೀ ಸುಬ್ರಮಣ್ಯ ದೇವಸ್ಥಾನದ ಸಭಾ ವೇದಿಕೆಯಲ್ಲಿ ಅಕ್ಟೋಬರ್ 18, 2026ರ ಭಾನುವಾರ ನಡೆಯಲಿರುವ ‘ಕಾಸರಗೋಡು ದಸರಾ ಕವಿ ಸಮ್ಮೇಳನ’ದಲ್ಲಿ ಈ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುವುದು. ಕನ್ನಡ ಭವನದ ಡಾ. ವಾಮನ್ ರಾವ್ ಬೇಕಲ್ ಅವರ ಸಾರಥ್ಯದಲ್ಲಿ ಅಕ್ಟೋಬರ್ 11ರಂದು ಉದ್ಘಾಟನೆಗೊಂಡು…

Read More

ಕರಾವಳಿ ಸಂಗೀತ ಕಲಾವಿದರ ಒಕ್ಕೂಟದ ‘ಸ್ವರ ಕುಡ್ಲ’ ಸಂಗೀತ ಸ್ಪರ್ಧೆಗೆ ಅದ್ದೂರಿ ಚಾಲನೆ

ಸಂಗೀತ ಹಾಗೂ ಸಾಂಸ್ಕೃತಿಕ ಕಲೆಗಳ ಸ್ಪರ್ಧೆಗಳಲ್ಲಿ ಸೋಲು ಗೆಲುವಿನ ಪ್ರಶ್ನೆಗಿಂತ ಅನುಭವದ ಹೆಚ್ಚಳಕ್ಕಾಗಿ ಕಲಿಕೆಯಲ್ಲಿ ಸ್ಪರ್ಧಾ ಛಲವಿರಬೇಕು ಎಂದು ವಿಶ್ವವಿದ್ಯಾನಿಲಯ ಪ್ರಾಂಶುಪಾಲರಾದ ಜಯವಂತ ನಾಯಕ್ ಹೇಳಿದರು. ಕರಾವಳಿ ಸಂಗೀತ ಕಲಾವಿದರ ಒಕ್ಕೂಟ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆ ಇವರು ಆಯೋಜಿಸಿದ ಸ್ವರ ಕುಡ್ಲ ಸಂಗೀತ ಸ್ಪರ್ಧೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ಒಕ್ಕೂಟದ ಅಧ್ಯಕ್ಷ ಧನುರಾಜ್ ಅತ್ತಾವರ ಅಧ್ಯಕ್ಷತೆ ವಹಿಸಿದ್ದರು.ಯೆನಪೋಯ ಆಸ್ಪತ್ರೆಯ ಸೀನಿಯರ್ ಸರ್ಜನ್ ಹಾಗೂ ಗಾಯಕರಾದ ಡಾಕ್ಟರ್ ಕುಂಬ್ಳೆ ಅನಂತ ಪ್ರಭು ಗೀತೆಹಾಡಿ ಸ್ಪರ್ಧೆಗೆ ಚಾಲನೆ…

Read More

ಸ್ಕೈಬ್ಲೂ ಸ್ಪೋರ್ಟ್ಸ್ ಆ್ಯಂಡ್ ಆರ್ಟ್ಸ್ ಕ್ಲಬ್‌ನ 43ನೇ ವಾರ್ಷಿಕೋತ್ಸವ; ಮ್ಯಾರಥಾನ್‌ನಲ್ಲಿ ಜಿಲ್ಲಾಧಿಕಾರಿ ಅರ್ಜುನ್ ಪಾಂಡಿಯನ್ IAS ಭಾಗಿ

ಕಾಸರಗೋಡು: ಸ್ಕೈಬ್ಲೂ ಸ್ಪೋರ್ಟ್ಸ್ ಆ್ಯಂಡ್ ಆರ್ಟ್ಸ್ ಕ್ಲಬ್ (R), ಪಳ್ಳಂನ 43ನೇ ವಾರ್ಷಿಕೋತ್ಸವದ ಅಂಗವಾಗಿ ಆಯೋಜಿಸಿದ್ದ 6ನೇ ಆವೃತ್ತಿಯ ಮ್ಯಾರಥಾನ್ ಓಟ ಗಮನ ಸೆಳೆಯಿತು. ಕಾಸರಗೋಡು ಜಿಲ್ಲಾ ಜಿಲ್ಲಾಧಿಕಾರಿ ಅರ್ಜುನ್ ಪಾಂಡಿಯನ್ IAS ಅವರು ಮ್ಯಾರಥಾನ್‌ಗೆ ಚಾಲನೆ ನೀಡುವುದರ ಜೊತೆಗೆ ಸ್ಪರ್ಧೆಯಲ್ಲಿ ಭಾಗವಹಿಸಿ 6 ಕಿಲೋಮೀಟರ್ ಓಡಿ ಫಿನಿಶ್ ಮಾಡಿದರು. ಎನ್ಮಕಜೆ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಸಿದ್ದೀಖ್ ವೊಳಮುಗರ‍್ ಅವರು ಮ್ಯಾರಥಾನ್‌ಗೆ ಫ್ಲ್ಯಾಗ್ ಆಫ್ ಮಾಡಿದರು. ಪ್ಯಾಲಿಯೇಟಿವ್ ಆರೈಕೆ ಕ್ಷೇತ್ರದಲ್ಲಿ ಕ್ಲಬ್‌ನ ಕಾರ್ಯಚಟುವಟಿಕೆಗಳಿಗೆ ಬೆಂಬಲವಾಗಿ ದಾನಿ ಅಬ್ದುಲ್…

Read More

ನೇತ್ರಾವತಿ ಎಕ್ಸ್‌ಪ್ರೆಸ್‌ನಲ್ಲಿ ಮಹಿಳೆಗೆ ಲೈಂಗಿಕ ಕಿರುಕುಳ; ಟಿಟಿಇ ಬಂಧನ

ಕಾಸರಗೋಡು : ನೇತ್ರಾವತಿ ಎಕ್ಸ್‌ಪ್ರೆಸ್ ರೈಲಿನ ಎಸಿ ಬೋಗಿಯಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಟಿಕೆಟ್ ಪರಿಶೋಧಕನನ್ನು ರೈಲ್ವೆ ಪೊಲೀಸರು ಬಂಧಿಸಿದ್ದಾರೆ.ಕೊಲ್ಲಂ ಕಡಕ್ಕಲ್ ನಿವಾಸಿ ಶಿಜು ಬಂಧಿತ ಆರೋಪಿ. ​ದಂಪತಿ ಒಂದೇ ರೈಲಿನಲ್ಲಿ ಪ್ರಯಾಣಿಸುತ್ತಿದ್ದರೂ, ಸೀಟುಗಳು ಬೇರೆ ಬೇರೆ ಕಡೆ ಕಾಯ್ದಿರಿಸಲ್ಪಟ್ಟಿದ್ದರಿಂದ ಮಹಿಳೆ ಬೋಗಿಯಲ್ಲಿ ಒಬ್ಬರೇ ಇದ್ದರು. ಈ ಸಂದರ್ಭವನ್ನು ದುರ್ಬಳಕೆ ಮಾಡಿಕೊಂಡ ಟಿಟಿಇ, ಮಹಿಳೆಯ ಸಮ್ಮತಿಯಿಲ್ಲದೆ ಅನುಚಿತವಾಗಿ ವರ್ತಿಸಿ ದೈಹಿಕ ಕಿರುಕುಳ ನೀಡಿದ್ದಾನೆ ಎನ್ನಲಾಗಿದೆ. ಸಂತ್ರಸ್ತೆ ತಕ್ಷಣವೇ ರೈಲ್ವೆ ಪೊಲೀಸರಿಗೆ ದೂರು…

Read More
error: Content is protected !!