ಕೋಝಿಕ್ಕೋಡಿನಲ್ಲಿ ರೖಲ್ವೇ ಹಳಿಗೆ ಜರಿದು ಬಿದ್ದ ಕ್ಲಾಕ್ ಟವರ್: ರೖಲು ಸಂಚಾರ ಅಸ್ತವ್ಯಸ್ತ

ಕೋಝಿಕ್ಕೋಡ್ ಜು 9): ಕೋಝಿಕ್ಕೋಡ್ ರೖಲು ನಿಲ್ದಾಣದಲ್ಲಿ ಇಂದು ಬೆಳಿಗ್ಗೆ ಕ್ಲಾಕ್ ಟವರ್ ಕಟ್ಟಡ ಕುಸಿದು ಬಿದ್ದ ಘಟನೆ ನಡೆದಿದೆ.
ನಿಲ್ದಾಣದ ಎರಡನೇ ಫ್ಲಾಟ್ ಫಾರ್ಮ್ ಗೆ ಕ್ಲಾಕ್ ಟವರ್ ಜರಿದು ಬಿದ್ದ ಪರಿಣಾಮ 1,2,3 ಫ್ಲಾಟ್ ಫಾಮಿನ ವಿದ್ಯುತ್ ವಿಚ್ಛೇದನವಾಗಿದೆ. ರೖಲುಗಳ ಸಂಚಾರದಲ್ಲೂ ವ್ಯತ್ಯಯ ಉಂಟಾಗಿದೆ.

ರೖಲು ನಿಲ್ದಾಣದ ನವೀಕರಣ ಕಾಮಗಾರಿಗಳು ನಡೆಯುತ್ತಿರುವುದರ ನಡುವೆ ಕ್ಲಾಕ್ ಟವರು ಜರಿದು ಬಿದ್ದಿದ್ದು, ಜನರಿಗೆ ಅಪಾಯಗಳೇನೂ ಸಂಭವಿಸಿಲ್ಲ ಎಂದು ವರದಿಯಾಗಿದೆ.
ಟವರ್ ಬೀಳುವಾಗ ರೖಲು ನಿಲ್ಧಾಣದಲ್ಲಿ ರೖಲೊಂದು ನಿಂತಿತ್ತು. ಘಟನೆಯ ಹಿನ್ನೆಲೆಯಲ್ಲಿ ಮಂಗಳೂರಿಗೆ ಆಗಮಿಸುವ, ನಿರ್ಗಮಿಸುವ ರೖಲುಗಳ ಸಂಚಾರದಲ್ಲಿ ಸಮಯ ವ್ಯತ್ಯಯವಾಗಿದೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!