ಉಪ್ಪಳದಲ್ಲಿ 132ನೇ ಉಚಿತ ಫುಟ್ ಫಾಲ್ಸ್ ಥೆರಪಿ ಶಿಬಿರ: ಜುಲೈ 16ರವರೆಗೆ ಸಾರ್ವಜನಿಕರಿಗೆ ಅವಕಾಶ

ಉಪ್ಪಳ, ಜು.3: ಶ್ರೀ ಅಯ್ಯಪ್ಪ ಸೇವಾ ಸಮಿತಿ, ಅಯ್ಯಪ್ಪ ಮಂದಿರ ಉಪ್ಪಳ ಹಾಗೂ ಕಂಪಾನಿಯೋ ನೆಮ್ಮದಿ ವೆಲ್‌ನೆಸ್ ಸೆಂಟರ್, ಪುತ್ತೂರು ಇವರ ಜಂಟಿ ಆಶ್ರಯದಲ್ಲಿ 132ನೇ ಉಚಿತ ಫುಟ್ ಫಾಲ್ಸ್ ಥೆರಪಿ ಶಿಬಿರವನ್ನು ಜುಲೈ 2ರಿಂದ 16ರವರೆಗೆ ಉಪ್ಪಳದ ಅಯ್ಯಪ್ಪ ಮಂದಿರದ ಸಭಾಂಗಣದಲ್ಲಿ ಆಯೋಜಿಸಲಾಗಿದೆ. ಪ್ರತಿದಿನ ಬೆಳಿಗ್ಗೆ 10 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ನಡೆಯುವ ಈ ಶಿಬಿರದಲ್ಲಿ ಸಾರ್ವಜನಿಕರು ಉಚಿತವಾಗಿ ಭಾಗವಹಿಸಿ ಥೆರಪಿಯ ಪ್ರಯೋಜನ ಪಡೆಯಬಹುದಾಗಿದೆ. ಶಿಬಿರವನ್ನು ಶ್ರೀ ಅಯ್ಯಪ್ಪ ಸೇವಾ ಸಮಿತಿ ಅಯ್ಯಪ್ಪ ಮಂದಿರ…

Read More

ಹಾಡು ಹಗಲೇ ಬೈಕ್‌ನಲ್ಲಿ ಬಂದು ಮಹಿಳೆಯನ್ನು ಕೆಡವಿ ಮೂರು ಪವನ್ ಚಿನ್ನದ ಸರ ದೋಚಿದ ದುಷ್ಕರ್ಮಿಗಳು

​ಕಾಸರಗೋಡು: ಮಧ್ಯಾಹ್ನದ ವೇಳೆ ಬೈಕ್‌ನಲ್ಲಿ ಬಂದ ದುಷ್ಕರ್ಮಿಗಳ ತಂಡವೊಂದು ಮಹಿಳೆಯನ್ನು ತಳ್ಳಿ, ಅವರ ಕುತ್ತಿಗೆಯಲ್ಲಿದ್ದ ಮೂರು ಪವನ್ ತೂಕದ ಚಿನ್ನದ ತಾಲಿಸರವನ್ನು ಕಸಿದುಕೊಂಡು ಪರಾರಿಯಾಗಿರುವ ಘಟನೆ ಕಾಸರಗೋಡಿನ ಮಾವುಂಗಾಲ್‌ನಲ್ಲಿ ನಡೆದಿದೆ. ​ನೆಲ್ಲಿತ್ತರ ಫುಡ್ ಪ್ರೊಡಕ್ಟ್ಸ್ ಸಂಸ್ಥೆಯ ಉದ್ಯೋಗಿ, ಪುಲಯನಡುಕದ ರವಿ ಅವರ ಪತ್ನಿ ಕೆ.ಸಿಂಧು (42) ಸರ ಕಳೆದುಕೊಂಡ ಮಹಿಳೆ. ಸಿಂಧು ಕೆಲಸ ಮುಗಿಸಿ ಮನೆಗೆ ವಾಪಸ್ಸಾದ ನಂತರ, ಸ್ಕೂಟರ್‌ನಲ್ಲಿ ಅಂಗಡಿಗೆ ಸಾಮಗ್ರಿ ತರಲು ತೆರಳಿದ್ದರು. ಮರಳಿ ಮನೆಗೆ ಹಿಂತಿರುಗುತ್ತಿದ್ದಾಗ, ಬಿಳಿ ಬಣ್ಣದ ಹಳೆಯ ಮಾದರಿಯ ಸ್ಕೂಟರ್‌ನಲ್ಲಿ…

Read More

ಹಾಚಿ ಇಟ್ಟಿಗಿಗೆ ‘ನಾಡೋಜ ಡಾ. ಕಯ್ಯಾರ ಸದ್ಭಾವನಾ ರಾಷ್ಟ್ರೀಯ ಪ್ರಶಸ್ತಿ-2026’

ಹೂವಿನಹಡಗಲಿ: ವಿಜಯನಗರ ಜಿಲ್ಲೆಯ ಹೂವಿನಹಡಗಲಿ ತಾಲೂಕಿನ ಜನಪ್ರಿಯ ಆಧುನಿಕ ವಚನಕಾರ ಹಾಗೂ ಸುಪ್ರಸಿದ್ಧ ಸಾಹಿತಿ ಹಾಚಿ ಇಟ್ಟಿಗಿ ಅವರಿಗೆ ‘ನಾಡೋಜ ಡಾ. ಕಯ್ಯಾರ ಸದ್ಭಾವನಾ ರಾಷ್ಟ್ರೀಯ ಪ್ರಶಸ್ತಿ-2026’ ಘೋಷಿಸಲಾಗಿದೆ. ಜುಲೈ 26ರಂದು ಕನ್ನಡ ಭವನದಲ್ಲಿ ನಡೆಯಲಿರುವ ರಜತ ಸಂಭ್ರಮ ಸಮಾರೋಪ ಕಾರ್ಯಕ್ರಮ ಹಾಗೂ ಕರ್ನಾಟಕ ಗಡಿನಾಡು ಕನ್ನಡ ಸಮ್ಮೇಳನದ ಅಂಗವಾಗಿ ಈ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುವುದು ಎಂದು ಸಮ್ಮೇಳನ ಸಮಿತಿ ಅಧ್ಯಕ್ಷ ಡಾ. ಕೆ. ಎನ್. ವೆಂಕಟ್ರಮಣ ಹೊಳ್ಳ ಹಾಗೂ ಕನ್ನಡ ಭವನದ ಸ್ಥಾಪಕ ಅಧ್ಯಕ್ಷ ಡಾ….

Read More

ಮಣಿಪಾಲ: ಮಾಹೆ (MAHE) ವಿಶ್ವವಿದ್ಯಾಲಯದ ತಂತ್ರಜ್ಞಾನ ಮತ್ತು ವಿಜ್ಞಾನ ವಿಭಾಗದ ಸಹ ಕುಲಪತಿಯಾಗಿ ಡಾ. ಕರುಣಾಕರ್ ಎ. ಕೋಟೆಗಾರ್ ಅವರು ಜುಲೈ 1ರಂದು ಅಧಿಕಾರ ಸ್ವೀಕರಿಸಿದರು.

ಈ ಹುದ್ದೆಯಲ್ಲಿ ತಮ್ಮ ಅಧಿಕಾರಾವಧಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ಡಾ. ನಾರಾಯಣ ಸಭಾಹಿತ್ ಅವರು ಇನ್ನು ಮುಂದೆ ಮಾಹೆ ವಿಶ್ವವಿದ್ಯಾಲಯದ ಸಲಹೆಗಾರರಾಗಿ ಕಾರ್ಯನಿರ್ವಹಿಸಲಿದ್ದಾರೆ. ಶಿಕ್ಷಣ ತಜ್ಞ ಹಾಗೂ ಆಡಳಿತಗಾರರಾಗಿರುವ ಡಾ. ಕರುಣಾಕರ್ ಕೋಟೆಗಾರ್ ಅವರು ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಬೋಧನೆ, ಸಂಶೋಧನೆ, ಶೈಕ್ಷಣಿಕ ನಾಯಕತ್ವ ಹಾಗೂ ಅಂತಾರಾಷ್ಟ್ರೀಯ ಸಹಯೋಗ ಸೇರಿದಂತೆ 29 ವರ್ಷಗಳಿಗೂ ಅಧಿಕ ಅನುಭವ ಹೊಂದಿದ್ದಾರೆ. 2024ರ ಅಕ್ಟೋಬರ್‌ನಿಂದ ಜೈಪುರದ ಮಣಿಪಾಲ ಕ್ಯಾಂಪಸ್‌ನ ಸಹ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಎಂಐಟಿಯ ಡೇಟಾ ಸೈನ್ಸ್ ಮತ್ತು ಕಂಪ್ಯೂಟರ್ ಅಪ್ಲಿಕೇಶನ್…

Read More

ಮಂಗಳೂರಿನಲ್ಲಿ ‘ಭಾವಸಂಗಮ’ ಜಿಲ್ಲಾ ಮಟ್ಟದ ಗಾಯನ ಸ್ಪರ್ಧೆ: ಜುಲೈ 18, 19 ಹಾಗೂ 26ರಂದು ಆಯೋಜನೆ

ಮಂಗಳೂರು, ಜು.3: ಕಲಾಮೃತ ಮಂಗಳೂರು ಹಾಗೂ ನಮ್ಮ ಕುಡ್ಲ ಸಂಸ್ಥೆಗಳು, ಶಾರದಾ ವಿದ್ಯಾಲಯ ಮಂಗಳೂರು ಸಹಯೋಗದೊಂದಿಗೆ “ಭಾವಸಂಗಮ” ಜಿಲ್ಲಾ ಮಟ್ಟದ ಭಕ್ತಿಗೀತೆ, ಭಾವಗೀತೆ ಹಾಗೂ ದೇಶಭಕ್ತಿ ಗೀತೆಗಳ ವೈಯಕ್ತಿಕ ಗಾಯನ ಸ್ಪರ್ಧೆಯನ್ನು ಜುಲೈ 18, 19 ಹಾಗೂ 26ರಂದು ಮಂಗಳೂರಿನಲ್ಲಿ ಆಯೋಜಿಸಿವೆ ಎಂದು ಕಲಾಮೃತ ಸದಸ್ಯ ಗಣೇಶ್ ಸೋಮಯಾಜಿ ತಿಳಿಸಿದ್ದಾರೆ. ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸ್ಪರ್ಧೆಯ ಪ್ರಥಮ ಹಂತ ಜುಲೈ 18 ಮತ್ತು 19ರಂದು ನವರತ್ನ ಪ್ಯಾಲೇಸ್‌ನಲ್ಲಿ ನಡೆಯಲಿದ್ದು, ದ್ವಿತೀಯ ಹಂತದ ಸೆಮಿಫೈನಲ್ ಹಾಗೂ…

Read More

ಜನಪ್ರಿಯ ವೈದ್ಯರೂ, ಪ್ರಸಿದ್ಧ ಸಾಹಿತಿಯೂ ಆಗಿರುವ ಡಾ. ಸುರೇಶ್ ನೆಗಳಗುಳಿ ಇವರು “ನಾಡೋಜ ಡಾ. ಕಯ್ಯಾರ ಸದ್ಭಾವನಾ ರಾಷ್ಟ್ರೀಯ ಪ್ರಶಸ್ತಿ -2026″ಕ್ಕೆ ಆಯ್ಕೆ.

ಕಾಸರಗೋಡು : ಡಾ ವಾಮನ್ ರಾವ್ ಬೇಕಲ್ -ಸಂದ್ಯಾ ರಾಣಿ ಟೀಚರ್ ಸಾರತ್ಯದ, ಕಾಸರಗೋಡು ನುಳ್ಳಿಪ್ಪಾಡಿಯ ಕನ್ನಡ ಭವನ ಮತ್ತು ಗ್ರಂಥಾಲಯ, ಕನ್ನಡ ಭವನ ಪ್ರಕಾಶನ, ಹಾಗೂ ವಾಮನ್ ರಾವ್ ಬೇಕಲ್ ಸ್ಥಾಪಿತ ಕೇರಳ ರಾಜ್ಯ -ಕನ್ನಡ ಚುಟುಕು ಸಾಹಿತ್ಯ ಪರಿಷತ್ತು ಸಂಯುಕ್ತ ಆಶ್ರಯದಲ್ಲಿ ಜೂಲೈ 26.ಭಾನುವಾರ ನಡೆಯಲಿರುವ “ಕರ್ನಾಟಕ ಗಡಿನಾಡು ಕನ್ನಡ ಸಮ್ಮೇಳನ “ದಲ್ಲಿ ಅಪ್ರತಿಮ ಮುಕ್ತಕ ಕವಿ, ಸಾಹಿತಿ, ಹಿರಿಯ ಜನಪ್ರಿಯ ವೈದ್ಯರೂ ಆಗಿರುವ ಡಾ. ಸುರೇಶ್ ನೆಗಳಗುಳಿ ಇವರಿಗೆ ಸಮ್ಮೇಳನದಲ್ಲಿ “ನಾಡೋಜ ಡಾ….

Read More

ಭಾರೀ ಮಳೆಗೆ ಕುಸಿದ ಮನೆ: ಬಿಜೆಪಿ ನಾಯಕರ ಭೇಟಿ

ಕಾಸರಗೋಡು: ಬುಧವಾರ ಸುರಿದ ಭಾರೀ ಮಳೆಗೆ ಮಂಗಲ್ಪಾಡಿ ಪಂಚಾಯತ್‌ನ ಶಿರಿಯಾ ವಾರ್ಡ್ ನಿವಾಸಿ ತಿರುಮಲೇಶ್ ಎಂಬುವವರ ಮನೆ ಕುಸಿದಿದ್ದು, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನಿಲ್, ಜಿಲ್ಲಾ ಉಪಾಧ್ಯಕ್ಷ ರಮೇಶ್, ಕುಂಬಳೆ ಮಂಡಲ ಪ್ರಧಾನ ಕಾರ್ಯದರ್ಶಿ ವಸಂತಕುಮಾರ್, ಮಂಗಲ್ಪಾಡಿ ಪಂಚಾಯತ್ ಕಾರ್ಯದರ್ಶಿ ಕಿಶೋರ್ ಕುಮಾರ್, ವಿನು ಮತ್ತು ಭರತ್ ಸೇರಿದಂತೆ ಪ್ರಮುಖ ಬಿಜೆಪಿ ನಾಯಕರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬುಧವಾರ ಮಧ್ಯಾಹ್ನದ ವೇಳೆಗೆ ಹಂಚಿನ ಮನೆಯ ಮೇಲ್ಛಾವಣಿಯು ಭಾರಿ ಸದ್ದಿನೊಂದಿಗೆ ಕುಸಿದು ಬಿದ್ದಿದೆ. ವಯೋಸಹಜ…

Read More

75 ದಿನ ಕಳೆದರೂ ಪತ್ತೆಯಾಗದ ಬೆಂಗಳೂರು ವಿದ್ಯಾರ್ಥಿನಿಯರು: CIDಗೆ ತನಿಖೆ ವರ್ಗಾವಣೆ

ಬೆಂಗಳೂರು, ಜುಲೈ 3: ವಿದ್ಯಾರಣ್ಯಪುರದ ಪಿಯುಸಿ ವಿದ್ಯಾರ್ಥಿನಿಯರಾದ ತನಿಷ್ಕಾ ಮತ್ತು ತೇಜಸ್ವಿನಿ ನಾಪತ್ತೆಯಾಗಿ 75 ದಿನಗಳಾದರೂ ಅವರ ಸುಳಿವು ಇನ್ನೂ ಲಭ್ಯವಾಗಿಲ್ಲ. ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಥಳೀಯ ಪೊಲೀಸರು ಆರಂಭದಿಂದಲೇ ವಿವಿಧ ಆಯಾಮಗಳಲ್ಲಿ ತನಿಖೆ ನಡೆಸಿದ್ದರೂ ಮಹತ್ವದ ಸುಳಿವು ಸಿಕ್ಕಿರಲಿಲ್ಲ. ಪ್ರಕರಣದ ಗಂಭೀರತೆಯನ್ನು ಪರಿಗಣಿಸಿದ ಕರ್ನಾಟಕ ಸರ್ಕಾರ ತನಿಖೆಯನ್ನು ಅಪರಾಧ ತನಿಖಾ ಇಲಾಖೆ (CID)ಗೆ ವರ್ಗಾಯಿಸಿದೆ. ವಿದ್ಯಾರ್ಥಿನಿಯರ ಪೋಷಕರು ಕೂಡ ಶೀಘ್ರ ಪತ್ತೆಗಾಗಿ ಸಂಬಂಧಿತ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದು, ಪ್ರಕರಣದ ಕುರಿತು ಸಾರ್ವಜನಿಕರಲ್ಲಿಯೂ ಆತಂಕ ವ್ಯಕ್ತವಾಗಿದೆ. CID ಅಧಿಕಾರಿಗಳು…

Read More

ಸಕ್ರಿಯ ರಾಜಕಾರಣಕ್ಕೆ ಮಾಜಿ ತಾಲೂಕು ಪಂಚಾಯತ್ ಉಪಾಧ್ಯಕ್ಷ ಪ್ರಕಾಶ್ ಶೆಟ್ಟಿ ಅಸೈಗೋಳಿ ಮರಳಿಕೆ; ಜೆಡಿಎಸ್‌ಗೆ ಮತ್ತಷ್ಟು ಬಲ

ಮಂಗಳೂರು, ಜುಲೈ 2: ಸಾಮಾಜಿಕ, ಶೈಕ್ಷಣಿಕ ಹಾಗೂ ರಾಜಕೀಯ ಕ್ಷೇತ್ರಗಳಲ್ಲಿ ಸಕ್ರಿಯವಾಗಿ ಗುರುತಿಸಿಕೊಂಡಿರುವ ಮಾಜಿ ತಾಲೂಕು ಪಂಚಾಯತ್ ಉಪಾಧ್ಯಕ್ಷ ಪ್ರಕಾಶ್ ಶೆಟ್ಟಿ ಅಸೈಗೋಳಿ ಅವರು ಮತ್ತೆ ಸಕ್ರಿಯ ರಾಜಕಾರಣಕ್ಕೆ ಮರಳಿದ್ದು, ಜನತಾದಳ (ಜಾತ್ಯತೀತ) ಪಕ್ಷಕ್ಕೆ ಅಧಿಕೃತವಾಗಿ ಸೇರ್ಪಡೆಗೊಂಡಿದ್ದಾರೆ. ಜಿಲ್ಲಾ ಅಧ್ಯಕ್ಷರಾದ ಜಾಕೆ ಮಾಧವ ಗೌಡ ಅವರ ನಿರ್ದೇಶನದಂತೆ ಗುರುವಾರ ನಡೆದ ಕಾರ್ಯಕ್ರಮದಲ್ಲಿ ಜೆಡಿಎಸ್ ರಾಜ್ಯ ಮೀನುಗಾರರ ಘಟಕದ ಅಧ್ಯಕ್ಷ ರತ್ನಾಕರ ಸುವರ್ಣ, ಜಿಲ್ಲಾ ಕಾರ್ಯಾಧ್ಯಕ್ಷರಾದ ಇಕ್ಬಾಲ್ ಅಹಮ್ಮದ್ ಮುಲ್ಕಿ ಹಾಗೂ ವಸಂತ್ ಪೂಜಾರಿ ಅವರ ಉಪಸ್ಥಿತಿಯಲ್ಲಿ ಜಿಲ್ಲಾ…

Read More

ಭಾರತಕ್ಕೆ 10 ಟ್ರಿಲಿಯನ್ ಯೆನ್ ಹೂಡಿಕೆ ಗುರಿ: ಭಾರತ-ಜಪಾನ್ ನಡುವೆ ಮಹತ್ವದ ಒಪ್ಪಂದಗಳು

ಹೊಸದಿಲ್ಲಿ: ಭಾರತ-ಜಪಾನ್ ಶೃಂಗಸಭೆಯ ಬಳಿಕ ನಡೆದ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಪ್ರಧಾನಿ ನರೇಂದ್ರ ಮೋದಿ, ಮುಂದಿನ ಹತ್ತು ವರ್ಷಗಳಲ್ಲಿ ಜಪಾನ್‌ನಿಂದ ಭಾರತಕ್ಕೆ 10 ಟ್ರಿಲಿಯನ್ ಯೆನ್ ಹೂಡಿಕೆಯನ್ನು ಆಕರ್ಷಿಸುವುದು ಹಾಗೂ ಭಾರತದಲ್ಲಿರುವ ಜಪಾನಿನ ಕಂಪನಿಗಳ ಸಂಖ್ಯೆಯನ್ನು ದ್ವಿಗುಣಗೊಳಿಸುವ ಗುರಿ ಹೊಂದಿರುವುದಾಗಿ ಘೋಷಿಸಿದರು. ಜಪಾನ್ ಪ್ರಧಾನಿ ಸನೆ ತಕೈಚಿ ಅವರ ಭಾರತ ಭೇಟಿಯು ಉಭಯ ರಾಷ್ಟ್ರಗಳ ವಿಶೇಷ ಕಾರ್ಯತಂತ್ರದ ಮತ್ತು ಜಾಗತಿಕ ಪಾಲುದಾರಿಕೆಯಲ್ಲಿ ಹೊಸ ಅಧ್ಯಾಯಕ್ಕೆ ನಾಂದಿ ಹಾಡಿದೆ ಎಂದು ಮೋದಿ ಹೇಳಿದರು. ಇದೇ ವೇಳೆ, ಭಾರತ ಮತ್ತು ಜಪಾನ್…

Read More
error: Content is protected !!