ಉಪ್ಪಳದಲ್ಲಿ 132ನೇ ಉಚಿತ ಫುಟ್ ಫಾಲ್ಸ್ ಥೆರಪಿ ಶಿಬಿರ: ಜುಲೈ 16ರವರೆಗೆ ಸಾರ್ವಜನಿಕರಿಗೆ ಅವಕಾಶ

ಉಪ್ಪಳ, ಜು.3: ಶ್ರೀ ಅಯ್ಯಪ್ಪ ಸೇವಾ ಸಮಿತಿ, ಅಯ್ಯಪ್ಪ ಮಂದಿರ ಉಪ್ಪಳ ಹಾಗೂ ಕಂಪಾನಿಯೋ ನೆಮ್ಮದಿ ವೆಲ್‌ನೆಸ್ ಸೆಂಟರ್, ಪುತ್ತೂರು ಇವರ ಜಂಟಿ ಆಶ್ರಯದಲ್ಲಿ 132ನೇ ಉಚಿತ ಫುಟ್ ಫಾಲ್ಸ್ ಥೆರಪಿ ಶಿಬಿರವನ್ನು ಜುಲೈ 2ರಿಂದ 16ರವರೆಗೆ ಉಪ್ಪಳದ ಅಯ್ಯಪ್ಪ ಮಂದಿರದ ಸಭಾಂಗಣದಲ್ಲಿ ಆಯೋಜಿಸಲಾಗಿದೆ.

ಪ್ರತಿದಿನ ಬೆಳಿಗ್ಗೆ 10 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ನಡೆಯುವ ಈ ಶಿಬಿರದಲ್ಲಿ ಸಾರ್ವಜನಿಕರು ಉಚಿತವಾಗಿ ಭಾಗವಹಿಸಿ ಥೆರಪಿಯ ಪ್ರಯೋಜನ ಪಡೆಯಬಹುದಾಗಿದೆ.

ಶಿಬಿರವನ್ನು ಶ್ರೀ ಅಯ್ಯಪ್ಪ ಸೇವಾ ಸಮಿತಿ ಅಯ್ಯಪ್ಪ ಮಂದಿರ ಉಪ್ಪಳದ ಅಧ್ಯಕ್ಷ ಶ್ರೀ ಕೆ. ಸತೀಶ್ಚಂದ್ರ ಶೆಟ್ಟಿ ಉದ್ಘಾಟಿಸಲಿದ್ದಾರೆ. ನೆಮ್ಮದಿ ವೆಲ್‌ನೆಸ್ ಸೆಂಟರ್, ಪುತ್ತೂರಿನ ಮಾಲಕರಾದ ಕೆ. ಪ್ರಭಾಕರ ಸಾಲ್ಯಾನ್ ಬಾಕಿಲಗುತ್ತು ಅವರು ಥೆರಪಿ ಕುರಿತು ಮಾಹಿತಿ ನೀಡಲಿದ್ದಾರೆ.

ಕಾರ್ಯಕ್ರಮದಲ್ಲಿ ಶ್ರೀ ಅಯ್ಯಪ್ಪ ಸೇವಾ ಸಮಿತಿ ಉಪ್ಪಳದ ಗೌರವಾಧ್ಯಕ್ಷ ಶ್ರೀ ಯು. ಎಂ. ಭಾಸ್ಕರ ಹಾಗೂ ಪ್ರಧಾನ ಕಾರ್ಯದರ್ಶಿ ಶ್ರೀ ಶಿವಾನಂದ ಯು. ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

, ಈ ಥೆರಪಿಯ ಮೂಲಕ ಈಗಾಗಲೇ ಮಧುಮೇಹ (ಶುಗರ್), ಗ್ಯಾಸ್ಟ್ರಿಕ್, ಥೈರಾಯ್ಡ್ ಸಮಸ್ಯೆ, ವೆರಿಕೋಸ್ ವೇನ್ಸ್, ಮಂಡಿನೋವು, ಕಾಲುನೋವು, ಸೊಂಟನೋವು, ಸರ್ವಿಕಲ್ ಸ್ಪಾಂಡಿಲೈಟಿಸ್, ಅಸ್ತಮಾ, ಕಣ್ಣು ಹಾಗೂ ಕಿವಿ ಸಂಬಂಧಿತ ತೊಂದರೆಗಳು, ಸೊರಿಯಾಸಿಸ್ ಸೇರಿದಂತೆ ಚರ್ಮದ ಸಮಸ್ಯೆಗಳು, ತೂಕ ಇಳಿಕೆ, ಅರ್ಧತಲೆನೋವು, ಪಾದದಲ್ಲಿ ಉರಿ ಮತ್ತು ನೋವು, ಕಾಲು ಹಾಗೂ ಮೈ ಜೋಮು, ಕಾಲು ಮತ್ತು ಮೈ ಬಾವು, ಆನೆಕಾಲು ರೋಗ, ನಿದ್ರಾಹೀನತೆ, ಸಯಾಟಿಕಾ, ಪಾರ್ಶ್ವವಾಯು (ಸ್ಟ್ರೋಕ್) ನಂತರದ ಪುನರ್ವಸತಿ, ದೇಹದ ಸಮತೋಲನ ಸಮಸ್ಯೆ, ಮಹಿಳೆಯರ ಮಾಸಿಕ ಸಮಸ್ಯೆಗಳು, ಸುಟ್ಟ ಗಾಯದ ಕಲೆಗಳು, ಆರ್ಥ್ರೈಟಿಸ್, ಕೀಲುನೋವು ಹಾಗೂ ರಕ್ತಹೀನತೆ (ಅನಿಮಿಯಾ) ಸೇರಿದಂತೆ ವಿವಿಧ ಆರೋಗ್ಯ ಸಮಸ್ಯೆಗಳಿಂದ ಹಲವರು ಪರಿಹಾರ ಪಡೆದಿರುವುದಾಗಿ ತಿಳಿಸಲಾಗಿದೆ.

ಈ ಶಿಬಿರವು ಸಾರ್ವಜನಿಕರಿಗೆ ಉಚಿತವಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಆರೋಗ್ಯದ ಪ್ರಯೋಜನ ಪಡೆಯುವಂತೆ ಆಯೋಜಕರು ಮನವಿ ಮಾಡಿದ್ದಾರೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!