ಗೃಹಲಕ್ಷ್ಮಿ ಯೋಜನೆಯಿಂದ ಲಕ್ಷಾಂತರ ಮಹಿಳೆಯರನ್ನು ಹೊರಹಾಕುವ ಹುನ್ನಾರ: ವೇದವ್ಯಾಸ ಕಾಮತ್ ಆರೋಪ

ಅಧಿಕಾರಕ್ಕೆ ಬಂದರೆ ರಾಜ್ಯದ ಪ್ರತೀ ಮನೆಯ ಯಜಮಾನಿಗೆ ಯಾವುದೇ ಷರತ್ತಿಲ್ಲದೇ ಎರಡು ಸಾವಿರ ರೂಪಾಯಿ ನೀಡುತ್ತೇವೆ ಎಂದು ಭರವಸೆ ನೀಡಿದ್ದ ಕಾಂಗ್ರೆಸ್ ಸರ್ಕಾರ, ಇದೀಗ ನಾನಾ ಕಾರಣಗಳನ್ನು ನೀಡಿ ಒಂದೂವರೆ ಲಕ್ಷಕ್ಕೂ ಅಧಿಕ ಫಲಾನುಭವಿಗಳನ್ನು ಯೋಜನೆಯಿಂದ ಹೊರ ಹಾಕಲು ಹುನ್ನಾರ ನಡೆಸಿರುವುದು ಖಂಡನೀಯ ಎಂದು ಶಾಸಕ ವೇದವ್ಯಾಸ ಕಾಮತ್ ರವರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಸ್ಪಷ್ಟ ಮಾರ್ಗಸೂಚಿ, ಸಮರ್ಪಕ ಯೋಜನೆ, ಪಾರದರ್ಶಕ ವ್ಯವಸ್ಥೆಯಿಲ್ಲದೇ ಬೇಕಾಬಿಟ್ಟಿಯಾಗಿ ಯೋಜನೆ ಜಾರಿಗೆ ತಂದ ಪರಿಣಾಮ ರಾಜ್ಯದ ಪ್ರತಿಯೊಬ್ಬ ತೆರಿಗೆದಾರರ ಶ್ರಮದ ಹಣಕ್ಕೆ…

Read More

ಎಂಸಿಸಿ ಬ್ಯಾಂಕ್‌ನಲ್ಲಿ ವಾರ್ಷಿಕ ಕಾರ್ಯಕ್ಷಮತೆ ಪರಿಶೀಲನೆ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭ – 2026

ಎಂಸಿಸಿ ಬ್ಯಾಂಕ್‌ನ 2025–26ನೇ ಹಣಕಾಸು ವರ್ಷದ ವಾರ್ಷಿಕ ಕಾರ್ಯಕ್ಷಮತೆ ಪರಿಶೀಲನೆ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭವು 2026ರ ಜೂನ್ 13ರಂದು ಮಂಗಳೂರು ಆಡಳಿತ ಕಚೇರಿಯ ಪಿ.ಎಫ್.ಎಕ್ಸ್. ಸಾಲ್ದಾನ್ಹಾ ಸ್ಮಾರಕ ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮವನ್ನು ಮಂಗಳೂರು ಧರ್ಮಪ್ರಾಂತ್ಯದ ಎಸ್ಟೇಟ್ ಮ್ಯಾನೇಜರ್‌ಗಳಾದ ವಂ. ಫಾ. ಮ್ಯಾಕ್ಸಿಂ ರೊಸಾರಿಯೊ ಅವರು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು. ತಮ್ಮ ಉದ್ಘಾಟನಾ ಭಾಷಣದಲ್ಲಿ ಅವರು ಎಂಸಿಸಿ ಬ್ಯಾಂಕ್ ಅನ್ನು ಕ್ಯಾಥೋಲಿಕ್ ಸಮುದಾಯದ ಹೆಮ್ಮೆ ಮತ್ತು ಅಮೂಲ್ಯ ರತ್ನವೆಂದು ಬಣ್ಣಿಸಿ, ಬ್ಯಾಂಕ್ ವರ್ಷದಿಂದ ವರ್ಷಕ್ಕೆ ಸಾಧಿಸಿರುವ…

Read More

ಸರಕಾರಿ ಆಸ್ಪತ್ರೆಗಳ ಖಾಸಗೀಕರಣ ಕೈ ಬಿಡದಿದ್ದಲ್ಲಿ ಹೋರಾಟ ತೀವ್ರಗೊಳ್ಳಲಿದೆ : ವಸಂತ ಆಚಾರಿ ಎಚ್ಚರಿಕೆ

ಮೂಡಬಿದಿರೆ ಸಮುದಾಯ ಆಸ್ಪತ್ರೆಯನ್ನು ಖಾಸಗಿ ಮೆಡಿಕಲ್ ಕಾಲೇಜಿಗೆ ಹಸ್ತಾಂತರಿಸುವ ಆದೇಶ ರದ್ದುಗೊಳಿಸಬೇಕು ಮೂಡಬಿದಿರೆಗೆ ಪೂರ್ಣಪ್ರಮಾಣದ ತಾಲೂಕು ಆಸ್ಪತ್ರೆ ಮಂಜೂರು ಮಾಡಬೇಕು, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಿದ್ವಾಯಿ ಕ್ಯಾನ್ಸರ್ ಆಸ್ಪತ್ರೆ, ಜಯದೇವ ಹೃದಯದ ಆಸ್ಪತ್ರೆಯ ಘಟಕ ಸ್ಥಾಪಿಸಬೇಕು ಎಂಬ ಬೇಡಿಕೆಯನ್ನು ಮುಂದಿಟ್ಟು ಮೂಡಬಿದಿರೆ ಸಮುದಾಯ ಆಸ್ಪತ್ರೆ ಮುಂಭಾಗ ಸಿಪಿಐಎಂ ಮೂಡಬಿದಿರೆ ವಲಯ ಸಮಿತಿ ಮುಂಭಾಗ “ಮಾನವ ಸರಪಳಿ” ಕಾರ್ಯಕ್ರಮ ನಡೆಯಿತು. ಮಾನವ ಸರಪಳಿಯ ತರುವಾಯ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಸಿಪಿಐಎಂ ದ.ಕ. ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯ ವಸಂತ…

Read More

ಬೇಕಲ ಕಡಲತೀರದಲ್ಲಿ ಇಬ್ಬರು ವಿದ್ಯಾರ್ಥಿಗಳು ಸಮುದ್ರಪಾಲು

​ಕಾಸರಗೋಡು: ಬೇಕಲ ಕೋಟೆ ಸಮೀಪದ ಪಳ್ಳಿಕರೆ ಬೀಚ್‌ನಲ್ಲಿ ಭಾನುವಾರ ಸಂಜೆ ನಡೆದ ದುರ್ಘಟನೆಯಲ್ಲಿ ಇಬ್ಬರು ವಿದ್ಯಾರ್ಥಿಗಳು ಸಮುದ್ರಪಾಲಾಗಿದ್ದಾರೆ. ಕೊಟ್ಟಾಯಂ ಚಂಗನಾಶೇರಿಯ ನಿವಾಸಿಗಳಾದ ಅಂಗಿತ್ (20) ಮತ್ತು ಅಪ್ಪು ಟಿ. ಎಬ್ರಹಾಂ (20) ಕಾಣೆಯಾದ ವಿದ್ಯಾರ್ಥಿಗಳು. ​ಘಟನೆ ನಡೆದಾಗ ನಾಲ್ವರು ವಿದ್ಯಾರ್ಥಿಗಳ ತಂಡ ಸಮುದ್ರದಲ್ಲಿ ಈಜಲು ಇಳಿದಿತ್ತು. ಈ ವೇಳೆ ಬಲವಾದ ಅಲೆಗಳಿಗೆ ಸಿಲುಕಿ ಇಬ್ಬರು ವಿದ್ಯಾರ್ಥಿಗಳು ನಾಪತ್ತೆಯಾಗಿದ್ದು, ಉಳಿದ ಇಬ್ಬರು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸಂಜೆ ಸುಮಾರು 6:30ರ ಸುಮಾರಿಗೆ ಈ ದುರಂತ ಸಂಭವಿಸಿದೆ. ವಿಷಯ ತಿಳಿದ…

Read More

ನಾಪತ್ತೆಯಾದ ಕುಂಜತ್ತೂರಿನ ಇಬ್ಬರು ಬಾಲಕರು ಬೆಂಗಳೂರು ರೈಲ್ವೇ ನಿಲ್ದಾಣದಲ್ಲಿ ಸುರಕ್ಷಿತವಾಗಿ ಪತ್ತೆ

​ಮಂಜೇಶ್ವರ: ಶನಿವಾರ ಸಂಜೆಯಿಂದ ನಾಪತ್ತೆಯಾಗಿದ್ದ ಕುಂಜತ್ತೂರಿನ ಇಬ್ಬರು ಬಾಲಕರು ಬೆಂಗಳೂರು ರೈಲ್ವೇ ನಿಲ್ದಾಣದಲ್ಲಿ ಸುರಕ್ಷಿತವಾಗಿ ಪತ್ತೆಯಾಗಿದ್ದಾರೆ. ​ಕುಂಜತ್ತೂರು ಸ್ವಾಗತ್ ಹೋಟೆಲ್ ಸಮೀಪದ ನಿವಾಸಿಗಳಾದ ಇಬ್ರಾಹಿಂ ಅಶ್ರಫ್ ಅವರ ಪುತ್ರ ಯಾಸೀನ್ (13) ಮತ್ತು ಅಮೀರ್ ಅವರ ಪುತ್ರ ಸುಲ್ತಾನ್ (14) ನಾಪತ್ತೆಯಾಗಿದ್ದ ಬಾಲಕರು. ಶನಿವಾರ ಸಂಜೆ 5 ಗಂಟೆಯ ಬಳಿಕ ಇವರು ನಾಪತ್ತೆಯಾಗಿದ್ದರು. ​​ಬಾಲಕರು ನಾಪತ್ತೆಯಾದ ಬಗ್ಗೆ ಮಂಜೇಶ್ವರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ತಕ್ಷಣವೇ ಕಾರ್ಯಪ್ರವೃತ್ತರಾದ ಪೊಲೀಸರು, ಸ್ಥಳೀಯರು ಮತ್ತು ಸಂಬಂಧಿಕರು ಜಂಟಿ ಕಾರ್ಯಾಚರಣೆ ನಡೆಸಿದರು….

Read More

ಮಹಾರಾಜ ಟ್ರೋಫಿಗೆ ಕೋಸ್ಟಲ್ ಕಿಂಗ್ಸ್ ಸಜ್ಜು: ಕರುಣ್ ನಾಯರ್ ನಾಯಕ, ಶ್ರೇಯಸ್ ಗೋಪಾಲ್ ಉಪನಾಯಕ

ಮಂಗಳೂರು, ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್‌ಸಿಎ) ಆಶ್ರಯದಲ್ಲಿ ನಡೆಯಲಿರುವ ಮಹಾರಾಜ ಟ್ರೋಫಿ ಟಿ20 ಲೀಗ್‌ಗಾಗಿ ಕೋಸ್ಟಲ್ ಕಿಂಗ್ಸ್ ಮಂಗಳೂರು ತಂಡದ ನಾಯಕನಾಗಿ ಭಾರತ ಕ್ರಿಕೆಟಿಗ ಕರುಣ್ ನಾಯರ್ ಹಾಗೂ ಉಪನಾಯಕನಾಗಿ ಶ್ರೇಯಸ್ ಗೋಪಾಲ್ ಅವರನ್ನು ಆಯ್ಕೆ ಮಾಡಲಾಗಿದೆ. ನಗರದ ಖಾಸಗಿ ಹೋಟೆಲ್ ನಲ್ಲಿ ಭಾನುವಾರ ನಡೆದ ಕೋಸ್ಟಲ್ ಕಿಂಗ್ಸ್ ಮಂಗಳೂರು ತಂಡದ ಜರ್ಸಿ ಅನಾವರಣ ಹಾಗೂ ತಂಡದ ಆಂಥಮ್ ಬಿಡುಗಡೆ ಕಾರ್ಯಕ್ರಮದಲ್ಲಿ ನಾಯಕ ಮತ್ತು ಉಪನಾಯಕರ ಹೆಸರನ್ನು ಅಧಿಕೃತವಾಗಿ ಘೋಷಿಸಲಾಯಿತು. ಈ ಬಾರಿಯ ಆಟಗಾರರ ಹರಾಜಿನಲ್ಲಿ…

Read More

ಕುಂದಾಪುರ : ಕಾಲು ಜರಿ ನೀರಿಗೆ ಬಿದ್ದು ಯುವಕನ ದಾರುಣ ಸಾವು

ಕುಂದಾಪುರ ತಾಲೂಕಿನ ಬೇಳೂರು ಗ್ರಾಮದಲ್ಲಿ ಕಾಲು ಜಾರಿ ನೀರಿಗೆ ಬಿದ್ದು ಸಾವಣ್ಣಪ್ಪಿದ್ದ ಸಾಮರಾಜ್ (21)ಗೆ ಸಂತಾಪ ಸೂಚಿಸಿದ ಭೋವಿ ಯುವ ಮುಖಂಡ ಪವನ್ ಕುಮಾರ್ ಶಿರ್ವ ಕುಂದಾಪುರ ತಾಲೂಕಿನ ಬೇಳೂರು ಗ್ರಾಮದ ಸುಳಿಗುಂಡಿ ಹೀರೆಹೊಳೆಗೆ ಈಜಲು ತೆರಳಿದ್ದ ಕಾಲೇಜು ವಿದ್ಯಾರ್ಥಿ ಸಾಮರಾಜ್ (21) ಅವರು ನೀರಿನಲ್ಲಿ ಜಾರಿ ಬಿದ್ದು ಸಾವು ಸಂಭಾವಿಸಿದೆ.. ಸಾಮರಾಜ್ ಭೋವಿ ಸಮಾಜದ ಹುಡುಗ ಅವರು ನಾಗರಾಜ್ ಮತ್ತು ಶಿವಾಗಾಮಿ ಅವರ ಪುತ್ರ ನಾಗಿರುತ್ತಾರೆ.. ಸಾಮರಾಜ್ ಅವರು ಸ್ಥಳೀಯ ECR ಕಾಲೇಜಿನಲ್ಲಿ ಅಂತಿಮ ವರ್ಷದ…

Read More

ವಿಶ್ವ ರಾಮಕ್ಷತ್ರಿಯ ಮಹಾಸಂಘ ಪದಾಧಿಕಾರಿಗಳಿಗೆ “ಭಿಕ್ಷು ಸದ್ಭಾವನಾ ರಾಷ್ಟ್ರೀಯ ಪ್ರಶಸ್ತಿ “

ಕುಂದಾಪುರ : ಡಾ. ವಾಮನ್ ರಾವ್ ಬೇಕಲ್ -ಸಂದ್ಯಾರಾಣಿ ಟೀಚರ್ ಸಾರತ್ಯದ ಕಾಸರಗೋಡು ಕನ್ನಡ ಭವನ, ಕನ್ನಡ ಭವನ ಪ್ರಕಾಶನ ಸಮೂಹ ಸಂಸ್ಥೆಗಳು ರಾಮಕ್ಷತ್ರಿಯ ಸಮಾಜದ ಸಮಾಜ ಸೇವಾ ನಿರತ ಗಣ್ಯರೀಗೆ ನೀಡುತ್ತಿರುವ ಗೌರವಾನ್ವಿತ ಪ್ರಶಸ್ತಿಯಾದ “ಶ್ರೀ ಶ್ರೀ ಭಿಕ್ಷು ಡಾ. ಲಕ್ಷ್ಮಣಾನಂದ ಸ್ವಾಮೀಜಿ ಸದ್ಭಾವನಾ ರಾಷ್ಟ್ರೀಯ ಪ್ರಶಸ್ತಿ “2026.ನ್ನು ಸಾಮುದಾಯಿಕ, ಹಾಗೂ ಸಮಾಜಸೇವೆಯಲ್ಲಿ ತನ್ನನ್ನು ತೊಡಗಿಸಿಕೊಂಡಿರುವ ಸನ್ಮಾನ್ಯ, ವಿಶ್ವ ರಾಮಕ್ಷತ್ರಿಯ ಮಹಾಸಂಘದ ಅಧ್ಯಕ್ಷರಾದ ಶ್ರೀ ಎಚ್ ಆರ್ ಶಶಿಧರ್ ನಾಯ್ಕ್, ಉದ್ಯಮಿ, ಧಾರ್ಮಿಕ ಮುಂದಾಳು ವಿ….

Read More

ಮನೆ ಕುಸಿತದಿಂದ ಸಂಕಷ್ಟಕ್ಕೆ ಸಿಲುಕಿದ ಮಹಿಳೆಗೆ ಕುಟುಂಬಕ್ಕೆ ಧೈರ್ಯ ತುಂಬಿದ ಇನಾಯತ್ ಅಲಿ

ಮಂಗಳೂರು: ಮನೆ ಕುಸಿತದಿಂದಾಗಿ ತೀವ್ರ ಸಂಕಷ್ಟಕ್ಕೆ ಸಿಲುಕಿರುವ ಆಕಾಶಭವನದ ಕಾಪಿಗುಡ್ಡೆ ನಿವಾಸಿ ಶ್ರೀಮತಿ ಭವಾನಿ ಅವರ ನಿವಾಸಕ್ಕೆ ಇಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಅಲಿ ಭೇಟಿ ನೀಡಿ ಕುಟುಂಬದ ಸದಸ್ಯರಿಗೆ ಧೈರ್ಯ ತುಂಬಿದರು. ಈ ವೇಳೆ ಭವಾನಿ ಅವರ ನೋವು, ಸಂಕಷ್ಟ ಹಾಗೂ ಎದುರಿಸುತ್ತಿರುವ ಸಮಸ್ಯೆಗಳನ್ನು ಆಲಿಸಿದ ಇನಾಯತ್ ಅಲಿ ಅವರು, ಮನೆ ಕುಸಿತದಿಂದ ಉಂಟಾಗಿರುವ ಪರಿಸ್ಥಿತಿಯ ಬಗ್ಗೆ ಕಳವಳ ವ್ಯಕ್ತಪಡಿಸಿದರು. ಒಂದು ಮನೆಯ ನಷ್ಟ ಎಂದರೆ ಕೇವಲ ಕಟ್ಟಡದ ನಷ್ಟವಲ್ಲ, ಅದು ಕುಟುಂಬದ ಭದ್ರತೆ,…

Read More

ಮ್ಯಾಜೇಶ್ವರ : ಇಬ್ಬರು ಬಾಲಕರ ನಾಪತ್ತೆ

ಮಂಜೇಶ್ವರ : ಕುಂಜತ್ತೂರಿನ ಇಬ್ಬರು ಬಾಲಕರು ನಿನ್ನೆ ಶನಿವಾರ 5 ಗಂಟೆಯ ಬಳಿಕ ನಾಪತ್ತೆಯಾಗಿರುವ ಬಗ್ಗೆ ಮಂಜೇಶ್ವರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ರಾಷ್ಟ್ರೀಯ ಹೆದ್ದಾರಿ ಕುಂಜತ್ತೂರು ಸ್ವಾಗತ್ ಹೋಟೆಲ್ ಪರಿಸರವಾಸಿಗಳಾದ ಇಬ್ರಾಹಿಂ ಅಶ್ರಫ್ ಎಂಬವರ ಪುತ್ರ ಯಾಸೀನ್ (13) ಹಾಗೂ ಅಮೀರ್ ಎಂಬವರ ಪುತ್ರ ಸುಲ್ತಾನ್ (14) ಎಂಬಿವರು ನಾಪತ್ತೆಯಾಗಿರುವುದಾಗಿ ದೂರು ದಾಖಲಾಗಿದೆ.ಈ ಚಿತ್ರದಲ್ಲಿರುವ ಬಾಲಕರು ಎಲ್ಲಿಯಾದರೂ ಪತ್ತೆಯಾದಲ್ಲಿ ಮಂಜೇಶ್ವರ ಪೊಲೀಸ್ ಠಾಣೆ ಅಥವಾ ಪೋಷಕರ 8921429442 – 9746149372 ಮೊಬೈಲ್ ಸಂಖ್ಯೆ ಸಂಪರ್ಕಿಸುವಂತೆ ಕೋರಲಾಗಿದೆ.

Read More
error: Content is protected !!