ಎಸ್‌ಐಆರ್ ನೋಟಿಸ್ ಹಿಂಪಡೆದ ಚುನಾವಣಾ ಆಯೋಗ: ಹರೇಕಳ ಹಾಜಬ್ಬರಿಗೆ ಬಿಗ್ ರಿಲೀಫ್

ಎಸ್‌ಐಆರ್ ಪ್ರಕ್ರಿಯೆಯ ವೇಳೆ ಹೆಸರು ತಾಳೆಯಾಗದ ಕಾರಣ ಪದ್ಮಶ್ರೀ ಪುರಸ್ಕೃತ ಹರೇಕಳ ಹಾಜಬ್ಬರಿಗೆ ನೋಟಿಸ್ ಜಾರಿಗೊಳಿಸಿದ್ದನ್ನು ಚುನಾವಣಾ ಆಯೋಗವು ವಾಪಸ್ ಪಡೆದಿದೆ. ಪದ್ಮಶ್ರೀ ಪುರಸ್ಕೃತ ಹರೇಕಳ ಹಾಜಬ್ಬರಿಗೆ ಸೂಕ್ತ ದಾಖಲೆಯೊಂದಿಗೆ ಸೆಪ್ಟೆಂಬರ್ 11ರಂದು ಹಾಜರಾಗಲು ಚುನಾವಣಾ ಆಯೋಗವು ನೋಟಿಸ್ ಜಾರಿಗೊಳಿಸಿದರ ಕುರಿತು ಮಾಧ್ಯಮಗಳಲ್ಲಿ ಸುದ್ದಿ ಪ್ರಸಾರ ಆಗುತ್ತಿದ್ದಂತೆ ಚುನಾವಣಾ ಆಯೋಗ ಎಚ್ಚೆತ್ತುಕೊಂಡಿದೆ.ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಹಾಜಬ್ಬರ ಮನೆಗೆ ಹೋಗಿ ಸದ್ಯ ನೋಟಿಸ್ ವಾಪಸ್ ಕೊಡಿ, ಪರಿಶೀಲಿಸಿ ಹೇಳುತ್ತೇವೆ ಎಂದು ನೋಟಿಸ್ ಪ್ರತಿ ಕೊಂಡು ಹೋಗಿದ್ದಾರೆ. ಅವರು ಮುಂದೇನು…

Read More

ಬಂಟ್ಸ್ ಹಾಸ್ಟೇಲ್‌ನಲ್ಲಿ ಸೆ.14ರಿಂದ 16ರವರೆಗೆ 20ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ

ಮಂಗಳೂರು: ಬಂಟರ ಯಾನೆ ನಾಡವರ ಮಾತೃಸಂಘ, ದಕ್ಷಿಣ ಕನ್ನಡ, ಉಡುಪಿ ಹಾಗೂ ಕಾಸರಗೋಡು ಜಿಲ್ಲೆಗಳ ಬಂಟರ ಸಂಘಗಳು, ಶ್ರೀ ಸಿದ್ಧಿವಿನಾಯಕ ಪ್ರತಿಷ್ಠಾನ ಹಾಗೂ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಆಶ್ರಯದಲ್ಲಿ 20ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ, ತೆನೆಹಬ್ಬ ಹಾಗೂ ಅಷ್ಟೋತ್ತರ ಸಹಸ್ರ ನಾರಿಕೇಳ ಮಹಾಗಣಯಾಗ ಸೆ.14ರಿಂದ 16ರವರೆಗೆ ನಗರದ ಬಂಟ್ಸ್ ಹಾಸ್ಟೇಲ್‌ನ ‘ಓಂಕಾರ ನಗರ’ದಲ್ಲಿ ನಡೆಯಲಿದೆ ಎಂದು ಶ್ರೀ ಸಿದ್ಧಿವಿನಾಯಕ ಪ್ರತಿಷ್ಠಾನದ ಮ್ಯಾನೇಜಿಂಗ್ ಟ್ರಸ್ಟಿ ಅಜಿತ್ ಕುಮಾರ್ ರೈ ಮಾಲಾಡಿ ತಿಳಿಸಿದರು. ಬಂಟ್ಸ್ ಹಾಸ್ಟೇಲ್ ಬಳಿಯ…

Read More

ಮೆರ್ಲದ ಸತ್ಯೋಲೆ ಸುಗಿಪು. ಭಕ್ತಿಗೀತೆ ನಾಳೆ ಬಿಡುಗಡೆ.

ಉಪ್ಪಳ. ಸರ್ವ ಶಕ್ತಿ ಸ್ವರೂಪಿಣಿ ತಾಯಿ ಕಾಳಿ ಚಾಮುಂಡಿ ದೈವದ ಕುರಿತಾದ ಭಕ್ತಿ ಪ್ರಧಾನವಾದ ಭಕ್ತಿ ಗೀತೆ ” ಮೆರ್ಲದ ಸತ್ಯೋಲೆ ಸುಗಿಪು” ಇದರ ಧ್ವನಿಸುರುಳಿಯ ವಿಡಿಯೋ ಬಿಡುಗಡೆ ನಾಳೆ ರಾತ್ರಿ 7:30 ಕ್ಕೆ ನಡೆಯಲಿದೆ. ಉಪ್ಪಳ ಮುಳಿಂಜ ಮಹಾನಗರದ ಮುಳಿಂಜ ಫ್ರೆಂಡ್ಸ್ ಕ್ಲಬ್ ನ 17 ನೆ ವಾರ್ಷಿಕೋತ್ಸವ ಹಾಗೂ ಮೊಸರು ಕುಡಿಕೆ ಉತ್ಸವದ ಸಮಾರಂಭದ ವೇದಿಕೆಯಲ್ಲಿ ವಿಡಿಯೋ ಲೋಕಾರ್ಪಣೆಯಾಗಲಿದೆ.ಶ್ರೀ ಅಭಿಷೇಕ್ ಹೊಸಂಗಡಿ ನಿರ್ಮಾಣಕ್ಕೆ ಶ್ರೀ ಸುರೇಶ್ ಕುಮಾರ್ ಮಂಗಲ್ಪಾಡಿ ಯವರ ಸಾಹಿತ್ಯಕ್ಕೆ ಬಹುಭಾಷಾ ಗಾಯಕರಾದ…

Read More

ಸೆ.11ರಂದು ಮಂಗಳೂರಿನಲ್ಲಿ ‘ಸೀರತ್ ಅಭಿಯಾನ’ ವಿಚಾರಗೋಷ್ಠಿ

ಮಂಗಳೂರು:ಜಮಾಅತೆ ಇಸ್ಲಾಮೀ ಹಿಂದ್ ಕರ್ನಾಟಕದ ವತಿಯಿಂದ ಪ್ರವಾದಿ ಮುಹಮ್ಮದ್ (ಸ) ಅವರ ಜನ್ಮದಿನದ ಅಂಗವಾಗಿ ಆ.26ರಿಂದ ರಾಜ್ಯಾದ್ಯಂತ ನಡೆಯುತ್ತಿರುವ ‘ಸೀರತ್ ಅಭಿಯಾನ’ದ ಪ್ರಯುಕ್ತ ಸೆ.11ರಂದು ಸಂಜೆ 7 ಗಂಟೆಗೆ ನಗರದ ಪುರಭವನದಲ್ಲಿ ಸಾರ್ವಜನಿಕ ವಿಚಾರಗೋಷ್ಠಿ ನಡೆಯಲಿದೆ. ‘ಪ್ರವಾದಿ ಮುಹಮ್ಮದ್ (ಸ): ವರ್ತಮಾನ ಭಾರತದ ಪೂರ್ವಗ್ರಹ ಮತ್ತು ವಾಸ್ತವ’ ಎಂಬ ಕೇಂದ್ರ ವಿಷಯದಲ್ಲಿ ವಿಚಾರಗೋಷ್ಠಿ ನಡೆಯಲಿದೆ ಎಂದು ಅಭಿಯಾನದ ಸಂಚಾಲಕ ಅಬ್ದುಲ್ ಗಫೂರ್ ಮಂಗಳೂರು ಪ್ರೆಸ್ ಕ್ಲಬ್‌ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು ‘ಕ್ರಾಂತಿಯ ಜ್ಯೋತಿ: ಪ್ರವಾದಿ ಮುಹಮ್ಮದ್ (ಸ.)’…

Read More

ಆರೋಗ್ಯ ಸಾಹಿತ್ಯದ ಮೂಲಕ ವೈಜ್ಞಾನಿಕ ಅರಿವು ಮೂಡಿಸಲು ಕರೆ

ಬೆಂಗಳೂರು: ಆರೋಗ್ಯದ ಕುರಿತು ವೈಜ್ಞಾನಿಕ ಅರಿವನ್ನು ಜನಸಾಮಾನ್ಯರಿಗೆ ಸರಳವಾಗಿ ತಲುಪಿಸುವಲ್ಲಿ ಸಾಹಿತ್ಯ ಪ್ರಮುಖ ಪಾತ್ರ ವಹಿಸುತ್ತದೆ ಎಂದು ವೈದ್ಯರು ಹಾಗೂ ಸಾಹಿತಿಗಳು ಅಭಿಪ್ರಾಯಪಟ್ಟರು. ಆರೋಗ್ಯ ಮತ್ತು ಸಾಹಿತ್ಯವನ್ನು ಒಂದೇ ವೇದಿಕೆಯಲ್ಲಿ ಬೆಸೆಯುವ ಉದ್ದೇಶದಿಂದ ಆಯೋಜಿಸಿದ್ದ ‘ವೈದ್ಯಲೋಕ ಆರೋಗ್ಯ ಕಥೆ ಮತ್ತು ಕವನ ಸ್ಪರ್ಧೆ–2026’ರ ಪ್ರಶಸ್ತಿ ಪ್ರದಾನ ಸಮಾರಂಭ ಬೆಂಗಳೂರಿನಲ್ಲಿ ನಡೆಯಿತು. ಇದೇ ಸಂದರ್ಭದಲ್ಲಿ ಕರ್ನಾಟಕ ಆರೋಗ್ಯ ಸಾಹಿತ್ಯ ಪರಿಷತ್ ಹಾಗೂ ಬೆಂಗಳೂರು ಹೆಲ್ತ್ ಫೌಂಡೇಶನ್‌ಗೆ ಚಾಲನೆ ನೀಡಲಾಯಿತು. ಮುಳಿಯ ಗೋಲ್ಡ್ ಅಂಡ್ ಡೈಮಂಡ್ಸ್‌ನ ವ್ಯವಸ್ಥಾಪಕ ಎನ್. ಸುಬ್ರಹ್ಮಣ್ಯ…

Read More

ಅಪ್ರಾಪ್ತ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ಆರೋಪ – ಮೂವರು ಆರೋಪಿಗಳ ಬಂಧನ

ವಿಟ್ಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಪ್ರಾಪ್ತ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪಕ್ಕೆ ಸಂಬಂಧಿಸಿದಂತೆ ಆರು ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ.2026ರ ಫೆಬ್ರವರಿಯಿಂದ ಆಗಸ್ಟ್ ತಿಂಗಳ ಅವಧಿಯಲ್ಲಿ ಜವಾದ್, ಶಾಹಿದ್, ರಿಯಾಝ್ ಅಲಿಯಾಸ್ ಅಬ್ದುಲ್ ಗಫೂರ್ ಸೇರಿದಂತೆ ಆರು ಮಂದಿ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಲಾಗಿದೆ. ಈ ಕುರಿತು ಸಂತ್ರಸ್ತ ಬಾಲಕ ನೀಡಿದ ದೂರಿನ ಆಧಾರದ ಮೇಲೆ ಸೆಪ್ಟೆಂಬರ್ 4ರಂದು ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ವಿಟ್ಲ ಠಾಣೆಯಲ್ಲಿ…

Read More

ಕುಂಬಳೆ ಜಿಎಚ್‌ಎಸ್‌ಎಸ್‌ನಲ್ಲಿ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ

ಕುಂಬಳೆ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ ರಿ ಕುಂಬಳೆ ಮಂಜೇಶ್ವರ ತಾಲೂಕು ಹಾಗೂ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್ ರಿ ಸಹಯೋಗದಲ್ಲಿ ಜಿಎಚ್ ಎಸ್ ಎಸ್ ಕುಂಬಳೆ ಶಾಲೆಯಲ್ಲಿ ಸುಮಾರು 90 ವಿದ್ಯಾರ್ಥಿ ಗಳಿಗೆ ಸ್ವಾಸ್ತ್ಯ ಸಂಕಲ್ಪ ಕಾರ್ಯಕ್ರಮವನ್ನು ಆಯೋಜಿಸಲಾಯಿತು. ಕಾರ್ಯಕ್ರಮವನ್ನು ಶಾರದಾ ದೀಪ ಬೆಳಗಿಸಿ ಉದ್ಘಾಟಿಸಿ ಮಾದಕ ವಸ್ತುವಿನಿಂದ ಆಗುವ ದುಷ್ಪರಿಣಾಮದ ಬಗ್ಗೆ ಮಾಹಿತಿಯನ್ನು ವಿದ್ಯಾರ್ಥಿಗಳಿಗೆ ನೀಡಿದರು .ಕಾರ್ಯಕ್ರಮದಲ್ಲಿ ಕುಂಬಳೆ ವಲಯದ ಮೇಲ್ವಿಚಾರಕರಾದ ಅಭಿಷೇಕ್, ಅಖಿಲ ಕರ್ನಾಟಕ ಜನ…

Read More

ಶಿರಿಯಾ ಹೊಳೆಯಲ್ಲಿ ಮರಳ ದಂಧೆಕೋರ ನಾಪತ್ತೆ, ಶೋಧ ಕಾರ್ಯ ತೀವ್ರ

​ಕಾಸರಗೋಡು: ಶಿರಿಯಾ ಹೊಳೆಯಲ್ಲಿ ಅಕ್ರಮ ಮರಳು ಸಾಗಾಟ ತಡೆಯಲು ಬಂದ ಕರಾವಳಿ ಕಾವಲು ಪಡೆಯನ್ನು ಕಂಡು ನದಿಗೆ ಹಾರಿದವರ ಪೈಕಿ ಒಬ್ಬ ಯುವಕ ನಾಪತ್ತೆಯಾಗಿದ್ದಾನೆ.ಆರಿಕ್ಕಾಡಿ ಕಡವತ್ ನಿವಾಸಿ ಇಬ್ರಾಹಿಂ (26) ನಾಪತ್ತೆಯಾದ ಯುವಕ. ಸೋಮವಾರ ರಾತ್ರಿ 8 ಗಂಟೆಯ ಸುಮಾರಿಗೆ ಈ ಘಟನೆ ನಡೆದಿದೆ.ಪೊಲೀಸರು ದಾಳಿ ನಡೆಸುತ್ತಿದ್ದಂತೆ ದೋಣಿಯಲ್ಲಿದ್ದ ಮರಳು ಸಾಗಾಟಗಾರರು ದೋಣಿಯನ್ನು ತೊರೆದು ಹೊಳೆಗೆ ಹಾರಿದ್ದಾರೆ.ಅವರಲ್ಲಿದ್ದ ಇಬ್ಬರು ಈಜಿಕೊಂಡು ದಂಡೆ ಸೇರಿ ರಕ್ಷಣೆ ಪಡೆದರೆ, ಇಬ್ರಾಹಿಂ ನೀರಿನಲ್ಲಿ ಮುಳುಗಿ ನಾಪತ್ತೆಯಾಗಿದ್ದಾನೆ. ಘಟನೆಯ ಸುಳಿವು ಸಿಗುತ್ತಿದ್ದಂತೆ ಸ್ಥಳೀಯರು…

Read More

ಪಡುಬಿದ್ರಿ ಕಡಲ್ಕೊರೆತ ಪ್ರದೇಶಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದ ಪ್ರವಾಸೋದ್ಯಮ ಸಚಿವರು

ಉಡುಪಿ: ಪಡುಬಿದ್ರಿ ವ್ಯಾಪ್ತಿಯ ಕಡಲ್ಕೊರೆತ ಪ್ರದೇಶಕ್ಕೆ ಪ್ರವಾಸೋದ್ಯಮ ಸಚಿವ ಕೆ.ಜೆ. ಜಾರ್ಜ್ ಸೋಮವಾರ ಭೇಟಿ ನೀಡಿ ಸ್ಥಳ ಪರಿಶೀಲಿಸಿದರು.ಕಡಲ್ಕೊರೆತ ಸಮಸ್ಯೆಯನ್ನು ಸಚಿವ ಸಂಪುಟ ಸಭೆಯ ಗಮನಕ್ಕೆ ತಂದು ಚರ್ಚಿಸಲಾಗುವುದು. ಶಾಶ್ವತ ಪರಿಹಾರ ಕಂಡುಕೊಳ್ಳಲು ಸರ್ಕಾರ ಮಟ್ಟದಲ್ಲಿ ಪ್ರಯತ್ನ ನಡೆಸಲಾಗುವುದು ಎಂದು ಅವರು ತಿಳಿಸಿದರು. ಕಡಲ್ಕೊರೆತದಿಂದ ಸ್ಥಳೀಯರ ಬದುಕಿನ ಜತೆಗೆ ಕರಾವಳಿ ಪ್ರವಾಸೋದ್ಯಮಕ್ಕೂ ಹೊಡೆತ ಬೀಳುವ ಆತಂಕವಿದೆ. ಈ ವಿಚಾರವನ್ನು ಜಿಲ್ಲಾ ಉಸ್ತುವಾರಿ ಸಚಿವರ ಗಮನಕ್ಕೂ ತರಲಾಗುವುದು ಎಂದರು.ಕರಾವಳಿ ಭಾಗದ ಪ್ರವಾಸೋದ್ಯಮ ಅಭಿವೃದ್ಧಿಗೆ ಸರ್ಕಾರ ಹೆಚ್ಚಿನ ಆದ್ಯತೆ ನೀಡುತ್ತಿದೆ….

Read More

ರಾಮ ಕ್ಷತ್ರಿಯ ಭಜನಾ ಸಂಘದ ದಶಮ ಸಂಭ್ರಮ.ಮಹಿಳಾ ಭಜನಾ ಸಂಘಗಳು ಸ್ತ್ರೀಶಕ್ತೀಕರಣಕ್ಕೆ ದಾರಿದೀಪ: ಡಾ. ವಾಮನ್ ರಾವ್ ಬೇಕಲ್

ಮುಲ್ಕಿ–ಸುರತ್ಕಲ್: ರಾಮ ಕ್ಷತ್ರಿಯ ಭಜನಾ ಸಂಘ, ಮುಲ್ಕಿ–ಸುರತ್ಕಲ್ ವತಿಯಿಂದ ಸಂಘದ ದಶಮ ಸಂಭ್ರಮದ ಅಂಗವಾಗಿ ವರಮಹಾಲಕ್ಷ್ಮೀ ಪೂಜೆ, ಭಜನಾ ಸಂಕೀರ್ತನೆ, ಸನ್ಮಾನ ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಸೆ. 6ರಂದು ನಡೆಯಿತು. ಬೆಳಗ್ಗೆ ನಡೆದ ವರಮಹಾಲಕ್ಷ್ಮೀ ಪೂಜಾ ಕಾರ್ಯಕ್ರಮದಲ್ಲಿ ಸಂಘದ ಮಹಿಳಾ ಸದಸ್ಯರು ಶ್ರೀ ಮಹಾಲಕ್ಷ್ಮೀ ಅಷ್ಟೋತ್ತರ ಶತನಾಮಾವಳಿ ಹಾಗೂ ಭಜನಾ ಸಂಕೀರ್ತನೆಯೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಮಂಗಳಾರತಿಯ ಬಳಿಕ ನಡೆದ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗೀತಾ ಉಮೇಶ್ ವಹಿಸಿದ್ದರು. ಜಯಲಕ್ಷ್ಮೀ, ವಾರಿಜಾಕ್ಷಿ, ವಾಣಿ ಕಿರಣ್ ಹಾಗೂ…

Read More
error: Content is protected !!