ರಾಮ ಕ್ಷತ್ರಿಯ ಭಜನಾ ಸಂಘದ ದಶಮ ಸಂಭ್ರಮ.ಮಹಿಳಾ ಭಜನಾ ಸಂಘಗಳು ಸ್ತ್ರೀಶಕ್ತೀಕರಣಕ್ಕೆ ದಾರಿದೀಪ: ಡಾ. ವಾಮನ್ ರಾವ್ ಬೇಕಲ್
ಮುಲ್ಕಿ–ಸುರತ್ಕಲ್: ರಾಮ ಕ್ಷತ್ರಿಯ ಭಜನಾ ಸಂಘ, ಮುಲ್ಕಿ–ಸುರತ್ಕಲ್ ವತಿಯಿಂದ ಸಂಘದ ದಶಮ ಸಂಭ್ರಮದ ಅಂಗವಾಗಿ ವರಮಹಾಲಕ್ಷ್ಮೀ ಪೂಜೆ, ಭಜನಾ ಸಂಕೀರ್ತನೆ, ಸನ್ಮಾನ ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಸೆ. 6ರಂದು ನಡೆಯಿತು. ಬೆಳಗ್ಗೆ ನಡೆದ ವರಮಹಾಲಕ್ಷ್ಮೀ ಪೂಜಾ ಕಾರ್ಯಕ್ರಮದಲ್ಲಿ ಸಂಘದ ಮಹಿಳಾ ಸದಸ್ಯರು ಶ್ರೀ ಮಹಾಲಕ್ಷ್ಮೀ ಅಷ್ಟೋತ್ತರ ಶತನಾಮಾವಳಿ ಹಾಗೂ ಭಜನಾ ಸಂಕೀರ್ತನೆಯೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಮಂಗಳಾರತಿಯ ಬಳಿಕ ನಡೆದ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗೀತಾ ಉಮೇಶ್ ವಹಿಸಿದ್ದರು. ಜಯಲಕ್ಷ್ಮೀ, ವಾರಿಜಾಕ್ಷಿ, ವಾಣಿ ಕಿರಣ್ ಹಾಗೂ…
