ಕೊಂಡೆವೂರು ಶ್ರೀಗಳ 22ನೇ ಚಾತುರ್ಮಾಸ್ಯವ್ರತ ಸಂಕಲ್ಪ
ಉಪ್ಪಳ : ಶ್ರೀ ನಿತ್ಯಾನಂದ ಯೋಗಾಶ್ರಮ ಕೊಂಡೆವೂರು ಮಠದಲ್ಲಿ ಪೂಜ್ಯ ಶ್ರೀಗಳು ತಮ್ಮ 22 ನೇ ಚಾತುರ್ಮಾಸ್ಯವ್ರತ ಸಂಕಲ್ಪವನ್ನು ಗುರುಪೂರ್ಣಿಮೆಯಂದು ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಕೈಗೊಂಡರು. ಬಳಿಕ ಬೆಳಿಗ್ಗೆ 9.00ಕ್ಕೆ ಗಣಹೋಮ, ಶ್ರೀ ನಿತ್ಯಾನಂದ ಗುರುಗಳಿಗೆ ಪಂಚಾಮೃತಾಭಿಷೇಕ ವಿಶೇಷ ಸೀಯಾಳಭಿಷೇಕ, 10:30 ರಿಂದ ವ್ಯಾಸವಪೂಜೆ 12:30ಕ್ಕೆ ಮಹಾಪೂಜೆ ಬಳಿಕ ಅನ್ನಸಂತರ್ಪಣೆ ನಡೆಯಯಿತು. ಸಂಜೆ 5 ಗಂಟೆ ಗೆ 108 ದಿನಗಳ ಸಂಧ್ಯಾ ಭಜನೆಗೆ ಪರಮಪೂಜ್ಯ ಶ್ರೀಗಳು ಚಾಲನೆ ನೀಡಿದರು.ಸಂಜೆ 6:30ಕ್ಕೆ ಮಹಾಪೂಜೆಯನಂತರ ಶ್ರೀ ಗುರುಪಾದುಕಾಪೂಜೆ ನಡೆದು ಬಳಿಕ…