ಕಾರ್ಕಳ ಪುರಸಭೆಯಲ್ಲಿ ಆರ್‌ಟಿಐ ಗೊಂದಲ – ಮಾಹಿತಿ ಸಿಗದೆ ಕಛೇರಿಯಲ್ಲೇ ಪ್ರತಿಭಟನೆ
ಉಡುಪಿ: ಕಾರ್ಕಳ ಪುರಸಭೆಯಲ್ಲಿ ಮಾಹಿತಿ ಹಕ್ಕು ಅಧಿಕಾರಿ ತಾನು ಕೇಳಿದ ದಾಖಲೆಗಳನ್ನು ನೀಡದೆ ಸತಾಯಿಸುತ್ತಿದ್ದಾರೆ ಮಾಹಿತಿ ಕೇಳಿದರೆ ಪೂರ್ಣ ಮಾಹಿತಿ ನೀಡದೆ ತಾವೇ ಮೇಲ್ಮಮನವಿ ಸಲ್ಲಿಸಿ ಉಡಾಪೆ ಉತ್ತರ ನೀಡುತ್ತಾರೆ ಎಂದು ಆರೋಪಿಸಿ ಮಾಹಿತಿ ಹಕ್ಕು ಅಧಿಕಾರಿ ವಿರುದ್ಧ ಮಾಜಿ ಸದಸ್ಯ ಸುನೀಲ್ ಕೋಟ್ಯಾನ್ ಪುರಸಭೆ ಕಛೇರಿಯೊಳಗೆ ಮಾಹಿತಿ ಹಕ್ಕು ಅಧಿಕಾರಿ ಟೇಬಲ್ ಮುಂಭಾಗದಲ್ಲಿ ಪ್ರತಿಭಟನೆ ಕುಳಿತ ಘಟನೆ ನಡೆದಿದೆ. ಕಾರ್ಕಳ ಪುರಸಭಾ ವ್ಯಾಪ್ತಿಯ ಕುಂಟಲ್ಪಾಡಿ ಅಂಬಾಭವಾನಿ ದೇವಸ್ಥಾನ ರಸ್ತೆಗೆ ಪುರಸಭಾ ವತಿಯಿಂದ 2011 – 2012…
