ಮುಳ್ಳೇರಿಯಾ ದಲ್ಲಿ ನಿಯಂತ್ರಣ ತಪ್ಪಿದ ಕಾರು ಮಗುಚಿ 2 ವರ್ಷದ ಮಗು ದಾರುಣ ಮೃತ್ಯು
ಮಂಜೇಶ್ವರ : ಮುಳ್ಳೇರಿಯ ಕಾರ್ಲೇ ಎಂಬಲ್ಲಿ ಚಾಲಕನ ನಿಯಂತ್ರಣ ತಪ್ಪಿ ಕಾರೊಂದು ಮಗುಚಿ ಸಂಭವಿಸಿದ ಅಪಘಾತದಲ್ಲಿ ಎರಡು ವರ್ಷದ ಮಗುವೊಂದು ದಾರುಣವಾಗಿ ಸಾವನ್ನಪ್ಪಿದೆ. ಬೆಳ್ಳಿಗೆಯ ಎಂ. ಹರಿದಾಸ್ – ಶ್ರೀವಿದ್ಯಾ ದಂಪತಿ ಪುತ್ರಿ ಹೃದ್ಯಾನಂದ ಸಾವನ್ನಪ್ಪಿದ ಮಗು. ಪೇಟೆಗೆ ತೆರಳಿ ಮರಳುತ್ತಿರುವ ಮನೆ ಸಮೀಪ ಕಾರು ಸ್ಟಾರ್ಟ್ ಆಗದ ಹಿನ್ನಲೆಯಲ್ಲಿ ಕಾರನ್ನು ತಳ್ಳುತ್ತಿರುವ ಮಧ್ಯೆ ಕಾರು ದಿಢೀರ್ ಮುಂದಕ್ಕೆ ಚಲಿಸಿದಾಗ ಮಗು ಕಾರಿನಡಿಗೆ ಸಿಲುಕಿ ಈ ದುರ್ಘ ಸಂಭವಿಸಿದೆ. ಘಟನೆಯಲ್ಲಿ ತಾಯಿ ಹೊರಗೆ ಎಸೆಯಲ್ಪಟ್ಟರೂ ಸಣ್ಣಪುಟ್ಟ ಗಾಯಗಳೊಂದಿಗೆ…