ಪೊದರು ಗಳಿಂದ ಆವೃತ್ತವಾದ ವಿದ್ಯುತ್ ಟ್ರಾನ್ಸ್ಫರ್ಮಾರ್ ಗಳು, ಸಾರ್ವಜನಿಕ ಸಂಚಾರಕ್ಕೆ ಸವಾಲು

ಮಂಜೇಶ್ವರ : ಮಂಜೇಶ್ವರ ರಾಗಂ ಜಂಕ್ಷನ್ ಹಾಗೂ ಅಂಬಿತ್ತಡಿಗಳಲ್ಲಿ ಸ್ಥಾಪಿತವಾಗಿರುವ ಮಂಜೇಶ್ವರ ವಿದ್ಯುತ್ ಸೆಕ್ಷನ್ ಅಧೀನದಲ್ಲಿರುವ ವಿದ್ಯುತ್ ಟ್ರಾನ್ಸ್ ಫಾರ್ಮರ್ಗಳು ಪೊದರುಗಳಿಂದ ಆವರಿಸಲ್ಪಟ್ಟು ಸಾರ್ವಜನಿಕ ಸುರಕ್ಷತೆಗೆ ಭಾರೀ ಅಪಾಯಕಾರಿಯಾಗಿದೆ.
ಈ ದಾರಿಯಾಗಿ ಪ್ರತಿ ದಿನ ನೂರಾರು ಮಂದಿ ಪ್ರಯಾಣಿಕರು ಹಾಗೂ ವಿದ್ಯಾರ್ಥಿಗಳು ಸಂಚರಿಸುತಿದ್ದಾರೆ.

ಅಂಬಿತ್ತಡಿ ಹಾಗೂ ರಾಗಂ ಜಂಕ್ಷನ್ ರಸ್ತೆ ಬದಿಯಲ್ಲಿ ಸ್ಥಾಪಿಸಲ್ಪಟ್ಟಿರುವ ವಿದ್ಯುತ್ ಟ್ರಾನ್ಸ್‌ಫಾರ್ಮರ್‌ಗಳು ಪೂರ್ಣವಾಗಿ ಕಾಡುಹಿಡಿದ ಪೊದರುಗಳಿಂದ ಆವರಿಸಲ್ಪಟ್ಟಿವೆ. ಈ ಪೊದರುಗಳು ಮಳೆಯ ಸಮಯದಲ್ಲಿ ತೊಳೆದ ನಂತರ ಅಥವಾ ಗಾಳಿಗೆ ಬಿದ್ದು ಟ್ರಾನ್ಸ್‌ಫಾರ್ಮರ್‌ಗೆ ಸ್ಪರ್ಶಿಸಿದರೆ ವಿದ್ಯುತ್ ಗಡಸುತನದಿಂದ ಅಪಾಯ ಕಟ್ಟಿಟ್ಟ ಬುತ್ತಿಯಾಗಿದೆ.

ಕೆಲವೇ ದಿನಗಳಲ್ಲಿ ಮಳೆಯ ಹಂಗು ಆರಂಭವಾಗಲಿದ್ದು, ಇದರಿಂದ ಈ ಟ್ರಾನ್ಸ್ ಫಾರ್ಮರ್ ಗಳನ್ನು ಆವರಿಸಿರುವ ಈ ಪೊದರುಗಳು ಇನ್ನೂ ಹೆಚ್ಚಿನ ಅಪಾಯದ ಮೂಲವಾಗಬಹುದು. ಟ್ರಾನ್ಸ್‌ಫಾರ್ಮರ್‌ಗಳಿಗೆ ಸಮೀಪವಿರುವ ಕೊಳೆತು ಹೋಗಿರುವ ದಂಡೆ ಮರಗಳು ಅಥವಾ ಪೊದರುಗಳು ವಿದ್ಯುತ್ ಲೈನ್‌ಗಳಿಗೆ ತಗುಲಿ ತುರ್ತು ಪರಿಸ್ಥಿತಿಗಳನ್ನು ಸೃಷ್ಟಿ ಮಾಡುವ ಸಾಧ್ಯತೆ ಇದೆ.

ಜೂನ್ ತಿಂಗಳಲ್ಲಿ ಶಾಲಾ ಕಾಲೇಜುಗಳು ಆರಂಭವಾಗಲಿದ್ದು, ಬಹುತೇಕ ಮಕ್ಕಳು ಈ ದಾರಿಯ ಮೂಲಕ ಶಾಲೆಗೆ ಹೋಗುತ್ತಾರೆ. ಈ ಸಂದರ್ಭದಲ್ಲೂ ವಿದ್ಯುತ್ ಅಪಾಯವಿರುವ ಪ್ರದೇಶದ ಮೂಲಕ ಮಕ್ಕಳ ಸಂಚಾರ ನಡೆಯುವುದು ತೀವ್ರ ಆತಂಕವನ್ನುಂಟುಮಾಡುತ್ತಿದೆ.

ಮಂಜೇಶ್ವರ ಹಾಗೂ ವರ್ಕಾಡಿ ವಿದ್ಯುತ್ ಸೆಕ್ಷನ್ ವ್ಯಾಪ್ತಿಯಲ್ಲಿ ಈ ಹಿಂದೆ ಅಧಿಕಾರಸ್ಥರ ಅನಾಸ್ಥೆಯಿಂದ ಹಲವು ದುರ್ಘಟನೆಗಳು ಸಂಭವಿಸಿದ್ದು, ಕೆಲವು ಪ್ರಕರಣಗಳಲ್ಲಿ ಸಾವು ಕೂಡಾ ಸಂಭವಿಸಿದೆ.

ತಕ್ಷಣವೇ ಪೊದರುಗಳನ್ನು ತೆರವುಗೊಳಿಸಿ ಟ್ರಾನ್ಸ್‌ಫಾರ್ಮರ್‌ ಸುತ್ತಲೂ ಸುರಕ್ಷತಾ ಜಾಲಿ ಅಳವಡಿಸಬೇಕಾಗಿದೆ. ಅದೇ ರೀತಿ ಶಾಲಾ ಮಕ್ಕಳಿಗೆ ವಿದ್ಯುತ್ ಸುರಕ್ಷತೆ ಕುರಿತು ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಬೇಕಾಗಿದೆ. ಸಂಬಂಧ ಪಟ್ಟವರು ಕೂಡಲೇ ಇತ್ತ ಕಡೆ ಗಮನ ಹರಿಸುವಂತೆ ಸ್ಥಳೀಯ ನಾಗರಿಕರು ಆಗ್ರಹಿಸಿದ್ದಾರೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!