ಮಂಜೇಶ್ವರದಲ್ಲಿ ಉದ್ಯಮಿಗೆ ದರೋಡೆ : ಅಡ್ಡಗಟ್ಟಿ ಹಲ್ಲೆ
ಮಂಜೇಶ್ವರ : ಬಂದ್ಯೋಡಿನ ಅಡ್ಕ ಗುರ್ಮೆ ಸಾರ್ವಜನಿಕ ಸ್ಮಶಾನದ ಬಳಿ ಉದ್ಯಮಿ ಮಳ್ಳಂಗೈ ನಿವಾಸಿ ಅಲಿ ಮುಕ್ತಾದ್ (34) ಎಂಬುವವರನ್ನು ಅಡ್ಡಗಟ್ಟಿ, ದರೋಡೆ ನಡೆಸಲಾಗಿದೆ. ಸಂಜೆ ವೇಳೆಗೆ ಸ್ವಗೃಹಕ್ಕೆ ಚತುಶ್ಚಕ್ರ ವಾಹನದಲ್ಲಿ ಮರಳುತ್ತಿದ್ದಾಗ ಮೂವರಿದ್ದ ಅಪರಿಚಿತ ತಂಡ ಮಾರ್ಗಮಧ್ಯೆ ತಡೆದು, ಐವತ್ತು ಸಾವಿರ ರೂಪಾಯಿಗೆ ಬೇಡಿಕೆಯಿಟ್ಟಿದೆ ಎನ್ನಲಾಗಿದೆ. ಬೆದರಿಕೆಗೆ ಜಗ್ಗದೆ ನಗದು ನೀಡಲು ಅಲಿ ಮುಕ್ತಾದ್ ನಿರಾಕರಿಸಿದಾಗ, ಅವರನ್ನು ವಾಹನದಿಂದ ಹೊರಗೆ ಎಳೆದು ಅಮಾನುಷವಾಗಿ ಥಳಿಸಲಾಗಿದೆ. ತದನಂತರ ಸಂತ್ರಸ್ತನ ಮೊಬೈಲ್ ಹಾಗೂ ವಾಹನವನ್ನು ಪೀಡಕರು ಕೊಂಡೊಯ್ದಿದ್ದಾರೆ.ರಕ್ತಸಿಕ್ತರಾಗಿದ್ದ ಅವರನ್ನು…
