ಕರ್ನಾಟಕ: ಮುಂಗಾರು ಅಧಿವೇಶನ ಆಗಸ್ಟ್ 11 ರಿಂದ-ಧರ್ಮಸ್ಥಳದ ಸಮಗ್ರ ತನಿಖೆಗೆ ಸರಕಾರ ಸಂಪೂರ್ಣ ಸಹಕಾರ ನೀಡುತ್ತದೆ -ಸಭಾಧ್ಯಕ್ಷರಾದ ಯು ಟಿ ಖಾದರ್
ಕರ್ನಾಟಕದಲ್ಲಿ ಮುಂಗಾರು ಅಧಿವೇಶನ ಆಗಸ್ಟ್ 11 ರಿಂದ 20 ರ ತನಕ ನಡೆಯಲಿದೆ ಎಂದು ನಗರದ ಸರ್ಕ್ಯೂಟ್ ಹೌಸ್ ನಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಸಭಾಧ್ಯಕ್ಷರಾದ ಯು ಟಿ ಖಾದರ್ ತಿಳಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಬಾರಿಯ ಬಜೆಟ್ ನಲ್ಲಿ ಘೋಷಣೆ ಆದಂತೆ ಉಳ್ಳಾಲ ಗ್ರಾಮಾಂತರ ಭಾಗದಲ್ಲಿ ಬಾಲಕಿಯರಿಗೆ ಶಿಕ್ಷಣ ಸಂಸ್ಥೆಯನ್ನು ತೆರೆಯಲಾಗುವುದು. ವಸತಿ ಶಾಲಾ ಕಾಲೇಜು ಇದಾಗಿದ್ದು ಈ ಶಿಕ್ಷಣ ಸಂಸ್ಥೆಯನ್ನು ಕೊಣಾಜೆ ಅಥವಾ ಫಜೀರು ಭಾಗದಲ್ಲಿ ನಿರ್ಮಾಣ ಮಾಡುವ ಸಾಧ್ಯತೆ ಇದೆ. ಬಜೆಟ್ ನಲ್ಲಿ…
