ಮಂಜೇಶ್ವರ ಶ್ರೀ ಶನೈಶ್ಚರ ಮಂದಿರದಲ್ಲಿ ದೀಪೋತ್ಸವ, ರಥೋತ್ಸವ ಹಾಗೂ ದೈವದ ಕೋಲ

ಮಂಜೇಶ್ವರ: ತಾರೀಕು 22 /01 /2026 ಗುರುವಾರದಂದು ಬ್ರಹ್ಮಶ್ರೀ ಬಡಾಜೆ ಗೋಪಾಲ ಕೃಷ್ಣ ತಂತ್ರಿ ಯವರ ನೇತೃತ್ವದಲ್ಲಿ ಶ್ರೀ ಶನೈಶ್ಚರ ದೇವರ ವರ್ಷಾವಧಿ ಬಲಿ ಉತ್ಸವ .ಕಲ್ಲುರ್ಟಿ ದೈವ ಮತ್ತು ರಾಜ ಗುಳಿಗ ಕೋಲ ವು ವಿಜೃಂಭಣೆಯಿಂದ ಜರುಗಲಿರುವುದು. ಅಂದು ಸಾಯಂಕಾಲ ಬೆಂಗಳೂರಿನ ಸೇವಾಕರ್ತರಾದ ಶ್ರೀ ಎನ್. ಕೆ ರಾಜ ಶಂಕರ್ ರವರಿಂದ ಶ್ರೀ ದೇವರಿಗೆ ಸಹಸ್ರ ದೀಪೋತ್ಸವ ನಡೆಯಲಿರುವುದು . ಶ್ರೀ ಆದಿಶಕ್ತಿ ಕುಣಿತಾ ಭಜನಾ ತಂಡ ಶನೈಶ್ಚರ ಮಂಜೇಶ್ವರ ತಂಡದಿಂದ ಕುಣಿತ ಭಜನೆಯು ನಡೆಯಲಿದೆ….

Read More

ಮಂಜೇಶ್ವರ ಬ್ಲೋಕ್ ಪಂ.ನಲ್ಲಿ ಯುಡಿಎಫ್‌ನ ಸಯ್ಯದ್ ಸೈಫುಲ್ಲ ತಂಘಳ್ ಅಧ್ಯಕ್ಷರಾಗಿದ್ದು, ಕಾಂಗ್ರೆಸ್‌ನ ಕಮಲಾಕ್ಷಿ ಕೆ. ಉಪಾಧ್ಯಕ್ಷೆಯಾಗಿ ಆಯ್ಕೆ

ಮಂಜೇಶ್ವರ: ಮಂಜೇಶ್ವರ ಬ್ಲೋಕ್ ಪಂ.ನಲ್ಲಿ ಯುಡಿಎಫ್‌ನ ಸಯ್ಯದ್ ಸೈಫುಲ್ಲ ತಂಘಳ್ ಅಧ್ಯಕ್ಷರಾಗಿದ್ದು, ಕಾಂಗ್ರೆಸ್‌ನ ಕಮಲಾಕ್ಷಿ ಕೆ. ಉಪಾಧ್ಯಕ್ಷೆಯಾಗಿ ಆಯ್ಕೆಗೊಂಡಿದ್ದಾರೆ. ಬ್ಲೋಕ್ ಪಂಚಾಯತ್‌ನಲ್ಲಿ ಒಟ್ಟು 14 ವಾರ್ಡ್ ಇದ್ದು, IIರಲ್ಲಿ ಯುಡಿಎಫ್‌, 3ರಲ್ಲಿ ಬಿಜೆಪಿ, 2ರಲ್ಲಿ ಎಡರಂಗ ಜಯಗಳಿಸಿದೆ. ಬಿಜೆಪಿಯಿಂದ ಅಧ್ಯಕ್ಷ ಸ್ಥಾನಕ್ಕೆ ಚಂದ್ರಾವತಿ ಶೆಟ್ಟಿ, ಉಪಾಧ್ಯಕ್ಷ ಸ್ಥಾನಕ್ಕೆ ಜ್ಯೋತಿ ರೈ ಸ್ಪರ್ಧಿಸಿದ್ದರು. ಎಡರಂಗದ ಸದಸ್ಯರ ಮತ ಅಧ್ಯಕ್ಷರ ಚುನಾವಣೆಯಲ್ಲಿ ಅಸಿಂಧುಗೊಂಡಿದ್ದು, ಉಪಾಧ್ಯಕ್ಷ ಚುನಾವಣೆಯಲ್ಲಿ ಇವರು ಹಾಜರಾಗಿರಲಿಲ್ಲ.

Read More

ಧರ್ಮತ್ತಡ್ಕ ಶ್ರೀ ದುರ್ಗಾಪರಮೇಶ್ವರಿ ಶಾಲೆಗೆ ,ಜಿಲ್ಲಾ ಕಲೋತ್ಸವದಲ್ಲಿ ಭರ್ಜರಿ ಯಶಸ್ಸು

ಕಾಸರಗೋಡಿನ ಮೊಗ್ರಾಲಿನ ಜಿ.ವಿ.ಎಚ್.ಎಸ್.ಎಸ್‌ನಲ್ಲಿ ನಡೆದ ಕಾಸರಗೋಡು ಜಿಲ್ಲಾ ಕಲೋತ್ಸವದ ಹೈಯರ್ ಸೆಕೆಂಡರಿ ವಿಭಾಗದ ವಿವಿಧ ಸ್ಪರ್ಧೆಗಳಲ್ಲಿ ಧರ್ಮತ್ತಡ್ಕ ಶ್ರೀ ದುರ್ಗಾಪರಮೇಶ್ವರಿ ಅನುದಾನಿತ ಹೈಯರ್ ಸೆಕೆಂಡರಿ ಶಾಲೆಯ ವಿದ್ಯಾರ್ಥಿಗಳು ಪ್ರಥಮ ಸ್ಥಾನ ಗಳಿಸಿ ಶಾಲೆಗೆ ಕೀರ್ತಿ ತಂದಿದ್ದಾರೆ. ವಿಜೇತ ವಿದ್ಯಾರ್ಥಿಗಳ ವಿವರ: ಕುಮಾರಿ ಶ್ರಾವ್ಯ ಬಿ.: ಕೊಲಾಜ್ (Collage) ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗಳಿಸಿ, ರಾಜ್ಯ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ. ಕುಮಾರಿ ಅನುಶ್ರೀ ಬಿ.: ಕನ್ನಡ ಕಥಾ ರಚನೆ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ. ಪವನ್ ರಾಮ್ ಎನ್.: ಕನ್ನಡ…

Read More

ಕುಡ್ಲದ ಪೋರನಿಗೆ “ಐಕಾನ್ ಆಫ್ ಇಂಡಿಯಾ 2025” ಪಟ್ಟ … !

ಮಂಗಳೂರು : ಶಿವಮೊಗ್ಗದ ಶಿರಳಕೊಪ್ಪದಲ್ಲಿ ಎಸ್.ಜಿ.ಪ್ಯಾಷನ್ ದಿವಾ ಸ್ಮಾರ್ ಸಂಸ್ಥೆ ಆಯೋಜಿಸಿದ್ದ ಪ್ಯಾಶನ್ ಶೋ ಐಕಾನ್ ಆಫ್ ಇಂಡಿಯಾ 2025 ರಲ್ಲಿ ಪೊಲೀಸ್ ಲೈನ್ ಪಾಂಡೇಶ್ವರ ಮಂಗಳೂರಿನ ಶೌರ್ಯಾ ಎಂ ಚಂದ್ರ sub junior kid ವಿಭಾಗದಲ್ಲಿ ಐಕಾನ್ ಆಫ್ ಇಂಡಿಯಾ ವಿನ್ನರ್ ಪಟ್ಟವನ್ನು ಮುಡಿಗೇರಿಸಿಕೊಂಡಿದ್ದಾನೆ . ಈತ ಮಂಗಳೂರು ಶಾರದಾ ವಿದ್ಯಾಲಯ ಕೊಡಿಯಾಲ್ ಬೈಲ್ ನ ಯು.ಕೆ.ಜಿ ವಿದ್ಯಾರ್ಥಿ ಹಾಗೂ Pathway modling ballabhag ನಲ್ಲಿ ವಿದ್ಯಾರ್ಥಿ ಆಗಿದ್ದಾರೆ. ಇವರು ಮುಖೇಶ್ ಚಂದ್ರ ಹಾಗೂ ಅಖಿಲ.ಕೆ…

Read More

ಜ. 4ರಂದು ಮಂಗಳೂರಿನ ಕುದ್ಮಲ್ ರಂಗರಾವ್ ಪುರಭವನದಲ್ಲಿ ‘ಕುಂಭಕಲಾವಳಿ-ಕುಲಾಲ ಕಲಾ ಸೇವಾಂಜಲಿ’ ಕಾರ್ಯಕ್ರಮ .. !

ಮಂಗಳೂರು: ದ.ಕ. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕರ್ನಾಟಕ ರಾಜ್ಯ ಕುಲಾಲ ಕುಂಬಾರರ ಯುವವೇದಿಕೆ ಮತ್ತು ಮಹಿಳಾ ಸಂಘಟನೆಗಳ ಒಕ್ಕೂಟ (ರಿ.) ದ.ಕ ಜಿಲ್ಲಾ ಸಮಿತಿ ಹಾಗೂ ದಾಸ್ ಚಾರಿಟೇಬಲ್ ಸೇವಾ ಟ್ರಸ್ಟ್ (ರಿ.) ಮಂಗಳೂರು ಸಹಯೋಗದಲ್ಲಿ ‘ಕುಂಭಕಲಾವಳಿ-ಕುಲಾಲ ಕಲಾ ಸೇವಾಂಜಲಿ’ ಅದ್ಧೂರಿ ಕಾರ್ಯಕ್ರಮವು ಜ. 4ರಂದು ಮಂಗಳೂರು ಕುದ್ಮಲ್ ರಂಗರಾವ್ ಪುರಭವನದಲ್ಲಿ ಅದ್ದೂರಿಯಾಗಿ ನಡೆಯಲಿದೆ ಎಂದು ಸಮಿತಿಯ ಜಿಲ್ಲಾಧ್ಯಕ್ಷರಾದ ಲ| ಅನಿಲ್‌ ದಾಸ್ ತಿಳಿಸಿದರು . ಅವರು ನಗರದ ಪತ್ರಿಕಾಭವನದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ…

Read More

“37 ವರ್ಷಗಳ ಆದರ್ಶ ಶಿಕ್ಷಕ ಸೇವೆ ಸಲ್ಲಿಸಿದ ಕಾಡುಮಠ ಶಾಲೆಯ ಕುಸುಮ ಎನ್. ಅವರಿಗೆ ಬೀಳ್ಕೊಡುಗೆ”

ಬಂಟ್ವಾಳ: ಬಂಟ್ವಾಳ ತಾಲೂಕಿನ ದ.ಕ.ಜಿ.ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆ ಕಾಡುಮಠ,ಕೊಳ್ನಾಡು ಇಲ್ಲಿನ ಶಿಕ್ಷಕಿಗೆ ಬಿಳ್ಕೋಡುಗೆ ಸಮಾರಂಭವು ದಿನಾಂಕ 31/12/2025 ರಂದು ಶಾಲೆಯಲ್ಲಿ ನಡೆಯಿತು. “ಶಿಕ್ಷಣಕ್ಕೆ ಬದುಕನ್ನೇ ಅರ್ಪಿಸಿದ ಆದರ್ಶ ಶಿಕ್ಷಕಿ” – ಆಶಾ ನಾಯಕ್ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಕ್ಷೇತ್ರದ ದೈಹಿಕ ಶಿಕ್ಷಣಾಧಿಕಾರಿಯೂ,ಪ್ರಭಾರ ಕ್ಷೇತ್ರ ಶಿಕ್ಷಣಾಧಿಕಾರಿ ಆಶಾ ನಾಯಕ್, ಶಿಕ್ಷಣ ಕ್ಷೇತ್ರಕ್ಕೆ ತಮ್ಮ ಬದುಕನ್ನೇ ಸಮರ್ಪಿಸಿದ ಒಬ್ಬ ಉತ್ತಮ ಶಿಕ್ಷಕಿ ನಿವೃತ್ತಿಯಾಗುತ್ತಿರುವುದು ಹೆಮ್ಮೆಯ ಜೊತೆಗೆ ನೋವಿನ ಕ್ಷಣವೂ ಹೌದು. ಮಕ್ಕಳ ಸರ್ವಾಂಗೀಣ ಬೆಳವಣಿಗೆಗೆ ಶ್ರಮಿಸಿದ ಕುಸುಮ ಎನ್….

Read More

ಶೀರೂರು ಮಠಾಧೀಶರಾದ ಶ್ರೀ ಶ್ರೀ ವೇದವರ್ಧನ ತೀರ್ಥ ಶ್ರೀಪಾದರ ಜನವರಿ 4 ರಿಂದ 8 ರ ವರೆಗೆ ಮಂಗಳೂರಿನ ವಿವಿಧ ಧಾರ್ಮಿಕ ಕಾರ್ಯದಲ್ಲಿ ಭಾಗಿ …. ! ಭಕ್ತರಿಗೆ ಪಾದ ಪೂಜೆಗೆ ಅವಕಾಶ

ಮಂಗಳೂರು:ಪ್ರಥಮ ಬಾರಿಗೆ ಪರ್ಯಾಯ ಸರ್ವಜ್ಞ ಪೀಠವನ್ನು ಅಲಂಕರಿಸಲಿರುವ ಹಾಗೂ ಪ್ರಸ್ತುತ ಪರ್ಯಾಯ ಪೂರ್ವಭಾವಿ ಸಂಚಾರದಲ್ಲಿರುವ ಉಡುಪಿಯ ಶೀರೂರು ಮಠಾಧೀಶರಾದ ಶ್ರೀ ಶ್ರೀ ವೇದವರ್ಧನ ತೀರ್ಥ ಶ್ರೀಪಾದರು ಜನವರಿ 4 ರಂದು ಸಂಜೆ 4:00 ಗಂಟೆಗೆ ಸರಿಯಾಗಿ ಉರ್ವಸ್ಟೋರ್ ಶ್ರೀ ಮಹಾಗಣಪತಿ ದೇವಸ್ಥಾನದ ರಾಜಾಂಗಣದಲ್ಲಿ ಮಂಗಳೂರಿಗೆ ಪುರ ಪ್ರವೇಶ ಮಾಡಲಿರುವರು ಎಂದು ಗೌರವಾಧ್ಯಕ್ಷರಾದ ಡಾ.ಎಂ ಬಿ ಪುರಾಣಿಕ್ ತಿಳಿಸಿದರು . ಅವರು ನಗರದ ಪತ್ರಿಕಾಭವನದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ , ಮಠಾಧೀಶರ ಆಗಮನದ ಈ ಸಂದರ್ಭದಲ್ಲಿ ಪರ್ಯಾಯದ ಮಂಗಳೂರು’…

Read More

ಕುದ್ರೋಳಿಯಲ್ಲಿ ವಿಶೇಷ ಗುರುಪೂಜೆ, ರಥೋತ್ಸವ

ಮಂಗಳೂರು: ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ಗುರುವಾರ ಕ್ಯಾಲೆಂಡರ್ ಹೊಸ ವರ್ಷದ ಪ್ರಯುಕ್ತ ವಿಶೇಷ ಗುರುಪೂಜೆ, ಗಣಪತಿ ಹೋಮ ಹಾಗು ರಥೋತ್ಸವ ನೆರವೇರಿತು. ಕ್ಷೇತ್ರಾಡಳಿತ ಮಂಡಳಿ ಅಧ್ಯಕ್ಷ ಜೈರಾಜ್ ಎಚ್.ಸೋಮಸುಂದರಂ, ಉಪಾಧ್ಯಕ್ಷೆ ಊರ್ಮಿಳಾ ರಮೇಶ್, ಕೋಶಾಧಿಕಾರಿ ಪದ್ಮರಾಜ್ ಆರ್. ಪೂಜಾರಿ, ಅಭಿವೃದ್ಧಿ ಸಮಿತಿ ಅಧ್ಯಕ್ಷ ದೇವೇಂದ್ರ ಪೂಜಾರಿ, ಉಪಾಧ್ಯಕ್ಷ ಡಾ.ಬಿ.ಜಿ.ಸುವರ್ಣ,ಸದಸ್ಯರಾದ ವೇದಕುಮಾರ್, ಪಿ.ಕೆ.ಗೌರವಿ, ರಾಧಾಕೃಷ್ಣ, ಗೆಜ್ಜೆಗಿರಿ ಕ್ಷೇತ್ರಾಡಳಿತ ಸಮಿತಿ ಅಧ್ಯಕ್ಷ ರವಿ ಪೂಜಾರಿ ಚಿಲಿಂಬಿ, ಗೋಕರ್ಣನಾಥ ಕೋ ಆಪರೇಟಿವ್ ಬ್ಯಾಂಕ್ ಅಧ್ಯಕ್ಷ ಚಂದ್ರಶೇಖರ್ ಕಾವೂರು, ಜಯರಾಮ‌ ಕಾರಂದೂರು,…

Read More

ಜನಪ್ರಿಯ ವೈದ್ಯ, ಕವಿ, ಕಲಾವಿದ ಗಡಿನಾಡಿನ ಡಾ. ಜನಾರ್ಧನ ನಾಯ್ಕ್ ಸಿ. ಎಚ್ ಕನ್ನಡ ಭವನದ ಗೌರವಾನ್ವಿತ “ಸಮಾಜ ಸೇವಾ ರತ್ನ ಪ್ರಶಸ್ತಿ 2026” ಕ್ಕೆ ಆಯ್ಕೆ

ಕಾಸರಗೋಡು: ಕಾಸರಗೋಡಿನ ಹೆಮ್ಮೆಯ ವೈದ್ಯ ಶಿರೋಮಣಿ, ದೇಶೀಯ ಮಟ್ಟದಲ್ಲಿ ಗುರುತಿಸಿಕೊಂಡಿರುವ ರಾಷ್ಟ್ರ ಮಟ್ಟದ ಪ್ರಶಸ್ತಿ ಪುರಸ್ಕಾರಗಳನ್ನು ಮುಡಿಗೆರಿಸಿಕೊಂಡಿರುವ ಕವಿಹೃದಯಿ ಡಾ. ಜನಾರ್ದನ ನಾಯ್ಕ್ ಸಿ. ಎಚ್ ಇವರೀಗೆ ಕಾಸರಗೋಡು ಕನ್ನಡ ಭವನದ ರಜತ ಸಂಭ್ರಮ 18.01.2026,ರಂದು ನಡೆಯಲಿರುವ “ನಾಡು -ನುಡಿ ಹಬ್ಬ “ಕಾರ್ಯಕ್ರಮ ಕನ್ನಡ ಭವನ ಸಂಕೀರ್ಣದ “ಶ್ರೀ ಕೃಷ್ಣ ದೇವರಾಯ “ವೇದಿಕೆಯಲ್ಲಿ ನೀಡಿ ಗೌರವಿಸಲಿದ್ದೇವೆ ಎಂದು ಕನ್ನಡ ಭವನದ ಸ್ಥಾಪಕ ಅಧ್ಯಕ್ಷರಾದ ಡಾ. ವಾಮನ್ ರಾವ್ ಬೇಕಲ್ ಹಾಗೂ ಕಾರ್ಯದರ್ಶಿ ವಸಂತ್ ಕೆರೆಮನೆ ಪತ್ರಿಕಾ ಪ್ರಕಟಣೆಯಲ್ಲಿ…

Read More

ನಿಟ್ಟೆ ಕುಲಪತಿ ಡಾ.ವಿನಯ್ ಹೆಗ್ಡೆ ನಿಧನಕ್ಕೆ ಶಾಸಕ ಮಂಜುನಾಥ ಭಂಡಾರಿ ಸಂತಾಪ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ‌ಶೈಕ್ಷಣಿಕ-ಕೈಗಾರಿಕಾ ಕ್ರಾಂತಿ ನಡೆಸಿದ ನಿಟ್ಟೆ ಡೀಮ್ಡ್ ವಿಶ್ವವಿದ್ಯಾಲಯದ ಕುಲಪತಿ ಡಾ.ಎನ್.ವಿನಯ ಹೆಗ್ಡೆ ಅವರ ನಿಧನಕ್ಕೆ ಕೆಪಿಸಿಸಿ ಕಾರ್ಯಾಧ್ಯಕ್ಷ, ವಿಧಾನ ಪರಿಷತ್ ಶಾಸಕ ಮಂಜುನಾಥ ಭಂಡಾರಿ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.ವಿನಯ್ ಹೆಗ್ಡೆ ಅವರು ಶಿಕ್ಷಣ ತಜ್ಞ ಮಾತ್ರವಲ್ಲದೆ ಉದ್ಯಮಿ, ಸಮಾಜ ಸೇವಕರಾಗಿ ಹೆಸರು ಪಡೆದಿದ್ದರು. ಅವರು ನಿಟ್ಟೆ ಶಿಕ್ಷಣ ಸಂಸ್ಥೆಗಳ ವಿಸ್ತರಣೆಯಲ್ಲಿ ಗಮನಾರ್ಹ ಪಾತ್ರ ವಹಿಸಿದ್ದರು. ಶಿಕ್ಷಣ ಮತ್ತು ಸಮಾಜ ಸೇವೆಗಾಗಿ ಅವರು ರಾಜ್ಯೋತ್ಸವ ಪ್ರಶಸ್ತಿ, ಗೌರವ ಡಾಕ್ಟರೇಟ್ ಸಹಿತ ಹಲವು…

Read More
error: Content is protected !!