ಶಾಂತಿ ಸೇನಾ ಫೌಂಡೇಶನ್ ಹಾಗೂ ಗಾಂಧಿ ದರ್ಶನ ಸಮಿತಿಯಿಂದ ಗಾಂಧಿ ಜಯಂತಿ ಆಚರಣೆ ಮತ್ತು ವಿಚಾರಸಂಕಿರಣ

ಮಂಜೇಶ್ವರ:ಶಾಂತಿ ಸೇನಾ ಫೌಂಡೇಶನ್ (ರಿ) ಮಂಜೇಶ್ವರ ಹಾಗೂ ಗಾಂಧಿ ದರ್ಶನ ಸಮಿತಿ ಮಂಜೇಶ್ವರ ಇವುಗಳ ಜಂಟಿ ಆಶ್ರಯದಲ್ಲಿ ಮಹಾತ್ಮ ಗಾಂಧೀಜಿಯವರ ಜನ್ಮದಿನಾಚರಣೆಯ ಗಾಂಧಿ ಜಯಂತಿ ಪ್ರಯುಕ್ತ ಪುಷ್ಪಾರ್ಚನೆ, ಭಜನಾ ಕಾರ್ಯಕ್ರಮ ಹಾಗೂ ಗಾಂಧಿ ವಿಚಾರಸಂಕಿರಣ ಕಾರ್ಯಕ್ರಮವು ವರ್ಕಾಡಿಯ ಎ. ಎಚ್. ಪ್ಯಾಲೇಸ್ ಮೀಂಜದಲ್ಲಿ ಅತ್ಯಂತ ಶ್ರದ್ಧಾ-ಭಕ್ತಿ ಹಾಗೂ ವೈಭವದಿಂದ ನೆರವೇರಿತು.

​ಕಾರ್ಯಕ್ರಮವು ಸಭಾಂಗಣದಲ್ಲಿದ್ದ ಗಣ್ಯರು ಹಾಗೂ ಸಾರ್ವಜನಿಕರ ಉಪಸ್ಥಿತಿಯಲ್ಲಿ ಭಕ್ತಿಪೂರ್ವಕ ಪ್ರಾರ್ಥನೆಯೊಂದಿಗೆ ಶುಂಭಾರಂಭಗೊಂಡಿತು.

ಹಿರಿಯ ಕಾಂಗ್ರೆಸ್ ಮುಖಂಡರಾದ ಶ್ರೀಯುತ ಪಿ. ಸೋಮಪ್ಪನವರು ಮಹಾತ್ಮ ಗಾಂಧೀಜಿಯವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಗಾಂಧೀಜಿಯವರ ತ್ಯಾಗ ಹಾಗೂ ಆದರ್ಶಗಳನ್ನು ಸ್ಮರಿಸಿದರು.

​ಬಿಕಲಾಗಿ ಆಗಮಿಸಿದ ಎಲ್ಲ ಅಭ್ಯಾಗತರನ್ನು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದ ಕೇರಳ ಶಾಂತಿ ಸೇನಾ ಫೌಂಡೇಶನ್‌ನ ಸಂಚಾಲಕರು ಹಾಗೂ ಕಾಸರಗೋಡು ಜಿಲ್ಲಾ ಪಂಚಾಯತ್ ಸದಸ್ಯರಾದ ಶ್ರೀ ಹರ್ಷಾದ್ ವರ್ಕಾಡಿಯವರು, “ಸಮಾಜದಲ್ಲಿ ಶಾಂತಿ, ಸೌಹಾರ್ದತೆ ಮತ್ತು ಗಾಂಧೀಜಿಯವರ ಅಹಿಂಸಾ ತತ್ತ್ವಗಳನ್ನು ಜನಮಾನಸಕ್ಕೆ ತಲುಪಿಸುವುದೇ ಈ ಕಾರ್ಯಕ್ರಮದ ಮುಖ್ಯ ಉದ್ದೇಶ” ಎಂದು ಹೇಳಿದರು.

​ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಂಜೇಶ್ವರ ಗಾಂಧಿ ದರ್ಶನ ಸಮಿತಿಯ ಅಧ್ಯಕ್ಷರು ಹಾಗೂ ಪೈವಳಿಕೆ ಗ್ರಾಮ ಪಂಚಾಯತಿನ ಉಪಾಧ್ಯಕ್ಷರಾದ ಶ್ರೀ ರಾಘವೇಂದ್ರ ಭಟ್ ಟಿ. ವಹಿಸಿದ್ದರು.

ಪ್ರಸಿದ್ಧ ಗಾಯಕಿ ವಿದುಷಿ ಸಹನಾ ಶೆಟ್ಟಿ ಬಾಕ್ರಬೈಲು ಅವರಿಂದ ಮೂಡಿಬಂದ ಭಕ್ತಿಪೂರ್ವಕ ಭಜನಾ ಕಾರ್ಯಕ್ರಮವು ನೆರೆದಿದ್ದ ಸಭಿಕರ ಮನಸೂರೆಗೊಳಿಸಿತು.

​ಮುಖ್ಯ ಉಪನ್ಯಾಸಕರಾಗಿ ಭಾಗವಹಿಸಿದ್ದ ಉಳ್ಳಾಲದ ಮದನಿ ಪದವಿಪೂರ್ವ ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ಶ್ರೀಯುತ ಇಸ್ಮಾಯಿಲ್ ಟಿ. ಅವರು ಮಾತನಾಡಿ, “ಆಧುನಿಕ ಸಮಾಜದ ಸಂಘರ್ಷ ಮತ್ತು ಸವಾಲುಗಳಿಗೆ ಗಾಂಧಿವಾದವೇ ಶಾಶ್ವತ ಪರಿಹಾರ. ಗಾಂಧೀಜಿಯವರ ಸತ್ಯ, ಅಹಿಂಸೆ ಮತ್ತು ಪವಿತ್ರತೆಯ ತತ್ತ್ವಗಳು ಇಂದಿಗೂ ಸಾರ್ವಕಾಲಿಕ” ಎಂದು ನುಡಿದರು.

​
ಕಾರ್ಯಕ್ರಮದಲ್ಲಿ ವರ್ಕಾಡಿ ಗ್ರಾಮ ಪಂಚಾಯತು ಅಧ್ಯಕ್ಷರಾದ ಶ್ರೀ ಉಮ್ಮರ್ ಬೋರ್ಕಳ, ಮಂಜೇಶ್ವರ ಬ್ಲಾಕ್ ಪಂಚಾಯತು ಉಪಾಧ್ಯಕ್ಷರಾದ ಶ್ರೀಮತಿ ಕಮಲಾಕ್ಷಿ ಕೆ., ಮೀಂಜ ಗ್ರಾಮ ಪಂಚಾಯತು ಉಪಾಧ್ಯಕ್ಷರಾದ ಶ್ರೀಮತಿ ಉಷಾ ಪೂಂಜ, ವರ್ಕಾಡಿ ಗ್ರಾಮ ಪಂಚಾಯತು ಸ್ಥಾಯಿ ಸಮಿತಿ ಅಧ್ಯಕ್ಷರಾದ ಶ್ರೀ ಪುರುಷೋತ್ತಮ ಅರಿಬೈಲು, ವರ್ಕಾಡಿ ಸೇವಾ ಸಹಕಾರಿ ಬ್ಯಾಂಕ್ ಅಧ್ಯಕ್ಷರಾದ ಮೊಹಮ್ಮದ್ ಹನೀಫ್ ಎಚ್. ಎ., ಮೀಂಜ ಗ್ರಾಮ ಪಂಚಾಯತು ಸ್ಥಾಯಿ ಸಮಿತಿ ಅಧ್ಯಕ್ಷರಾದ ಸೌಮ್ಯ ಕೆ. ಕಳಿಯೂರು, ಪೈವಳಿಕೆ ಮಂಡಲ ಕಾಂಗ್ರೆಸ್ ಅಧ್ಯಕ್ಷರಾದ ಶ್ರೀಯುತ ವಸಂತ ಮಾಸ್ತರ್, ಅಬ್ದುಲ್ ಖಾದರ್ ಹಾಜಿ, ಕೃಷ್ಣವೇಣಿ ಟೀಚರ್, ಕಂಚಿಲ ಮೊಹಮ್ಮದ್, ಶಾಂತಾ ಆರ್. ನಾಯಕ್ ಹಾಗೂ ಅಬ್ದುಲ್ ಮಜೀದ್ ಬಿ. ಎ. ಸೇರಿದಂತೆ ಅನೇಕ ಪ್ರಮುಖರು ಗೌರವ ಉಪಸ್ಥಿತರಿದ್ದರು.

​ಮೀಂಜ ಮಂಡಲ ಕಾಂಗ್ರೆಸ್ ಅಧ್ಯಕ್ಷರಾದ ಶ್ರೀ ದಾಮೋದರ ಮಾಸ್ತರ್ ಕೆ. ಅವರು ಧನ್ಯವಾದ ಅರ್ಪಿಸಿದರು. ಶಿಕ್ಷಕಿ ಶ್ರೀಮತಿ ರೀಟಾ ಡಿ’ಸೋಜಾ ಅವರು ಕಾರ್ಯಕ್ರಮವನ್ನು ಅತ್ಯಂತ ಸಾಂಗವಾಗಿ ಹಾಗೂ ಅಚ್ಚುಕಟ್ಟಾಗಿ ನಿರೂಪಿಸಿದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!