ಸೌತ್ ಕೆನರಾ ಫೊಟೋಗ್ರಾಫರ್ ಅಸೋಸಿಯೇಷನ್ ನಿಂದ ಹಿರಿಯರ ಅನಾಥಶ್ರಮದಲ್ಲಿ ದೀಪಾವಳಿ ಸಂಭ್ರಮ
ಮಂಗಳೂರು 20: ಸೌತ್ ಕೆನರಾ ಫೊಟೋಗ್ರಾಫರ್ ಅಸೋಸಿಯೇಷನ್ , ದಕ್ಷಿಣ ಕನ್ನಡ ಜಿಲ್ಲೆ – ಉಡುಪಿ ಜಿಲ್ಲೆ, ಮಂಗಳೂರು ವಲಯದ ವತಿಯಿಂದರಜತ ಸಂಭ್ರಮ 2025-26 ಅಂಗವಾಗಿ ಲಲಿತಾ ಗೀತಾ ಅನಾಥಶ್ರಮದಲ್ಲಿ ಹಿರಿಯರ ಜೊತೆ ದೀಪಾವಳಿ ಹಬ್ಬದ ಆಚರಣೆಯನ್ನು ಸಂಭ್ರಮದಿಂದ ಆಚರಿಸಲಾಯಿತು. ಬಿಕರ್ಣಕಟ್ಟೆಯ ಬಳಿಯ ಲಲಿತಾ ಗೀತಾ ಅನಾಥಶ್ರಮ ಸಂಸ್ಥೆಯು ಸುಮಾರು 4 ವರ್ಷಗಳಿಂದ ನಿರಾಶ್ರಿತರಿಗೆ ಆಶ್ರಯ ನೀಡುತ್ತಿದೆ. ಈ ಸಂಸ್ಥೆಯ ಮುಖ್ಯಸ್ಥೆಯಾದ ಗೀತಾ ಅವರು ಮೂರು ನಿರಾಶ್ರಿತರಿಂದ ಸರಿಪಳ್ಳ ಪರಿಸರದಲ್ಲಿ ಆರಂಭ ಮಾಡಿದ ಈ ಅನಾಥಶ್ರಮ, ಈಗ…
