ಕನ್ನಡ ಮಾಧ್ಯಮ ಅಧ್ಯಾಪಕರ ಸಂಘ ದಿಂದ ಕ್ಲಸ್ಟರ್ ಬಹಿಷ್ಕಾರ ಹಾಗೂ ಮನವಿ ಸಲ್ಲಿಕೆ

ಉಪ್ಪಳ: ಕಾಸರಗೋಡಿನ ಭಾಷಾ ಅಲ್ಪಸಂಖ್ಯಾತ ಪ್ರದೇಶಗಳಲ್ಲಿನ ಕನ್ನಡ ಮಾಧ್ಯಮದ ವಿದ್ಯಾರ್ಥಿಗಳು ಮತ್ತು ಶಿಕ್ಷಕರ ಸಾಂವಿಧಾನಿಕ ಮತ್ತು ಭಾಷಾ ಹಕ್ಕುಗಳನ್ನು ಮರಳಿ ಸ್ಥಾಪಿಸುವ ಉದ್ದೇಶದಿಂದ ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕರ ಸಂಘದ ನೇತೃತ್ವದಲ್ಲಿ ಕ್ಲಸ್ಟರ್ ಬಹಿಷ್ಕಾರ ನಡೆಸಲಾಯಿತು. ತದನಂತರ ಮಂಜೇಶ್ವರ ಉಪಜಿಲ್ಲಾ ಸಮಿತಿಯ ನೇತೃತ್ವದಲ್ಲಿ ಉಪಜಿಲ್ಲಾ ಕಚೇರಿಗೆ ಭೇಟಿ ನೀಡಿ, ಶಿಕ್ಷಕರ ಕೈ ಪಿಡಿಗಳನ್ನು ಒದಗಿಸಬೇಕು, ಶಾಸ್ತ್ರೋತ್ಸವ ಮತ್ತು ಕಲೋತ್ಸವಗಳಲ್ಲಿ ಕನ್ನಡ ಮಾಧ್ಯಮದ ವಿದ್ಯಾರ್ಥಿಗಳಿಗೂ ಸಮಾನ ಅವಕಾಶಗಳನ್ನು ನೀಡಬೇಕು, ಭಾಷಾ ಅಲ್ಪಸಂಖ್ಯಾತರ ಹಕ್ಕುಗಳನ್ನು ಸಂರಕ್ಷಣೆ ಮಾಡಬೇಕು, ದ್ವಿ…

Read More

ಅಕ್ಟೋಬರ್ 24 ಕ್ಕೆ ಬೋಳೂರಿನ ನೂತನ ಶ್ರೀ ಮಹಾಮಾಯಿ ದೇವರ ಗರ್ಭಗುಡಿಯ ಶಿಲಾನ್ಯಾಸ ಕಾರ್ಯಕ್ರಮ …. !

ಇತಿಹಾಸ ಪ್ರಸಿದ್ಧ ಬೋಳೂರಿನ ಶ್ರೀ ವೀರಭದ್ರ ಮಹಾಮಾಯಿ ದೇವಸ್ಥಾನದ ಜೀರ್ಣೋದ್ಧಾರ ಮತ್ತು ಬ್ರಹ್ಮಕಲಶೋತ್ಸವ ಸಮಿತಿಯ ಆಶ್ರಯದಲ್ಲಿ ನೂತನ ಶ್ರೀ ಮಹಾಮಾಯಿ ದೇವರ ಗರ್ಭಗುಡಿಯ ಶಿಲಾನ್ಯಾಸ ಸಮಾರಂಭವು ಅಕ್ಟೋಬರ್ 24 ರಂದು ಪೂರ್ವಾಹ್ನ 8.04 ರಿಂದ ಶುರುವಾಗಲಿದೆ ಎಂದು ಜೀರ್ಣೋದ್ದಾರ ಮತ್ತು ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷರಾದ ಬಾಲಕೃಷ್ಣ ಕಲ್ಬಾವಿ ತಿಳಿಸಿದರು . ಅವರು ಪತ್ರಿಕಾ ಭವನದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿ , ಅಂದಾಜು ೩. ೯೨ ಕೋಟಿಗೂ ಅಧಿಕ ವೆಚ್ಚದಲ್ಲಿ ನಿರ್ಮಾಣ ಕಾರ್ಯನಡೆಯುವ ಈ…

Read More

ಮಿಡಲ್ ಕ್ಲಾಸ್ ಫ್ಯಾಮಿಲಿ’ ಅಕ್ಟೋಬರ್ 25ರಿಂದ ಯೂಟ್ಯೂಬ್ ನಲ್ಲಿ ಬಿಡುಗಡೆ .

ಮಂಗಳೂರು:ಥಿಯೇಟರ್‌ನಲ್ಲಿ ಬರೋಬ್ಬರಿ 160 ದಿನಗಳ ಕಾಲ ಆರ್ಭಟಿಸಿದ್ದ ತುಳು ಚಿತ್ರ ‘ಮಿಡಲ್ ಕ್ಲಾಸ್ ಫ್ಯಾಮಿಲಿ’ ಅಕ್ಟೋಬರ್ 25ರಿಂದ ಯೂಟ್ಯೂಬ್ ನಲ್ಲಿ ಉಚಿತವಾಗಿ ವೀಕ್ಷಕರಿಗೆ ದೊರೆಯುವ ಮೂಲಕ ತುಳು ಚಿತ್ರಪ್ರೇಮಿಗಳಿಗೆ ಮನರಂಜಿಸಲು ಸಜ್ಜಾಗಿದೆ ಎಂದು ಚಿತ್ರ ತಂಡ ಘೋಷಿಸಿದೆ. ಈ ಕುರಿತಂತೆ ಮಂಗಳೂರಿನ ಪ್ರೆಸ್‌ಕ್ಲಬ್‌ನಲ್ಲಿ ಮಾಹಿತಿ ನೀಡಿದ ಚಿತ್ರದ ನಿರ್ಮಾಪಕ ಆನಂದ್ ಎನ್. ಕುಂಪಲ, ನಿರ್ದೇಶಕ ರಾಹುಲ್ ಅಮೀನ್, ನಾಯಕ ನಟ ವಿನಿತ್ ಕುಮಾರ್ ಮತ್ತು ನಾಯಕ ನಟಿ ಸಮತಾ ಅಮೀನ್ 2025ರ ಜನವರಿ 31ರಂದು ತುಳುನಾಡಿನಾದ್ಯಂತ ಅದ್ಧೂರಿಯಾಗಿ…

Read More

ಮಂಗಳೂರು ನಗರದ ಬಜಿಲಕೇರಿಯ ಮುಖ್ಯಪ್ರಾಣ ದೇವಸ್ಥಾನದ ಗೋವುಗಳಿಗೆ ಗೋ ಪೂಜೆ

ಮಂಗಳೂರು: ಮಂಗಳೂರು ನಗರದ ಬಜಿಲಕೇರಿಯ ಮುಖ್ಯಪ್ರಾಣ ದೇವಸ್ಥಾನದ ವಠಾರದಲ್ಲಿರುವ ಶ್ರೀಯುತ ಗುರುರಾಜ್ ಭಟ್ ರವರ ಮಾಲೀಕತ್ವದ ಗೋ – ಶಾಲೆಯಲ್ಲಿ ಸಾಮರಸ್ಯ ಮಂಗಳೂರು ವತಿಯಿಂದ 33 ಕೋಟಿ ದೇವತೆಗಳ ಅವಾಸಸ್ಥಾನವಾಗಿರುವ ಗೋ- ಮಾತೆಯ ಪೂಜೆಯನ್ನು ಆಚರಿಸಲಾಯಿತು. ಹಿಂದೂ ಧರ್ಮದಲ್ಲಿ ಹಸುವಿಗೆ ವಿಶೇಷ ಸ್ಥಾನ, ಮಾನ, ಗೌರವವಿದೆ. ಹಸುವನ್ನು ಪೂಜನೀಯ ಭಾವನೆಯಿಂದ ಕಾಣಲಾಗುತ್ತದೆ. ಅಷ್ಟು ಮಾತ್ರವಲ್ಲ ಹಿಂದೂ ಧರ್ಮಗ್ರಂಥಗಳಲ್ಲಿ ಹಸುವಿಗೆ ತಾಯಿಯ ಸ್ಥಾನವನ್ನು ನೀಡಲಾಗಿದೆ. ಹಸುವಿನಲ್ಲಿ 33 ಕೋಟಿ ದೇವಾನುದೇವತೆಗಳು ನೆಲೆಸಿದ್ದಾರೆಂದು ನಂಬಲಾಗುತ್ತದೆ – ಸಾಮರಸ್ಯ ಮಂಗಳೂರು ಅಧ್ಯಕ್ಷೆ…

Read More

ಯಂಗ್‌ ಇಂಡಿಯನ್ಸ್ ಆಲೋಚನೆಗಳಿಂದ ಶ್ರೀಮಂತವಾಗಲಿದೆ ಕರಾವಳಿಯ ಕಡಲ ಕಿನಾರೆ …. !

ಮಂಗಳೂರು: ಯಂಗ್‌ ಇಂಡಿಯನ್ಸ್ (Yi) ಎನ್ನುವುದು ಭಾರತದ ಯುವಕರು ಒಟ್ಟುಗೂಡಿ, ನಾಯಕತ್ವ ವಹಿಸಿ, ಸಹಸ್ರಜನಶೀಲತೆಯ ಮೂಲಕ ಭಾರತದ ಭವಿಷ್ಯವನ್ನು ಪ್ರಭಾವಿತಗೊಳಿಸುವ ಚಳುವಳಿಯಾಗಿದೆ. ಇದು ಭಾರತೀಯ ಕೈಗಾರಿಕಾ ಪರಿಷತ್ (Confederation of Indian Industry – CII)ನ ಅವಿಭಾಜ್ಯ ಅಂಗವಾಗಿದ್ದು ಸರ್ಕಾರೇತರ, ಲಾಭರಹಿತ, ಕೈಗಾರಿಕೆ ಮುನ್ನಡೆಸುವ ಮತ್ತು ನಿರ್ವಹಿಸುವ ಸಂಸ್ಥೆಯಾಗಿದೆ ಇದು ಭಾರತದ ಅಭಿವೃದ್ಧಿ ಪ್ರಕ್ರಿಯೆಯಲ್ಲಿ ಸಕ್ರಿಯ ಪಾತ್ರವಹಿಸುವ ಸಂಸ್ಥೆಯಾಗಿದ್ದು ಈಗಾಗಲೇ ಸಾಕಷ್ಟು ಸಾಹಸ ಕಾರ್ಯಗಳಲ್ಲಿ ಯಶಸ್ಸನ್ನು ಸಾಧಿಸಿದೆ ಎಂದು ಸಾಲೋಮೆ ಲೋಬೊ ಪೆರೇರಾ ತಿಳಿಸಿದರು . ನಗರದ…

Read More

11 ತಿಂಗಳ ಮಗು ನೀರಿನ ಟಬ್ ಗೆ ಬಿದ್ದು ಸಾವು !

ಬೆಂಗಳೂರು: ಚನ್ನಪಟ್ಟಣ ನಗರದ ಜೀವನ್ ಪುರ ನಗರದಲ್ಲಿ ನೀರಿನ ಟಬ್ ಗೆ ಬಿದ್ದು 11 ತಿಂಗಳ ಮಗು ಸಾವನ್ನಪ್ಪಿರುವ ಘಟನೆ ನಡೆದಿದೆ.ಮೃತ ಬಾಲಕಿಯನ್ನು ಖುಷಿ ಎಂದು ಗುರುತಿಸಲಾಗಿದೆ. ಚನ್ನಪಟ್ಟಣದಲ್ಲಿರುವ ಖಾಸಗಿ ಹೋಟೆಲ್‌ನಲ್ಲಿ ಅಡುಗೆ ಕೆಲಸ ಮಾಡುತ್ತಿದ್ದ ಶಂಷಾದ್ ಕೆಲಸ ಮುಗಿಸಿಕೊಂಡು ಮನೆಗೆ ಬಂದ ನಂತರ ತೀವ್ರ ಬಾಯಾರಿಕೆಯಿಂದ ಪತ್ನಿ ಮುಸ್ಕಾನ್ ಅವರ ಬಳಿ ಕುಡಿಯಲು ನೀರು ಕೇಳಿದ್ದರು. ಪತಿಗಾಗಿ ನೀರು ತರಲು ಮುಸ್ಕಾನ ಅಡುಗೆ ಮನೆಗೆ ತೆರಳಿದ್ದಾಗ, ಮನೆಯೊಳಗೆ ಆಟವಾಡುತ್ತಿದ್ದ ಮಗು ಖುಷಿ ಟಬ್‌ನಲ್ಲಿದ್ದ ನೀರಿನೊಳಗೆ ಬಿದ್ದಿದೆ….

Read More

ಕಾರ್ಕಳ: ಯುವಕನ ಆತ್ಮಹತ್ಯೆ ಪ್ರಕರಣ; ವಿಧಿವಿಜ್ಞಾನ ವಿಶ್ಲೇಷಣೆಗೆ ಮೊಬೈಲ್ ಫೋನ್ ರವಾನೆ

ಉಡುಪಿ, ಅ. 21 : ಕಾರ್ಕಳದ ಬೆಳ್ಮಣ್‌ನ ಲಾಡ್ಜ್‌ನಲ್ಲಿ ಇತ್ತೀಚೆಗೆ ನಡೆದ ಅಭಿಷೇಕ್ ಆಚಾರ್ಯ ಅವರ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಮೃತನ ಮೊಬೈಲ್ ಫೋನ್ ಅನ್ನು ಹೆಚ್ಚಿನ ತನಿಖೆಗಾಗಿ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್ ತಿಳಿಸಿದ್ದಾರೆ. “ತನಿಖಾ ತಂಡವು ಫೋನ್ ದತ್ತಾಂಶ, ಬ್ಯಾಂಕ್ ವಹಿವಾಟುಗಳು ಮತ್ತು ಚಾಟ್ ದಾಖಲೆಗಳ ಆಧಾರದ ಮೇಲೆ ಆರೋಪಿಯನ್ನು ಪ್ರಶ್ನಿಸಿದೆ. ಆರೋಪಿಯ ಡಿಜಿಟಲ್ ಸಾಧನಗಳನ್ನು ಸಹ ಪರಿಶೀಲಿಸಲಾಗಿದೆ. ಇದರ ಜೊತೆಗೆ, ಮೃತನ ಸ್ನೇಹಿತರು, ಸಂಬಂಧಿಕರು ಮತ್ತು ಆಪ್ತರನ್ನೂ ವಿಚಾರಣೆ…

Read More

ಶ್ರೀರಾಮ್ ಫೈನಾನ್ಸ್ ಲಿಮಿಟೆಡ್ ಉಪ್ಪಳ ಶಾಖೆ ವತಿಯಿಂದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ.

ಮಂಜೇಶ್ವರ: ಶ್ರೀರಾಮ್ ಫೈನಾನ್ಸ್ ಲಿಮಿಟೆಡ್ ಉಪ್ಪಳ ಶಾಖೆ ವತಿಯಿಂದ ಎಸ್.ಎ.ಟಿ ಶಾಲೆಯಲ್ಲಿ ಶೈಕ್ಷಣಿಕ ವರ್ಷದಲ್ಲಿ ಶೇಕಡ 60 ಕ್ಕಿಂತ ಅಧಿಕ ಅಂಕಗಳನ್ನು ಗಳಿಸಿದ ವಿದ್ಯಾರ್ಥಿಗಳಿಗೆ ಅವರ ವಿದ್ಯಾಭ್ಯಾಸಕ್ಕೆ ಮತ್ತಷ್ಟು ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ವಿದ್ಯಾರ್ಥಿ ವೇತನ ಕಾರ್ಯಕ್ರಮ ನಡೆಯಿತು. ಝೋನಲ್ ಬಿಸಿನೆಸ್ ಹೆಡ್ ಎಸ್.ಎಫ್. ಎಲ್ ಶ್ರೀಜಿತ್ ಏನ್ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಂಜೇಶ್ವರ ಗ್ರಾಮ ಪಂಚಾಯತ್ ಅಧ್ಯಕ್ಷೆ ಜೀನ್ ಲವೀನಾ ಮೊಂತೇರೊ, ಮಂಜೇಶ್ವರ ಬ್ಲಾಕ್ ಪಂಚಾಯತ್ ಸದಸ್ಯೆ ಅಶ್ವಿನಿ ಎಂ.ಎಲ್ ,ಎಸ್.ಎ.ಟಿ ಶಾಲೆಯ ಮುಖ್ಯೋಪದ್ಯಾನಿ…

Read More

ವರ್ಕಾಡಿ ಪಂಚಾಯತ್ ವ್ಯಾಪ್ತಿಯಲ್ಲಿ ಕಟ್ಟಿಬೆಳೆಸಿ ಜೀವನವನ್ನೇ ಸಂಘಟನೆಗೆ ತೈದ ನಾಯಕ ಕೆ. ಪಕೀರ ಶೆಟ್ಟಿಗಾರ್ ಸ್ಮಾರಕ ಮಂದಿರ ಉದ್ಘಾಟನೆ .

ವರ್ಕಾಡಿ ಪಂಚಾಯತಿನ ಕೊಡ್ಲಮೊಗರು ಪಾತೂರು ಗ್ರಾಮದಲ್ಲಿ ಸಿ ಪಿ ಐ ಎಂ ಪಕ್ಷದ ಸಂಘಟನೆಗಾಗಿ ಹಗಲಿರುಳು ಎನ್ನದೆ ದುಡಿದು ತನ್ನ ಜೀವನವನ್ನೇ ಜನರ ಹಿತಕ್ಕಾಗಿ ಮುಡಿಪಾಗಿರಿಸಿ ಹಲವಾರು ವರ್ಷಗಳ ಕಾಲ ಲೋಕಲ್ ಕಮಿಟಿ ಕಾರ್ಯದರ್ಶಿಯಾಗಿದ್ದ ಶ್ರೀಯುತ ಕೆ. ಪಕೀರ ಶೆಟ್ಟಿಗಾರ್ ರ ಸವಿ ನೆನಪಿಗಾಗಿ ಕೊಡ್ಲಮೊಗರು ಲೋಕಲ್ ಕಮಿಟಿಯವರು ಊರ ಪರವೂರ ದಾನಿಗಳ ಸಹಕಾರದಿಂದ ನಿರ್ಮಿಸಿದ ಸ್ಮಾರಕ ಮಂದಿರದ ಉದ್ಘಾಟನಾ ಸಮಾರಂಭವು ಅಕ್ಟೊಬರ್ -19 ರಂದು ನಡೆಯಿತು. ಕೆ . ಪಕೀರ ಶೆಟ್ಟಿಗಾರ್ ಸ್ಮಾರಕ ಮಂದಿರವನ್ನು ಸಿ.ಪಿ….

Read More

ಸಮ ಸಮಾಜ ನಿರ್ಮಾಣವಾಗಲು ಉಳ್ಳವರು ಇಲ್ಲದವರಿಗೆ ಕೊಡಬೇಕು: ಮುಖ್ಯಮಂತ್ರಿ ಸಿದ್ದರಾಮಯ್ಯ

ಪುತ್ತೂರು: ಸಮ ಸಮಾಜ ನಿರ್ಮಾಣವಾಗಲು ಉಳ್ಳವರು ಇಲ್ಲದವರಿಗೆ ಕೊಡಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.ಅವರು ಇಂದು ರೈ ಎಸ್ಟೇಟ್ ಎಜುಕೇಷನಲ್ ಮತ್ತು ಚಾರಿಟೇಬಲ್ ಟ್ರಸ್ಟ್ ಪುತ್ತೂರು ಇವರ ವತಿಯಿಂದ ತಾಲೂಕು ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದ್ದ ಅಶೋಕ ಜನ-ಮನ 2025 ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.ಅಶೋಕ್ ಅವರು ಕಾಂಗ್ರೆಸ್ ಶಾಸಕರಾಗಿ ಕೆಲಸ ಮಾಡುತ್ತಿದ್ದಾರೆ. ಟ್ರಸ್ಟ್ ವತಿಯಿಂದ ಪ್ರತಿ ವರ್ಷ ವಸ್ತ್ರದಾನ ಮಾಡುವ ಕಾರ್ಯವನ್ನು 13 ವರ್ಷಗಳಿಂದ ಮಾಡ್ತಾ ಬರುತ್ತಿದ್ದಾರೆ. ಒಂದು ಲಕ್ಷ ಜನರಿಗೆ ಇಂದು ವಸ್ತ್ರದಾನ ಮಾಡುತ್ತಿದ್ದಾರೆ. ಇತರರಿಗೆ ಅವರು ಸ್ಫೂರ್ತಿಯಾಗಲಿ…

Read More
error: Content is protected !!