ನಿಲ್ಲಿಸಿದ್ದ ಲಾರಿಗೆ ಟ್ಯಾಂಕರ್ ಡಿಕ್ಕಿ ಹೊಡೆದು ಬೆಂಕಿ: ಇಬ್ಬರ ದುರ್ಮರಣ
ಕಾಸರಗೋಡು : ಪಯ್ಯನ್ನೂರು ಪಿಲಾತರ ಮಂಡೂರಿನಲ್ಲಿ ಸೋಮವಾರ ಮುಂಜಾನೆ ನಿಲ್ಲಿಸಿದ್ದ ಲಾರಿಗೆ ಟ್ಯಾಂಕರ್ ಲಾರಿ ಡಿಕ್ಕಿ ಹೊಡೆದು ಸಂಭವಿಸಿದ ಭೀಕರ ಅಗ್ನಿ ದುರಂತದಲ್ಲಿ ಇಬ್ಬರು ಸುಟ್ಟು ಕರಕಲಾಗಿ ಸಾವನ್ನಪ್ಪಿದ್ದಾರೆ. ಇಂದು ಮುಂಜಾನೆ ಮೂರೂವರೆ ಗಂಟೆಯ ಸುಮಾರಿಗೆ ಈ ಅಪಘಾತ ಸಂಭವಿಸಿದೆ. ರಸ್ತೆ ಬದಿಯಲ್ಲಿ ತಾಂತ್ರಿಕ ದೋಷದಿಂದ ನಿಲ್ಲಿಸಲಾಗಿದ್ದ ಮರ ಸಾಗಾಣಿಕೆಯ ಲಾರಿಗೆ, ವೇಗವಾಗಿ ಬಂದ ಟ್ಯಾಂಕರ್ ಲಾರಿ ಹಿಂದಿನಿಂದ ಬಂದು ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಟ್ಯಾಂಕರ್ ಲಾರಿಗೆ ತಕ್ಷಣವೇ ಬೆಂಕಿ ಹೊತ್ತಿಕೊಂಡಿದ್ದು, ಅದು ಸಂಪೂರ್ಣವಾಗಿ ಬೆಂಕಿಗೆಾತಿಗಿಹೋಗಿದೆ….
