ಪುತ್ತೂರು ದರ್ಬೆಯಲ್ಲಿ ನಡೆದ ಘಟನೆಯಲ್ಲಿ ಪೋಲಿಸರ ಮುಂದೆಯೆ ಹಲ್ಲೆ ಮತ್ತು ಗುಂಪು ಸೇರಿ ಗಲಭೆ ಯತ್ನ – ವಿಶ್ವ ಹಿಂದೂ ಪರಿಷದ್ ಬಜರಂಗದಳ ಪುತ್ತೂರು ವತಿಯಿಂದ ಖಂಡನೆ

ಪುತ್ತೂರು ದರ್ಬೆ ವೃತ್ತದ ಬಳಿಯಿರುವ ಅಂಗಡಿಯಲ್ಲಿ ನಡೆದ ಘಟನೆಯನ್ನು ಮುಂದಿಟ್ಟುಕೊಂಡು ಕಾನೂನಿನ ಮೊರೆ ಹೋಗದೆ ಒಂದು ಮತದ ವ್ಯಕ್ತಿಗಳ ಪರವಾಗಿ ಗುಂಪು ಸೇರಿ ಗಲಭೆಗೆ ಯತ್ನಿಸಿರುವುದಲ್ಲದೇ ಪೋಲಿಸರ ಮುಂದೆಯೆ ಹಲ್ಲೆ ನಡೆಸಿದ ಘಟನೆಯನ್ನು ವಿಶ್ವ ಹಿಂದೂ ಪರಿಷದ್ ಬಜರಂಗದಳ ತೀವ್ರವಾಗಿ ಖಂಡಿಸುತ್ತದೆ. ಅಂಗಡಿಯಲ್ಲಿ ನಡೆದ ವಾಗ್ವಾದ ಮತ್ತು ಹಲ್ಲೆ ವಿಷಯವಾಗಿ ಪೋಲಿಸರಿಗೆ ದೂರು ನೀಡುವ ಬದಲು ಒಂದು ಕೋಮಿನ ವ್ಯಕ್ತಿಗಳು ಗಂಪು ಸೇರಿ ಸ್ಥಳದಲ್ಲಿ ಭಯದ ವಾತಾವರಣ ಸೃಷ್ಟಿಸುವ ಮೂಲಕ ಕಾನೂನನ್ನು ಕೈಗೆತ್ತಿಕೊಳ್ಳಲು ಮುಂದಾಗಿ ಪೋಲಿಸರ ಮುಂದೆಯೆ…

Read More

ಅಧಿವೇಶನಕ್ಕೆ ಪ್ರತಿಪಕ್ಷ ಅಡ್ಡಿಪಡಿಸಿ ಜನರ ತೆರಿಗೆ ಹಣ, ಸದನದ ಸಮಯ ವ್ಯರ್ಥಮಾಡಿದೆ : ಯು.ಟಿ. ಖಾದರ್

ಮಂಗಳೂರು:ವಿಧಾನಮಂಡಲದ ಅಧಿವೇಶನ ನಡೆಯಲು ಅವಕಾಶ ನೀಡದೆ ಪ್ರತಿಪಕ್ಷ ಗದ್ದಲ ಸೃಷ್ಟಿಸಿರುವುದು ಜನಸಾಮಾನ್ಯರ ತೆರಿಗೆ ಹಣ ಹಾಗೂ ಸದನದ ಸಮಯವನ್ನು ವ್ಯರ್ಥ ಮಾಡಿದಂತಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ಅಲ್ಪಸಂಖ್ಯಾತರ ಕಲ್ಯಾಣ, ಹಜ್ ಮತ್ತು ವಕ್ಫ್ ಸಚಿವ ಯು.ಟಿ. ಖಾದರ್ ಆರೋಪಿಸಿದ್ದಾರೆ. ಮಂಗಳೂರಿನ ಸರ್ಕ್ಯೂಟ್ ಹೌಸ್‌ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಧಾನಸಭೆ ಮತ್ತು ವಿಧಾನ ಪರಿಷತ್ತು ಜನರ ಸಮಸ್ಯೆಗಳನ್ನು ಚರ್ಚಿಸುವ ವೇದಿಕೆಯಾಗಬೇಕೇ ಹೊರತು ರಾಜಕೀಯ ಮಾಡುವ ಸ್ಥಳವಾಗಬಾರದು ಎಂದರು. ರಾಜ್ಯದ ಕೆಲವೆಡೆ ಬರಗಾಲ, ಇನ್ನೂ ಕೆಲವೆಡೆ…

Read More

ತೆರೆದ ಬಾವಿಗೆ ಬಿದ್ದು ಇಬ್ಬರು ಬಾಲಕಿಯರ ದಾರುಣ ಸಾವು; ತಂದೆಗಾಗಿ ಶೋಧ

ವಿಜಯಪುರ: ಜಿಲ್ಲೆಯ ನಿಡಗುಂದಿ ತಾಲೂಕಿನ ಬಳಬಟ್ಟಿ ಗ್ರಾಮದ ತೋಟದ ಮನೆಯಲ್ಲಿ ಇಬ್ಬರು ಮಕ್ಕಳು ಕಾಲು ಜಾರಿ ತೆರೆದ ಬಾವಿಗೆ ಬಿದ್ದು ಮೃತಪಟ್ಟಿರುವ ದಾರುಣ ಘಟನೆ ನಡೆದಿದೆ. ಮೃತರನ್ನು 9ನೇ ತರಗತಿ ವಿದ್ಯಾರ್ಥಿನಿ ಸಾಕ್ಷಿ ಹಾಗೂ ರಕ್ಷಿತಾ ಎಂದು ಗುರುತಿಸಲಾಗಿದೆ. ಇಬ್ಬರೂ ಬಾವಿಗೆ ಬಿದ್ದ ಘಟನೆ ನಿನ್ನೆ ನಡೆದಿದ್ದು, ತಡರಾತ್ರಿ ಮಕ್ಕಳ ಮೃತದೇಹಗಳನ್ನು ಪತ್ತೆಹಚ್ಚಲಾಗಿದೆ. ಮಕ್ಕಳನ್ನು ರಕ್ಷಿಸಲು ಅವರ ತಂದೆ ಸಾಬಣ್ಣ (40) ಕೂಡ ಬಾವಿಗೆ ಜಿಗಿದಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಸಾಬಣ್ಣ ಅವರಿಗಾಗಿ ಶೋಧ ಕಾರ್ಯ ಮುಂದುವರಿದಿದೆ….

Read More

ಪುತ್ತೂರು ದರ್ಬೆ ಡಿಜಿಟಲ್ ಸೇವಾ ಕೇಂದ್ರದಲ್ಲಿ ಮಾತಿನ ಚಕಮಕಿ: ಗುಂಪು ಗಲಾಟೆ, ಪೊಲೀಸರಿಂದ ಲಾಠಿಚಾರ್ಜ್

ಪುತ್ತೂರು:ಪುತ್ತೂರಿನ ದರ್ಬೆ ಡಿಜಿಟಲ್ ಸೇವಾ ಕೇಂದ್ರವೊಂದರಲ್ಲಿ ಕೇಂದ್ರದ ಸಿಬ್ಬಂದಿ ಹಾಗೂ ಗ್ರಾಹಕಿ ಓರ್ವರ ನಡುವೆ ಮಾತಿನ ಚಕಮಕಿ ನಡೆದು, ಎರಡೂ ಕಡೆಯವರ ಬೆಂಬಲಿಗರು ಗುಂಪುಗೂಡಿದ್ದು, ಬಳಿಕ ಪೊಲೀಸರಿಂದ ಲಾಠಿಚಾರ್ಜ್ ನಡೆದ ಘಟನೆ ಆ.21ರಂದು ಶುಕ್ರವಾರ ಸಂಜೆ ನಡೆದಿದೆ. ಬಳಿಕ ಇತ್ತಂಡದಿಂದ ಪುತ್ತೂರು ನಗರ ಠಾಣೆಯಲ್ಲಿ ದೂರು ದಾಖಲಾಗಿರುವ ಬಗ್ಗೆ ತಿಳಿದುಬಂದಿದೆ. ಪುತ್ತೂರಿನ ದರ್ಬೆ ಡಿಜಿಟಲ್ ಸೇವಾ ಕೇಂದ್ರದಲ್ಲಿ ಜೆರಾಕ್ಸ್ ಮಾಡಲೆಂದು ಅಂಗಡಿಗೆ ಮಹಿಳೆಯೊಬ್ಬರು ಗ್ರಾಹಕಿಯಾಗಿ ಬಂದಿದ್ದ ವೇಳೆ ಯಾವುದೋ ವಿಚಾರಕ್ಕೆ ಸಂಬಂಧಿಸಿ ಮಹಿಳಾ ಸಿಬ್ಬಂದಿ ಹಾಗೂ ದರ್ಬೆ…

Read More

ರಂಗ ಡಿಂಡಿಮದ ವತಿಯಿಂದ ಕಾಸರಗೋಡು ಜಿಲ್ಲಾ ಮಟ್ಟದ ರಂಗ ಭೂಮಿ ಕಾರ್ಯಗಾರ

ಕುಂಬಳೆ : ರಂಗ ಡಿಂಡಿಮ (ರಿ )ಕಾಸರಗೋಡು ಇದರ ನೇತೃತ್ವದಲ್ಲಿ ಕಾಸರಗೋಡು ಜಿಲ್ಲಾ ಮಟ್ಟದ ಒಂದು ದಿನದ ರಂಗಭೂಮಿ ಕಾರ್ಯಗಾರ ಕುಂಬಳೆ ಹೋಲಿ ಪ್ಯಾಮಲಿ ಶಾಲೆಯಲ್ಲಿ ಇಂದು ಜರಗಲಿದೆ. ಕಾರ್ಯಕ್ರಮ ದ ಉದ್ಘಾಟನೆಯನ್ನು ಚುಟುಕು ಕವಿ, ರಂಗ ಭೂಮಿ ನಟ ಹರೀಶ್ ಸುಲಾಯ ಒಡ್ಡಬೆoಟ್ಟು ನೆರವೇರಿಸಲಿರುವರು. ರಂಗ ಡಿಂಡಿಮದ ಅಧ್ಯಕ್ಷರಾದ ಉದಯ್ ಸಾರಂಗ್ ರವರ ಅಧ್ಯಕ್ಷತೆಯಲ್ಲಿ ಜರಗುವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಸಾಮಾಜಿಕ ಸಾಂಸ್ಕೃತಿಕ ಮುಂದಾಳು ಪ್ರಭಾವತಿ ಕೆದಿಲಾಯ ಭಾಗವಹಿಸುವರು. ಕಾರ್ಯಕ್ರಮದಲ್ಲಿ ಎ ಬಿ ಮಧುಸೂದಾನ್ ಬಳ್ಳಾಲ್,ಪತ್ರಕರ್ತರಾದ…

Read More

ನಕಲಿ ಔಷಧ ಜಾಲದ ಹಿಂದೆ ದೊಡ್ಡ ಮಾಫಿಯಾ: ಯು.ಟಿ. ಖಾದರ್

ಮಂಗಳೂರು: ನಕಲಿ ಔಷಧಗಳ ಜಾಲ ಅತ್ಯಂತ ಗಂಭೀರವಾಗಿದ್ದು, ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ. ಈ ಜಾಲ ಕೇವಲ ರಾಮನಗರ ಜಿಲ್ಲೆ ಅಥವಾ ಕರ್ನಾಟಕಕ್ಕೆ ಮಾತ್ರ ಸೀಮಿತವಾಗಿರಲು ಸಾಧ್ಯವಿಲ್ಲ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ಅಲ್ಪಸಂಖ್ಯಾತರ ಕಲ್ಯಾಣ, ಹಜ್ ಮತ್ತು ವಕ್ಫ್ ಸಚಿವ ಯು.ಟಿ. ಖಾದರ್ ಹೇಳಿದ್ದಾರೆ. ಮಂಗಳೂರಿನ ಸರ್ಕ್ಯೂಟ್ ಹೌಸ್‌ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿಮಾಚಲ ಪ್ರದೇಶ ಹಾಗೂ ತೆಲಂಗಾಣ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಅನಧಿಕೃತವಾಗಿ ಔಷಧ ತಯಾರಿಸಿ, ಅವುಗಳಿಗೆ ಪ್ರತಿಷ್ಠಿತ ಬಹುರಾಷ್ಟ್ರೀಯ ಕಂಪನಿಗಳ ನಕಲಿ…

Read More

ಆಗಸ್ಟ್ 23ರಂದು ಗುರುಪುರದಲ್ಲಿ ಮಡಿವಾಳ ಸಮಾಜದ ಕೆಸರುಗದ್ದೆ ಕಾರ್ಯಕ್ರಮ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಮಡಿವಾಳರ ಸಂಘ, ರಜಕ ಯೂತ್, ಮಹಿಳಾ ಘಟಕ ಕುಡ್ಲ ಹಾಗೂ ಸರ್ವ ತಾಲೂಕು ಸಂಘಗಳ ಆಶ್ರಯದಲ್ಲಿ, ಸೇವಾ ಬ್ರಿಗೇಡ್ ಗುರುಪುರ ಸಹಕಾರದೊಂದಿಗೆ ಮಡಿವಾಳ ಸಮಾಜದವರಿಗಾಗಿ ‘ಕೆಸರ್ ದ ಕಂಡಡೊಂಜಿ ದಿನ’ ಕಾರ್ಯಕ್ರಮ ಆಗಸ್ಟ್ 23ರಂದು ಗುರುಪುರ ಕುಕ್ಕುದಕಟ್ಟೆಯ ಶ್ರೀ ವೈದ್ಯನಾಥ ದೈವಸ್ಥಾನದ ಬಂಡಿಗದ್ದೆಯಲ್ಲಿ ನಡೆಯಲಿದೆ. ಗ್ರಾಮೀಣ ಬದುಕು, ಕೃಷಿ ಸಂಸ್ಕೃತಿ ಹಾಗೂ ಸಮಾಜದ ಒಗ್ಗಟ್ಟನ್ನು ಪ್ರತಿಬಿಂಬಿಸುವ ರೀತಿಯಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ಮಡಿವಾಳ ಸಮಾಜದ ಕುಟುಂಬಗಳು, ಯುವಕರು ಹಾಗೂ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ…

Read More

ಕಾಸರಗೋಡು ಕನ್ನಡ ಗ್ರಾಮದ ಕಾಸರಗೋಡು ಗೋ-ಕುಟೀರ ಉದ್ಘಾಟನೆಗೆ ಸಿದ್ಧತೆ. ನಿರ್ಮಾಣಕ್ಕೆ ಗೋ- ಭಕ್ತರು,ಗೋ- ಪೋಷಕರು ದಾನಿಗಳಿಂದ ಸಹಕಾರದ ನಿರೀಕ್ಷೆಯಲ್ಲಿ……

ಕಾಸರಗೋಡು :- ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನ (ರಿ.),ಕಾಸರಗೋಡು ಇದರ 36 ನೇ ಸಂಸ್ಥಾಪನಾ ವರ್ಷಾಚರಣೆಯ ಸಂಭ್ರಮದ ಪ್ರಯುಕ್ತ ಕಾಸರಗೋಡು ಕನ್ನಡ ಗ್ರಾಮದಲ್ಲಿ ನಿರ್ಮಾಣವಾಗುತ್ತಿರುವ “ಕಾಸರಗೋಡು ಗೋ-ಕುಟೀರ”ದ ಕಾಮಗಾರಿಗೆ ಗೋ- ಭಕ್ತರು, ಗೋ -ಪೋಷಕರು, ಗೋ- ದಾನಿಗಳಿಂದ ಆರ್ಥಿಕ ಸಹಾಯ,ಸಹಕಾರ ಪ್ರೋತ್ಸಾಹವನ್ನು ನೀಡುವಂತೆ ಮನವಿ ಮಾಡಲಾಗಿದೆ.ದೇಸಿ ಗೋವುಗಳನ್ನು ಉಳಿಸಿ ಬೆಳೆಸುವುದಕ್ಕಾಗಿ (ಸುಮಾರು 25 ಲಕ್ಷ ರೂಪಾಯಿ ವೆಚ್ಚದಲ್ಲಿ) ನಿರ್ಮಾಣವಾಗುತ್ತಿರುವ ಕಾಸರಗೋಡು ಗೋ -ಕುಟೀರವನ್ನು ಜಗಜ್ಜನನಿ ಗೋಮಾತೆಯ ಆಶೀರ್ವಾದವನ್ನು ಪಡೆಯುವ ಉದ್ದೇಶದಿಂದ ಒಂದು ಧಾರ್ಮಿಕ ಶ್ರದ್ಧಾ ಕೇಂದ್ರವನ್ನಾಗಿ ರೂಪುಗೊಳಿಸುವುದಕ್ಕಾಗಿ ದೈವಾರ್ಷಿಕ…

Read More

ಏಳು ವರುಷಗಳ ಅನುಗ್ರಹದ ಪಯಣ: 2019ನೇ ಇಸವಿಯಲ್ಲಿ ಪ್ರಾರಂಭವಾದ ಸಂಚಾರಿ ಚಿಕ್ಕಮೇಳಕ್ಕೆ 7ರ ಸಂಭ್ರಮ

ಕಂಬಾರು ಶ್ರೀ ದುರ್ಗಾಪರಮೇಶ್ವರಿ ಅಮ್ಮನವರ ಹಾಗೂ ಜಟಾಧಾರಿದೈವದ ಅನುಗ್ರಹದೊಂದಿಗೆ 2019ನೇ ಇಸವಿಯಲ್ಲಿ ಪ್ರಾರಂಭವಾದ ಸಂಚಾರಿ ಚಿಕ್ಕಮೇಳವು 7 ವರುಷವನ್ನು ಪೂರೈಸಿದೆ.ದೇವಸ್ಥಾನ ದಲ್ಲಿ ನಡೆದ ದೈವಚಿಂತನೆಯಲ್ಲಿ ದೇವರಿಗೆ ಗೆಜ್ಜೆಸೇವೆ ನಿರಂತರ ನಡೆಯುತ್ತಿರಬೇಕು ಎಂದು ಕಂಡುಬಂದ ಹಿನ್ನಲೆಯಲ್ಲಿ ಈ ಸಂಚಾರಿ ಚಿಕ್ಕಮೇಳವು ತಿರುಗಾಟ ಪ್ರಾರಂಭಿಸಿತ್ತು. ಪತ್ತನಾಜೆ ಕಳೆದ ಬಳಿಕ ಮನೆ, ಮನೆಗೆ ಬಂದು ಯಕ್ಷಗಾನ ಸೇವೆಯನ್ನು ಮನೆಯ ಚಾವಡಿಯಲ್ಲಿ ನೀಡುವುದು ಕ್ರಮ. ಯಕ್ಷನಾದಂತರಂಗ ದಿಂದ ದುಷ್ಟ ಶಕ್ತಿಯು ನಾಶವಾಗುತ್ತದೆ ಎಂಬುದು ನಮ್ಮ ಹಿರಿಯರ ನಂಬಿಕೆ.ಮನೆಗೆ ಬಂದಾಗ ಭಕ್ತಿಯಿಂದ ನೀಡುವ ಅಕ್ಕಿ,ತೆಂಗಿನಕಾಯಿ…

Read More

ಮಂಗಳೂರು ಎಂಎಫ್‌ಸಿ ಕೆಫೆಗೆ ಆಹಾರ ಸುರಕ್ಷತಾ ಅಧಿಕಾರಿಗಳ ದಾಳಿ

ಮಂಗಳೂರು ನಗರದ ಫಳ್ನೀರ್‌ನಲ್ಲಿರುವ ಎಂಎಫ್‌ಸಿ ಕೆಫೆಗೆ ಆಹಾರ ಸುರಕ್ಷತಾ ಅಧಿಕಾರಿಗಳು ಶುಕ್ರವಾರ ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ.ಕ್ಯೂಆರ್‌ಕೋಡ್ ಮೂಲಕ ದೂರಿಗೆ ತಕ್ಷಣ ಸ್ಪಂದಿಸಿದ ಅಧಿಕಾರಿಗಳು ಕೆಫೆಗೆ ಭೇಟಿ ನೀಡಿ ಆಹಾರದ ಗುಣಮಟ್ಟ, ನೈರ್ಮಲ್ಯ ಹಾಗೂ ಆಹಾರ ಸಂಗ್ರಹಣೆಯ ಕುರಿತು ಪರಿಶೀಲನೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ. ಕಳೆದ ವಾರ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ. ಖಾದರ್‌ ಅವರ ಸೂಚನೆಯ ಮೇರೆಗೆ ನಗರದ ಕೆಎಫ್‌ಸಿ ಕೆಫೆಗೆ ಅಧಿಕಾರಿಗಳು ದಾಳಿ ನಡೆಸಿ ಗಮನ ಸೆಳೆದಿದ್ದರು. ಅದರಂತೆ…

Read More
error: Content is protected !!