ಎನ್‌ಸಿಸಿ ಕೊಠಡಿಯಲ್ಲಿ ಬಾಲಕಿಗೆ ಲೈಂಗಿಕ ಕಿರುಕುಳ: ಶಿಕ್ಷಕನಿಗೆ 7 ವರ್ಷ ಜೈಲು
ಕಾಸರಗೋಡು: ಶಾಲೆಯ ಎನ್‌ಸಿಸಿ ಕೊಠಡಿಯಲ್ಲಿ ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣದಲ್ಲಿ ಶಿಕ್ಷಕನಿಗೆ ಕಾಸರಗೋಡು ಫಾಸ್ಟ್ ಟ್ರಾಕ್ ಸ್ಪೆಷಲ್ ನ್ಯಾಯಾಲಯವು 7 ವರ್ಷಗಳ ಕಠಿಣ ಕಾರಾಗೃಹವಾಸ ಹಾಗೂ 70,000 ರೂಪಾಯಿ ದಂಡ ವಿಧಿಸಿ ತೀರ್ಪು ನೀಡಿದೆ. ಮೈರೆ ಗ್ರಾಮದ ಇಬ್ರಾಹಿಂ ಎಂ. (54) ಶಿಕ್ಷೆಗೊಳಗಾದ ಅಧ್ಯಾಪಕ. 2022ರ ನವೆಂಬರ್‌ನಲ್ಲಿ ಎನ್‌ಸಿಸಿ ಕೊಠಡಿಯಲ್ಲಿ ಈ ಕೃತ್ಯ ನಡೆದಿದ್ದು, ಪೋಕ್ಸೊ ಹಾಗೂ ಜೆ.ಜೆ. ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು. ಪೊಲೀಸರ ತನಿಖೆ ಮತ್ತು ವಿಶೇಷ ಸರಕಾರಿ ಅಭಿಯೋಜಕರ ವಾದವನ್ನು ಪರಿಗಣಿಸಿದ…
