ಪ್ರಾಣಿಪ್ರಿಯೆ ಶಶಿಕಲಾ ಕೊಳೆತ ಸ್ಥಿತಿಯಲ್ಲಿ ಶವವಾಗಿ ಪತ್ತೆ
ಮಂಗಳೂರು : ಮಂಗಳೂರಿನ ಹೊರವಲಯದ ಕುಂಜತ್ತಬೈಲ್ ನಲ್ಲಿ ಒಂಟಿ ಮಹಿಳೆಯ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದ್ದು ಪರಿಸರವಾಸಿಗಳಿಗೆ ಅತೀವ ವೇದನೆ ತಂದಿದೆ ಮತ್ತು ನಮಗೆ ಇದು ತುಂಬಲಾರದ ನಷ್ಟವಾಗಿದೆ ಎಂದು ಸ್ಥಳೀಯರು ತಮ್ಮ ಅಳಲನ್ನು ವ್ಯಕ್ತಪಡಿಸಿದ್ದಾರೆ. 60 ರ ಹರೆಯದ ಶಶಿಕಲಾ ಶೆಟ್ಟಿ ಒಂಟಿ ಮಹಿಳೆ , ಪರಿಸರ ಪ್ರೇಮಿ ಮತ್ತು ಪ್ರಾಣಿ ಪಕ್ಷಿಗಳನ್ನು ಅತಿಯಾಗಿ ಪ್ರೀತಿಸುತ್ತಿದ್ದರು.ಅದರಲ್ಲೂ ಅಸಂಖ್ಯ ಸಂಖ್ಯೆಯ ಶ್ವಾನಗಳನ್ನು ಇವರು ಸಾಕುತ್ತಿದ್ದರು.ಎಷ್ಟೊಂದು ಸಂಖ್ಯೆಯ ಶ್ವಾನಗಳು ಇವರ ಮನೆಯ ಆವರಣದಲ್ಲಿ ಇರುವುದರಿಂದ ಯಾರೊಬ್ಬರೂ ಸುಲಭವಾಗಿ ಮನೆಯೊಳಗೆ…
