ಭಾರತೀಯ ಮೂಲದ ಅನಿಲ್ ಮೆನನ್‌ರ ಮೊದಲ ಬಾಹ್ಯಾಕಾಶ ಯಾತ್ರೆಗೆ ಯಶಸ್ವಿ ಚಾಲನೆ

ಕಝಾಕಿಸ್ತಾನ್: ಭಾರತೀಯ ಮೂಲದ ಗಗನಯಾತ್ರಿ ಅನಿಲ್ ಮೆನನ್ ತಮ್ಮ ಮೊದಲ ಬಾಹ್ಯಾಕಾಶ ಯಾತ್ರೆಯನ್ನು ಯಶಸ್ವಿಯಾಗಿ ಆರಂಭಿಸಿದ್ದಾರೆ. ರಷ್ಯಾದ ಸೋಯುಜ್ ಎಂಎಸ್-29 ರಾಕೆಟ್ ಮೂಲಕ ಬೈಕೊನೂರ್ ಕಾಸ್ಮೊಡ್ರೋಮ್‌ನಿಂದ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ (ISS)ದತ್ತ ಅವರು ಪ್ರಯಾಣ ಬೆಳೆಸಿದ್ದಾರೆ.

ರಷ್ಯಾದ ಗಗನಯಾತ್ರಿಗಳಾದ ಪಯೋಟರ್ ಡುಬ್ರೊವ್ ಹಾಗೂ ಅನ್ನಾ ಕಿಕಿನಾ ಅವರೊಂದಿಗೆ ಅನಿಲ್ ಮೆನನ್ ಸುಮಾರು ಎಂಟು ತಿಂಗಳು ಐಎಸ್‌ಎಸ್‌ನಲ್ಲಿ ವಾಸ್ತವ್ಯ ಹೂಡಿ ವಿವಿಧ ವೈಜ್ಞಾನಿಕ ಸಂಶೋಧನೆಗಳಲ್ಲಿ ಭಾಗವಹಿಸಲಿದ್ದಾರೆ. ಬಾಹ್ಯಾಕಾಶದಲ್ಲಿ ರಕ್ತ ಪರಿಚಲನೆ ಮತ್ತು ಬಯೋಪ್ರಿಂಟಿಂಗ್ ತಂತ್ರಜ್ಞಾನ ಕುರಿತ ಅಧ್ಯಯನ ನಡೆಸಲಿದ್ದಾರೆ.

ಕೇರಳ ಮೂಲದ ತಂದೆ ಹಾಗೂ ಉಕ್ರೇನ್ ಮೂಲದ ತಾಯಿಯ ಪುತ್ರರಾಗಿರುವ ಅನಿಲ್ ಮೆನನ್, ಹಾರ್ವರ್ಡ್ ಮತ್ತು ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾಲಯಗಳಲ್ಲಿ ಉನ್ನತ ಶಿಕ್ಷಣ ಪಡೆದಿದ್ದಾರೆ. ನಾಸಾಗೆ ಸೇರುವ ಮೊದಲು ಸ್ಪೇಸ್‌ಎಕ್ಸ್‌ನ ಮೊದಲ ‘ಫ್ಲೈಟ್ ಸರ್ಜನ್’ ಆಗಿ ಕಾರ್ಯನಿರ್ವಹಿಸಿದ್ದರು.ಕಲ್ಪನಾ ಚಾವ್ಲಾ ಹಾಗೂ ಸುನಿತಾ ವಿಲಿಯಮ್ಸ್ ಅವರ ನಂತರ ಬಾಹ್ಯಾಕಾಶ ಯಾತ್ರೆ ಕೈಗೊಂಡ ಭಾರತೀಯ ಮೂಲದ ಪ್ರಮುಖ ಗಗನಯಾತ್ರಿಗಳ ಪಟ್ಟಿಗೆ ಅನಿಲ್ ಮೆನನ್ ಸೇರ್ಪಡೆಯಾಗಿದ್ದಾರೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!