ಲಂಡನ್, ಜು.24: ಬ್ರಿಟನ್ನ ಲಂಡನ್ನಲ್ಲಿರುವ ಐಷಾರಾಮಿ ಹೋಟೆಲ್ನಲ್ಲಿ ತಂಗಿದ್ದ 29 ವರ್ಷದ ಸೌದಿ ರಾಜಕುಮಾರ ಅಬ್ದುಲ್ಲಾ ಬಿನ್ ಫಹದ್ ಬಿನ್ ಅಬ್ದುಲ್ಲಾ ಬಿನ್ ಅಬ್ದುಲಅಜೀಜ್ ಬಿನ್ ಜಲಾವಿ ಅಲ್ ಸೌದ್ ಅವರು ಮದ್ಯ, ಜಿಎಚ್ಬಿ (GHB) ಮಾದಕ ವಸ್ತು ಹಾಗೂ ಆತಂಕ ನಿವಾರಕ ಔಷಧಿಯನ್ನು ಒಟ್ಟಿಗೆ ಸೇವಿಸಿದ ಪರಿಣಾಮ ಮೃತಪಟ್ಟಿದ್ದಾರೆ ಎಂದು ಬ್ರಿಟನ್ ತನಿಖೆಯಲ್ಲಿ ಬಹಿರಂಗವಾಗಿದೆ.

ಕಳೆದ ವರ್ಷದ ನವೆಂಬರ್ 25ರಂದು ಕೆನ್ಸಿಂಗ್ಟನ್ನ ಮ್ಯಾರಿಯಟ್ ಹೋಟೆಲ್ನ ಕೊಠಡಿಯ ಬಾತ್ರೂಮ್ನಲ್ಲಿ ರಾಜಕುಮಾರ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಸ್ಥಳಕ್ಕೆ ಧಾವಿಸಿದ ವೈದ್ಯಕೀಯ ಸಿಬ್ಬಂದಿ ಜೀವ ಉಳಿಸಲು ಪ್ರಯತ್ನಿಸಿದರೂ, ಸ್ಥಳದಲ್ಲೇ ಮೃತಪಟ್ಟಿರುವುದಾಗಿ ಘೋಷಿಸಿದ್ದರು.

ಪ್ರಕರಣದ ತನಿಖೆ ನಡೆಸಿದ ಇನರ್ ವೆಸ್ಟ್ ಲಂಡನ್ ಕೊರೊನರ್ ನ್ಯಾಯಾಲಯ, ಸಿಸಿಟಿವಿ ದೃಶ್ಯಾವಳಿ ಸೇರಿದಂತೆ ಲಭ್ಯವಿದ್ದ ಸಾಕ್ಷ್ಯಾಧಾರಗಳ ಪರಿಶೀಲನೆ ಬಳಿಕ ಘಟನೆಯಲ್ಲಿ ಮೂರನೇ ವ್ಯಕ್ತಿಯ ಪಾತ್ರ ಇಲ್ಲ ಎಂದು ಸ್ಪಷ್ಟಪಡಿಸಿದೆ.

ಸಹಾಯಕ ಕೊರೊನರ್ ಜೀನ್ ಹಾರ್ಕಿನ್, ಹಲವು ಮಾದಕ ವಸ್ತುಗಳು ಮತ್ತು ಔಷಧಿಗಳ ಸೇವನೆಯಿಂದ ಆಕಸ್ಮಿಕವಾಗಿ ಮೃತಪಟ್ಟಿದ್ದಾರೆ ಎಂದು ತೀರ್ಪು ನೀಡಿದ್ದು, ಈ ಸಾವನ್ನು ‘ಡೆತ್ ಬೈ ಮಿಸ್ಅಡ್ವೆಂಚರ್’ (ಆಕಸ್ಮಿಕ ಸಾವು) ಎಂದು ದಾಖಲಿಸಿದ್ದಾರೆ.


