ಕಾಸರಗೋಡು: ನಿಯಮ ಮೀರಿ ಬಂದ ಕಂಟೈನರ್ ಲಾರಿಯೊಂದು ವಿದ್ಯುತ್ ತಂತಿಗೆ ತಾಗಿ ಬೆಂಕಿ ಹೊತ್ತಿಕೊಂಡ ಪರಿಣಾಮ, ಲಕ್ಷಾಂತರ ಮೌಲ್ಯದ 30 ಫ್ರಿಡ್ಜ್ಗಳು ಸಂಪೂರ್ಣ ನಾಶವಾದ ಘಟನೆ ಬೇಕಲದ ಮವ್ವಲ್ನಲ್ಲಿ ಮಂಗಳವಾರ ಬೆಳಿಗ್ಗೆ ಸಂಭವಿಸಿದೆ.

ಕೋಝಿಕ್ಕೋಡ್ನಿಂದ ಉಡುಪಿಗೆ ರೆಫ್ರಿಜರೇಟರ್ಗಳನ್ನು ಒಯ್ಯುತ್ತಿದ್ದ ವಾಹನ ಬೆಳಿಗ್ಗೆ 7 ಗಂಟೆಗೆ ರಿಫಾಯಿಯ ಮಸೀದಿ ಬಳಿ ದುರಂತಕ್ಕೊಳಗಾಯಿತು.
ಪಳ್ಳಿಕೆರೆ ಸೇತುವೆ ದುರಸ್ತಿಯಲ್ಲಿದ್ದರೂ ಚಾಲಕ ರಸ್ತೆ ಬದಲಾವಣೆ ಸೂಚನೆ ಪಾಲಿಸದೆ ಈ ಮಾರ್ಗಕ್ಕೆ ಬಂದಿದ್ದೇ ಘಟನೆಗೆ ಕಾರಣ.

ಸ್ಥಳೀಯರ ಮಾಹಿತಿ ಮೇರೆಗೆ ಕಾಞಂಗಾಡು ಹಾಗೂ ಕಾಸರಗೋಡಿನಿಂದ ಧಾವಿಸಿದ ಮೂರು ಅಗ್ನಿಶಾಮಕ ವಾಹನಗಳು ಬೆಂಕಿಯನ್ನು ಹತೋಟಿಗೆ ತಂದವು. ಕಾರ್ಯಪಡೆ ಸಮಯಪ್ರಜ್ಞೆಯಿಂದ ಸುಮಾರು 20 ಫ್ರಿಡ್ಜ್ಗಳನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದೆ.

