ಮಂಗಳೂರು: NITTE Deemed to be University ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ನಿಟ್ಟೆ ಇನ್‌ಸ್ಟಿಟ್ಯೂಟ್ ಆಫ್ ಕಮ್ಯುನಿಕೇಶನ್‌ನಲ್ಲಿ ಎಂ.ಎ. ಇನ್ ಫೋಟೋಗ್ರಫಿ ಮತ್ತು ಫಿಲ್ಮ್‌ಮೇಕಿಂಗ್ ಕೋರ್ಸ್‌ಗೆ ಪ್ರವೇಶ ಪ್ರಕ್ರಿಯೆ ಆರಂಭವಾಗಿದೆ.
ಮಾಧ್ಯಮ ಹಾಗೂ ದೃಶ್ಯ ಸಂವಹನ ಕ್ಷೇತ್ರದಲ್ಲಿ ವೃತ್ತಿಜೀವನ ರೂಪಿಸಿಕೊಳ್ಳಲು ಆಸಕ್ತಿ ಹೊಂದಿರುವ ವಿದ್ಯಾರ್ಥಿಗಳಿಗೆ ಈ ಕೋರ್ಸ್ ವಿಶೇಷ ಅವಕಾಶ ಕಲ್ಪಿಸಲಿದೆ. ಸಂಸ್ಥೆಯಲ್ಲಿ ಅತ್ಯಾಧುನಿಕ ಮಲ್ಟಿ-ಕ್ಯಾಮೆರಾ ಟೆಲಿವಿಷನ್ ಸ್ಟುಡಿಯೋ, ಐಮ್ಯಾಕ್ ಎಡಿಟಿಂಗ್ ಸ್ಟುಡಿಯೋ, ಆಡಿಯೋ–ವೀಡಿಯೋ ಎಡಿಟಿಂಗ್, ಗ್ರಾಫಿಕ್ ಹಾಗೂ ವೆಬ್ ಡಿಸೈನಿಂಗ್ ಸೌಲಭ್ಯಗಳಿವೆ.
2024 ಮತ್ತು 2025ರಲ್ಲಿ ಪ್ರಶಸ್ತಿ ಪಡೆದ ಮಾಧ್ಯಮ ಶಿಕ್ಷಣ ಸಂಸ್ಥೆಯಾಗಿ ಗುರುತಿಸಿಕೊಂಡಿರುವ ನಿಟ್ಟೆ ಇನ್‌ಸ್ಟಿಟ್ಯೂಟ್ ಆಫ್ ಕಮ್ಯುನಿಕೇಶನ್‌ನಲ್ಲಿ ವಿದ್ಯಾರ್ಥಿಗಳಿಗೆ ಆಧುನಿಕ ಸ್ಟುಡಿಯೋ ಹಾಗೂ ಪ್ರೊಡಕ್ಷನ್ ಲ್ಯಾಬ್‌ಗಳಲ್ಲಿ ಪ್ರಾಯೋಗಿಕ ತರಬೇತಿ ನೀಡಲಾಗುತ್ತದೆ.
ಬಲಿಷ್ಠ ಹಳೆಯ ವಿದ್ಯಾರ್ಥಿ ಜಾಲದ ಮೂಲಕ ಮಾರ್ಗದರ್ಶನ, ಕೈಗಾರಿಕಾ ಸಂಪರ್ಕ ಹಾಗೂ ಉದ್ಯೋಗಾವಕಾಶಗಳಿಗೂ ವೇದಿಕೆ ಕಲ್ಪಿಸಲಾಗುತ್ತಿದೆ. ಭಾರತದಲ್ಲೇ ಏಕೈಕ Godox ಪ್ರಮಾಣಿತ ಸಂಸ್ಥೆ ಎಂಬ ವಿಶೇಷತೆಯನ್ನೂ ಸಂಸ್ಥೆ ಹೊಂದಿದೆ.
ಆಸಕ್ತರು apply.nitte.edu.in ಮೂಲಕ ಅರ್ಜಿ ಸಲ್ಲಿಸಬಹುದಾಗಿದ್ದು, ಹೆಚ್ಚಿನ ಮಾಹಿತಿಗಾಗಿ 95131 88844 ಸಂಖ್ಯೆಯನ್ನು ಸಂಪರ್ಕಿಸಬಹುದು.