ವಿಟ್ಲ: ಲಯನ್ಸ್ ಕ್ಲಬ್ ವಿಟ್ಲ ಸಿಟಿಯ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ

ವಿಟ್ಲ: ಲಯನ್ಸ್ ಕ್ಲಬ್ ವಿಟ್ಲ ಸಿಟಿಯ 2026–27ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಇತ್ತೀಚೆಗೆ ವಿಟ್ಲ ಪದವಿ ಪೂರ್ವ ಕಾಲೇಜಿನ ಸುವರ್ಣ ರಂಗಮಂದಿರದಲ್ಲಿ ನಡೆಯಿತು.

ಲಯನ್ಸ್ ಜಿಲ್ಲೆ 317 ಡಿ ಜಿಇಟಿ (GET) ಸಂಯೋಜಕರಾದ ಲಯನ್ ಜಗದೀಶ್ ಎಡಪಡಿತಾಯ ಅವರು ಪದಗ್ರಹಣ ಅಧಿಕಾರಿಯಾಗಿ ಭಾಗವಹಿಸಿ, ನೂತನ ಅಧ್ಯಕ್ಷೆ ಶ್ವೇತಾ ರವಿಕುಮಾರ್ ಸೇರಿದಂತೆ ನೂತನ ಪದಾಧಿಕಾರಿಗಳಿಗೆ ಪ್ರಮಾಣವಚನ ಬೋಧಿಸಿದರು. ನೂತನ ತಂಡಕ್ಕೆ ಶುಭ ಹಾರೈಸಿ, ಸಮಾಜಮುಖಿ ಸೇವಾ ಚಟುವಟಿಕೆಗಳನ್ನು ಮತ್ತಷ್ಟು ವಿಸ್ತರಿಸುವಂತೆ ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಚಾರ್ಟರ್ ನೈಟ್‌ಗೆ ನಿಕಟಪೂರ್ವ ಜಿಲ್ಲಾ ಹೆಚ್ಚುವರಿ ಕಾರ್ಯದರ್ಶಿ ಚಂದ್ರಹಾಸ ರೈ ದೀಪ ಬೆಳಗಿಸುವ ಮೂಲಕ ಚಾಲನೆ ನೀಡಿ, ಚಾರ್ಟರ್ ಸದಸ್ಯರನ್ನು ಅಭಿನಂದಿಸಿದರು.

ಈ ಸಂದರ್ಭದಲ್ಲಿ ವಿವಿಧ ಸಮಾಜಮುಖಿ ಸೇವಾ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದ್ದು, ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ಪರೀಕ್ಷೆಗಳಲ್ಲಿ ಗರಿಷ್ಠ ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಇದೇ ವೇಳೆ ಪದಗ್ರಹಣ ಅಧಿಕಾರಿ ಜಗದೀಶ್ ಎಡಪಡಿತಾಯ, ಚಿತ್ರ ಎಡಪಡಿತಾಯ, ಚಂದ್ರಹಾಸ ರೈ ಹಾಗೂ ರಮ್ಯಾ ಅವರನ್ನು ಸಂಸ್ಥೆಯ ವತಿಯಿಂದ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ನಿಕಟಪೂರ್ವ ಜಿಲ್ಲಾ ಪಿಆರ್‌ಒ ಸುದರ್ಶನ್ ಪಡಿಯಾರ್, ವಿಟ್ಲ ವಲಯ ಅಧ್ಯಕ್ಷೆ ವೇದಾವತಿ, ಕಾರ್ಯದರ್ಶಿ ದಿನಕರ ಆಳ್ವ, ವಲಯ ನಿರ್ದೇಶಕ ವಸಂತ್ ಶೆಟ್ಟಿ ಎರ್ಮಿನಿಲಿ, ಕೋಶಾಧಿಕಾರಿ ಓಯ್ ಕೃಷ್ಣ, ಮಾಜಿ ಜಿಲ್ಲಾ ರಾಜ್ಯಪಾಲ ಡಾ. ಗೀತ್ ಪ್ರಕಾಶ್ ಕೃಷ್ಣ, ಪ್ರಶಾಂತ್ ಹಾಗೂ ವಿವಿಧ ಲಯನ್ಸ್ ಕ್ಲಬ್‌ಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಸಮಾರಂಭದ ಅಧ್ಯಕ್ಷತೆಯನ್ನು ಲಯನ್ಸ್ ಕ್ಲಬ್ ವಿಟ್ಲ ಸಿಟಿಯ ಅಧ್ಯಕ್ಷೆ ಶ್ವೇತಾ ರವಿಕುಮಾರ್ ವಹಿಸಿದ್ದರು. ಕೋಶಾಧಿಕಾರಿ ಸಂದೇಶ್ ಶೆಟ್ಟಿ ಕಾರ್ಯಕ್ರಮವನ್ನು ನಿರೂಪಿಸಿದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!