2012ರ ವಂಚನೆ ಪ್ರಕರಣ: 13 ವರ್ಷಗಳಿಂದ ತಲೆಮರೆಸಿಕೊಂಡಿದ್ದ ವಾರಂಟ್ ಆರೋಪಿ ಬಂಧನ

2012 ನೇ ಸಾಲಿನ ಪ್ರಕರಣದಲ್ಲಿ ನ್ಯಾಯಾಲಯಕ್ಕೆ ಹಾಜರಾಗದೇ ತಲೆಮರೆಸಿಕೊಂಡ ಆರೋಪಿಯನ್ನು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಂಧಿಸಲಾಗಿದೆ. 2009 ನೇ ಸಾಲಿನ ಮೇ ತಿಂಗಳಲ್ಲಿ ವಾಹನಗಳನ್ನು ಖರೀದಿಸಲು ಸಾಲ/ಹಣಕಾಸು ಸಹಾಯ ಮಾಡುವ ಸಂಸ್ಥೆಯಾದ ಶ್ರೀರಾಮ್ ಫೈನಾನ್ಸ್ ಸಂಸ್ಥೆಯ ಷರತ್ತುಗಳಿಗೆ ಒಪ್ಪಿ ಟೆಲ್ಕಾನ್ ಇ ಎಕ್ಸ್ 70 ಮೆಶಿನ್ ವಾಹನವನ್ನು ಖರೀದಿಸುವ ಬಗ್ಗೆ 10,00,000/- ರೂಪಾಯಿ ಸಾಲ ಪಡೆದಿದ್ದು , ಷರತ್ತಿನಂತೆ ವಾಹನ ಖರೀದಿಸಿದ ಬಳಿಕ ವಾಹನದ ಸಾಲದ ಕಂತನ್ನು ಶ್ರೀರಾಮ್ ಫೈನಾನ್ಸ್ ಸಂಸ್ಥೆಗೆ ಮರುಪಾವತಿಸದೇ ಬಾಕಿ ಇರಿಸಿದ್ದನು,

ವಾಹನವನ್ನು ತಪಾಸಣೆ ಬಗ್ಗೆ ಹಾಜರುಪಡಿಸಲು ತಿಳಿಸಿದಲ್ಲಿ ವಾಹನವನ್ನು ಹಾಜರುಪಡಿಸದೇ ಶ್ರೀರಾಮ್ ಫೈನಾನ್ಸ್ ಸಂಸ್ಥೆಗೆ ವಂಚನೆ ಮಾಡಿರುವ ಬಗ್ಗೆ ಶ್ರೀನಿವಾಸ ಬಿ.ಆರ್ ಎಂಬವರ ವಿರುದ್ದ ಮೂಡಬಿದ್ರೆ ಠಾಣೆಯಲ್ಲಿ ಶ್ರೀರಾಮ್ ಫೈನಾನ್ಸ್ ಸಂಸ್ಥೆಯ ದೂರಿನಂತೆ ಮೂಡಬಿದ್ರೆ ಠಾಣೆಯಲ್ಲಿ ಅ.ಕ್ರ. 59/2012 ಕಲಂ 406, 420, 421 ಜತೆಗೆ 34 ಐಪಿಸಿ ರೀತ್ಯಾ ಪ್ರಕರಣ ದಾಖಲಾಗಿತ್ತು. ಪ್ರಕರಣದಲ್ಲಿ ಆರೋಪಿ ಶ್ರೀನಿವಾಸ ಬಿ.ಆರ್ ಎಂಬಾತನಿಗೆ ನ್ಯಾಯಾಲಯ ಸಿಸಿ ನಂಬ್ರ 526/2025 ರಲ್ಲಿ ಜಾಮೀನು ರಹಿತ ವಾರಂಟ್ ಹೊರಡಿಸಿತ್ತು. ನ್ಯಾಯಾಲಯಕ್ಕೆ ಹಾಜರಾಗದೇ ತಲೆಮರೆಸಿಕೊಂಡಿದ್ದ ವಾರಂಟ್ ಅಸಾಮಿಯನ್ನು ಉತ್ತರ ಉಪವಿಭಾಗದ ಅಪರಾಧ ಪತ್ತೆ ತಂಡವು ಜಾಲ್ಸೂರು ಗ್ರಾಮದ ಬೈತಡ್ಕ ಜಂಕ್ಷನ್ ಎಂಬಲ್ಲಿ ವಶಕ್ಕೆ ಪಡೆದು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.


ಈತನ ವಿರುದ್ದ ಬಾಕಿ ಇರುವ ದಸ್ತಗಿರಿ ವಾರಂಟ್ ಗಳು
1] ಮೂಡಬಿದ್ರೆ ಠಾಣಾ ಅ.ಕ್ರ. 59/2012 ಕಲಂ 406, 420, 421 ಜತೆಗೆ 34 ಐಪಿಸಿ (ಸಿಸಿ ನಂಬ್ರ 526/2025)
2] ಮಾನ್ಯ ಜೆಎಂಎಫ್ ಸಿ 5 ನೇ ನ್ಯಾಯಾಲಯ, ಮಂಗಳೂರು ಸಿಸಿ ನಂಬ್ರ 1453/2024 (ಚೆಕ್ ಬೌನ್ಸ್ ಪ್ರಕರಣ)

SHARE
Loading spinner

One thought on “2012ರ ವಂಚನೆ ಪ್ರಕರಣ: 13 ವರ್ಷಗಳಿಂದ ತಲೆಮರೆಸಿಕೊಂಡಿದ್ದ ವಾರಂಟ್ ಆರೋಪಿ ಬಂಧನ

  1. Simple, fast, and effective. I don’t like overcomplicated sites and this one gets straight to the point. I really like aa444 for its efficiency.

    Loading spinner

Leave a Reply

Your email address will not be published. Required fields are marked *

error: Content is protected !!