ಉಜಿರೆ: ಇಲ್ಲಿನ ಶಾರದಾ ಮಂಟಪದಲ್ಲಿ ಡಿಸೆಂಬರ್ 17, 2026 ರಂದು ನಡೆಯಲಿರುವ “ಗೋಮಾತೆಯ ಗೌರವದ ಆಹ್ವಾನದ ಅಭಿಯಾನ – ” ಕಾರ್ಯಕ್ರಮದ ಪೂರ್ವಭಾವಿ ಬೈಠಕ್ (ಸಭೆ) ಇತ್ತೀಚೆಗೆ ಯಶಸ್ವಿಯಾಗಿ ಜರುಗಿತು.
ಗೋಮಾತೆಯ ಗೌರವ, ಸಂರಕ್ಷಣೆ ಹಾಗೂ ಗೋವಿನ ಮಹತ್ವದ ಕುರಿತು ಜನಜಾಗೃತಿ ಮೂಡಿಸುವ ಉದ್ದೇಶದಿಂದ ಹಮ್ಮಿಕೊಳ್ಳಲಾಗಿರುವ ಈ ಕಾರ್ಯಕ್ರಮದ ಸಿದ್ಧತೆಗಳ ಕುರಿತು ಸಭೆಯಲ್ಲಿ ವಿಸ್ತೃತವಾಗಿ ಚರ್ಚಿಸಲಾಯಿತು.



ದೇಶವ್ಯಾಪಿ ನಡೆಯುತ್ತಿರುವ ಅಭಿಯಾನದ ಕುರಿತು ಪ್ರಾಂತ ಗೋ ಸೇವಾ ಸಂಯೋಜಕರಾದ ಪ್ರವೀಣ್ ಸರಲಾಯ ಅವರು ಸಭೆಗೆ ಮಾಹಿತಿ ನೀಡಿದರು. ದಕ್ಷಿಣ ಕನ್ನಡ ಜಿಲ್ಲಾ ಸಹ ಪ್ರಭಾರಿ ಅಶೋಕ್ ಇಳಂತಿಲ ಅವರು ಸಭೆಯ ಉದ್ದೇಶವನ್ನು ವಿವರಿಸಿದರು.
ಗೋಸಮ್ಮಾನ್ ಆಹ್ವಾನ ಅಭಿಯಾನದ ಮೂರನೇ ಹಂತದ ಸಹಿ ಸಂಗ್ರಹ ನಡೆಯುವ ‘ಗೋ ಗೌರವ ಆಹ್ವಾನ ‘ದ ಸಹಿ ಸಂಗ್ರಹದಲ್ಲಿ ಎಲ್ಲರೂ ಸಕ್ರಿಯವಾಗಿ ಭಾಗವಹಿಸುವ ಕುರಿತು ಚರ್ಚೆ ನಡೆಸಲಾಯಿತು. ಹಾಗೂ ಈ ಕಾರ್ಯಕ್ರಮದ ಯಶಸ್ಸಿಗಾಗಿ ಇದೇ ಸಂದರ್ಭದಲ್ಲಿ ನೂತನ
ತಾಲ್ಲೂಕು ಸಮಿತಿಯನ್ನು ರಚನೆ ಮಾಡಲಾಯಿತು.

ತಾಲ್ಲೂಕು ಸಮಿತಿಯ ಪ್ರಭಾರಿಗಳಾಗಿ ಕಿರಣ್ ಚಂದ್ರ ಪುಷ್ಪಗಿರಿ, ಸಂಯೋಜಕರಾಗಿ ಕೇಶವ ಬಂಗೇರ. ಸಹ ಪ್ರಭಾರಿಗಳಾಗಿ ದಿನೇಶ್ ಚಾರ್ಮಾಡಿ.
ಸಹ ಸಂಯೋಜಕರಾಗಿ ದೀಕ್ಷಿತ್ ಹೇಡ್ಯಾ ಮತ್ತು ರಮೇಶ್ ಧರ್ಮಸ್ಥಳ. ಸಂತ ಪ್ರಭಾರಿ ಭಾಸ್ಕರ್ ಧರ್ಮಸ್ಥಳ. ಸಹಿ ಸಂಗ್ರಹ ಪ್ರಭಾರಿ ಪ್ರಮೋದ್ ದಿಡುಪೆ.
ಗ್ರಾಮ ಸಮೀತಿ ಪ್ರಭಾರಿಯಾಗಿ ಗೌರವ ಶೆಟ್ಟಿ. ಸಾಮಾಜಿಕ ಜಾಲತಾಣ ಮಾನ್ವಿತ್, ಜಿತೇಸ್. ವ್ಯವಸ್ಥೆ ಪ್ರಭಾರಿ ಬಾಲಚಂದ್ರ
ಆಯ್ಕೆ ಮಾಡಲಾಯಿತು.
”ಗೋಮಾತೆಯ ಗೌರವ – ನಮ್ಮ ಸಂಸ್ಕೃತಿಯ ಹೆಮ್ಮೆ!”

