ಕುತ್ತಾರು ಜಂಕ್ಷನ್‌ನಲ್ಲಿ ಗದ್ದಲ: ಸಭಾಧ್ಯಕ್ಷ ಯು.ಟಿ. ಖಾದರ್ ಎದುರೇ ಸಾರ್ವಜನಿಕರ ಆಕ್ರೋಶ

ಕುತ್ತಾರು ಜಂಕ್ಷನ್‌ನಲ್ಲಿ ಕೊರಗಜ್ಜನ ಸರ್ಕಲ್ ನಿರ್ಮಾಣ ಪ್ರಸ್ತಾಪಕ್ಕೆ ವಿರೋಧದ ವೇಳೆ ನಡೆದ ಘಟನೆ ಇದೀಗ ರಾಜ್ಯ ಮಟ್ಟದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಕರ್ನಾಟಕ ವಿಧಾನಸಭೆಯ ಸಭಾಧ್ಯಕ್ಷರಾಗಿರುವ ಯು.ಟಿ. ಖಾದರ್ ಅವರ ಎದುರಲ್ಲೇ ಸಾರ್ವಜನಿಕರು ತೀವ್ರ ಆಕ್ರೋಶ
ವ್ಯಕ್ತಪಡಿಸಿದ ಘಟನೆ ನಡೆದಿದೆ.

ರಾಜ್ಯದ ಅತ್ಯುನ್ನತ ಸಂವಿಧಾನಾತ್ಮಕ ಹುದ್ದೆಯಲ್ಲಿ ಇರುವ ವ್ಯಕ್ತಿಗೆ ಸಾರ್ವಜನಿಕ ರಸ್ತೆಯಲ್ಲೇ ಈ ರೀತಿಯ ಪ್ರಶ್ನೆಗಳು ಮತ್ತು ಗದ್ದಲ ಎದುರಾಗಿರುವುದು ಭದ್ರತಾ ವೈಫಲ್ಯವೇ ಎಂಬ ಪ್ರಶ್ನೆ ಕೇಳಿಬರುತ್ತಿದೆ.

ಕಾರ್ಯಕ್ರಮದ ವೇಳೆ ಸಮರ್ಪಕ ಪೊಲೀಸ್ ಬಂದೋಬಸ್ತ್ ಮತ್ತು ಪರಿಸ್ಥಿತಿ ನಿಯಂತ್ರಣ ಕ್ರಮಗಳ ಕೊರತೆ ಕಂಡುಬಂದಿತ್ತೆಂಬ ಚರ್ಚೆ ಸ್ಥಳೀಯ ವಲಯದಲ್ಲಿ ಕೇಳಿ ಬರುತ್ತಿದೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!