ಮಂಗಳೂರು, ಜೂ.23: ಅಲ್ಪಸಂಖ್ಯಾತ ಸಮುದಾಯದ ಕಾನೂನು ಪದವೀಧರರಿಗೆ 2026-27ನೇ ಸಾಲಿನ ನಾಲ್ಕು ವರ್ಷದ ಕಾನೂನು ತರಬೇತಿ ಕಾರ್ಯಕ್ರಮಕ್ಕೆ ಅರ್ಜಿ ಆಹ್ವಾನಿಸಲಾಗಿದೆ.
ಒಟ್ಟು ಐದು ಅರ್ಹ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುವುದು. ಬಾರ್ ಕೌನ್ಸಿಲ್ನಲ್ಲಿ ನೋಂದಾಯಿತರಾಗಿರುವ ಕಾನೂನು ಪದವೀಧರರನ್ನು ಸರ್ಕಾರಿ ವಕೀಲರು ಅಥವಾ ಕನಿಷ್ಠ 20 ವರ್ಷಗಳ ವಕೀಲ ವೃತ್ತಿಯ ಅನುಭವ ಹೊಂದಿರುವ ನ್ಯಾಯವಾದಿಗಳ ಮಾರ್ಗದರ್ಶನದಲ್ಲಿ ತರಬೇತಿಗೆ ನಿಯೋಜಿಸಲಾಗುತ್ತದೆ.
ಅಭ್ಯರ್ಥಿಗಳ ಕುಟುಂಬದ ವಾರ್ಷಿಕ ಆದಾಯ ₹3.50 ಲಕ್ಷ ಮೀರಿರಬಾರದು. ವಯೋಮಿತಿ 38 ವರ್ಷಗಳೊಳಗಿದ್ದು, ಅಂತಿಮ ಕಾನೂನು ಪದವಿಯನ್ನು ಪೂರ್ಣಗೊಳಿಸಿ ಎರಡು ವರ್ಷ ಮೀರಿರಬಾರದು.
ಅರ್ಜಿ ನಮೂನೆಗಳನ್ನು ಪಾಂಡೇಶ್ವರದ ಮೌಲಾನಾ ಅಝಾದ್ ಭವನದ ಮೊದಲ ಮಹಡಿಯಲ್ಲಿರುವ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ಕಚೇರಿಯಿಂದ ಪಡೆಯಬಹುದು. ಅಗತ್ಯ ದಾಖಲೆಗಳೊಂದಿಗೆ ಭರ್ತಿ ಮಾಡಿದ ಅರ್ಜಿಗಳನ್ನು ಜುಲೈ 30ರೊಳಗೆ ಸಲ್ಲಿಸಬೇಕು ಎಂದು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.