ಲಿಫ್ಟ್‌ನಲ್ಲಿ ಸಿಲುಕಿದ ಮೂವರು; ಅಗ್ನಿಶಾಮಕ ದಳದಿಂದ ರಕ್ಷಣೆ

ಮಂಗಳೂರು: ಸ್ವಾತಂತ್ರ್ಯ ದಿನಾಚರಣೆಯಂದೇ ಅತ್ತಾವರದ ಹೋಟೆಲ್ ಇಮಾಮ್ ಪ್ಯಾರಡೈಸ್‌ನ ಲಿಫ್ಟ್‌ನಲ್ಲಿ ಮೂವರು ಸಿಲುಕಿಕೊಂಡ ಘಟನೆ ನಡೆದಿದೆ .

ಆಂಧ್ರಪ್ರದೇಶದ ವಿಜಯವಾಡ ಮೂಲದ ಮೂವರು ಲಿಫ್ಟ್‌ನಲ್ಲಿ ಸುಮಾರು ಒಂದು ಗಂಟೆ ಸಿಲುಕಿಕೊಂಡಿದ್ದರು. ಲಿಫ್ಟ್‌ನಲ್ಲಿ ಸಿಲುಕಿದ್ದವರ ಮಾಹಿತಿ ತಿಳಿದ ತಕ್ಷಣ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ, ಮೂವರನ್ನೂ ಸುರಕ್ಷಿತವಾಗಿ ರಕ್ಷಿಸಿದ್ದಾರೆ.

“ಸುಮಾರು ಒಂದು ಗಂಟೆಯಿಂದ ಲಿಫ್ಟ್‌ನಲ್ಲಿ ಸಿಲುಕಿದ್ದೆವು. ಮಾಹಿತಿ ನೀಡಿದ ಐದು ನಿಮಿಷದಲ್ಲೇ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ರಕ್ಷಿಸಿದರು,” ಎಂದು ಅನಂತ್ ಬಾಬು ತಿಳಿಸಿದ್ದಾರೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!