ಮಂಗಳೂರು:ನಗರದ ಪ್ರತಿಷ್ಠಿತ ವಿಶ್ವವಿದ್ಯಾಲಯ ಕಾಲೇಜಿನಲ್ಲಿ 80ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಲಾಯಿತು.


ಕಾಲೇಜಿನ ಪ್ರಾಂಶುಪಾಲರಾದ ಡಾ. ಜಯವಂತ ನಾಯಕ್ ಅವರು ಧ್ವಜಾರೋಹಣ ನೆರವೇರಿಸಿದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ನಿವೃತ್ತ ಭಾರತೀಯ ಸೇನೆಯ ಕರ್ನಲ್ ಮನೋಜ್ ಆರ್. ಉಪಸ್ಥಿತರಿದ್ದರು.


ಎನ್‌ಸಿಸಿ ಆರ್ಮಿ ವಿಭಾಗದ ಎಎನ್‌ಒ ಮೇಜರ್ *ಡಾ. ಜಯರಾಜ್ ಎನ್., ಎನ್‌ಸಿಸಿ ನೌಕಾ ವಿಭಾಗದ ಎಎನ್‌ಒ ಲೆಫ್ಟಿನೆಂಟ್ ಕಮಾಂಡರ್ **ಪ್ರೊ. ಯತೀಶ್ ಕುಮಾರ್, ದೈಹಿಕ ಶಿಕ್ಷಣ ವಿಭಾಗದ **ಡಾ. ಹರಿದಾಸ ಕೂಳೂರು, ಎನ್‌ಎಸ್‌ಎಸ್ ಅಧಿಕಾರಿ *ಡಾ. ಸುರೇಶ್ ಸೇರಿದಂತೆ ಕಾಲೇಜಿನ ವಿದ್ಯಾರ್ಥಿಗಳು, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು.



ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಎನ್ ಸಿ ಸಿ ಕೆಡೆಟ್ ಗಳಿಂದ ದೇಶಭಕ್ತಿ ಹಾಗೂ ರಾಷ್ಟ್ರಾಭಿಮಾನವನ್ನು ಸಾರುವ ಕಾರ್ಯಕ್ರಮಗಳು ನಡೆದವು.



