ಸೆ.3, 4ರಂದು ಪಿಲಿಕುಳದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ

ಮಂಗಳೂರು: ಇಸ್ಕಾನ್ ಮಂಗಳೂರು ವತಿಯಿಂದ ಶ್ರೀಕೃಷ್ಣ ಜನ್ಮಾಷ್ಟಮಿ ಮಹೋತ್ಸವವನ್ನು ಸೆ.3 ಮತ್ತು 4ರಂದು ಪಿಲಿಕುಳದ ಸೌಟ್ಸ್ ಭವನದಲ್ಲಿ ಅದ್ದೂರಿಯಾಗಿ ಆಚರಿಸಲಾಗುವುದು ಎಂದು ಶ್ರೀಕೃಷ್ಣ ಬಲರಾಮ ಮಂದಿರದ ಅಧ್ಯಕ್ಷ ಗುಣಾಕರ ರಾಮ ದಾಸ ತಿಳಿಸಿದ್ದಾರೆ.

ಎರಡು ದಿನಗಳ ಮಹೋತ್ಸವದಲ್ಲಿ ಧಾರ್ಮಿಕ, ಸಾಂಸ್ಕೃತಿಕ ಹಾಗೂ ಯುವಜನ ಕಾರ್ಯಕ್ರಮಗಳು ನಡೆಯಲಿವೆ. ಆಳ್ವಾಸ್ ವತಿಯಿಂದ ‘ಶ್ರೀಕೃಷ್ಣ ವೈಭವಂ’, ಅಂತರರಾಷ್ಟ್ರೀಯ ಭಜನ್ ಕ್ಲಬ್ಬಿಂಗ್, ‘ಕೃಷ್ಣ ರಸ ಬಜಾರ್’ ಆಹಾರೋತ್ಸವ, ಮಂಗಳೂರು ಯುವ ಉತ್ಸವ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.

ಸೆ.4ರಂದು ರಾತ್ರಿ 9ರಿಂದ ಮಧ್ಯರಾತ್ರಿ 12ರವರೆಗೆ ಶ್ರೀಕೃಷ್ಣ ಬಲರಾಮ ಮಹಾಭಿಷೇಕ ನಡೆಯಲಿದೆ. ಸಾರ್ವಜನಿಕರ ಅನುಕೂಲಕ್ಕಾಗಿ ಇಸ್ಕಾನ್ ಪಿವಿಎಸ್ ಕಲಾಕುಂಜ್‌ನಿಂದ ಪಿಲಿಕುಳಕ್ಕೆ ಉಚಿತ ಬಸ್ ವ್ಯವಸ್ಥೆ ಕಲ್ಪಿಸಲಾಗಿದೆ.

ಪತ್ರಿಕಾಗೋಷ್ಠಿಯಲ್ಲಿ ಸುಂದರ ಗೌರ ದಾಸ ಹಾಗೂ ನಂದನಾಚಾರ್ಯ ದಾಸ ಉಪಸ್ಥಿತರಿದ್ದರು.

SHARE
Loading spinner

One thought on “ಸೆ.3, 4ರಂದು ಪಿಲಿಕುಳದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ

Leave a Reply

Your email address will not be published. Required fields are marked *

error: Content is protected !!