ಬೆಂಗಳೂರು–ಮಂಗಳೂರು ವಂದೇ ಭಾರತ್‌ ರೈಲು ಮತ್ತೊಮ್ಮೆ ಪರೀಕ್ಷಾರ್ಥ ಸಂಚಾರ

ಮಂಗಳೂರು: ಬೆಂಗಳೂರು – ಮಂಗಳೂರು ವಂದೇಭಾರತ್ ರೈಲು ಪರೀಕ್ಷಾರ್ಥವಾಗಿ ಸೆ. 10ರಂದು ಮತ್ತೂಮ್ಮೆ ಸಂಚಾರ ನಡೆಸಿದೆ. ಬೆಳಗ್ಗೆ ಬೆಂಗಳೂರಿನ ಯಶವಂತ ಪುರದಿಂದ ಹೊರಟು ಮಧ್ಯಾಹ್ನ ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣ ತಲುಪಿದೆ. ಬಳಿಕ ಮ ಗಳೂರಿನಿಂದ ಬೆಂಗಳೂರಿಗೆ ವಾಪಸಾಗಲಿದೆ ಎಂದು ತಿಳಿದುಬಂದಿದೆ.

ಸೆ. 5ರಂದು ವಂದೇ ಭಾರತ್ ರೈಲು ಪರೀಕ್ಷಾರ್ಥವಾಗಿ, ಮುಖ್ಯವಾಗಿ ಸಮಯ ನಿಗದಿಗಾಗಿ ಬೆಂಗಳೂರು- ಮಂಗಳೂರು ನಡುವೆ ಸಂಚರಿಸಿತ್ತು. ಮಂಗಳೂರು ಸೆಂಟ್ರಲ್ ನಿಲ್ದಾಣಕ್ಕೆ ಆಗಮಿಸಿ ವಾಪಸಾಗಿತ್ತು. ಆದರೆ ಕೆಲವು ತಾಂತ್ರಿಕ ತೊಡಕುಗಳಿಂದಾಗಿ ನಿಗದಿತ ಅವಧಿಗಿಂತ ಸುಮಾರು 2 ಗಂಟೆ ವಿಳಂಬವಾಗಿ ಮಂಗಳೂರಿಗೆ ಆಗಮಿಸಿತ್ತು. ಗುರುವಾರ ಮತ್ತೊಮೆ¾ ಸಮಯ ನಿಗದಿಗೆ ಸಂಬಂಧಿಸಿದಂತೆ ಸಂಚಾರ ನಡೆಸಲಿದೆ ಎಂದು ಅಧಿಕಾರಿಗಳು ತಿಳಿಸಿದ್ದರು.

ಪರೀಕ್ಷಾರ್ಥ ವೇಳೆ ರೈಲು ಬೆಂಗಳೂರಿನಿಂದ 6 ಗಂಟೆಗೆ ಹೊರಟು ಸಂಜೆ ಮಂಗಳೂರಿಗೆ ತಲುಪಿದೆ. ಈ ವೇಳಾಪಟ್ಟಿಯನ್ನು ನಿಗದಿ ಮಾಡಬಾರದು. ಬದಲಾಗಿ ಮಂಗಳೂರಿನಿಂದ ಬೆಳಗ್ಗೆ 5 ಅಥವಾ 6 ಗಂಟೆಗೆ ಹೊರಟು ಮಧ್ಯಾಹ್ನದೊಳಗೆ ಬೆಂಗಳೂರು ತಲುಪಿ 4 ಗಂಟೆಗೆ ಬೆಂಗಳೂರಿನಿಂದ ಮಂಗಳೂರಿಗೆ ಹೊರಡುವಂತೆ ಸಮಯ ನಿಗದಿ ಮಾಡಬೇಕು ಎಂದು ರೈಲ್ವೇ ಬಳಕೆದಾರರು ಆಗ್ರಹಿಸಿದ್ದಾರೆ.

ಮಂಗಳೂರು-ಬೆಂಗಳೂರು ವಂದೇಭಾರತ್ ರೈಲನ್ನು ಮಡ್ಡಾಂವ್‌ಗೆ ವಿಸ್ತರಿಸುವ ಪ್ರಯತ್ನಗಳು ನಡೆಯುತ್ತಿದ್ದು, ಇದಕ್ಕೆ ಅವಕಾಶ ಕೊಡಬಾರದು ನೀಡಬಾರದು ಎಂದು ದ. ಕ. ಜಿಲ್ಲೆಯ ರೈಲ್ವೇ ಬಳಕೆದಾರರು ಆಗ್ರಹಿಸಿದ್ದಾರೆ.

SHARE
Loading spinner

2 thoughts on “ಬೆಂಗಳೂರು–ಮಂಗಳೂರು ವಂದೇ ಭಾರತ್‌ ರೈಲು ಮತ್ತೊಮ್ಮೆ ಪರೀಕ್ಷಾರ್ಥ ಸಂಚಾರ

Leave a Reply

Your email address will not be published. Required fields are marked *

error: Content is protected !!