ಮಂಗಳೂರು: ಧರ್ಮಸ್ಥಳದ ಸೌಜನ್ಯ ಪ್ರಕರಣದ ಮರುತನಿಖೆಗೆ ವಿಶೇಷ ತನಿಖಾ ತಂಡ (SIT) ರಚಿಸಿರುವ ಕುರಿತು ಆರ್ಎಸ್ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಬಂಟ್ವಾಳದ ಬಿ.ಸಿ.ರೋಡ್ನಲ್ಲಿ ಮಾತನಾಡಿದ ಅವರು, “SIT ರಚನೆಯಾಗಿರುವುದು ಒಳ್ಳೆಯದು. ಆದರೆ ತಂಡದಲ್ಲಿರುವ ಎಲ್ಲ ಅಧಿಕಾರಿಗಳ ಬಗ್ಗೆ ನಮಗೆ ಸಂಪೂರ್ಣ ವಿಶ್ವಾಸವಿಲ್ಲ ಎಂಬ ಸಂಶಯವಿದೆ” ಎಂದರು. ಮಂಗಳೂರು ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ಅವರು ಉತ್ತಮ ಅಧಿಕಾರಿ. ಅವರು ಆ ಕಡೆ-ಈ ಕಡೆ ಹೋಗುವುದಿಲ್ಲ. ಆದರೆ ಉಳಿದ ಅಧಿಕಾರಿಗಳ ಬಗ್ಗೆ ನಮಗೆ ಸಂಶಯವಿದೆ ಎಂದು ಹೇಳಿದರು.

ಸೌಜನ್ಯ ಪ್ರಕರಣದ ತನಿಖೆಯನ್ನು ಅಧಿಕಾರಿಗಳು ಪ್ರಾಮಾಣಿಕವಾಗಿ ನಡೆಸಬೇಕು. 14 ವರ್ಷಗಳಿಂದ ಸೌಜನ್ಯಳ ಆತ್ಮ ನ್ಯಾಯಕ್ಕಾಗಿ ಕಾಯುತ್ತಿದೆ. ಯಾವುದೇ ಪ್ರಕರಣ ಈ ರೀತಿಯಾಗಿ ಉಳಿದಿಲ್ಲ. ಅಧಿಕಾರಿಗಳು ಯಾವುದೇ ಒತ್ತಡಕ್ಕೆ ಒಳಗಾಗದೆ ಸತ್ಯವನ್ನು ಹುಡುಕಬೇಕು ಎಂದು ಆಗ್ರಹಿಸಿದರು.

ಕೋರ್ಟ್ ಈ ಹಿಂದೆ ಸಂತೋಷ್ ರಾವ್ ಅವರನ್ನು ಪ್ರಕರಣಕ್ಕೆ ಸೇರಿಸಬಾರದು ಹಾಗೂ ಹಿಂದಿನ ತನಿಖೆಯಲ್ಲಿ ಭಾಗಿಯಾಗಿದ್ದ ಅಧಿಕಾರಿಗಳನ್ನು ಹೊಸ ತನಿಖೆಯಲ್ಲಿ ಸೇರಿಸಬಾರದು ಎಂದು ಸ್ಪಷ್ಟಪಡಿಸಿದೆ ಎಂದು ಅವರು ಹೇಳಿದರು. ಅಪರಾಧಿಗಳನ್ನು ಪತ್ತೆಹಚ್ಚುವ ಸಾಮರ್ಥ್ಯ ಪೊಲೀಸರಿಗಿದೆ. ಮಂಗಳೂರು ಕಮಿಷನರ್ ಅವರಂತಹ ಇನ್ನಷ್ಟು ಸಮರ್ಥ ಅಧಿಕಾರಿಗಳನ್ನು SITಯಲ್ಲಿ ನೇಮಿಸಬೇಕಿತ್ತು ಎಂದು ಕಲ್ಲಡ್ಕ ಪ್ರಭಾಕರ್ ಭಟ್ ಅಭಿಪ್ರಾಯಪಟ್ಟರು.
ಸೌಜನ್ಯ ಪ್ರಕರಣದ ಮರುತನಿಖೆಗಾಗಿ ಎನ್. ಶಶಿಕುಮಾರ್ ನೇತೃತ್ವದಲ್ಲಿ ಐವರು ಸದಸ್ಯರ SIT ಅನ್ನು ರಾಜ್ಯ ಸರ್ಕಾರ ರಚಿಸಿದ್ದು, ಮಂಗಳೂರು ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ಸೇರಿದಂತೆ ನಾಲ್ವರು ಅಧಿಕಾರಿಗಳು ತಂಡದಲ್ಲಿದ್ದಾರೆ.


Best selection of slots I have seen in a while. The graphics are amazing and I won a nice amount last night on ph24jilipark.