ಉಳ್ಳಾಲ: ಉಳ್ಳಾಲ ತಾಲೂಕಿನ ಮಂಜನಾಡಿ ಗ್ರಾಮದ ಮೊಂಟೆಪದವು ಶ್ರೀ ಬ್ರಹ್ಮಮುಗೇರ ಮಹಾಂಕಾಳಿ ದೈವಸ್ಥಾನದಲ್ಲಿ ಸಾಮರಸ್ಯ ವೇದಿಕೆ ಮೊಂಟೆಪದವು ವತಿಯಿಂದ ಭಾರತೀಯ ಅಂಚೆ ಇಲಾಖೆ, ಮಂಗಳೂರು ಇದರ ಸಹಯೋಗದೊಂದಿಗೆ 3ನೇ ವರ್ಷದ ಅಂಚೆ ಜನಸಂಪರ್ಕ ಅಭಿಯಾನ ಹಾಗೂ ಆಕಸ್ಮಿಕ ಅಪಘಾತ ವಿಮಾ ಯೋಜನೆಯ ಶಿಬಿರ ಯಶಸ್ವಿಯಾಗಿ ನಡೆಯಿತು.

ಅಕ್ಟೋಬರ್ 4ರಂದು ನಡೆದ ಶಿಬಿರದಲ್ಲಿ ಸಾರ್ವಜನಿಕರಿಗೆ ಅಂಚೆ ಇಲಾಖೆಯ ವಿವಿಧ ಸೇವೆಗಳು ಹಾಗೂ ಅಪಘಾತ ವಿಮಾ ಯೋಜನೆಯ ಕುರಿತು ಮಾಹಿತಿ ನೀಡಲಾಯಿತು.

ಈ ಸಂದರ್ಭದಲ್ಲಿ ಸಾಮರಸ್ಯ ಗತಿವಿದಿ ಮಂಗಳೂರು ಗ್ರಾಮಾಂತರ ಜಿಲ್ಲೆಯ ಜಿಲ್ಲಾ ಸಂಯೋಜಕರಾದ ಭರತ್ ಕುಮಾರ್ ಮಂಜನಾಡಿ, ಉಳ್ಳಾಲ ತಾಲೂಕು ಸಂಯೋಜಕರಾದ ಕೇಶವ ನರಿಂಗಾನ, ಭಾರತೀಯ ಅಂಚೆ ಇಲಾಖೆ ಮಂಗಳೂರಿನ ಮಾರ್ಕೆಟಿಂಗ್ ವಿಭಾಗದ ಪ್ರಮುಖರಾದ ಶಿವಪ್ರಸಾದ್ ಸಿದ್ಧಕಟ್ಟೆ, ಅಂಚೆ ಇಲಾಖೆಯ ಸಿಬ್ಬಂದಿಗಳಾದ ಶ್ರೀಮತಿ ಹರ್ಷಿತಾ, ಅಪರ್ಣ, ವಿನಯ್, ಶ್ರೀ ಬ್ರಹ್ಮಮುಗೇರ ಮಹಾಂಕಾಳಿ ದೈವಸ್ಥಾನದ ಮಾಜಿ ಅಧ್ಯಕ್ಷರಾದ ಶ್ರೀಧರ್ ಪೆರಡೆ, ಪ್ರಮುಖರಾದ ಜಿತೇಂದ್ರ ಪೊಟ್ಟೋಳಿಕೆ, ಸುಧೀರ್ ಮೊಂಟೆಪದವು, ಪ್ರಶಾಂತ್ ಶಾಂತನಗರ, ಜನನ್ ಶಾಂತನಗರ, ಚಂದ್ರಹಾಸ ಸಾರ್ತಬೈಲ್ ಮತ್ತಿತರರು ಉಪಸ್ಥಿತರಿದ್ದರು.

ಸಾಮರಸ್ಯ ವೇದಿಕೆಯ ವತಿಯಿಂದ ವಿಶೇಷವಾಗಿ ಕೆಲವು ಆಯ್ಕೆ ಮಾಡಿದ ಅರ್ಹರಿಗೆ ಉಚಿತವಾಗಿ ಅಪಘಾತ ವಿಮೆಯನ್ನು ಮಾಡಿಸಲಾಯಿತು. ಒಟ್ಟು 86 ಮಂದಿ ಈ ಶಿಬಿರದ ಉಪಯೋಗ ಪಡೆದುಕೊಂಡರು

