ನಿದ್ರೆಯಲ್ಲೇ ಹೃದಯಾಘಾತ: 29ರ ಹರೆಯದ ಯುವತಿ ದಾರುಣ ಸಾವು

​ಕಾಸರಗೋಡು : ತೀವ್ರ ದಿಗ್ಭ್ರಮೆ ಮೂಡಿಸುವ ಘಟನೆಯೊಂದರಲ್ಲಿ, 29 ವರ್ಷದ ಯುವತಿ ನಿದ್ರೆಯಲ್ಲೇ ಹೃದಯಾಘಾತಕ್ಕೊಳಗಾಗಿ ಕೊನೆಯುಸಿರೆಳೆದಿದ್ದಾರೆ. ನಗರದ ನೆಲ್ಲಿಕಂಜೆ ನಿವಾಸಿ, ಕಾಸರಗೋಡು ನಗರಸಭೆಯ ಮಾಜಿ ಕೌನ್ಸಿಲರ್ ಸೈಬುನ್ನೀಸಾ ಹಾಗೂ ಹನೀಫಾ ದಂಪತಿಯ ಪುತ್ರಿ ತನ್ಸಿಯಾ ಅಗಲಿದ ದುರ್ದೈವಿ.

​ಸಾಮಾನ್ಯ ದಿನದಂತೆ ಮಕ್ಕಳನ್ನು ಮದ್ರಸಾಕ್ಕೆ ಕಳುಹಿಸಲು ಕುಟುಂಬಸ್ಥರು ಬೆಳಿಗ್ಗೆ ಎಬ್ಬಿಸಲು ತೆರಳಿದಾಗ ಆಕೆ ಸ್ಪಂದಿಸಲಿಲ್ಲ. ತಕ್ಷಣ ವೈದ್ಯರನ್ನು ಮನೆಗೆ ಕರೆಸಿ ತಪಾಸಣೆ ನಡೆಸಿದಾಗ, ಆಕೆ ಈಗಾಗಲೇ ಕೊನೆಯುಸಿರೆಳೆದಿರುವುದು ದೃಢಪಟ್ಟಿತು.ನಿದ್ರಿಸುತ್ತಿದ್ದಂತೆಯೇ ಸಂಭವಿಸಿದ ಹಠಾತ್ ಹೃದಯಾಘಾತವೇ ಈ ಸಾವಿಗೆ ಪ್ರಮುಖ ಕಾರಣವೆಂದು ವೈದ್ಯರು ಶಂಕಿಸಿದ್ದಾರೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!