ಶ್ರೀ ಶಾರದಾ ಹಿರಿಯ ಪ್ರಾಥಮಿಕ ಶಾಲೆ ಚೇವಾರಿನಲ್ಲಿ 2025–26ನೇ ಸಾಲಿನ ವಿದಾಯ ಕೂಟ ಸಮಾರಂಭವು ಅತ್ಯಂತ ಸಂಭ್ರಮ ಹಾಗೂ ಗೌರವದ ವಾತಾವರಣದಲ್ಲಿ ನೆರವೇರಿತು . ಕಾರ್ಯಕ್ರಮವನ್ನು ಪ್ರೀಮ ಕ್ರಾಸ್ತ ಟೀಚರ್ ಅವರು ಸುಂದರವಾಗಿ ನಿರೂಪಣೆ ಮಾಡಿದರು .ಕಾರ್ಯಕ್ರಮಕ್ಕೆ ಸಾತ್ವಿಕ್ ಸರ್ ಅವರು ಆತ್ಮೀಯ ಸ್ವಾಗತ ಕೋರಿದರು . ಹಿರಿಯ ಅಧ್ಯಾಪಿಕೆ ರಾಜೇಶ್ವರಿ ಟೀಚರ್ ಅವರು ಅಧ್ಯಕ್ಷತೆ ವಹಿಸಿ ಕಾರ್ಯಕ್ರಮಕ್ಕೆ ಮೆರಗು ತಂದರು . ನಂತರ ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀ ಶಾಮ ಭಟ್ ಅವರು ಪ್ರಾಸ್ತಾವಿಕ ನುಡಿಗಳನ್ನು ಹೇಳಿ, ವಿದ್ಯಾರ್ಥಿಗಳ ಸಾಧನೆಗಳನ್ನು ಸ್ಮರಿಸಿ ಪ್ರೋತ್ಸಾಹಿಸಿದರು .
ಮಕ್ಕಳು ತಮ್ಮ ಅನುಭವಗಳನ್ನು ಹಂಚಿಕೊಂಡು, ಶಾಲೆಯ ನೆನಪುಗಳನ್ನು ಸ್ಮರಿಸಿದರು . ಅಧ್ಯಾಪಕರೂ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿ, ವಿದ್ಯಾರ್ಥಿಗಳ ಭವಿಷ್ಯಕ್ಕೆ ಶುಭ ಹಾರೈಸಿದರು .ಈ ಸಂದರ್ಭದಲ್ಲಿ ಪ್ರಿಪ್ರೈಮರಿ ಅಧ್ಯಾಪಿಕೆ ಶ್ರೀಮತಿ ಕವಿತ ಕೆ ಟೀಚರ್ ಹಾಗೂ ಶಾಲಾ ವಾಹನ ಚಾಲಕ ಶ್ರೀಯುತ ನಾರಾಯಣ ಅವರನ್ನು ಸನ್ಮಾನಿಸಲಾಯಿತು . ಅವರು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡು ಕೃತಜ್ಞತೆ ಸಲ್ಲಿಸಿದರು .
ಮುಖ್ಯೋಪಾಧ್ಯಾಯರು ತಮ್ಮ ಭಾಷಣದಲ್ಲಿ ವಿದ್ಯಾರ್ಥಿಗಳೊಂದಿಗೆ ಕಳೆದ ಅನುಭವಗಳನ್ನು ಹಂಚಿಕೊಂಡು, ಅವರ ಮುಂದಿನ ಜೀವನದ ಪಯಣಕ್ಕೆ ಮಾರ್ಗದರ್ಶನ ನೀಡಿದರು .ನಂತರ 7ನೇ ತರಗತಿ ವಿದ್ಯಾರ್ಥಿಗಳಿಂದ ಆಕರ್ಷಕ ನೃತ್ಯ ಪ್ರದರ್ಶನ ನಡೆಯಿತು , ಇದು ಎಲ್ಲರ ಮನಸೆಳೆಯಿತು .
ಕಾರ್ಯಕ್ರಮದ ಕೊನೆಯಲ್ಲಿ ಶ್ರೀ ಮುಹಮ್ಮದ್ ಫಾಯಿಝ್ ಅವರು ಧನ್ಯವಾದಗಳನ್ನು ಅರ್ಪಿಸಿದರು . ಸಮಾರಂಭದ ಅಂತ್ಯದಲ್ಲಿ ಎಲ್ಲಾ ಮಕ್ಕಳಿಗೂ ಪಾಯಸದ ಭೋಜನ ವ್ಯವಸ್ಥೆ ಮಾಡಲಾಗಿತ್ತು .ವಿದಾಯ ಕೂಟವು ಎಲ್ಲರಿಗೂ ಮರೆಯಲಾಗದ ನೆನಪಾಗಿ ಉಳಿಯಿತು