ಬ್ರಹ್ಮಶ್ರೀ ಮುಗೇರ ಮಹಾಕಾಳಿ ದೈವಸ್ಥಾನದಲ್ಲಿ ಪುನರ್ ಪ್ರತಿಷ್ಠೆ, ಹಾಗು ಬ್ರಹ್ಮಕಲಶೋತ್ಸವ , ನೇಮೋತ್ಸವ ಉತ್ಸವಕ್ಕೆ ಸಕಲ ಸಿದ್ಧತೆ

ಕುಂಜತ್ತೋರು ತೂಮಿನಾಡು, ಪ್ರದೇಶದಲ್ಲಿರುವ ಬ್ರಹ್ಮಶ್ರೀ ಮುಗೇರ ಮಹಾಕಾಳಿ ದೈವಸ್ಥಾನದಲ್ಲಿ ಪುನರ್ ಪ್ರತಿಷ್ಠೆ, ಹಾಗೂ ಬ್ರಹ್ಮಕಲಶೋತ್ಸವ ಮತ್ತು ನೇಮೋತ್ಸವಕ್ಕೆ ಸಕಲ ಸಿದ್ಧತೆಯು ನಡೆದಿದ್ದು ಏಪ್ರಿಲ್ 2ರಿಂದ 6,ರ ವರೆಗೆ ಕ್ಷೇತ್ರದ ತಂತ್ರಿವರ್ಯರಾದ ವೇದಮೂರ್ತಿ ಶ್ರೀ ಕೆ. ಮರಿಭಟ್ ಅವರ ದಿವ್ಯ ಹಸ್ತದಿಂದ ವೈದಿಕ ಹಾಗೂ ಧಾರ್ಮಿಕ ವಿಧಿವಿಧಾನಗಳೊಂದಿಗೆ ಭಕ್ತಿಭಾವಪೂರ್ಣವಾಗಿ ಧಾರ್ಮಿಕ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.

ಏಪ್ರಿಲ್ 2 ರಂದು ಬೆಳಗ್ಗೆ ಗಣಹೋಮ , ತೋರಣ ಮುಹೂರ್ತ ,ಉಗ್ರಾಣ ಮುಹೂರ್ತ ಚಪ್ಪರ ಮುಹೂರ್ತ ಗಳೊಂದಿಗೆ ಆರಂಭವಾಗುವ ಧಾರ್ಮಿಕಗಳೊಂದಿಗೆ ಮಹೋತ್ಸವಕ್ಕೆ ಚಾಲನೆ ದೊರಕಲಿದೆ.ಅಂದು ಸಂಜೆ 5 ಗಂಟೆಗೆ ಉದ್ಯಾವರ ಮಾಡ ಶ್ರೀ ಅರಸು ಮಂಜೀಸ್ನಾರ್ ಕ್ಷೇತ್ರದಲ್ಲಿ ಪ್ರಾರ್ಥಿಸಿ ಮೇಲಿನ ತಲಪಾಡಿಯಿಂದ ಭವ್ಯ ವರೆಕಾಣಿಕೆ ಮೆರವಣಿಗೆ ಹೊರಡಲಿದೆ

ಏಪ್ರಿಲ್ 3 ರಂದು ವೃಷಭ ಲಗ್ನ ಸುಮೂರ್ತದಲ್ಲಿ ದೈವಗಳ ಪುನರ್ ಪ್ರತಿಷ್ಠೆ ಹಾಗೂ ಬ್ರಹ್ಮಕಲಶೋತ್ಸವ ನಡೆಯಲಿದೆ.ಈ ದಿನಗಳಲ್ಲಿ ಯತಿವರ್ಯರು ಉಪಸ್ಥಿತರಿರುವ ಧಾರ್ಮಿಕ ಸಭಾ ಕಾರ್ಯಕ್ರಮಗಳು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ

SHARE
Loading spinner

Leave a Reply

Your email address will not be published. Required fields are marked *

error: Content is protected !!